Tag: B. Sarojadevi

  • ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    • ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರುವ ಸಾಧಕಿಯರಿಗೆ ಪ್ರಶಸ್ತಿ

    ಬೆಂಗಳೂರು: ಹಿರಿಯ ನಟಿ, ಪಂಚಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ (B.Sarojadevi) ಅವರ ಹೆಸರಿನಲ್ಲಿ `ಅಭಿನಯ ಸರಸ್ವತಿ’ (Abhinaya Saraswati) ಪ್ರಶಸ್ತಿ ನೀಡುವುದಾಗಿ ರಾಜ್ಯ ಸರ್ಕಾರ (State Govt) ಘೋಷಿಸಿದೆ.

    ಕನ್ನಡ ಚಲನಚಿತ್ರ ನಟಿ, ಪಂಚಭಾಷಾ ತಾರೆ, ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದು, ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದನ್ನು ಪರಿಗಣಿಸಿ ಅವರು ಪಡೆದಿದ್ದ “ಅಭಿನಯ ಸರಸ್ಕೃತಿ” ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-1ರಡಿ ಜಾರಿಗೆ ತರಲಾಗಿದೆ.ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

  • ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

    ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

    – ಕ್ಯಾಬಿನೆಟ್‌ನಲ್ಲಿ ಚರ್ಚಿಸುವುದಾಗಿ ಸಿಎಂ ಭರವಸೆ

    ಬೆಂಗಳೂರು: ಕಾವೇರಿ ನಿವಾಸದಲ್ಲಿ ಇವತ್ತು ಕನ್ನಡ ಚಿತ್ರರಂಗದ ಹಿರಿಯ ನಟಿಯರು ಸಿಎಂ ಸಿದ್ದರಾಮಯ್ಯನವರನ್ನು (Siddaramaiah) ಭೇಟಿ ಮಾಡಿದರು. ಹಿರಿಯ ನಟಿಯರಾದ ಜಯಮಾಲ, ಶೃತಿ, ಮಾಳವಿಕ ಭೇಟಿ ಮಾಡಿ ಮಾತುಕತೆ ನಡೆಸಿದರು.

    ಸೆಪ್ಟಂಬರ್ 18ಕ್ಕೆ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಬರ್ತ್ ಡೇ. ಅವತ್ತು ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ (Posthumous Karnataka Ratna Award) ಘೋಷಣೆ ಮಾಡುವಂತೆ ಮನವಿ ಮಾಡಿದರು. ಅಲ್ಲದೆ ದಿವಂಗತ ನಟಿ ಸರೋಜಾದೇವಿ (Saroja Devi) ಅವರಿಗೂ ಮರಣೋತ್ತರ ಕರ್ನಾಟಕ ರತ್ನ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್‌ ಪರ ವಕೀಲ

    ಇನ್ನು ಸಿಎಂ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಜಯಮಾಲಾ, ದಿವಂಗತ ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದಂದು ಮರಣೋತ್ತರ ಕರ್ನಾಟಕ ರತ್ನ ಕೊಡಬೇಕು. ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಮಾತಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ವಿಷ್ಣುವರ್ಧನ್, ಸರೋಜಾದೇವಿ ಅವರ ಜೊತೆ ಕೆಲಸ ಮಾಡಿದ್ದೇವೆ. ನಾವು ಕಲಾವಿದರು, ನಮಗೆ ಯಾವುದೇ ಜಾತಿ ಇಲ್ಲ, ರಾಜಕೀಯವಿಲ್ಲ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

    ಇದೇ ವೇಳೆ ಹಿರಿಯ ನಟಿ ಶೃತಿ ಮಾತನಾಡಿ, ವಿಷ್ಣುವರ್ಧನ್ ಸರ್ ಅವರ ಅಭಿಮಾನಿಯಾಗಿ ನಾವು ಬಂದಿದ್ದೇವೆ. ಕರ್ನಾಟಕ ರತ್ನ ನೀಡಬೇಕೆಂದು ಮನವಿ ಮಾಡಿದ್ದೇವೆ. ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ಕೊಡಬೇಕು ಪಕ್ಷಾತೀತವಾಗಿ ನಾವೆಲ್ಲ ಬಂದಿದ್ದೇವೆ. ನಾವೆಲ್ಲರೂ ಕಲಾವಿದರು, ಇದರಲ್ಲಿ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್

    ಇನ್ನು ಮಾಳವಿಕಾ ಅವಿನಾಶ್ ಮಾತನಾಡಿ, ವಿಷ್ಣುವರ್ಧನ್, ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ಮಲ್ಲೇಶ್ವರಂನಲ್ಲಿ ಸರೋಜಾದೇವಿ ಅವರ ನಿವಾಸವಿದೆ. ಆ ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು. ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

  • 1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    – ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ಆಗಿದ್ರು ಸರೋಜಾದೇವಿಯವರು

    ನ್ನಡದಲ್ಲಿ ಮಾತ್ರವಲ್ಲ, ಎಲ್ಲ ನಟರಿಗೆ ಹಾಟ್ ಫೇವರೆಟ್ ಆಗಿದ್ದರು ಬಿ.ಸರೋಜಾದೇವಿಯವರು (B.Sarojadevi) ಎಂದು ಕನ್ನಡದ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಅವರು ತಿಳಿಸಿದರು.

    ನಟಿ ಸರೋಜಾದೇವಿ ಅವರೊಂದಿಗಿನ ಒಡನಾಟದ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಡಿದ ಅವರು, ಅವರ ಚಿತ್ರಗಳನ್ನು ನೋಡಿದಾಗ ನಮ್ಮ ಕನಸಿನ ಕನ್ಯೆ ಅಂತ ಅನಿಸುತ್ತಿದ್ದರು. ಅವರ ಹತ್ತಿರ ಹೋಗೋ ಯೋಗ್ಯತೆಯೂ ನಮಗಿರಲಿಲ್ಲ. ಅವರನ್ನು ನೋಡೋದೇ ನಮ್ಮ ಭಾಗ್ಯವಾಗಿತ್ತು. ಲೋಕೇಶ್ ಅವರೊಟ್ಟಿಗೆ ತುಂಬಾ ಚೆನ್ನಾಗಿ ಮಾತಾಡುತ್ತಿದ್ದರು ಎಂದರು.ಇದನ್ನೂ ಓದಿ: ಶಕ್ತಿಗೆ ಇಂದು 500 ಕೋಟಿ ಟಿಕೆಟ್‌ ಸಂಭ್ರಮ- ಕಂಡಕ್ಟರ್‌ ಆಗಿ ಟಿಕೆಟ್‌ ಹಂಚಿದ ಸಿಎಂ

    ಪ್ರತಿ ವರ್ಷ ನವೆಂಬರ್ 1 ಎಲ್ಲ ಕಲಾವಿದರು ಭೇಟಿಯಾಗುತ್ತಿದ್ದೆವು. ಆಗ ಒಂದು ಕಾರ್ಯಕ್ರಮ ಮಾಡಿ, ಕಲಾವಿದರನ್ನು ಸನ್ಮಾನ ಮಾಡುತ್ತಿದ್ದರು. ಆಗ ಅವರಿಗೆ ತಮ್ಮ ಸ್ವಂತ ಹಣದಿಂದ ಉಂಗುರ ನೀಡುತ್ತಿದ್ದರು. ಜೊತೆಗೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ರಾಷ್ಟ್ರೀಯ ಪ್ರಶಸ್ತಿ ನೀಡಿ, ಒಂದು ಲಕ್ಷ ರೂ. ನೀಡುತ್ತಿದ್ದರು. ಆದರೆ ಇದನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇನ್ನೂ ನಾನು ಅಭಿನಯಕ್ಕೆ ಬಂದ ಮೇಲೆ ಜಯಂತಿ ಅವರೊಟ್ಟಿಗೆ ಸೇರಿ, ಸರೋಜಾದೇವಿ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಭಾಗ್ಯ ಸಿಕ್ಕಿತ್ತು. ಕಲಾವಿದರನ್ನ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

    ಚಿಕ್ಕ ಮಕ್ಕಳ ಮನಸ್ಸಿನವರು. ತುಂಬಾ ಮುಗ್ಧ ಸ್ವಭಾವದವರು. ಆದರೆ ಚಿತ್ರರಂಗದ ಹೊರಗೆ ತುಂಬಾ ಗಾಂಭೀರ್ಯತೆಯಿಂದ ಇರುತ್ತಿದ್ದರು. ಪರಿಪೂರ್ಣ ಜೀವನವನ್ನು ಅನುಭವಿಸಿದರು. ಆದರೆ ವೈವಾಹಿಕ ಜೀವನವನ್ನು ಬಹಳ ದಿನ ಅನುಭವಿಸುವ ಭಾಗ್ಯ ಅವರಿಗೆ ಸಿಗಲಿಲ್ಲ. ಇನ್ನೂ ಕನ್ನಡ ಸೇರಿ ಬೇರೆ ಭಾಷೆಯ ನಟರು ಕೂಡ ಅವರ ಜೊತೆ ನಟಿಸಲು ಕಾಯುತ್ತಿದ್ದರು. ದಿಲೀಪ್ ಕುಮಾರ್, ಶಿವಾಜಿ ಗಣೇಶನ್ ಸೇರಿ ಹಿರಿಯ ನಟರು ಇವರ ಜೊತೆ ನಟನೆಗಾಗಿ ಕಾಯುತ್ತಿದ್ದರು. ಆಗ ಎಲ್ಲಾ ಸ್ಟಾರ್ ನಟರಿಗೆ ಹಾಟ್ ಫೇವರೆಟ್ ನಟಿ ಆಗಿದ್ದರು. ಸರೋಜಾದೇವಿ ನಮ್ಮ ಸಿನಿಮಾದಲ್ಲಿ ಇರಬೇಕು ಎಂದು ಹಾತೊರೆಯುತ್ತಿದ್ದರು ಎಂದರು.

    ತಿಂಗಳಿಗೆ ಒಂದು ಬಾರಿಯಾದ್ರೂ ಭೇಟಿಯಾಗಿ ಮಾತನಾಡ್ತಿದ್ದೆ. ಆದರೆ ಕಳೆದ ಎರಡು ತಿಂಗಳಿಂದ ನಾನು ಅವರೊಂದಿಗೆ ಮಾತನಾಡಿರಲಿಲ್ಲ. ಅದೇ ಬೇಜಾರು. ಎಲ್ಲಾ ವಿಚಾರದಲ್ಲೂ ಶಿಸ್ತು. ಎಲ್ಲವನ್ನೂ ನಮಗೆ ಹೇಳಿ ಕೊಡುತ್ತಿದ್ದರು ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಉತ್ತರಾಖಂಡ ಸರ್ಕಾರದಿಂದ ‘ಆಪರೇಷನ್ ಕಾಲನೇಮಿ’ ಕಾರ್ಯಾಚರಣೆ – 82 ನಕಲಿ ಬಾಬಾಗಳ ಬಂಧನ

  • ಲೀಲಾವತಿ ಖಾಸಗಿ ವಿಷಯ ಹೇಳಿ ತುಂಬಾ ಅತ್ತಿದ್ದರು: ನಟಿ ಸರೋಜಾದೇವಿ

    ಲೀಲಾವತಿ ಖಾಸಗಿ ವಿಷಯ ಹೇಳಿ ತುಂಬಾ ಅತ್ತಿದ್ದರು: ನಟಿ ಸರೋಜಾದೇವಿ

    ಟಿ ಲೀಲಾವರ ಜೊತೆ ಸಾಕಷ್ಟು ಒಡನಾಟ ಹೊಂದಿದ್ದ ಮತ್ತು ಅವರೊಂದಿಗೆ ಸಿನಿಮಾದಲ್ಲೂ ನಟಿಸಿರುವ ಹಿರಿಯ ನಟಿ ಬಿ.ಸರೋಜಾದೇವಿ (B. Sarojadevi) ಅವರು ಲೀಲಾವತಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಲೀಲಾವತಿ ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನೇ ಕೇಳೋಕೆ ಕಷ್ಟವಾಗುತ್ತಿದೆ ಎಂದು ಅವರು, 25 ದಿನಗಳ ಹಿಂದೆಯಷ್ಟೇ ಅವರ ಮನೆಗೆ ಹೋಗಿ ಭೇಟಿ ಮಾಡಿರುವ ಸಂಗತಿಯನ್ನು ತಿಳಿಸಿದರು.

    ಲೀಲಾವತಿ ಮತ್ತು ನಾನು ಒಟ್ಟಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇವೆ. ನಾವಿಬ್ಬರೂ ಬೆಂಗಳೂರಿನಿಂದ ಮದ್ರಾಸ್ ಗೆ ವಿಮಾನದಲ್ಲಿ ಹೋಗುವಾಗ, ನನ್ನ ಪಕ್ಕದಲ್ಲೇ ಬಂದು ಕೂರುತ್ತಿದ್ದರು. ತಮ್ಮ ಖಾಸಗಿ ವಿಷಯಗಳನ್ನು ಹಂಚಿಕೊಂಡು ತುಂಬಾ ಅಳುತ್ತಿದ್ದರು. ಅವರು ಅಳದೇ ಇರುವ ದಿನಗಳೇ ಇಲ್ಲ ಎನ್ನಬಹುದು. ಅಷ್ಟೊಂದು ಕಷ್ಟ ಪಟ್ಟ ಜೀವವದು. ಹಲವು ದಿನಗಳ ಹಿಂದೆ ನಾನು ಅವರಿಗೆ ಮನೆಗೆ ಹೋಗಿದ್ದಾಗ, ಅವರ ಮಗ ಯಾರು ಬಂದಿದ್ದಾರೆ ಹೇಳು ಅಂದ.. ಸರೋಜಾದೇವಿ ಎಂದು ಹೇಳಿದ್ದರು. ಈಗ ಮತ್ತೆ ಆ ಮಾತನ್ನು ಕೇಳಿಸಿಕೊಳ್ಳೊಕೆ ಆಗ್ತಿಲ್ಲವಲ್ಲ ಅಂತ ಸಂಕಟ ಆಗುತ್ತಿದೆ ಎಂದರು ಸರೋಜಾದೇವಿ.

    ಅವರ ದೇಹ  ಬಳಲಿತ್ತು

    ಸತತ ಎರಡು ತಿಂಗಳಿಂದ ನಟಿ ಲೀಲಾವತಿ (Leelavati) ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ವಿಕಾಸ್ (Dr.Vikas), ನಟಿಗೆ ಚಿಕಿತ್ಸೆ ನೀಡಿದ ವಿವರವನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಲೀಲಾವತಿ ಅವರಿಗೆ ಏನೆಲ್ಲ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನುವ ವಿವರವನ್ನೂ ಅವರು ನೀಡಿದ್ದಾರೆ.

    ಸತತ ಎರಡು ತಿಂಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ವಾರದ ಹಿಂದೆಯಷ್ಟೇ ನಾನು ಅವರ ಮನೆಗೆ ಹೋಗಿದ್ದೆ. ಮಲಗಿದ್ದಲ್ಲೇ ಮಲಗಿದ್ದರಿಂದ ಬೆನ್ನಿನಲ್ಲಿ ನೋವಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸೋದು ಕಷ್ಟವಾಗಿಲ್ಲ. ಮನೆಯಲ್ಲೇ ಟ್ರೀಟ್ ಮೆಂಟ್ ಕೊಡಲು ಮುಂದಾದೆವು ಎಂದರು ಡಾ.ವಿಕಾಸ್.

     

    ಮುಂದುವರೆದು ಮಾತನಾಡಿದ ಡಾ.ವಿಕಾಸ್, ‘ಲೀಲಾವತಿ ಅವರ ದೇಹದಲ್ಲಿ ಪ್ರೊಟಿನ್ ಕಡಿಮೆ ಇತ್ತು. ಉಪ್ಪಿನಾಂಶ ಕೂಡ ತೀರಾ ಕಡಿಮೆ ಆಗಿತ್ತು. ಹೊಟ್ಟೆಗೆ ಡೈರೆಕ್ಟ್ ಆಗಿ ಅವರಿಗೆ ಆಹಾರವನ್ನು ಕೊಡುವಂತಹ ವ್ಯವಸ್ಥೆ ಮಾಡಲಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ವಯಸ್ಸಿನ ಕಾರಣದಿಂದಾಗಿ ಅವರ ದೇಹ ಚಿಕಿತ್ಸೆಗೆ ಬೇಗ ಬೇಗ ಸ್ಪಂದಿಸುತ್ತಿರಲಿಲ್ಲ ಎಂದಿದ್ದಾರೆ.

     

  • ಈ ವ್ಯಕ್ತಿಗಾಗಿ ಮತ್ತೆ ಕ್ಯಾಮೆರಾ ಮುಂದೆ ಬಂದ ಬಿ. ಸರೋಜಾದೇವಿ

    ಈ ವ್ಯಕ್ತಿಗಾಗಿ ಮತ್ತೆ ಕ್ಯಾಮೆರಾ ಮುಂದೆ ಬಂದ ಬಿ. ಸರೋಜಾದೇವಿ

    ಬೆಂಗಳೂರು: ಹಿರಿಯ ನಟಿ ಬಿ. ಸರೋಜಾದೇವಿ ಅವರು ಚಿತ್ರರಂಗದಿಂದ ಕೆಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಈಗ ಪುನೀತ್ ರಾಜ್‍ಕುಮಾರ್ ಗಾಗಿ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

    ನಟನೆಯಿಂದ ಕೆಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದ ಬಿ. ಸರೋಜದೇವಿ ಈಗ ಪುನೀತ್ ಅವರಿಗಾಗಿ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಿ. ಸರೋಜಾದೇವಿ ಅವರು ಡಾ. ರಾಜ್‍ಕುಮಾರ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬಾಲನಟನಾಗಿ ಪುನೀತ್ ಅಭಿನಯಿಸಿದ್ದ ‘ಯಾರಿವನು’ ಚಿತ್ರದಲ್ಲಿ ನಟಿಸಿದ್ದ ಬಿ. ಸರೋಜದೇವಿ ಈಗ ಅಪ್ಪು ನಾಯಕನಾಗಿ ಅಭಿನಯಿಸಲಿರುವ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

    ಬಿ. ಸರೋಜದೇವಿ ಪುನೀತ್ ರಾಜ್‍ಕುಮಾರ್ ಜೊತೆ ನಟಿಸುವುದು ಅಧಿಕೃತವಾಗಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.

    ಈಗ ಫ್ಯಾಮಿಲಿ ಶೋನಲ್ಲಿ ಪುನೀತ್ ರಾಜ್‍ಕುಮಾರ್ ಬ್ಯುಸಿಯಾಗಿದ್ದು, ಚಿತ್ರದ ಶೂಟಿಂಗ್ ಮಾರ್ಚ್ 5 ರಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಕ್ಕೆ ನಾಯಕಿಯಾಗಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಪ್ರಿಯಾಂಕ ಜಾವಲ್‍ಕರ್ ಆಯ್ಕೆ ಆಗಿದ್ದಾರೆ.