Tag: B.V.Nayak

  • ದೇವದುರ್ಗ ‘ಕೈ’ ಟಿಕೆಟ್ ಗೊಂದಲ- ಅಣ್ಣ ಬಿ.ವಿ.ನಾಯಕ್ ವಿರುದ್ಧ ತಮ್ಮ ರಾಜಶೇಖರ್ ನಾಯಕ್ ಬಂಡಾಯ

    ದೇವದುರ್ಗ ‘ಕೈ’ ಟಿಕೆಟ್ ಗೊಂದಲ- ಅಣ್ಣ ಬಿ.ವಿ.ನಾಯಕ್ ವಿರುದ್ಧ ತಮ್ಮ ರಾಜಶೇಖರ್ ನಾಯಕ್ ಬಂಡಾಯ

    ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಬಿ.ವಿ ನಾಯಕ್ (B.V.Nayak) ಕುಟುಂಬಕ್ಕೆ ಮೀಸಲು ಎಂದು ಭಾವಿಸಿದ್ದ ‘ಕೈ’ ಕಾರ್ಯಕರ್ತರು ಈಗ ಬಂಡಾಯದ ಕಹಳೆ ಊದುತ್ತಿದ್ದಾರೆ. ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ್ ವಿರುದ್ಧ ಅವರ ಸಹೋದರ ರಾಜಶೇಖರ್ ನಾಯಕ್ (Rajashekar Nayak) ಸೆಟೆದು ನಿಂತಿದ್ದಾರೆ.

    ಒಂದೇ ಮನೆಯಲ್ಲಿ ಮೂರು ಜನ ಬಿ.ವಿ.ನಾಯಕ್, ರಾಜಶೇಖರ್ ನಾಯಕ್ ಹಾಗೂ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್ ‘ಕೈ’ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಮೂರು ಕ್ಷೇತ್ರಗಳಿಗೆ ಅರ್ಜಿ ಹಾಕಿದ್ದ ಬಿ.ವಿ.ನಾಯಕ್ ದೇವದುರ್ಗ ಕಡೆ ತಲೆ ಹಾಕಿರಲಿಲ್ಲ. ಈಗ ಬಿಜೆಪಿ (BJP) ಹಾಲಿ ಶಾಸಕ ಕೆ.ಶಿವನಗೌಡ  ನಾಯಕ್ (K.Shivanagouda Nayak) ಚಿಕ್ಕಪ್ಪ ಎಂ.ವಿ.ಮೇಟಿಯನ್ನು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭೇಟಿ ಮಾಡಿಸಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಐವರ ಪೈಕಿ ನಾಲ್ವರಿಗೆ ಕೊಕ್ ಸಾಧ್ಯತೆ – ಜಾತಿ ಲೆಕ್ಕಾಚಾರದಂತೆ ಟಿಕೆಟ್ ಹಂಚಿಕೆ 

    ಹೊಸಬರಿಗೆ ಈ ಬಾರಿ ಟಿಕೆಟ್ ಕೊಡಿಸಲು ಬಿ.ವಿ ನಾಯಕ್ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಹ ಆಕ್ರೋಶಗೊಂಡಿದ್ದಾರೆ. ಹೀಗಾಗಿ ದೇವದುರ್ಗದ ಕಾಂಗ್ರೆಸ್ ಟಿಕೆಟ್ ಪೈಪೋಟಿ ವಿಭಿನ್ನ ತಿರುವುಗಳನ್ನು ಪಡೆಯುತ್ತಿದ್ದು, ಬಂಡಾಯ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನೂ ಓದಿ: ನಾನು ವರುಣಾದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ : ಸೋಮಣ್ಣ

    ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಸರಣಿ ಸಭೆಗಳನ್ನು ಕರೆಯುತ್ತಿದ್ದು, ಬಿ.ವಿ.ನಾಯಕ್ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಭೇಟಿ ಮಾಡಿದ್ದರೂ ಸ್ಪಷ್ಟ ನಿಲುವು ವ್ಯಕ್ತಪಡಿಸದೇ, ಕಾರ್ಯಕರ್ತರೊಂದಿಗೆ ಬೆರೆಯದೇ ಗೊಂದಲ ಮೂಡಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ದುಡಿಯದ, ಪಕ್ಷದ ಸದಸ್ಯನೂ ಅಲ್ಲದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಎಂ.ವಿ.ಮೇಟಿಗೆ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ ಎಂದು ಕೈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ನಂದಿನಿ’ ನಮ್ಮವಳು – ನಮ್ಮ ಹಾಲು ನಮ್ಮ ಬದುಕು; ನಂದಿನಿ ಉಳಿಸಿ ಎಂದ ಡಿಕೆಶಿ 

    ರಾಯಚೂರು (Raichur) ಗ್ರಾಮೀಣ, ಮಾನ್ವಿ, ದೇವದುರ್ಗ ಮೂರು ಕಡೆ ಅರ್ಜಿ ಸಲ್ಲಿಸಿದ್ದ ಬಿ.ವಿ ನಾಯಕ್ ಮಾನ್ವಿ ಕ್ಷೇತ್ರದ ಕಡೆ ಒಲವು ತೋರಿಸುತ್ತಿದ್ದಾರೆ. ಆದರೆ ಮಾನ್ವಿ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಬಿ.ವಿ.ನಾಯಕ್ ಸ್ಪರ್ಧಿಸಿದರೆ ನಾವೇ ಸೋಲಿಸುತ್ತೇವೆ ಎಂದು ಈಗಾಗಲೇ ಬಂಡಾಯದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಟಿಕೆಟ್ ಸಿಗೋ ವಿಶ್ವಾಸವಿದೆ, ಯಾರಿಗೆ ಸಿಕ್ಕಿದ್ರೂ ಒಟ್ಟಾಗಿ ಕೆಲಸ ಮಾಡ್ತೀವಿ: ಸ್ವರೂಪ್

  • ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ

    ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ

    ರಾಯಚೂರು: ಜಿಲ್ಲೆಯ ಮಾನ್ವಿ (Manvi) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್ ಫೈಟ್ ಜೋರಾಗಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ್ (B.V.Nayak) ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬಂಡಾಯದ ಎಚ್ಚರಿಕೆ ನೀಡಿದ್ದಾರೆ.

    ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಕೂಗು ಕೇಳಿ ಬಂದಿದೆ. ಎಸ್‍ಟಿ ಮೀಸಲು ಕ್ಷೇತ್ರದಲ್ಲಿ ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂದು ರಾಜ್ಯ ಹೈಕಮಾಂಡ್‍ಗೆ ಒತ್ತಾಯ ಮಾಡಲಾಗಿದೆ. ಮಾಜಿ ಸಂಸದ ಬಿ.ವಿ.ನಾಯಕ್‍ಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸವದತ್ತಿ ಕ್ಷೇತ್ರದಲ್ಲಿ ಮತ್ತೆ ಬಂಡಾಯದ ಬೆಂಕಿ ಹೊತ್ತಿಸಿದ ಸೌರಭ್ ಚೋಪ್ರಾ

    ಎಲ್ಲಾ ವ್ಯವಸ್ಥೆ ಮಾಡಿದ ಮೇಲೆ ಇಲ್ಲಿ ಯಾರೋ ಬಂದು ಸೇರುವಂತೆ ಆಗಬಾರದು. ಇಲ್ಲೇ ಕೆಲಸ ಮಾಡುತ್ತಿರುವವರಿಗೆ ಟಿಕೆಟ್ ಸಿಗಬೇಕು ಎಂದು ಮಾಜಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಜಿ.ಹಂಪಯ್ಯ ನಾಯಕ್ (G.Hampayya Nayak) ಅಧ್ಯಕ್ಷರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಹೊರಗಿನವರು ಕ್ಷೇತ್ರಕ್ಕೆ ಬರಬಾರದು ಎಂದು ಬಸನಗೌಡ ಬ್ಯಾಗವಾಟ್‍ರವರನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿದ್ದೇವೆ. ಮತ್ತೆ ಅದು ಮರುಕಳಿಸಬಾರದು ಎಂದು ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

    ಅನ್ಯ ಕ್ಷೇತ್ರದವರಿಗೆ ಹೈಕಮಾಂಡ್ ಮಣೆ ಹಾಕಬಾರದು ಎಂದು ಮಾಜಿ ಸಂಸದ ಬಿ.ವಿ.ನಾಯಕ್ ವಿರುದ್ಧ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಜಿ.ಹಂಪಯ್ಯ ನಾಯಕ್, ವೈ.ಶರಣಯ್ಯ ನಾಯಕ್, ಹಾಗೂ ಬಿ.ವಿ ನಾಯಕ್ ನಡುವೆ ಟಿಕೆಟ್‍ಗಾಗಿ ಪೈಪೋಟಿ ಇದೆ. ರಾಜಾವಸಂತ ನಾಯಕ್, ಲಕ್ಷ್ಮಿದೇವಿ ನಾಯಕ್ ಸಹ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ ತನ್ನ ಎರಡೂ ಪಟ್ಟಿಯಲ್ಲಿ ಟಿಕೆಟ್ ಘೋಷಿಸದ ಹಿನ್ನೆಲೆ ಈಗ ಸ್ಥಳೀಯ ಆಕಾಂಕ್ಷಿಗಳಲ್ಲಿ ಆತಂಕ ಶುರುವಾಗಿದೆ.

    ದೇವದುರ್ಗ, ಮಾನ್ವಿ, ರಾಯಚೂರು ಗ್ರಾಮೀಣ ಮೂರು ಕಡೆ ಟಿಕೆಟ್‍ಗೆ ಅರ್ಜಿ ಹಾಕಿರುವ ಬಿ.ವಿ.ನಾಯಕ್ ಹೈಕಮಾಂಡ್ ಎಲ್ಲಿ ಟಿಕೆಟ್ ಕೊಟ್ಟರು ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಈಗಾಗಲೇ ರಾಯಚೂರು ಗ್ರಾಮೀಣಕ್ಕೆ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಬಸನಗೌಡ ದದ್ದಲ್‍ಗೆ ಟಿಕೆಟ್ ಘೋಷಣೆಯಾಗಿದೆ. ಸ್ವಕ್ಷೇತ್ರ ದೇವದುರ್ಗದ (Devadurga) ಬಗ್ಗೆ ಬಿ.ವಿ.ನಾಯಕ್ ಅಷ್ಟಾಗಿ ಆಸಕ್ತಿ ಹೊಂದಿಲ್ಲ. ಹೀಗಾಗಿ ಬಿ.ವಿ.ನಾಯಕ್‍ಗೆ ಮಾನ್ವಿ ಟಿಕೆಟ್ ಸಿಗಬಹುದು ಎಂದು ಟಿಕೆಟ್ ಆಕಾಂಕ್ಷಿಗಳು ಹಾಗೂ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯಲ್ಲಿ ಹಾಲಿ ಶಾಸಕರಿರುವ ಲಿಂಗಸುಗೂರು ಕ್ಷೇತ್ರ ಸೇರಿ 5 ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲವಿದೆ. ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯಲ್ಲಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಬಹುದು. ಆದರೆ ಸದ್ಯದ ತೀವ್ರ ಪೈಪೋಟಿ ಗಮನಿಸಿದರೆ ಒಂದಷ್ಟು ಆಕಾಂಕ್ಷಿಗಳು ಬಂಡಾಯ ಏಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ಕೈತಪ್ಪಿದ ಮೊಳಕಾಲ್ಮೂರು ‘ಕೈ’ ಟಿಕೆಟ್- ಬೆಂಬಲಿಗರ ಸಭೆಯಲ್ಲಿ ಆಕಾಂಕ್ಷಿ ಯೋಗೀಶ್ ಬಾಬು ಕಣ್ಣೀರು

  • ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರಿನ ಹಾಲಿ ಸಂಸದ ಬಿ.ವಿ.ನಾಯಕ್‍ಗೆ ಸೋಲು- 86 ಸಾವಿರ ಮತಗಳಿಂದ ಬಿಜೆಪಿ ಗೆಲುವು

    ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್‍ಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು ಭರ್ಜರಿ ಜಯ ಗಳಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ರಾಜಾ ಅಮರೇಶ್ವರ ನಾಯಕ್ 4,83,552 ಮತಗಳನ್ನು ಗಳಿಸಿದ್ದರೆ, ಬಿ.ವಿ ನಾಯಕ್ 3,97,138 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡಿದ್ದಾರೆ.

    ಬಿಜೆಪಿ ಗೆಲ್ಲಲು ಕಾರಣವೇನು?
    ರಾಜಾ ಅಮರೇಶ್ವರ ನಾಯಕ್ ಅವರು 86,414 ಮತಗಳ ಅಂತರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಹಿಂದಿಕ್ಕಲು ಜಿಲ್ಲೆಯಲ್ಲಿರುವ ಮೋದಿ ಹವಾನೇ ಮುಖ್ಯ ಕಾರಣವಾಗಿದೆ. ಸಂಭಾವಿತ ರಾಜಕಾರಣಿ ಅನ್ನೋ ಹೆಗ್ಗಳಿಕೆ, ಎರಡು ಬಾರಿ ಸಚಿವರಾಗಿ ಆಯ್ಕೆಯಾಗಿದ್ದ ಅನುಭವ, ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ತೆಕ್ಕೆಯಲ್ಲಿರುವುದು ಹಾಗೂ ಯಾವುದೇ ವಿವಾದಗಳಲ್ಲಿ ಸಿಕ್ಕಾಕಿಕೊಳ್ಳದೇ ಇರುವ ಪರಿಣಾಮವೇ ಜನರು ರಾಜಾ ಅಮರೇಶ್ವರ ನಾಯಕ್ ಅವರನ್ನು ಗೆಲುವಿನ ಗದ್ದುಗೆಗೆ ಏರಿಸಿದ್ದಾರೆ.

    ಆದರೆ ಹಾಲಿ ಸಂಸದರಾದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸ ಮಾಡದಿದ್ದಕ್ಕೆ ಈ ಬಾರಿ ಬಿ.ವಿ ನಾಯಕ್ ಸೋಲು ಕಂಡಿದ್ದಾರೆ. ಕ್ಷೇತ್ರದ ಜನರ ಸಂಪರ್ಕದಿಂದ ಬಹು ದೂರ ಉಳಿದುಕೊಂಡು ಮತಗಳನ್ನು ಅವರೇ ಕಡಿಮೆ ಮಾಡಿಕೊಂಡಿದ್ದಾರೆ. ಹಾಗೆಯೇ ಜೆಡಿಎಸ್ ಜೊತೆಗಿನ ಮೈತ್ರಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿಲ್ಲ. ಕೇಂದ್ರದ ಯೋಜನೆಗಳನ್ನ ಕ್ಷೇತ್ರದ ಜನರಿಗೆ ಮುಟ್ಟಿಸುವಲ್ಲಿ ಬಿ.ವಿ ನಾಯಕ್ ವಿಫಲವಾಗಿದ್ದಾರೆ. ಅಲ್ಲದೆ ಯಾದಗಿರಿ, ಸುರಪುರ, ಶಹಪುರ ಕ್ಷೇತ್ರಗಳ ಜೊತೆ ಸಂಪರ್ಕ ಅತ್ಯಂತ ಕಡಿಮೆ ಇರುವುದೇ ಅವರನ್ನು ಗೆಲುವಿನಿಂದ ದೂರಮಾಡಿದೆ.

  • ಗಾಂಧೀಜಿಯನ್ನು ಕೊಂದವರಿಂದ ನಮ್ಗೆ ಪಾಠ ಬೇಕಿಲ್ಲ: ಕೈ ಅಭ್ಯರ್ಥಿ ಬಿ.ವಿ.ನಾಯಕ್

    ಗಾಂಧೀಜಿಯನ್ನು ಕೊಂದವರಿಂದ ನಮ್ಗೆ ಪಾಠ ಬೇಕಿಲ್ಲ: ಕೈ ಅಭ್ಯರ್ಥಿ ಬಿ.ವಿ.ನಾಯಕ್

    ಯಾದಗಿರಿ: ದೇಶಾಭಿಮಾನದ ಬಗ್ಗೆ ನಾನು ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ಬಿಜೆಪಿಯವರು ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರನ್ನು ಕೊಂದವರು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿ ಅವರು, ಭಾರತೀಯ ಸೇನೆಯ ಸಾಧನೆಯನ್ನು ರಾಜಕೀಯಕ್ಕೆ ಬಳಿಸಿಕೊಳ್ಳುವುದು ಸರಿಯಲ್ಲ. ಆರ್ಥಿಕ, ಸಾಮಾಜಿಕ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಪಾಕಿಸ್ತಾನ ನಮಗೆ ಸಮಾನವಾಗಿಲ್ಲ. ಬಿಜೆಪಿಯವರು ಪಾಕಿಸ್ತಾನದ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇದು ತಪ್ಪು ಎಂದು ನಾನು ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ ಎಂದರು. ಇದನ್ನು ಓದಿ: ಭಯ ಉಂಟು ಮಾಡುವ ರೀತಿಯಲ್ಲಿ ಮೋದಿ ಆಳ್ವಿಕೆ: ಬಿ.ವಿ.ನಾಯಕ್

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯೊ ಅವರು ಇಂದಿರಾ ಗಾಂಧಿ ಅವರನ್ನು ದುರ್ಗಿ ಎಂದು ವರ್ಣನೆ ಮಾಡಿದರು. ಇಂದಿರಾ ಗಾಂಧಿ ಅವರು ಪಾಕಿಸ್ತಾನಕ್ಕೆ ಅನೇಕ ಬಾರಿ ಉತ್ತರ ನೀಡಿದ್ದಾರೆ. ಆದರೆ ಅವರು ಸೇನೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಿಲ್ಲ ಎಂದು ತಿಳಿಸಿದರು.

    ಪಾಕಿಸ್ತಾನದ ಪರ ಮಾತನಾಡಿದ್ದಾರೆಂದು ಬಿ.ವಿ.ನಾಯಕ್ ವಿರುದ್ಧ ಬಿಜೆಪಿಯವರು ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ವಿರುದ್ಧ ದೂರು ನೀಡಿದರೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.

  • ಭಯ ಉಂಟು ಮಾಡುವ ರೀತಿಯಲ್ಲಿ ಮೋದಿ ಆಳ್ವಿಕೆ: ಬಿ.ವಿ.ನಾಯಕ್

    ಭಯ ಉಂಟು ಮಾಡುವ ರೀತಿಯಲ್ಲಿ ಮೋದಿ ಆಳ್ವಿಕೆ: ಬಿ.ವಿ.ನಾಯಕ್

    – ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮೋದಿ ಕಾರಣ

    ರಾಯಚೂರು: ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ, ಫ್ಯಾಸಿಸಂ ರೀತಿಯಲ್ಲಿ ಹಿಟ್ಲರ್ ಮಾದರಿಯಲ್ಲಿ ದೇಶವನ್ನ ಆಳಲು ಹೊರಟಿದ್ದಾರೆ. ಇಂತವರಿಗೆ ಪಾಠ ಕಲಿಸಬೇಕಿದೆ ಅಂತ ರಾಯಚೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಬಿ.ವಿ.ನಾಯಕ್, ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ, ಭಯ ಉಂಟುಮಾಡುವ ರೀತಿಯಲ್ಲಿ ಮೋದಿ ಇದ್ದಾರೆ. ಹೀಗಾಗಿ ಬಹಳಷ್ಟು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ ಎಂದರು. ನಿರಂತರ ಸಭೆಗಳನ್ನ ನಡೆಸಿರುವ ಬಿ.ವಿ.ನಾಯಕ್ ನಾಳೆ ಜಿಲ್ಲೆಯ ಪ್ರಮುಖ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಅಂತ ಹೇಳಿದ್ದಾರೆ.

    ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಶರಣಯ್ಯ ಗುಡದಿನ್ನಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ದೊಡ್ಡಬಸಪ್ಪ ಗೌಡ, ಸಿರವಾರ ತಾಲೂಕು ಮುಖಂಡ ಬ್ರಿಜೇಶ್ ಪಟೇಲ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ನಾಳೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಬಿ.ವಿ.ನಾಯಕ್ ತಿಳಿಸಿದ್ದಾರೆ.

    ಭಾನುವಾರ ಮಾನ್ವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎನ್.ಎಸ್ ಬೋಸರಾಜು ಹಾಗೂ ಸಂಸದ ಬಿ.ವಿ ನಾಯಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ: ಉದ್ರಿಕ್ತರಿಂದ ಬಸ್‍ಗೆ ಕಲ್ಲು ತೂರಾಟ

    ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ: ಉದ್ರಿಕ್ತರಿಂದ ಬಸ್‍ಗೆ ಕಲ್ಲು ತೂರಾಟ

    ರಾಯಚೂರು: ವಾಲ್ಮೀಕಿ ವೃತ್ತದ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಎರಚಿರುವ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಇದರಿಂದ ಆಕ್ರೋಶಗೊಂಡ ವಾಲ್ಮೀಕಿ ಸಮಾಜದ ಯುವಕರು ಗ್ರಾಮದ ಮುಖ್ಯ ರಸ್ತೆ ತಡೆದು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಗ್ರಾಮಕ್ಕೆ ಬಂದ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಬಸ್ ಗಾಜನ್ನ ಪುಡಿಪುಡಿ ಮಾಡಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಣಕ್ಕೆ ತಂದಿರುವ ಪೊಲೀಸರು ಪರಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

    ಆರು ತಿಂಗಳ ಹಿಂದೆ ಬಾಗಲವಾಡ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಈಗ ಪುನಃ ಮರುಕಳಿಸಿದಂತಾಗಿದೆ. ಘಟನೆ ಹಿನ್ನೆಲೆಯಲ್ಲಿ ರಾಯಚೂರು ಸಂಸದ ಬಿ.ವಿ.ನಾಯಕ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ತಪ್ಪಿತಸ್ಥರನ್ನ ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ರು.

    ಘಟನೆಯ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸದ್ಯ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.