Tag: B-report

  • ಮುಡಾ ಕೇಸ್ `ಬಿ’ ರಿಪೋರ್ಟ್ ಒಪ್ಪುತ್ತಾ ಕೋರ್ಟ್? – ಮರು ತನಿಖೆ ಆದೇಶ ಬಗ್ಗೆ ನಾಳೆ ನಿರ್ಧಾರ

    ಮುಡಾ ಕೇಸ್ `ಬಿ’ ರಿಪೋರ್ಟ್ ಒಪ್ಪುತ್ತಾ ಕೋರ್ಟ್? – ಮರು ತನಿಖೆ ಆದೇಶ ಬಗ್ಗೆ ನಾಳೆ ನಿರ್ಧಾರ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ನಿವೇಶನ (Muda Case) ಹಂಚಿಕೆ ಹಗರಣ ಸಂಬಂಧ ಲೋಕಾಯುಕ್ತ ‘ಬಿ’ ರಿಪೋರ್ಟ್ (B Report) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಆದೇಶ ಕಾಯ್ದಿರಿಸಿದೆ.

    ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಬಿ ರಿಪೋರ್ಟ್ ಒಪ್ಪಬೇಕಾ? ಅಥವಾ ಮರುತನಿಖೆಗೆ ಆದೇಶಿಸಬೇಕಾ? ಅನ್ನೋ ಬಗ್ಗೆ ನಾಳೆ ಗೊತ್ತಾಗಲಿದೆ. ಇದನ್ನೂ ಓದಿ: ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರೊಟೆಸ್ಟ್ ಅರ್ಜಿ ಹಾಕಿದ್ದರು. ಈ ಹಿಂದೆ ತನಿಖೆ ಪೂರ್ಣವಾದ ಬಳಿಕ ‘ಬಿ’ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡೋದಾಗಿ ಕೋರ್ಟ್ ಹೇಳಿತ್ತು. ಕಳೆದ 6 ತಿಂಗಳಿಂದ ತನಿಖೆಯಲ್ಲಿ ಪ್ರಗತಿ ಆಗದ ಹಿನ್ನೆಲೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ‘ಬಿ’ ರಿಪೋರ್ಟ್ ಬಗ್ಗೆ ಆದೇಶ ಮಾಡಲು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದರು. ಇಂದು ಕೋರ್ಟ್ ಕಲಾಪದ ಅವಧಿ ಮುಕ್ತಾಯ ಹಿನ್ನೆಲೆ ಆದೇಶ ನಾಳೆಗೆ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ

  • ಸೂರಜ್‌ ರೇವಣ್ಣಗೆ ಬಿಗ್‌ ರಿಲೀಫ್‌ – ಸಿಐಡಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ

    ಸೂರಜ್‌ ರೇವಣ್ಣಗೆ ಬಿಗ್‌ ರಿಲೀಫ್‌ – ಸಿಐಡಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ

    ಬೆಂಗಳೂರು: ಅನೈಸರ್ಗಿಕ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಸೂರಜ್ ರೇವಣ್ಣಗೆ (Suraj Revanna) ಬಿಗ್ ರಿಲೀಫ್ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ‌ಯಲ್ಲಿ ಸಿಐಡಿ (CID) ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

    ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿತ್ತು. ಆರೋಪ ಸಾಬೀತುಪಡಿಸಲು ಬೇಕಾದ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಸಿಐಡಿ ಬಿ ರಿಪೋರ್ಟ್‌ ಸಲ್ಲಿಸಿದೆ.  ಇದನ್ನೂ ಓದಿ: Bengaluru | ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

    ಏನಿದು ಪ್ರಕರಣ?: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಅವರನ್ನು ಕಳೆದ ವರ್ಷ ಜೂನ್‌ 23 ರಂದು ಪೊಲೀಸರು ಬಂಧಿಸಿದ್ದರು. ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ಅಕ್ರಮ ಬಂಧನ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‍ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ನನ್ನ ಕುಟುಂಬದ ತೇಜೋವಧೆಗೆ ಷಡ್ಯಂತ್ರ – ಬಿಡುಗಡೆ ಬಳಿಕ ಸೂರಜ್ ರೇವಣ್ಣ ಫಸ್ಟ್ ರಿಯಾಕ್ಷನ್

    ಇದಾದ ಬಳಿಕ ಸಂತ್ರಸ್ತನ ವಿರುದ್ಧ ಪ್ರತಿದೂರು ನೀಡಲು ಸೂರಜ್ ಹಾಸನದ ಸೆನ್ ಪೊಲೀಸ್ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್‌ ರೇವಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಜುಲೈ 22 ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.

  • ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

    ಶ್ರುತಿ ಹರಿಹರನ್- ಸರ್ಜಾ ಮೀಟೂ ಕೇಸ್ : ನಟಿಗೆ ಪೊಲೀಸ್ ನೋಟಿಸ್

    ನ್ನಡ ಚಿತ್ರರಂಗದ ಹೆಸರಾಂತ ನಟಿ ಶ್ರುತಿ ಹರಿಹರನ್ (Shruti Hariharan) ಮೀಟೂ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಸಾಕ್ಷಿಗಳು ಇಲ್ಲ ಎನ್ನುವ ಕಾರಣಕ್ಕಾಗಿ ಜನವರಿ 2022ರಂದು ಬಿ ರಿಪೋರ್ಟ್ (B Report) ಸಲ್ಲಿಸಿದ್ದರು. ಈ ರಿಪೋರ್ಟ್ ವಿರುದ್ಧ ಶ್ರುತಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದರು.

    ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಚಾಲೇಂಜ್ ಮಾಡಿದ್ದ ಶ್ರುತಿ ಹರಿಹರನ್ ಗೆ ಈಗ ಮತ್ತೆ ಪೊಲೀಸರು ನೋಟಿಸ್ (Notice) ನೀಡಿದ್ದಾರೆ. ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಬಳಿಕ ಈ ನೋಟಿಸ್  ನೀಡಲಾಗಿದೆ.

    ಏನಿದು ಪ್ರಕರಣ ?

    ಶ್ರುತಿ ಹರಿಹರನ್ ವಿಸ್ಮಯ (Vismaya) ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶ್ರುತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ (Arjun Sarja) ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಮೊದಲು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.

    ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶ್ರುತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿತಿಕೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ನಡೆಯಿತು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    `ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಶ್ರುತಿ ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ ಎಂದು ಅಂಬರೀಶ್ ಮುಂದೆ ಹೇಳಿಕೊಂಡಿದ್ದರು. ಅಂಬರೀಶ್ ನಡೆಸಿದ ಸಂಧಾನ ವಿಫಲವಾಗುತ್ತಿದ್ದಂತೆಯೇ ಶ್ರುತಿ  ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೆಲ್ಲವೂ ನಡೆದದ್ದು 2018ರಂದು.

    ಶ್ರುತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಲೈಂಗಿಕ ಕಿರುಕುಳ ಆಗಿದೆ ಎನ್ನಲಾದ ಸ್ಥಳಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜನವರಿ 2022ರಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿತ್ತು. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್‍ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿತ್ತು.

    ತನಿಖೆ ಏನೆಲ್ಲ ಆಗಿತ್ತು?

    ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿದ್ದ ಪೊಲೀಸರಿಗೆ ಯುಬಿ ಸಿಟಿಯ ಸೆಕ್ಯೂರಿಟಿ ಗಾರ್ಡ್‍ಗಳು ತಲೆನೋವಾಗಿ ಪರಿಣಮಿಸಿದ್ದರು. ಹೌದು. ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಮೊದಲಿಗೆ ನಟ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಾಕಷ್ಟು ಜನರನ್ನು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದರು.

     

    ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನನಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ರು. ಯುಬಿ ಸಿಟಿಯಲ್ಲಿ ರೂಮ್ ನಲ್ಲಿ ಒಬ್ಬನೇ ಇದೇನಿ, ಬಾ ಸ್ವಲ್ಪ ಹೊತ್ತು ಕಾಲ ಕಳೆಯೋಣ ಅಂತಾ ನನ್ನನ್ನು ಕರೆದ್ರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಯುಬಿ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನು ವಿಚಾರಣೆ ನಡೆಸೋಕೆ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಆ ಘಟನೆ ನಡೆದ ನಂತರ ಹತ್ತಾರು ಸೆಕ್ಯೂರಿಟಿ ಗಾರ್ಡ್‍ಗಳು ಕೆಲಸಬಿಟ್ಟಿರೋದಲ್ಲದೇ, ಸೆಕ್ಯೂರಿಟಿ ಏಜೆನ್ಸಿಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿದ್ದ ಕೆಲ ಸಿಬ್ಬಂದಿ ಕೂಡ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಾಯಿ ಬಿಟ್ಟಿರಲಿಲ್ಲ.

  • ಉದ್ಯಮಿ ಆತ್ಮಹತ್ಯೆ ಪ್ರಕರಣ – ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌

    ಉದ್ಯಮಿ ಆತ್ಮಹತ್ಯೆ ಪ್ರಕರಣ – ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌

    ರಾಮನಗರ: ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೋರ್ವ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಮಾಜಿ ಸಚಿವ ಅರವಿಂದ ಲಿಂಬಾವಳಿಗೆ (Arvind Limbavali) ಬಿಗ್ ರಿಲೀಫ್ ಸಿಕ್ಕಿದೆ.

    ಉದ್ಯಮಿ ಬರೆದಿಟ್ಟಿದ್ದ ಡೆತ್‌ನೋಟ್‌ (Death Note) ಆರೋಪಕ್ಕೆ ಸರಿಯಾದ ಸಾಕ್ಷ್ಯಗಳಿಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ (B Report) ಸಲ್ಲಿಸಿ ತನಿಖೆ ಮುಕ್ತಾಯಗೊಳಿಸಲಾಗಿದೆ.  ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

     

    ಕಳೆದ ಜನವರಿ 2ರಂದು ಬೆಂಗಳೂರಿನ ಉದ್ಯಮಿ ಪ್ರದೀಪ್‌ ಕಗ್ಗಲೀಪುರ ಸಮೀಪ ಕಾರಿನಲ್ಲಿಯೇ ಡೆತ್‌ನೋಟ್‌ ಬರೆದಿಟ್ಟು ಶೂಟೌಟ್‌ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ಅದರಲ್ಲಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆತ್ಮಹತ್ಯೆಗೆ ಕಾರಣವೆಂದು ಹೆಸರು ಬರೆದಿಟ್ಟಿದ್ದರು.

     

    ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ 6 ಮಂದಿ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಡೆತ್ ನೋಟ್ ಆರೋಪಕ್ಕೆ ಸರಿಯಾದ ಸಾಕ್ಷ್ಯಗಳು ಸಿಗದ ಹಿನ್ನಲೆಯಲ್ಲಿ ತನಿಖೆ ಮುಕ್ತಾಯಗೊಳಿಸಲಾಗಿದೆ. ತನಿಖೆ ವೇಳೆ ಕೌಟುಂಬಿಕ ಕಲಹ ಹಾಗೂ ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

  • ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ

    ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ

    ಬೆಳಗಾವಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪನ (Madal Virupakshappa) ಮಗ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಕೊಡಿ ಅಂತಿದ್ದಾರೆ. ಇವು ದಾಖಲೆಗಳಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಾಟಿ ಬೀಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಆರೋಪ ಬಂದ ಕೂಡಲೇ ಸಿಬಿಐಗೆ ವಹಿಸಿದ್ದೇನೆ. ಆ ಕೇಸ್‍ಗಳಲ್ಲಿ ಎನೂ ಸತ್ಯ ಇಲ್ಲವೆಂದು ಬಿ ರಿಪೋರ್ಟ್‌ (B report) ಬಂದಿವೆ. ಬಿಜೆಪಿಯವರು ಒಂದು ದಿನಾ ಆದ್ರೂ ವಿಚಾರಣೆ ನಡೆಸಿದ್ದಾರಾ? ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನಾಪತ್ತೆ..!

    ಡಿಕೆ ರವಿ ಕೇಸ್ (D.K.Ravi) ದಾಖಲೆ ಕೊಟ್ಟಿದ್ರಾ? ಗಣಪತಿ ಕೇಸ್ ದಾಖಲಾತಿ ಕೊಟ್ಟಿದ್ರಾ? ಸೌಜನ್ಯ ಕೇಸ್, ಪರೇಶ್ ಮೇಸ್ತಾ  (Paresh Mesta) ಪ್ರಕರಣಕ್ಕೆ ದಾಖಲಾತಿ ಕೊಟ್ಟಿದ್ರಾ? ಆರೋಪ ಮಾಡಿದ ಕೂಡಲೇ ನಾನು ಸಿಬಿಐಗೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ (BJP) ಸರ್ಕಾರ ಇತ್ತು ಸಿಬಿಐ ಅವರ ಅಧೀನದಲ್ಲಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ಹೇಳಿದ್ರು. ನೀವು ಐದು ವರ್ಷ ವಿರೋಧ ಪಕ್ಷದಲ್ಲಿದ್ರಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ರಾ? ನೀವು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯ್ತು ಯಾಕೆ ವಿಚಾರಣೆ ಮಾಡಿಸಲಿಲ್ಲ? ಈಗ ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಮಂತ್ರಿಗಳು, ಅಧ್ಯಕ್ಷರು ಕಲೆಕ್ಟ್ ಮಾಡಿಕೊಡಬೇಕು. ಇದೇ ವಿಚಾರಕ್ಕೆ ಮಾಡಾಳ್ ವಿರೂಪಾಕ್ಷಪ್ಪನ ಮಗ ಸಿಕ್ಕಿ ಹಾಕಿಕೊಂಡಿದ್ದಾನೆ. ಮನೆಯಲ್ಲಿ ಆರು ಕೋಟಿ ಸಿಕ್ಕಿತು ಎಲ್ಲಿಂದ ಬಂತೂ ದುಡ್ಡು? ಅದು ಲೆಕ್ಕ ಇಲ್ಲದ ಭ್ರಷ್ಟಾಚಾರದ ಹಣ ಎಂದಿದ್ದಾರೆ.

    ಸಚಿವರಿಗೆ, ನಿಗಮ ಮಂಡಳಿ ಅಧ್ಯಕ್ಷರಿಗೆ ಹಣ ಫಿಕ್ಸ್ ಮಾಡಿದ್ದಾರೆ. ಚುನಾವಣೆಯನ್ನು (Election) ಕೋಮು ಗಲಭೆಯಲ್ಲಿ ಗೆಲ್ಲಲು ಆಗಲ್ಲ ಹಣದಲ್ಲಿ ಗೆಲ್ಲಬೇಕೆಂದು ಹೊರಟ್ಟಿದ್ದಾರೆ. ನಾವು ಮಾಡಿದ ಕೆಲಸಗಳನ್ನ ಪ್ರಧಾನಿ ಕರೆಸಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್

  • ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ

    ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ

    – ಎಸಿಬಿ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿ ದಂಧೆ ನಡೆಸಿರುವ ಜಾಲ
    – ರಾಯಚೂರಿನಲ್ಲಿ ಮೂವರು ಅಧಿಕಾರಿಗಳಿಗೆ ಬ್ಲಾಕ್ ಮೇಲ್

    ರಾಯಚೂರು: ರಾಜ್ಯದಲ್ಲಿ ಮೇಲಿಂದ ಮೇಲೆ ಎಸಿಬಿ ದಾಳಿ ನಡೆದು ಭ್ರಷ್ಟರ ಬೇಟೆ ಸಂಚಲನ ಮೂಡಿಸಿದ ಬೆನ್ನಲ್ಲೇ ನಕಲಿ ಎಸಿಬಿ ಹಾವಳಿ ಶುರುವಾಗಿದೆ. ರಾಯಚೂರು ಸೇರಿ ಹಲವೆಡೆ ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಹಣವನ್ನು ನೀಡಿದೇ ಇದ್ದರೆ ಕೇಸ್ ಕ್ಲೋಸ್ ಮಾಡುತ್ತೇವೆ ಅಂತಿದ್ದಾರೆ. ಭಯಗೊಂಡವರು ಹಣಕೊಟ್ಟರೆ, ಅನುಮಾನ ಬಂದವರು ಪೊಲೀಸ್ ಕೇಸ್ ದಾಖಲು ಮಾಡಿದ್ದಾರೆ.

    ಭ್ರಷ್ಟ ಅಧಿಕಾರಿಗಳ ನಿದ್ದೆಕೆಡಿಸುವ ಎಸಿಬಿಯನ್ನೇ ಬಂಡವಾಳ ಮಾಡಿಕೊಂಡ ನಕಲಿ ಎಸಿಬಿ ಗ್ಯಾಂಗ್ ರಾಯಚೂರು ಸೇರಿ ರಾಜ್ಯದ ಯಾದಗಿರಿ, ಬೀದರ್ ಹಾಗೂ ಇತರೆಡೆ ದಾಳಿಯ ಬೆದರಿಕೆ, ಹಣ ವಸೂಲಿ ದಂಧೆ ನಡೆಸಿದೆ. ನೇರವಾಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡುವ ಈ ನಕಲಿ ಎಸಿಬಿ ಗ್ಯಾಂಗ್, ನಿಮ್ಮ ಇಲಾಖೆಯ ಅಧೀನ ಕಚೇರಿಯ ಇಂತಹ ಅಧಿಕಾರಿ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನು ವಿಚಾರಣೆ ಮಾಡಬೇಕು ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿ ಅಂತ ಹೇಳುತ್ತಾರೆ. ಬಳಿಕ ಟಾರ್ಗೆಟ್ ಮಾಡಿರುವವರಿಗೆ ಕರೆ ಮಾಡಿ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆ ಇಡುವುದು ಈ ಜಾಲದ ದಂಧೆಯ ರೂಪ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ರಾಯಚೂರು ಎಸಿಬಿ, ಡಿವೈಎಸ್‌ಪಿ ವಿಜಯಕುಮಾರ್ ಹೆಸರಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ನೂರ್ ಜಹಾರ್ ಖಾನಂಗೆ ಕರೆ ಮಾಡಿ ನಿಮ್ಮ ಅಧೀನದ ಜಿ.ಪಂ.ಯೋಜನಾಧಿಕಾರಿ ಟಿ.ರೋಣಿ ಹಾಗೂ ರಾಯಚೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ದ ದೂರು ಬಂದಿದೆ. ಅಬಕಾರಿ ಉಪ ಆಯುಕ್ತೆ ಲಕ್ಷ್ಮಿ ನಾಯಕ್‍ಗೆ ಕರೆ ಮಾಡಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕ ಹಣಮಂತ ಗುತ್ತೆದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನ ವಿಚಾರಣೆ ಮಾಡಬೇಕು. ನನ್ನ ನಂಬರ್‍ಗೆ ಕರೆ ಮಾಡಲು ಹೇಳಿ ಅಂತ ತಿಳಿಸಿದ್ದಾರೆ. ಬಳಿಕ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ.

    ನಿಮಗೆ ಸಹಾಯ ಮಾಡಲು ಕರೆ ಮಾಡಿದ್ದೇನೆ. ಹಣ ಫೋನ್ ಪೇ ಇಲ್ಲಾ ಗೂಗಲ್ ಪೇ ಮಾಡದಿದ್ದರೆ, ನಿಮ್ಮಿಷ್ಟ. ಮನೆ ಕಚೇರಿ ಮೇಲೆ ದಾಳಿ ಮಾಡಲು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ. ದಸ್ತಗಿರಿ ಮಾಡುತ್ತೇವೆ, ಇದು ಬೇಕಾ ನಿನಗೆ. ಇಬ್ಬರು ಎಸಿಬಿ ಅಧಿಕಾರಿಗಳು ಶ್ರೀಲಂಕಾ ಮಾನಸ ಸರೋವರ ಟ್ರಿಪ್ ಹೋಗುತ್ತಿದ್ದಾರೆ. ಹಾಗಾಗಿ ತಲಾ 75 ಸಾವಿರ ಒಟ್ಟು ಒಂದು ಲಕ್ಷದ ಐವತ್ತು ಸಾವಿರ ಹಣ ಹಾಕಿ. ಕೇಂದ್ರ ಕಚೇರಿ ಸ್ಟೆನೋ ನವೀನ್ ಕುಮಾರ್, ಉಮೇಶ್ ಕುಮಾರ್ ನಂಬರ್‌ಗೆ ಫೋನ್ ಪೇ, ಗೂಗಲ್ ಪೇ ಮಾಡಿ. ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಅಂತ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ದ್ವೇಷಕ್ಕೆ ಪ್ರಧಾನ ಮಂತ್ರಿ ಅಂತ್ಯ ಹಾಡಬೇಕು: ಓವೈಸಿ

    ನಕಲಿ ಎಸಿಬಿ ಬೆದರಿಕೆ ಕರೆಗೆ ಹೆದರಿ ಕೆಲ ಅಧಿಕಾರಿಗಳು ಹಣವನ್ನು ನೀಡಿದ್ದಾರೆ ಅನ್ನೋ ಮಾಹಿತಿಯಿದೆ. ಆದರೆ ಅನುಮಾನ ಬಂದಿರುವ ರಾಯಚೂರಿನ ಅಧಿಕಾರಿಗಳು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಅಧಿಕಾರಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವ ನಕಲಿ ಎಸಿಬಿ ಟೀಂ ಬೆದರಿಕೆ, ಹಣ ವಸೂಲಿ ದಂಧೆಯನ್ನು ನಡೆಸಿದೆ. ಪೊಲೀಸರು ನಕಲಿ ಎಸಿಬಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

  • ಹಳ್ಳ ಹಿಡಿಯುತ್ತಿದೆ ಶೃತಿ ಹರಿಹರನ್ ಮೀಟೂ ಪ್ರಕರಣ..!

    ಹಳ್ಳ ಹಿಡಿಯುತ್ತಿದೆ ಶೃತಿ ಹರಿಹರನ್ ಮೀಟೂ ಪ್ರಕರಣ..!

    ಬೆಂಗಳೂರು: ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ.

    ಹೌದು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಖ್ಯಾತನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡ ತನಿಖೆಗೆ ಬೇಕಾದ ಎಲ್ಲಾ ಆಯಾಮಗಳಿಂದ ಮಹಜರು ಮಾಡಿದ್ದರು. ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸುಮಾರು 40 ಸಾಕ್ಷಿಗಳಿಂದ ಮಾಹಿತಿ ಕಲೆ ಹಾಕೋಕೆ ಪ್ಲಾನ್ ಮಾಡಿದ್ದ ಪೊಲೀಸರಿಗೆ ಕೇವಲ 10 ಜನರು ಸಾಕ್ಷಿಗಳನ್ನಾಗಿ ಮಾಡೋಕು ಒದ್ದಾಡ್ತಿದ್ದಾರಂತೆ.

    ವಿಸ್ಮಯ ಚಿತ್ರದ ವೇಳೆ ನಟ ಅರ್ಜುನ್ ಸರ್ಜಾನ್ ಲೈಂಗಿಕ ಕಿರುಕುಳ ನೀಡಿದ್ರು ಅನ್ನೋ ಆರೋಪಕ್ಕೆ ತಕ್ಕಂತೆ ಶೃತಿ ಪರವಾಗಿ ಸಾಕ್ಷಿ ಹೇಳೋಕೆ ಯಾರು ಮುಂದೆ ಬರ್ತಿಲ್ಲ. ವಿಸ್ಮಯ ಚಿತ್ರದ ವೇಳೆ ಜೊತೆಗಿದ್ದ ಹತ್ತಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿಚಾರಣೆ ವೇಳೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದಾರೆ. ಇನ್ನು ಶೃತಿ ಹರಿಹರನ್ ಕೂಡ ಘಟನೆ ನಡೆದ ಎರಡು ವರ್ಷಗಳ ನಂತರ ದೂರು ನೀಡಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಪ್ರಕರಣಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿ ಸಿಕ್ಕದ ಹಿನ್ನೆಲೆಯಲ್ಲಿ ಶೃತಿ ಹರಿಹರನ್ ಮೀಟೂ ಪ್ರಕರಣಕ್ಕೆ ಪೊಲೀಸರು ಎಳ್ಳು ನೀರು ಬಿಡೋಕೆ ಮುಂದಾಗಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

    ತನಿಖೆ ಹಳ್ಳ ಹಿಡಿಯೋಕೆ ಕಾರಣಗಳೇನು..?
    * ಅರ್ಜುನ್ ಸರ್ಜಾನ್ ಶೂಟಿಂಗ್ ವೇಳೆ ಆಶ್ಲೀಲವಾಗಿ ವರ್ತಿಸಿದ್ರು ಅನ್ನೋಕೆ ಯಾವುದೇ ಸಾಕ್ಷಿಗಳಿಲ್ಲ.
    * ದೇವನಹಳ್ಳಿ ಹೈವೇಯಲ್ಲಿ ರೂಮ್ ಗೆ ಕರೆದ್ರು ಅನ್ನೋಕು ಸೂಕ್ತ ಸಾಕ್ಷಿಗಳಿಲ್ಲ.
    * ಶೂಟಿಂಗ್ ನಲ್ಲಿ ಚಿತ್ರಕ್ಕೆ ಬೇಕಾದಂತೆ ನಟಿಸಿದೆ ಅಷ್ಟೇ ಅಂತಾರೆ ನಟ ಅರ್ಜುನ್ ಸರ್ಜಾ.
    * ನಲವತ್ತು ಜನರನ್ನು ಸಾಕ್ಷಿಗಳನ್ನಾಗಿ ಮಾಡೋಕೆ ಹೊರಟಿದ್ದ ಪೊಲೀಸರಿಗೆ ಸಿಕ್ಕಿದ್ದು ಕೇವಲ ಹತ್ತು ಜನ.
    * ಯುಬಿ ಸಿಟಿಯಲ್ಲಿ ರೂಮ್ ಬುಕ್ ಮಾಡಿದ್ದು ನಿಜವಾದ್ರೂ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಯಾವುದೇ ಸಿಸಿಟಿವಿ ಇಲ್ಲ.
    * ಘಟನೆ ನಡೆದು 2 ವರ್ಷಗಳ ನಂತ್ರ ದೂರು ನೀಡಿರೋದು ಕೇಸ್‍ಗೆ ಹಿನ್ನೆಡೆ ಉಂಟುಮಾಡಿದೆ.
    * ಶೂಟಿಂಗ್ ನಡೆದ ಜಾಗದಲ್ಲೂ ಯಾವುದೇ ಸಾಂದರ್ಭಿಕ ಸಾಕ್ಷಿಗಳು ಪತ್ತೆಯಾಗಿಲ್ಲ.

    ಈ ಎಲ್ಲಾ ಕಾರಣಗಳು ಒಂದು ಕಡೆಯಾದರೆ, ನಟಿ ಶೃತಿ ಹರಿಹರನ್ ಕೇಸ್ ದಾಖಲಿಸಿದ್ದು ತಡವಾಯ್ತೋ ಅಥವಾ ಪ್ರಭಾವಿ ನಟ ಅನ್ನೋ ಕಾರಣಕ್ಕೆ ಸಾಕ್ಷಿಗಳು ಹಿಂದೇಟು ಹಾಕಿದ್ರೋ ಗೊತ್ತಿಲ್ಲ. ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿದ್ದ ಮೀಟೂ ಪ್ರಕರಣ ಅಷ್ಟೇ ಸಣ್ಣಮಟ್ಟದಲ್ಲಿ ತೆರೆಮರೆಗೆ ಸರಿತಿರೋದಂತೂ ಸುಳ್ಳಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv