Tag: B.R.Ambedkar

  • ಮುಸ್ಲಿಂ ಓಲೈಕೆಗಾಗಿ ಸಂವಿಧಾನಕ್ಕೆ 370ನೇ ವಿಧಿ ಸೇರಿಸಿದ್ದೇ ನೆಹರೂ: ಛಲವಾದಿ ಕಿಡಿ

    ಮುಸ್ಲಿಂ ಓಲೈಕೆಗಾಗಿ ಸಂವಿಧಾನಕ್ಕೆ 370ನೇ ವಿಧಿ ಸೇರಿಸಿದ್ದೇ ನೆಹರೂ: ಛಲವಾದಿ ಕಿಡಿ

    – 370ನೇ ವಿಧಿ ಸೇರಿಸಿದ ದಿನದಿಂದ ಶ್ಯಾಮ್‌ಪ್ರಸಾದ್ ಮುಖರ್ಜಿ ಹೋರಾಟ

    ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರನ್ನು ದೂರ ಇಟ್ಟು ನೆಹರೂ ಅವರು ತಮ್ಮ ಅವಶ್ಯಕತೆ ಮತ್ತು ಮುಸ್ಲಿಂ ಓಲೈಕೆಗಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದರು ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ (Shyamprasad Mukherjee) ಅವರು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ (B R Ambedkar) ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಅಂಬೇಡ್ಕರ್ ಅವರು ಸಂವಿಧಾನ ಬರೆದ ಸಂದರ್ಭದಲ್ಲಿ 370ನೇ ವಿಧಿಯನ್ನು ಅಳವಡಿಸಿರಲಿಲ್ಲ. ಬಾಬಾ ಸಾಹೇಬರನ್ನು ದೂರ ಇಟ್ಟು ನೆಹರೂ ಅವರು ತಮ್ಮ ಅವಶ್ಯಕತೆ ಮತ್ತು ಓಲೈಕೆಗಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದರು. 370ನೇ ವಿಧಿ ಸೇರಿಸಿದ ದಿನದಿಂದ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಈ ದೇಶಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಒಬ್ಬ ಮಹಾನ್ ವ್ಯಕ್ತಿ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

    ಡಾ.ಮುಖರ್ಜಿ ಅವರು ಸ್ವಾತಂತ್ರ್ಯ ನಂತರ ಪ್ರಥಮ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಆ ಕಾಲಘಟ್ಟದಲ್ಲಿ ಬಹುಮುಖ ಪ್ರತಿಭೆಯಾಗಿದ್ದವರು. ಇವರು ಒಬ್ಬ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಹೋರಾಟಗಾರರು, ಸಮಾಜ ಸೇವಕರು ಹೀಗೆ ಅನೇಕ ರೀತಿಯಲ್ಲಿ ಈ ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇವರು ಬ್ರಿಟಿಷರ ವಿರುದ್ಧದ ಕ್ವಿಟ್ ಇಂಡಿಯಾ ಚಳವಳಿಯ ರುವಾರಿಯಾಗಿ ಬಹು ದೊಡ್ಡ ಹೋರಾಟವನ್ನು ರೂಪಿಸಿದ್ದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು – ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸ್ವಾತಂತ್ರ‍್ಯಕ್ಕಾಗಿ ಕೆಲಸ ಮಾಡಿಲ್ಲ ಹಾಗೂ ಸತ್ತಿಲ್ಲ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ. ಈ ರೀತಿ ಕಾಂಗ್ರೆಸ್ಸಿಗರು ಹೇಳಲೇಬೇಕು ಯಾಕೆಂದರೆ, ಸ್ವಾತಂತ್ರ‍್ಯ ಅನ್ನುವುದು ತಮ್ಮಿಂದ ಮಾತ್ರ ಬಂದಿದೆ ಎಂಬುದು ಅವರಿಗೆ ಬೇಕಾಗಿದೆ ಎಂದು ಟೀಕಿಸಿದ್ದಾರೆ.

  • ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಹಾವೇರಿ: ಅಂಬೇಡ್ಕರ್ (B R Ambedkar) ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು ಎಂದು ಶಿಗ್ಗಾಂವಿಯ (Shiggaon) ‘ಕೈ’ ಮುಖಂಡ ಅಜ್ಜಂಪೀರ್ ಖಾದ್ರಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು. ಆರ್.ಬಿ ತಿಮ್ಮಾಪುರ್ ಹೋಗಿ ರಹೀಮ್ ಖಾನ್, ಡಾ.ಜಿ ಪರಮೇಶ್ವರ್ ಬದಲು ಫೀರ್ ಸಾಹೇಬ್, ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲೀಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಸೋಮವಾರ ಶಿಗ್ಗಾಂವಿಯ ಹನುಮಂತ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದಿದ ಆದಿಜಾಂಬವ ಜಾಗೃತಿ ಸಮಾವೇಶ ಖಾದ್ರಿ (Ajjampir Khadri) ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ಈ ಬೆನ್ನಲ್ಲೇ, ಖಾದ್ರಿ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ. ಇಷ್ಟೆಲ್ಲಾ ಆದಮೇಲೆ, ಅಜ್ಜಂಪೀರ್ ಖಾದ್ರಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾನು ಎಲ್ಲೋ ಕಾರ್ಯಕ್ರಮದಲ್ಲಿ ಕೇಳಿದ್ದೆ, ಅದನ್ನು ನಿನ್ನೆ ಭಾಷಣ ಮಾಡುವಾಗ ಹೇಳಿದ್ದೇನೆ. ನಮ್ಮ ಕ್ಷೇತ್ರದಲ್ಲಿ ನಾವು ದಲಿತ ಬಾಂಧವರು ತುಂಬಾ ಪ್ರೀತಿಯಿಂದ ಇದ್ದೇವೆ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಇದರಿಂದ ಯಾವುದೇ ತಪ್ಪು ಸಂದೇಶ ಹೋಗುವುದಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಅಂಬೇಡ್ಕರ್, ವಾಲ್ಮೀಕಿ ಎಲ್ಲರ ಫೋಟೋ ಹಾಕಿದ್ದೇನೆ. ನಾವೆಲ್ಲರೂ ಜೊತೆಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು

  • ಏ.14 ರಂದು ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಡ್ಡಾಯ; ಸರ್ಕಾರ ಆದೇಶ

    ಏ.14 ರಂದು ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಡ್ಡಾಯ; ಸರ್ಕಾರ ಆದೇಶ

    ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು (Ambedkar Jayanti 2024) ಕಡ್ಡಾಯವಾಗಿ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಇದೇ ತಿಂಗಳು ಏಪ್ರಿಲ್ 10 ರಂದು ಮುಕ್ತಾಯವಾಗಲಿದೆ. ಆದರೆ ಏಪ್ರಿಲ್ 14ರಂದು ‘ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಜಯಂತಿ ಆಚರಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ನಂ.1 – ಬಾಲಕಿಯರೇ ಮೇಲುಗೈ

    ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ, ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಿಭಾಗಿತ್ವದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಎಲ್ಲಾ ಶಾಲಾ ಮುಖ್ಯಸ್ಥರಿಗೆ, ಕ್ಷೇತ್ರ ಶಿಕ್ಷಾಣಧೀಕರಿಗಳಿಗೆ, ಉಪ ನಿರ್ದೇಶಕರಿಗೆ ತಿಳಿಸಿದೆ.

  • ಅಂಬೇಡ್ಕರ್ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಹರೀಶ್ ಪೂಂಜಾ

    ಅಂಬೇಡ್ಕರ್ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಹರೀಶ್ ಪೂಂಜಾ

    ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್(B.R.Ambedkar) ಅವರ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ( Harish Poonja) ಅಭಿಪ್ರಾಯಪಟ್ಟಿದ್ದಾರೆ.

    ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸರ್ಕಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಿದೆ. ಭಾರತ ಸಂವಿಧಾನದ ಮೂಲ ಪ್ರತಿಯಲ್ಲಿ ರಾಮಾಯಣದ ಉಲ್ಲೇಖವಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ರಚನೆಯಲ್ಲಿ ಮೂಲಭೂತ ಹಕ್ಕುಗಳನ್ನು ವಿವರಿಸುವ ಮೂಲ ಪ್ರತಿಯ ಮೊದಲ ಪುಟದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಭಾವಚಿತ್ರ ಇಡಲಾಗಿದೆ. ಈ ಮೂಲಕ ರಾಮನೇ ಜನರ ಹಕ್ಕು ರಕ್ಷಿಸುವ ರಕ್ಷಕ ಎಂದು ಅಂಬೇಡ್ಕರ್ ಅವರೇ ಸಾರಿದ್ದಾರೆ. ಬಹಳ ಸ್ಪಷ್ಟವಾಗಿ ರಾಮರಾಜ್ಯ ಮತ್ತು ರಾಮ ಈ ದೇಶಕ್ಕೆ ಪೂರಕ ಅಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರಾ ನಿತೀಶ್?

    ಈ ದೇಶದಲ್ಲಿ 65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ರಾಮನ ಪ್ರತಿಷ್ಠೆ ಬಹಿಷ್ಕಾರ ಮಾಡುತ್ತೆ. ಗಾಂಧೀಜಿಯವರ ರಾಮ ಬೇಕು, ನಿಮ್ಮ(ಬಿಜೆಪಿ) ರಾಮ ಬೇಡ ಅಂದಿದ್ದಾರೆ. ಆದರೆ ವಾಲ್ಮೀಕಿ ನಂಬಿದ, ಗಾಂಧೀಜಿ ಹೇಳಿದ, ಹಿಂದೂ ಸಮಾಜದ ಮರ್ಯಾದ ಪುರುಷೋತ್ತಮ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಕಾಂಗ್ರೆಸ್ ನಾಯಕರ ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪೂಜಿಸೋ ರಾಮ ಹುಟ್ಟಿದ್ದು ಕೂಡ ಅಯೋಧ್ಯೆಯಲ್ಲಿ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಸಂವಿಧಾನದ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಿವೇಕಾನಂದರ ವಿಶ್ವ ವಂದ್ಯ ಭಾರತದ ಹೊಸ್ತಿಲಲ್ಲಿ ನಾವಿದ್ದೇವೆ. ಅಭಿವೃದ್ಧಿ ವಂಚಿತ ಕರ್ನಾಟಕ ಇದೆ, ಅಭಿವೃದ್ಧಿ ಮಾಡದ ಸರ್ಕಾರ ಇದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

  • ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ

    ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಅಂಬೇಡ್ಕರ್ (B.R Ambedkar) ಅವರ ಹೆಸರು ಹಾಗೂ ಸಂವಿಧಾನದಲ್ಲೂ ರಾಮ ಇದ್ದಾನೆ. ದೇವಸ್ಥಾನಕ್ಕೆ ಯಾಕೆ ನಮ್ಮನ್ನ ಬಿಡಲ್ಲ ಎಂದು ಅಂಬೇಡ್ಕರ್ ಕೇಳಿದ್ದರು. ದೇವರ ಮೇಲೆ ನಂಬಿಕೆ ಇದ್ದಿದ್ದರಿಂದಲೇ ಅವರು ಹಾಗೆ ಪ್ರಶ್ನಿಸಿದ್ದರು ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

    ನಗರದ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ

    ಕಾಂಗ್ರೆಸ್ (Congress) ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ.

    ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಅವರೆಲ್ಲ ಶ್ರೀರಾಮನನ್ನು ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೊಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆಯನ್ನು ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ. ಕಾಂಗ್ರೆಸ್‍ನವರು ಅದನ್ನು ಬಿಸಾಡುವ ಕೆಲಸ ಮಾಡ್ತಿದ್ದಾರೆ. ಜನರಿಗೆ ಕೊಡುತ್ತಿರುವುದು ರಾಜ್ಯದ ಅಕ್ಕಿಯಲ್ಲ. ಮೋದಿ ಕೊಡುತ್ತಿರುವ ಅಕ್ಕಿ, ಜನರ ಕಿವಿ ಮೇಲೆ ಹೂವು ಇಡಬೇಡಿ ಡಿಕೆಶಿಯವರೇ ಎಂದಿದ್ದಾರೆ.

    ಪ್ರಿಯಾಕೃಷ್ಣ ಅವರು 80 ಅಡಿ ರಾಮನ ಪೋಸ್ಟರ್ ಹಾಕಿದ್ದಾರೆ ಅದಕ್ಕೆ ಕತ್ತರಿ ಹಾಕಿದ್ದೀರಾ? ಎಲ್ಲರ ಹೃದಯದಲ್ಲಿ ರಾಮನಿದ್ದಾನೆ. ಪ್ರಿಯಾಕೃಷ್ಣ ಅವರ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿದೆ. ಪ್ರಿಯಾಂಕ್ ಖರ್ಗೆ ಮನೆಯಲ್ಲಿ ರಾಮನಾಮ ಹಾಗೂ ಹೊರಗಡೆ ರಹೀಮ ನಾಮ ಎಂದು ವ್ಯಂಗ್ಯವಾಡಿದ್ದಾರೆ.

    ರಾಜಣ್ಣರ ಮೇಲೆ ಜನ ಗೌರವ ಇಟ್ಟುಕೊಂಡಿದ್ದಾರೆ. ಅವರು ಪ್ರಚೋದನಕಾರಿ ಮಾತಾಡೋದನ್ನು ಬಿಡಲಿ. ಜನ ಇಟ್ಟಿರುವ ಗೌರವ ಉಳಿಸಿಕೊಳ್ಳಿ. ಯೋಗಿ ಆದಿತ್ಯನಾಥ್ ಬಂದರೆ ಹೊಡೀರಿ ಎಂದಿದ್ದಾರೆ. ರಾಜಣ್ಣ ಅವರ ಈ ಹೇಳಿಕೆ ಪಕ್ಷದ ನಿಲುವಾ? ನಮ್ಮವರು ಮಾತಾಡಿದ್ರೆ ಅದು ಪಕ್ಷದ ನಿಲುವು, ನಿಮ್ಮೋರು ಮಾತಾಡಿದ್ರೆ ವೈಯಕ್ತಿಕನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮನ ಬಗ್ಗೆ ರಾಜಣ್ಣ ಅವಹೇಳನ; ಸಿಎಂ, ಸಚಿವ ಇಬ್ಬರೂ ಕ್ಷಮೆ ಕೇಳಲಿ: ಡಿವಿಎಸ್ ಆಗ್ರಹ

  • ಅಧಿಕೃತ ಕಾರ್ಯಕ್ರಮಗಳಲ್ಲಿ ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಹೈಕೋರ್ಟ್ ಆದೇಶ

    ಅಧಿಕೃತ ಕಾರ್ಯಕ್ರಮಗಳಲ್ಲಿ ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಹೈಕೋರ್ಟ್ ಆದೇಶ

    ನವದೆಹಲಿ: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು, ಹೈಕೋರ್ಟ್ ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆ ನಿರ್ಣಯ ಕೈಗೊಂಡಿದೆ.

    ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಇರಿಸಲು ಕರ್ನಾಟಕ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸುವುದರ ಸುತ್ತ ಉಂಟಾದ ಗೊಂದಲಗಳ ಕುರಿತು ವಕೀಲರು ಹಾಗೂ ಕೆಲ ಸಂಘಟನೆಗಳು ರಾಜ್ಯ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವರದಿ ಕೇಳಿತ್ತು. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    ಸುತ್ತೋಲೆಯಲ್ಲಿ ಏನಿದೆ?: ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ದಿನ ಸೇರಿದಂತೆ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್‍ನ ಬೆಂಗಳೂರಿನಲ್ಲಿರುವ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಈ ಕುರಿತಾಗಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡಾ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮಗಳಲ್ಲಿ ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣ ನ್ಯಾಯಾಲಯದ ಮುಂದೆ ಪರಿಗಣನೆಗೆ ಬಾಕಿ ಇದೆ. ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಗಾಂಧೀಜಿ ಅವರ ಭಾವಚಿತ್ರದ ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರ ಇಡುವುದು ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ.

    ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೈಕೋರ್ಟ್ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆನಂತರ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆಯನ್ನು ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಬದಲಿಗೆ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಫೋಟೋ ಅಳವಡಿಕೆ: ಕೇಜ್ರಿವಾಲ್‌

    ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಬದಲಿಗೆ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಫೋಟೋ ಅಳವಡಿಕೆ: ಕೇಜ್ರಿವಾಲ್‌

    ನವದೆಹಲಿ: ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರ ಫೋಟೋಗಳನ್ನು ಮಾತ್ರ ಅಳವಡಿಸಲಾಗುವುದು. ಇನ್ಮುಂದೆ ರಾಜಕಾರಣಿಗಳ ಯಾವುದೇ ಫೋಟೋಗಳು ಇರಬಾರದು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

    ದೆಹಲಿ ಸರ್ಕಾರದ ಪ್ರತಿಯೊಂದು ಕಚೇರಿಗಳಲ್ಲಿ ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರ ಫೋಟೋಗಳನ್ನು ಮಾತ್ರ ಅಳವಡಿಸಲಾಗುವುದು. ಯಾವುದೇ ಮುಖ್ಯಮಂತ್ರಿ ಅಥವಾ ರಾಜಕಾರಣಿಗಳ ಫೋಟೋಗಳನ್ನು ಹಾಕುವುದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ

    ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಏಕೆಂದರೆ ಅವರಿಬ್ಬರು ಒಂದೇ ಕನಸು, ಗುರಿಯನ್ನು ಹೊಂದಿದ್ದವರು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಂಬೇಡ್ಕರರು ಭಾರತ ಸಂವಿಧಾನ ಶಿಲ್ಪಿ ಮತ್ತು ಮೊದಲ ಕಾನೂನು ಮಂತ್ರಿ ಎಂಬುದು ನಮಗೆಲ್ಲ ತಿಳಿದಿದೆ. ಬಡವರಾಗಲಿ ಅಥವಾ ಶ್ರೀಮಂತರಾಗಿರಲಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಲಾಗುವುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಇದನ್ನೂ ಓದಿ: UP Election: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆರ್‌ಪಿಎನ್ ಸಿಂಗ್ – ಬಿಜೆಪಿ ಸೇರ್ಪಡೆ ಸಾಧ್ಯತೆ

    ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ನೋಡಿರುತ್ತೇವೆ. ಆದರೆ ಇನ್ಮುಂದೆ ಈ ಪರಿಪಾಠ ಇರುವುದಿಲ್ಲ ಎಂದು ಹೇಳಿದ್ದಾರೆ.

  • ಅಂಬೇಡ್ಕರ್ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೇಳಿದ್ರು: ಕಲ್ಲಡ್ಕ ಪ್ರಭಾಕರ ಭಟ್

    ಅಂಬೇಡ್ಕರ್ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೇಳಿದ್ರು: ಕಲ್ಲಡ್ಕ ಪ್ರಭಾಕರ ಭಟ್

    ಉಡುಪಿ: ಮಾಜಿ ಪ್ರಧಾನಿ ನೆಹರೂ ಮತ್ತು ಅವರ ಬೆಂಬಲಿಗರದ್ದು ಹೇಡಿಗಳ ತಂಡ. ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರು. ದೇಶವನ್ನು ತುಂಡು ಮಾಡಿ ಗಾಂಧಿ ಮಹಾತ್ಮರಾದರು. ಬ್ರಿಟಿಷರು ಇನ್ನೈದು ವರ್ಷ ಭಾರತದಲ್ಲಿ ಇದ್ದಿದ್ದರೆ ಭಾರತದ ಸ್ಥಿತಿ ಹೀಗಾಗದೆ ಸ್ಥಿರವಾಗಿರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

    ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆಯ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, 72 ವರ್ಷದಲ್ಲಿ ಭಾರತ ದೇಶ ಭೂಮಿಯನ್ನೂ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದರು.

    ಅಂಬೇಡ್ಕರ್ ಒಬ್ಬರು ರಾಷ್ಟ್ರೀಯ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂಬೇಡ್ಕರ್ ಹೇಳಿದಂತೆ ನಾವು ಅವತ್ತೇ ಮಾಡಬೇಕಿತ್ತು. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದ ಅಂಬೇಡ್ಕರ್ ಅವರ ಮಾತಿನಂತೆ ನಾವು ಮಾಡಬೇಕಿತ್ತು. ಅವರ ಸಲಹೆಯನ್ನು ಯಾರೂ ನಡೆಸಿಕೊಡಲಿಲ್ಲ. ಪಾಕ್‍ನ ಹಿಂದೂಗಳು ಭಾರತಕ್ಕೆ ಬರಲಿ ಎಂದು ಅವತ್ತೇ ಸಲಹೆ ಕೊಟ್ಟಿದ್ದರು ಎಂದು ಹೇಳಿದರು.

    ಹಿಂದೂಗಳು ದೇವರನ್ನು ಪ್ರತಿದಿನ ಆರಾಧಿಸುತ್ತಾರೆ. ಸರ್ವೇಜನ ಸುಖಿನೋ ಭವಂತು ಅಂದ್ರೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಸಂಸ್ಕೃತಿ ಭಾರತದ್ದು. ನಮ್ಮವರಿಗೆ ಮಾತ್ರ ಒಳ್ಳೆಯದಾಗಲಿ ಎಂಬ ಸಂಸ್ಕೃತಿ ನಮ್ಮದಲ್ಲ. ಶುಕ್ರವಾರ ಇರುವ ಅಲ್ಲಾ ಶನಿವಾರ ಎಲ್ಲಿ ಹೋಗ್ತಾನೆ? ಭಾನುವಾರ ಬೆಳಗ್ಗೆ ಬರುವ ಏಸು ಉಳಿದ ದಿನ ಎಲ್ಲಿ ಇರುತ್ತಾನೆ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸುವ ಮಾತನಾಡಿದರು.

    ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಿದ್ದರಾಮಯ್ಯ ಅವರದ್ದು ಷಂಡ ಸರ್ಕಾರ. ಸೊರಕೆ-ಮಧ್ವರಾಜ್ ಬೆರಕೆಯವರು. ಹಗಲು ಮಾತ್ರವಾ? ರಾತ್ರಿಯೂ ಮುಸಲ್ಮಾನರ ಜೊತೆಗಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಚರ್ಚಾಸ್ಪದ ಹೇಳಿಕೆ ಕೊಟ್ಟರು. ಅಲ್ಲದೆ ಕಾಂಗ್ರೆಸಿಗರಿಗೆ ಇಂಜೆಕ್ಷನ್‍ನಲ್ಲಿ ಬೇರೆ ಜೀನ್ಸ್ ತುಂಬಿದೆ. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದ್ದು, ಅದಕ್ಕೆ ಈಗ ತಿದ್ದುಪಡಿ ತರಲಾಗುತ್ತಿದೆ. ವೋಟ್ ಹೊರಟು ಹೋಗುತ್ತದೆ ಎಂಬ ಕಾರಣಕ್ಕೆ ಪ್ರಗತಿಪರ, ಮುಸಲ್ಮಾನರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂದು ದೂರಿದರು.

    ಇದೇ ವೇಳೆ, ರಾಮನಗರ ಜಿಲ್ಲೆಯ ಏಸು ಪ್ರತಿಮೆ ವಿಚಾರ ಪ್ರಸ್ತಾಪಿಸಿ ಹಿಂದೂ ದೇವರ ಬೆಟ್ಟದಲ್ಲಿ ಕ್ರೈಸ್ತರಿಗೆ ಏನು ಕೆಲಸ? ಶಿಲುಬೆ ಬೇರೆಡೆ ನಿರ್ಮಿಸಿ, ಬೇಕಿದ್ದರೆ ಅದಕ್ಕೆ ಏರಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

  • ಅಂಬೇಡ್ಕರ್ ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ: ಸಿದ್ದರಾಮಯ್ಯ

    ಅಂಬೇಡ್ಕರ್ ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ: ಸಿದ್ದರಾಮಯ್ಯ

    – ಸಂವಿಧಾನ ಬದಲವಾಣೆಗೆ ಕೈಹಾಕಿದರೆ ರಕ್ತಪಾತವಾಗುತ್ತೆ
    – 30ಕಿ.ಮೀಗೊಂದು ಜಿಲ್ಲೆ ಮಾಡೋಕಾಗುತ್ತಾ?

    ಮೈಸೂರು: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರನ್ನು ಮರೆತರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ಟಿ.ನರಸೀಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ರಾಜಕೀಯ ಸ್ವಾತಂತ್ರ್ಯ ಕೇವಲ ಮತ ಹಾಕುವಾಗ ಮಾತ್ರ ಇರುತ್ತದೆ. ನಾವೆಲ್ಲ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಯಾರಾದರೂ ಹೋದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಅಂಬೇಡ್ಕರ್ ಒಂದು ಜಾತಿಗೆ ಸಿಮೀತವಾಗಿಲ್ಲ. ಒಂದೇ ಜಾತಿಗೋಸ್ಕರ ಅವರು ಕೆಲಸ ಮಾಡಿಲ್ಲ. ಎಲ್ಲಾ ಶೋಷಿತರ ಪರವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಯಾವ ದಲಿತರು ಬಂದು ಕೇಳಿರಲಿಲ್ಲ. ಆದರೂ ಎಸ್‍ಸ್ಸಿ ಎಸ್‍ಟಿಗೆ ಹಣವನ್ನು ಮೀಸಲಿಟ್ಟು ಅವರ ಪರ ನಿಂತೆ. ಇದೆಲ್ಲ ನಮ್ಮ ಸರ್ಕಾರ ದಲಿತರ ಪರವಾಗಿ ಮಾಡಿರುವ ಮಹತ್ಕಾರ್ಯಗಳು ಎಂದು ತಿಳಿಸಿದರು. ಇದನ್ನು ಓದಿ: ಮೈಸೂರು ವಿಭಜನೆ ಆಗಬೇಕು- ಹೆಚ್ ವಿಶ್ವನಾಥ್

    ಇದೇ ವೇಳೆ ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, 30 ಕಿ.ಮೀಗೊಂದು ಜಿಲ್ಲೆ ಮಾಡೋಕಾಗುತ್ತಾ? ಈಗ ಮೈಸೂರು ಜಿಲ್ಲೆ ವಿಭಜನೆ ಅಗತ್ಯವಿಲ್ಲ. ಇರೋದೆ ಆರು ತಾಲೂಕು. ಅದನ್ನು ಮೂರು ಮೂರು ಮಾಡೋಕೆ ಆಗುತ್ತ. ಇದು ವೈಜ್ಞಾನಿಕವಾಗಿಯು ಸರಿಯಲ್ಲ, ಇದು ಒಳ್ಳೆ ಬೆಳವಣಿಗೆಯೂ ಅಲ್ಲ. ವೈಯುಕ್ತಿಕವಾಗಿ ನನಗೆ ಪ್ರತ್ಯೇಕ ಜಿಲ್ಲೆ ಮಾಡುವುದು ಇಷ್ಟ ಇಲ್ಲ ಎಂದು ಹೇಳಿದರು.

    ನಾನು ಈ ವಿಚಾರವಾಗಿ ವಿಶ್ವನಾಥ್ ಹೇಳಿಕೆಯನ್ನು ನೋಡಿಲ್ಲ, ಮಂಜುನಾಥ್ ಹೇಳಿಕೆಯನ್ನೂ ನೋಡಿಲ್ಲ. ಈಗ ಉಪಚುನಾವಣೆ ಇದೆ, ಅದಕ್ಕೆ ಬಹುಶಃ ಅವರು ಮಾತನಾಡುತ್ತಿರಬಹುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

  • ಕಾರು ಚಾಲಕನನ್ನು ಎತ್ತಿಕಟ್ಟಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ : ಪ್ರೀತಂ ಗೌಡ

    ಕಾರು ಚಾಲಕನನ್ನು ಎತ್ತಿಕಟ್ಟಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ : ಪ್ರೀತಂ ಗೌಡ

    ಹಾಸನ: ಒಬ್ಬ ಕಾರು ಚಾಲಕನನ್ನು ಎತ್ತಿಕಟ್ಟುವ ಮೂಲಕ ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಮತ್ತು ಘಟಬಂಧನ್ ಎಂದು ಹೇಳಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕರು, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ಸಿಗರು ಆರು ಬೈ ಮೂರು ಜಾಗವನ್ನೂ ಸಹ ನೀಡಲಿಲ್ಲ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮೃತಪಟ್ಟಾಗ ಸಮಾಧಿ ನಿರ್ಮಾಣಕ್ಕೆ 11 ಎಕರೆ ನೀಡಿದರು. ಇಂದಿರಾ ಗಾಂಧಿ ಅಂತ್ಯ ಸಂಸ್ಕಾರವನ್ನು 16 ಎಕರೆಯಲ್ಲಿ ಮಾಡಿದರು. ಆದರೆ ಅಂಬೇಡ್ಕರ್ ಅವರು ಮೃತಪಟ್ಟಾಗ ಮುಂಬೈನ ಕಡಲ ತೀರದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಎಂದು ದೂರಿದರು.

    ಕಾಂಗ್ರೆಸ್‍ನವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ಹೊರತು ಯಾವತ್ತೂ ಅಧಿಕಾರ ನೀಡಲಿಲ್ಲ. ಹತ್ತು ವರ್ಷಗಳ ಯುಪಿಎ ಅಧಿಕಾರದಲ್ಲಿದ್ದರೂ ಒಬ್ಬ ದಲಿತರಿಗೆ ರಾಷ್ಟ್ರಪತಿ ಸ್ಥಾನ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ಆಯ್ಕೆಗಳಿದ್ದರೂ ಸಹ ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದರು ಎಂದು ತಿಳಿಸಿದರು.

    ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಗಾಂಧಿ ಕುಟುಂಬಕ್ಕೆ ಇರಲಿ ಎನ್ನುತ್ತಾರೆ. ಹಾಸನದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಪ್ಪ ಮಕ್ಕಳು, ಮೊಮ್ಮಕ್ಕಳು ಎಲ್ಲವೂ ನಮಗೆ ಇರಲಿ ಅಂತ ಹೇಳುತ್ತಾರೆ. ಇವರು ದಲಿತರಿಗೆ ಯಾವುದೇ ಅಧಿಕಾರ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.