Tag: b nagendra

  • ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ದರೋಡೆಕೋರರ ನಾಯಕ ಎಂದು ಬಿಜೆಪಿ (BJP) ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ (Valmiki Development Corporation Scam) ಮಂತ್ರಿಗಳ ಪಾತ್ರ ಇದೆ ಎಂದು ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಬರೆದಿತ್ತು. ಆದರೂ ಇಷ್ಟು ತಡವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಕೈ ಹುಣ್ಣಿಗೆ ಕನ್ನಡಿ ಬೇಕಾ? ಚಂದ್ರಶೇಖರನ್ ಆತ್ಮಹತ್ಯೆ ಆದ ಕೂಡಲೇ ರಾಜೀನಾಮೆ ಪಡೆಯಬೇಕಿತ್ತು. ಕೇಸ್ ಮುಚ್ಚಿ ಹಾಕಲು ರಾಜೀನಾಮೆ ಪಡೆಯಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ: ಡಿಕೆಶಿ

    ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯಪಾಲರ ಭೇಟಿ ಮಾಡಿ ಹಗರಣದ ವಿರುದ್ಧ ದೂರು ನೀಡಿದ್ದೇವೆ. ಈಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಸಚಿವರ ರಾಜೀನಾಮೆ ಮಾತ್ರ ಸಾಲದು, ಸಿಎಂ ಸಹ ರಾಜೀನಾಮೆ ಕೊಡಬೇಕು. ಇದೊಂದು ಹಗಲು ದರೋಡೆ. ಸಿಎಂ ಅನುಮತಿ ಇಲ್ಲದೆ ಇಷ್ಟು ಹಣ ಹೊರಗೆ ಹೋಗಿಲ್ಲ. ಇದು ಒಂದು ಇಲಾಖೆಯ ಭ್ರಷ್ಟಾಚಾರ ಅಲ್ಲ. ಬೇರೆ ಬೇರೆ ಇಲಾಖೆಯ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ. ಇದನ್ನ ನಮ್ಮ ನಾಯಕರು ಪತ್ತೆ ಹಚ್ಚುತ್ತಿದ್ದಾರೆ ಎಂದರು.

    ಎಸ್‍ಟಿ ನಿಗಮದ ಹಣ ಅ ಸಮುದಾಯಕ್ಕಾಗಿ ಬಳಸುವ ಹಣ. ಆ ಸಮುದಾಯದ ಮಂತ್ರಿಯನ್ನು ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದೀರಿ. ದಲಿತರಿಗೆ ಅನ್ಯಾಯ ಮಾಡೋಕೆ ಮಹಾದೇವಪ್ಪ ಅವರನ್ನು ಮಂತ್ರಿ ಮಾಡಿ ಭ್ರಷ್ಟಾಚಾರ ಮಾಡಿಸಿದ್ದಾರೆ. ಸಿದ್ದರಾಮಯ್ಯ ದರೋಡೆಕೋರರ ನಾಯಕ. ಅವರು ನೇರವಾಗಿ ಭ್ರಷ್ಟಾಚಾರ ಮಾಡುವುದಿಲ್ಲ. ಬೇರೆಯವರಿಂದ ಭ್ರಷ್ಟಾಚಾರ ಮಾಡಿಸುತ್ತಾರೆ. ಭೂಗತ ಡಾನ್‍ಗಳು ಮಾಡುವ ತರಹ ಚೇರ್‍ನಲ್ಲಿ ಕುಳಿತು ಭ್ರಷ್ಟಾಚಾರ ಮಾಡಿಸುತ್ತಾರೆ ಎಂದು ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

  • ಅಧಿಕಾರಿ ಆತ್ಮಹತ್ಯೆ ಪ್ರಕರಣ; ನಾಗೇಂದ್ರ ರಾಜೀನಾಮೆ ನೀಡಲಿ, ಸಿಬಿಐ ತನಿಖೆಯಾಗಲಿ: ಬೊಮ್ಮಾಯಿ

    ಅಧಿಕಾರಿ ಆತ್ಮಹತ್ಯೆ ಪ್ರಕರಣ; ನಾಗೇಂದ್ರ ರಾಜೀನಾಮೆ ನೀಡಲಿ, ಸಿಬಿಐ ತನಿಖೆಯಾಗಲಿ: ಬೊಮ್ಮಾಯಿ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.

    ಹೊಸಪೇಟೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ. ಆಗಿಲ್ಲಾ ಅಂತ ನಾನು ಹೇಳುವುದಿಲ್ಲ. ಆದರೆ ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ ಇದೊಂದು ಭಂಡ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ನಲುಗಿದ ಉತ್ತರದ ರಾಜ್ಯಗಳು- ರಾಜಸ್ಥಾನದಲ್ಲಿ 7 ಮಂದಿ ಸಾವು

    ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪನವರದ್ದೇನು ತಪ್ಪಿರಲಿಲ್ಲ. ಆದರೂ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಶ್ವರಪ್ಪ ಅವರ ವಿಚಾರದಲ್ಲಿ ವಿಪಕ್ಷ ನಾಯಕರಿದ್ದ ಸಿದ್ದರಾಮಯ್ಯನವರು ಮಾಡಿದ ರೋಷಾವೇಶ ಈಗ ಯಾಕೆ ಇಲ್ಲಾ? ಈಗ ಅವರೇ ಸಿಎಂ. ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮದಲ್ಲಿ ಹಣ ಲೂಟಿ ಆಗಿದೆ. 14 ಅಕೌಂಟ್‌ಗಳ ಮೂಲಕ ಹಗಲು ದರೋಡೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್‌ನೋಟ್‌ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ. ಆದರೆ, ಇವರು ರಾಜೀನಾಮೆ ತೆಗೆದುಕೊಳ್ಳುವ ನೈತಿಕತೆ ಇಲ್ಲಾ. ಇದೊಂದು ಭ್ರಷ್ಟಾಚಾರ ಕೂಟದ ಸರ್ಕಾರ ಎಂದು ಆರೋಪಿಸಿದರು. ಇದನ್ನೂ ಓದಿ: 76 ದಿನ, 206 ಕಾರ್ಯಕ್ರಮ – ಪ್ರಚಾರ ಆರಂಭಿಸಿದ ಕನ್ಯಾಕುಮಾರಿಯಲ್ಲೇ ಮೋದಿ ಧ್ಯಾನ

    ಈ ಪ್ರಕರಣಕ್ಕೂ, ಈಶ್ವರಪ್ಪನವರ ಪ್ರಕರಣಕ್ಕೂ ಹೊಂದಾಣಿಕೆ ಮಾಡುತ್ತಾರೆ. ನಾಚಿಕೆಯಾಗಬೇಕು ಇವರಿಗೆ. ಬಹುಕೋಟಿ ಹಗರಣ ಇದು. ಒಂದೇ ದಿನದಲ್ಲಿ 14 ಅಕೌಂಟ್‌ನಿಂದ ಹಣ ಮಾಯ ಆಗುತ್ತದೆ ಅಂದರೆ ಸಂಶಯಾಸ್ಪದ ಅಕೌಂಟ್‌ಗಳಿಗೆ ಹೋಗಿದೆ. ಇದು ಸಿಬಿಐಗೆ ಹೋಗುವಂತಹ ಮುಖ್ಯವಾದ ಕೇಸ್. ಒಂದು ಬ್ಯಾಂಕ್ ಮುಖಾಂತರ ಬೇರೆ ರಾಜ್ಯಕ್ಕೆ ಹಣ ಹೋಗಿದೆ. 10 ಕೋಟಿಗೆ ಹೆಚ್ಚು ಹಗರಣ ಅವ್ಯವಹಾರ ಆಗಿದ್ದರೆ, ಅದು ಸಿಬಿಐ ತನಿಖೆಗೆ ಹೋಗಬೇಕು ಅಂತ ಇದೆ. ಆದರೆ, ಇವರು ಯಾಕೆ ಸಿಬಿಐಗೆ ಕೊಡುತ್ತಿಲ್ಲ? ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೂನ್‌ 6ರ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು – ಡೆಡ್‌ಲೈನ್‌ ಕೊಟ್ಟ ಅಶೋಕ್

    ಸಿಬಿಐ ತನಿಖೆಯಾಗಬೇಕು:
    ಚುನಾವಣೆ ಸಮಯದಲ್ಲಿ ಹೈದರಾಬಾದ್‌ನ ಒಂದು ಸಹಕಾರಿ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗುತ್ತದೆ ಅಂದರೆ ರಾಜಕೀಯದಿಂದ ಚುನಾವಣೆಗಾಗಿ ನಡೆದಿರುವ ದರೋಡೆ ಪ್ರಕರಣ ಇದು. ಸರ್ಕಾರ ಏನೇ ಸಮಾಜಾಯಿಷಿ ಕೊಟ್ಟರೂ ಕೂಡ, ಡಿಜಿಟಲ್ ಟ್ರಾಕ್, ಡಿಜಿಟಲ್ ಎವಿಡೆನ್ಸ್ ಇರುವ ಕಾರಣ ಸಿಐಡಿಯಿಂದ ತನಿಖೆಯಾಗುವ ಪ್ರಕರಣ ಅಲ್ಲ. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು. ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹಣ ವಾಪಸ್ ಬರಬೇಕು. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಹಣ ವಾಪಾಸ್ ತರಬಹುದು. ಚುನಾವಣೆಗೆ ಬಳಕೆಯಾಗಿದ್ದರೆ ಏನೂ ಮಾಡಲು ಆಗುವುದಿಲ್ಲ. ಈ ಪ್ರಕರಣದಲ್ಲಿ ಮನಿ ಟ್ರೈಲ್ ಫಾಲೋ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಕುಟುಂಬದ ಜೊತೆ ವಿಶ್ರಾಂತಿಗೆ ತೆರಳಿದ ಹೆಚ್‌ಡಿಕೆ

    ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿ ಸಮಾಜಕ್ಕೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವುದು ಬಿಟ್ಟರೆ ಬೇರೆನೂ ಪ್ರಯೋಜನವಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯದವರು ಮೀಸಲಾತಿ ಹೋರಾಟ ಮಾಡಿದ್ದರೂ ಹೆಚ್ಚಳ ಮಾಡಲಿಲ್ಲಾ. ನಾವು ಮೀಸಲಾತಿ ಹೆಚ್ಚಳ ಮಾಡಿದ್ದೆವು. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ: 80 ಸಂದರ್ಶನ, 200ಕ್ಕೂ ಹೆಚ್ಚು ರ್‍ಯಾಲಿಗಳಲ್ಲಿ ಮೋದಿ ಭಾಗಿ

    ಕಾನೂನು ಎಲ್ಲರಿಗೂ ಒಂದೆ:
    ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಎಸ್‌ಐಟಿ ತನಿಖೆಯಾಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಅಪರಾಧ ಮಾಡಿದವರು, ಶೋಷಣೆ ಮಾಡಿದವರು, ಅದನ್ನು ಪ್ರಚಾರ ಮಾಡಿದವರು ಎಲ್ಲಾ ವಿಚಾರದಲ್ಲಿ ಕಾನೂನು ಇದೆ. ತನಿಖೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಎಂದರು. ಇದನ್ನೂ ಓದಿ: ಬೆಂಗಳೂರಿನತ್ತ ಪ್ರಜ್ವಲ್ ರೇವಣ್ಣ- ಏರ್‌ಪೋರ್ಟ್‌ನಲ್ಲಿ ಹೈಅಲರ್ಟ್

    ಕಾನೂನು ಸುವ್ಯವಸ್ಥೆ ಹಾಳಾಗಿದೆ:
    ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ನಮ್ಮ ಮಕ್ಕಳು ಶಾಲೆ, ಕಾಲೇಜಿಗೆ ಹೋದರೆ ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎನ್ನುವ ನಂಬಿಕೆ ಇಲ್ಲಾ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲಾ. ರಾಜ್ಯದಲ್ಲಿ ಸಾಮೂಹಿಕ ಕೊಲೆಗಳು ಆಗುತ್ತಿವೆ. ಒಂದೇ ಸಮಯಕ್ಕೆ ಮೂರು ನಾಲ್ಕು ಜನರ ಕೊಲೆ ಆಗುತ್ತಿವೆ. ಸಮಾಜಘಾತುಕರಿಗೆ ಹೆದರಿಕೆ ಇಲ್ಲಾ. ಅವರಿಗೆ ಪೊಲೀಸ್ ಠಾಣೆಗಳಲ್ಲಿ ರಾಜಮರ್ಯಾದೆ ಸಿಗುತ್ತಿದೆ. ಆ ಕಾರಣಕ್ಕೆ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳಿಗೆ ಎಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಕೃತ್ಯ ತಪ್ಪುವುದಿಲ್ಲ. ಸಮಾಜಘಾತುಕರಿಗೆ ಭಯ ಹುಟ್ಟಿಸಬೇಕಿದೆ. ಇಲಾಖೆಯ ಸಡಿಲತನ ನಿಯಂತ್ರಣ ಆಗಬೇಕು. ರಾಜ್ಯ ಸರ್ಕಾರವೇ ಇದಕ್ಕೆ ಹೊಣೆ. ಅವರನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ರಾಜ್ಯಕ್ಕೆ ಬರುವ ಬಂಡವಾಳ ವಾಪಸ್ ಹೋಗುತ್ತದೆ ಎಂದರು. ಇದನ್ನೂ ಓದಿ: 93 ಗ್ರಾಂ ಚಿನ್ನ, 3.35 ಕೆಜಿ ಬೆಳ್ಳಿ, 2.58 ಕೋಟಿ ರೂ. ನಗದು ಕಾಣಿಕೆ – ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ!

    ಬೇಜವಾಬ್ದಾರಿ ಹೇಳಿಕೆ:
    ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟಕಾಟಕ್ ಹಣದ ಆಸೆಗೆ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೇಜವಾಬ್ದಾರಿಯ ಹೇಳಿಕೆಗಳಿಂದ ಈ ರೀತಿ ಆಗುತ್ತದೆ. ಏನು ಹೇಳಬೇಕೋ, ಬೇಡವೋ ಅನ್ನುವುದು ಯೋಚಿಸಿ ಮಾತನಾಡಬೇಕು ಎಂದು ಹೇಳಿದರು. ಇದನ್ನೂ ಓದಿ:  ಕೇರಳ, ಈಶಾನ್ಯ ರಾಜ್ಯಗಳಿಗೆ 2 ದಿನ ಮೊದಲೇ ಮುಂಗಾರು ಪ್ರವೇಶ

  • ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ: ಬಿ.ನಾಗೇಂದ್ರ

    ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ: ಬಿ.ನಾಗೇಂದ್ರ

    ಬಳ್ಳಾರಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿಯಾಗೋದಾದ್ರೆ (Prime Minister) ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ ಎನ್ನುವ ಮೂಲಕ ಖರ್ಗೆ ಪರ ಸಚಿವ ಬಿ. ನಾಗೇಂದ್ರ (B Nagendra) ಬ್ಯಾಟಿಂಗ್ ಮಾಡಿದ್ದಾರೆ.

    ಬಳ್ಳಾರಿಯಲ್ಲಿ (Ballari) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಮಾಡೋದು, ದಲಿತ ಪ್ರಧಾನಿ ಮಾಡೋದು ಇಂಡಿಯಾ ಒಕ್ಕೂಟದ ಉದ್ದೇಶ. ಹೀಗಾಗಿ ಒಕ್ಕೂಟದಿಂದ ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ಸ್ವಇಚ್ಛೆಯಿಂದ ಸಿದ್ದರಾಮಯ್ಯ ಅವರು ಹಾಗೆ ಹೇಳಿರಬಹುದು. ಅದು ಅವರ ಇಚ್ಛೆ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಕೈ ನಾಯಕರು ಬರುತ್ತಾರೆಂಬ ವಿಶ್ವಾಸವಿದೆ: ಶೋಭಾ ಕರಂದ್ಲಾಜೆ

    ನನಗೂ ಖರ್ಗೆ ಪ್ರಧಾನಿ ಆಗಬೇಕೆಂದಿದೆ. ಅದರ ಜೊತೆಗೆ ಯುವಕರ ಕಣ್ಮಣಿಯಾಗಿರೋ ರಾಹುಲ್ ಗಾಂಧಿ ಕೂಡಾ ಪ್ರಧಾನಿಯಾಗಬೇಕು ಎನ್ನುವುದು ಇದೆ. ಭಾರತ ಜೋಡೋ ಯಾತ್ರೆಯಲ್ಲಿ ಏಳು ಸಾವಿರ ಕಿ.ಮೀ ಪಾದಯಾತ್ರೆ ಮಾಡಿ ಜನಮನ ಗೆದ್ದಿದ್ದಾರೆ. ಇಂಡಿಯಾ ಒಕ್ಕೂಟದ ವ್ಯವಸ್ಥೆಯಲ್ಲಿ ಬೇರೆ ಬೇರೆ ಅಂಗಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು. ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಕೂಡ ಖರ್ಗೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಏರ್‌ಪೋರ್ಟ್‌ನಂತೆ ವಾಲ್ಮೀಕಿ ಮಂದಿರ ಸಹ ಆಗ್ಬೇಕು: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್‌ನವರು ಬೆಂಬಲಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ಅವರು, ನಮ್ಮವರ ಹೆಸರು ನಾವೇ ಹೇಳಬಾರದಲ್ವಾ? ಹೀಗಾಗಿ ಕಾಂಗ್ರೆಸ್‌ನವರು ಅಭ್ಯರ್ಥಿ ಹೆಸರು ಹೇಳಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಇನ್ನು ಒಕ್ಕೂಟದ ವ್ಯವಸ್ಥೆಯಲ್ಲಿ ಬೇರೆಯವರು ನಮ್ಮ ಪಕ್ಷದ ಹೆಸರು ಹೇಳಬಹುದು. ನಾವು ಹೇಳಲು ಆಗಲ್ಲ. ಕಾಂಗ್ರೆಸ್‌ನಲ್ಲಿ ಒಂದು ವ್ಯವಸ್ಥೆ ಇದೆ. ಪಾರ್ಲಿಮೆಂಟ್ ಚುನಾವಣೆ ಬಳಿಕ ಪಾರ್ಟಿ ಚೌಕಟ್ಟಿನಲ್ಲಿ ನಡೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆ: ಪ್ರಮೋದ್‌ ಮುತಾಲಿಕ್

  • ನೀರು ಶುದ್ಧೀಕರಣ ಘಟಕಕ್ಕೆ ಸಚಿವ ಬಿ.ನಾಗೇಂದ್ರ ಭೇಟಿ, ಪರಿಶೀಲನೆ

    ನೀರು ಶುದ್ಧೀಕರಣ ಘಟಕಕ್ಕೆ ಸಚಿವ ಬಿ.ನಾಗೇಂದ್ರ ಭೇಟಿ, ಪರಿಶೀಲನೆ

    ಬಳ್ಳಾರಿ: ತಾಲೂಕಿನ ಸಂಗನಕಲ್ಲು ಸಮೀಪದ ಕುಡಿಯುವ ನೀರಿನ (Drinking Water) ಶುದ್ಧೀಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ (B Nagendra) ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬಳಿಕ ಮಾತನಾಡಿದ ಅವರು, ನಗರಕ್ಕೆ ಸ್ವಚ್ಛ ಕುಡಿಯುವ ನೀರು ಪೂರೈಸಬೇಕು. ನೀರು ಪೂರೈಸುವ ಮೊದಲು ನೀರಿನ ಸಂಗ್ರಾಹಾರಗಳನ್ನು ಪರಿಶೀಲಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಸಂಗ್ರಹಿತ ನೀರನ್ನು ಪರೀಕ್ಷಿಸಿ ಪರಿಶೀಲಿಸಿ ಕುಡಿಯಲು ಬಳಸಲು ಯೋಗ್ಯವಾಗಿದೆ ಎಂದು ತಿಳಿದುಕೊಂಡು ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.  ಇದನ್ನೂ ಓದಿ: ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?

    ನಗರಕ್ಕೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಇನ್ನಿತರೆ ಸೌಲಭ್ಯಗಳು ಬೇಕಾದಲ್ಲಿ ಗಮನಕ್ಕೆ ತಂದರೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರು ಹಾಗೂ ಇತರೇ ಅಧಿಕಾರಿಗಳು ಹಾಜರಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಲ್ಲಿದ್ದುಕೊಂಡೇ ಹೆಚ್‌ಡಿಕೆ ಏನೂ ಮಾಡಲ್ಲ, ಸಿಂಗಾಪುರಕ್ಕೆ ಹೋಗಿ ಏನು ಮಾಡುತ್ತಾರೆ: ಬಿ.ನಾಗೇಂದ್ರ ಲೇವಡಿ

    ಇಲ್ಲಿದ್ದುಕೊಂಡೇ ಹೆಚ್‌ಡಿಕೆ ಏನೂ ಮಾಡಲ್ಲ, ಸಿಂಗಾಪುರಕ್ಕೆ ಹೋಗಿ ಏನು ಮಾಡುತ್ತಾರೆ: ಬಿ.ನಾಗೇಂದ್ರ ಲೇವಡಿ

    ಬೀದರ್: ಇಲ್ಲಿದ್ದುಕೊಂಡೇ ಹೆಚ್‌ಡಿಕೆ (HD Kumaraswamy) ಏನೂ ಮಾಡಲ್ಲ, ಇನ್ನು ಸಿಂಗಾಪುರಕ್ಕೆ (Singapur) ಹೋಗಿ ಏನು ಮಾಡುತ್ತಾರೆ. ನಮ್ಮ ಸರ್ಕಾರದ ಸ್ಪೀಡ್ ನೋಡಿ ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದು ಹೆಚ್‌ಡಿಕೆ ಸಿಂಗಾಪುರ ಬಾಂಬ್‌ಗೆ ಸಚಿವ ಬಿ.ನಾಗೇಂದ್ರ (B.Nagendra) ಲೇವಡಿ ಮಾಡಿದ್ದಾರೆ.

    ಬೀದರ್‌ನಲ್ಲಿ (Bidar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ವಿರೋಧ ಪಕ್ಷದವರು ಠೇವಣಿ ಕಳೆದುಕೊಳ್ಳುತ್ತಾರೆ. ಅಲ್ಲದೇ ನಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಂ ಯುವಕ, ಯುವತಿಯರನ್ನು ಬಚಾವ್ ಮಾಡಲು ಪ್ರಕರಣ ಮುಚ್ಚಡಲಾಗ್ತಿದ್ಯಾ – ಮುತಾಲಿಕ್ ಪ್ರಶ್ನೆ

    ಡಿಕೆ ಶಿವಕುಮಾರ್ (DK Shivakumar) ಅವರು ಬೆಂಕಿ ಇಲ್ಲದೆ ಹೊಗೆ ಬರಲ್ಲಾ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅವರಿಗೆ ಸಿಂಗಾಪುರದಲ್ಲಿ ಹೆಚ್‌ಡಿಕೆ ರಣತಂತ್ರದ ಬಗ್ಗೆ ಮಾಹಿತಿ ಇರಬಹುದು. ಅದಕ್ಕೆ ಪ್ರತಿತಂತ್ರವಾಗಿ ಏನು ಮಾಡಬೇಕು ಎಂಬ ಬಗ್ಗೆ ಡಿಕೆ ಶಿವಕುಮಾರ್ ರೆಡಿಯಾಗಿದ್ದು, ಈ ಸರ್ಕಾರವನ್ನು ಯಾರೂ ಐದು ವರ್ಷ ಅಲುಗಾಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್

    ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆದರೆ ಅದು ಅನೈತಿಕ ಸಂಬಂಧವಾಗುತ್ತೆ. ಯಾಕೆಂದರೆ ಕೋಮುವಾದಿಗಳ ಜೊತೆ ಹೋದರೆ ಜನರೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಕೆಲವು ಶಾಸಕರಿಗೆ ಅಸಮಧಾನವಾಗಿರಬಹುದು ಆದರೆ ನಮ್ಮ ಪಕ್ಷದ ಚೌಕಟ್ಟಿನಲ್ಲಿ ಎಲ್ಲವನ್ನು ಬಗೆಹರಿಸುತ್ತೇವೆ. ಯಾರು ಕೂಡಾ ಪತ್ರ ಬರೆದಿಲ್ಲ. ಎಲ್ಲಾ ಶಾಸಕರು ಒಟ್ಟಾಗಿ ಇದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡು ಕಾಲಿರುವ ಯಾರೇ ಬಂದರೂ ಚುನಾವಣೆಯಲ್ಲಿ ಎದುರಿಸಲು ಸಿದ್ಧ: ಬಿ.ನಾಗೇಂದ್ರ

    ಎರಡು ಕಾಲಿರುವ ಯಾರೇ ಬಂದರೂ ಚುನಾವಣೆಯಲ್ಲಿ ಎದುರಿಸಲು ಸಿದ್ಧ: ಬಿ.ನಾಗೇಂದ್ರ

    ಬಳ್ಳಾರಿ: ಕಾಂಗ್ರೆಸ್ (Congress) ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ. ನನ್ನ ವಿರುದ್ಧ ಆ ದೇವರು ಒಬ್ಬರನ್ನು ಬಿಟ್ಟು ಎರಡು ಕಾಲಿರುವ ಯಾರೇ ಬಂದರೂ ಚುನಾವಣೆಯಲ್ಲಿ (Election) ಎದುರಿಸಲು ನಾನು ಸಿದ್ಧವಾಗಿದ್ದೇನೆ ಎಂದು ಬಳ್ಳಾರಿ (Ballary) ಗ್ರಾಮಾಂತರ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ (B.Nagendra) ಸವಾಲೆಸೆದರು.

    ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿರುವ 28 ಮತ್ತು 29ನೇ ವಾರ್ಡಿನಲ್ಲಿ ಕೈಗೊಂಡಿರುವ ಅಲ್ಪಸಂಖ್ಯಾತರ ಅನುದಾನದ ಅಡಿಯಲ್ಲಿ 60 ಲಕ್ಷ ರೂ.ಗಳ ವೆಚ್ಚದಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಮೋದಿ ಭದ್ರತೆಗೆ 2,000 ಪೊಲೀಸರ ನಿಯೋಜನೆ – ಐವರು ಎಸ್‌ಪಿಗಳು ಸ್ಥಳದಲ್ಲೇ ಮೊಕ್ಕಾಂ

    ಚುನಾವಣೆ ಸಂದರ್ಭದಲ್ಲಿ ಆಮಿಷವೊಡ್ಡುವವರು ಬರುತ್ತಾರೆ. ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎನ್ನುತ್ತಾರೆ. ಇದಕ್ಕೆ ಯಾರೂ ಕೂಡಾ ವಿಚಲಿತರಾಗಬಾರದು. ಗೊಂದಲಕ್ಕೆ ಈಡಾಗಬಾರದು ಎಂದು ಮತದಾರರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಬಿರುಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿ ಜಲಧಾರೆ

    ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂ. ಪ್ರತೀ ಕುಟುಂಬಕ್ಕೆ ಮಾಸಿಕ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಅಲ್ಲದೇ ಪ್ರತಿ ವ್ಯಕ್ತಿಗೆ ಮಾಸಿಕ 10 ಕಿಲೋ ಅಕ್ಕಿ ನೀಡಲಿದೆ ಎಂಬುವುದಕ್ಕೆ ಗ್ಯಾರೆಂಟಿ ಕೊಡುವುದಾಗಿ ಹೇಳಿದರು. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ

  • ಬಿಜೆಪಿ ಗೂಡು ಸೇರಲು ಮುಂದಾಗಿದ್ದ ಶಾಸಕರಿಗೆ ಬಂಧನ ಭೀತಿ!

    ಬಿಜೆಪಿ ಗೂಡು ಸೇರಲು ಮುಂದಾಗಿದ್ದ ಶಾಸಕರಿಗೆ ಬಂಧನ ಭೀತಿ!

    ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿರುವ ಇಬ್ಬರು ಕಾಂಗ್ರೆಸ್ ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿ ಹೇಳಲು ಬಾರದ್ದಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರಿಗೆ ಇಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ವಾರೆಂಟ್ ಕಾಮನ್ ಆಗಿದ್ದರೂ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಬಳ್ಳಾರಿ ಜಿಲ್ಲೆಯ ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರು ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇ ಬಿಜೆಪಿ ಸೇರುವ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಈಗ ನ್ಯಾಯಾಲಯದಿಂದ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಈ ವಿಚಾರದಲ್ಲಿ ಅಲರ್ಟ್ ಆಗಿದ್ದು ಇಬ್ಬರನ್ನು ಬಂಧಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv