Tag: B R Gavai

  • 52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ

    52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ನ್ಯಾಯಮೂರ್ತಿ ಬಿ.ಆರ್. ಗವಾಯಿ (Justice B.R. Gavai) ಅವರನ್ನು  ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ  (Chief Justice of India) ನೇಮಕ ಮಾಡಲು ಅನುಮೋದಿಸಿದ್ದಾರೆ.

    ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಮೇ 14 ರಂದು ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಗುರಿ, ಸಮಯವನ್ನು ನಿರ್ಧರಿಸಿ ಉಗ್ರರನ್ನು ಹೊಡೆದು ಹಾಕಿ- ಸೇನೆಗೆ ಪೂರ್ಣ ಅಧಿಕಾರ ಕೊಟ್ಟ ಮೋದಿ


    ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಭಾರತದ ಸಂವಿಧಾನವು ನೀಡಿರುವ ಅಧಿಕಾರದ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರಿಗೆ ಸಿಜೆಐ ಆಗಿ 6 ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದ್ದು ಈ ವರ್ಷದ ನವೆಂಬರ್‌ 23ರಂದು ನಿವೃತ್ತರಾಗಲಿದ್ದಾರೆ. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    1960ರ ನವೆಂಬರ್‌ 24ರಂದು ಅಮರಾವತಿಯಲ್ಲಿ ಜನಿಸಿದ ಗವಾಯಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2003ರ ನವೆಂಬರ್‌ 14ರಂದು ಅಧಿಕಾರ ವಹಿಸಿಕೊಂಡರು. 2005ರ ನವೆಂಬರ್‌ 12ರಂದು ಅವರ ಸೇವೆಯು ಕಾಯಂ ಆಯಿತು.

  • PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    ನವದೆಹಲಿ: ಮನಿ ಲಾಂಡರಿಂಗ್ (Money Laundering) ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿಯೂ ಸಹ ಜಾಮೀನು ಒಂದು ನಿಯಮ ಮತ್ತು ಜೈಲು ಒಂದು ವಿನಾಯಿತಿ ಎಂದು ಸುಪ್ರೀಂಕೋರ್ಟ್ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

    ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರ ಸಹಾಯಕನಿಗೆ ಜಾಮೀನು ನೀಡುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಇದನ್ನೂ ಓದಿ: ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ “ಜಾಮೀನು ಒಂದು ನಿಯಮವಾಗಿದೆ ಮತ್ತು ಜೈಲು ಒಂದು ಅಪವಾದವಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gavai) ಮತ್ತು ಕೆವಿ ವಿಶ್ವನಾಥನ್ (K. V. Viswanathan) ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ.

    ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತೀರ್ಪನ್ನು ಆ.9ರಂದು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯ ಸ್ವಾತಂತ್ರ‍್ಯ ಯಾವಾಗಲೂ ನಿಯಮವಾಗಿದೆ ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದವಾಗಿದೆ. ಯಾವುದೇ ವ್ಯಕ್ತಿಯ ಸ್ವಾತಂತ್ರ‍್ಯವನ್ನು ಕಸಿದುಕೊಳ್ಳಬಾರದು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಸೆ.9ವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ – ಇಂದೇ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್‌

    ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇಡಿ ಸೋರೆನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್‌ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾರ್ಖಂಡ್ ಹೈಕೋರ್ಟ್ ಮಾ.22 ರಂದು ಜಾಮೀನು ನಿರಾಕರಿಸಿದ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.