Tag: B.K hariprasad

  • ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್‌ ಭಯೋತ್ಪಾದಕಿ – ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

    ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್‌ ಭಯೋತ್ಪಾದಕಿ – ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

    ಉಡುಪಿ: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ (Sadhvi Pragya Singh Thakur) ಓರ್ವ ಭಯೋತ್ಪಾದಕಿ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ (B.K.Hariprasad) ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಶಿವಮೊಗ್ಗಕ್ಕೆ ಆಕೆ ಭೇಟಿಕೊಟ್ಟು ಮಕ್ಕಳ ದಾರಿ ತಪ್ಪಿಸಿದ್ದಾಳೆ. ತಲ್ವಾರ್, ಚಾಕು, ಚೂರಿ, ಆಯುಧ, ಶಾರ್ಪ್ ಮಾಡಿಟ್ಟುಕೊಳ್ಳಲು ಹೇಳ್ತಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ. ನಮ್ಮ ಮಕ್ಕಳನ್ನು ಭಯೋತ್ಪಾಧಕರನ್ನಾಗಿ ಸಿದ್ಧತೆ ಮಾಡುತ್ತೀರಾ? ಪ್ರಧಾನಿ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?

    ಸಿಎಂ ಬೊಮ್ಮಾಯಿ, ಆರ್‌ಎಸ್‌ಎಸ್‌ (RSS) ಕೈಗೊಂಬೆಯಾಗಿದ್ದಾರೆ. ಪ್ರಧಾನಿ ಮೋದಿ ಪೊಲಿಟಿಕಲ್ ಟೂರಿಸಂ ಶುರು ಮಾಡಿದ್ದಾರೆ. ಮೋದಿ, ರಾಜ್ಯದಲ್ಲಿ ಪೊಲಿಟಿಕಲ್ ಟೂರ್ ಮಾಡ್ತಿದ್ದಾರೆ. ಕೊರೊನಾ, ನೆರೆ ಬಂದಾಗ ಮೋದಿ ಬರಲಿಲ್ಲ ಎಂದು ಕುಟುಕಿದ್ದಾರೆ.

    ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ಅಗ್ನಿಪರೀಕ್ಷೆಯಲ್ಲಿ ಕಾಂಗ್ರೆಸ್ (Congress) ಗೆಲ್ಲುತ್ತದೆ. ಕರಾವಳಿ ರಾಜಕಾರಣಿಗಳ ಮೇಲೆ ಅವಲಂಬನೆ ಆಗಿಲ್ಲ. ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಧೂಷಕನ ಕೆಲಸ ಮಾಡುತ್ತಿದ್ದಾರೆ ಎಂದು ಕಟೀಲ್‌ ವಿರುದ್ಧ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: BJP, ಕಾಂಗ್ರೆಸ್‌ನವರು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ – ಸಿ.ಎಂ ಇಬ್ರಾಹಿಂ ಸವಾಲ್

    ಕಾಂಗ್ರೆಸ್‌ನಿಂದ ಬಿಜೆಪಿ ಪಕ್ಷಾಂತರವಾದ ಪ್ರತಿನಿಧಿಗಳನ್ನು ವೇಶ್ಯೆಗೆ ಹೋಲಿಕೆ ಮಾಡಿ ಬಿ.ಕೆ.ಹರಿಪ್ರಸಾದ್‌ ವ್ಯಾಪಕ ಟೀಕೆಗೆ ಗುರುಗಿದ್ದರು. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    ಕಾರವಾರ: ಸಿ.ಟಿ ರವಿ (C.T Ravi) ಕುಡಿದಾಗ ಸ್ಪಲ್ಪ ಮಾತನಾಡುತ್ತಾರೆ. ಗಾಂಜಾನೂ ಹೊಡಿತಾರೆ ಅವರ ಬಗ್ಗೆ ಟಿಪ್ಪಣಿ ಮಾಡೋದು ತಪ್ಪಾಗುತ್ತೆ. ಕುಡಿದು ನಮ್ಮ ಪಕ್ಷಕ್ಕೆ ಸೇರಿದರೂ ಸೇರಬಹುದು ಎಂದು ಕಾಂಗ್ರೆಸ್ (Congress) ಮುಖಂಡ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ವ್ಯಂಗ್ಯವಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ಪ್ರಜಾಪಭುತ್ವದಲ್ಲಿ ಖರೀದಿ ಮಾಡುವ ಕೆಪಾಸಿಟಿ ಇದೆ. ಎಮ್‍ಎಲ್‍ಎಗಳನ್ನು ಖರೀದಿ ಮಾಡ್ತಾರೆ. ಹಾಗಾಗಿ ಜನರ ಆಶೀರ್ವಾದ ಬಿಜೆಪಿಗೆ ಇಲ್ಲ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಯುದ್ಧ ಸಾರುವುದಾಗಿ ಬೆದರಿಕೆ ಹಾಕಿದ ತಾಲಿಬಾನ್

    ಜೆಡಿಎಸ್ ಜಾಯಿಂಟ್ ಫ್ಯಾಮಿಲಿ ಇದ್ದ ಹಾಗೆ ಹಾಗಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಕೆಲವು ಪ್ರಕ್ರಿಯೆಗಳು ಇವೆ. ಆ ಪ್ರಕ್ರಿಯೆ ಮುಗಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • RSS ಸಂಘಟನೆ ಬ್ರಿಟಿಷರ ಏಜೆಂಟಾಗಿ ಕಾರ್ಯನಿರ್ವಹಿಸಿದೆ: ಬಿ.ಕೆ.ಹರಿಪ್ರಸಾದ್

    RSS ಸಂಘಟನೆ ಬ್ರಿಟಿಷರ ಏಜೆಂಟಾಗಿ ಕಾರ್ಯನಿರ್ವಹಿಸಿದೆ: ಬಿ.ಕೆ.ಹರಿಪ್ರಸಾದ್

    ಕೊಪ್ಪಳ: ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಬೇಕು ಎಂದು ಸಾಕಷ್ಟು ಹಿರಿಯರು ಹೋರಾಟಗಳನ್ನು ನಡೆಸಿದ್ದಾರೆ. ಆದರೆ ಅಂತಹ ವೇಳೆಯಲ್ಲಿ RSS ಸಂಘಟನೆಯು ಬ್ರಿಟಿಷರ ಏಜೆಂಟ್ ಆಗಿ ಕಾರ್ಯನಿರ್ವಹಿಸಿದೆ. ಅಂತಹವರು ನಮಗೆ ದೇಶಾಭಿಮಾನ ಬುದ್ಧಿ ಹೇಳಲು ಆಗಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

    ಕೊಪ್ಪಳದ ಗಂಗಾವತಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಾಜಿ ಸಂಸದರಾದ ಎಚ್.ಜಿ. ರಾಮುಲು ಅವರ ನಿವಾಸಕ್ಕೆ ಇಂದು ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದರು. ದೇಶದಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಪಕ್ಷದವರು RSS ಸಂಘಟನೆಯನ್ನು ಬಳಸಿಕೊಂಡು ದೇಶ, ಧರ್ಮದ ಹೆಸರಲ್ಲಿ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಆದರೆ ನಿಜವಾಗಿಲೂ ದೇಶಕ್ಕಾಗಿ ಹೋರಾಟಗಳನ್ನು ನಡೆಸಿದರು ಕಾಂಗ್ರೆಸ್ ಪಕ್ಷದವರು. ಬ್ರಿಟಿಷರ ಕೈಯಿಂದ ದೇಶವನ್ನು ಬಿಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವನ್ನು ಹುಟ್ಟು ಹಾಕಲಾಗಿದೆ. ಅಂದಿನಿಂದ ಇಂದಿನವರೆಗೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ದುಡಿಯುತ್ತಿದೆ ಎಂದು ತಿಳಿಸಿದರು.

    ಬ್ರಿಟಿಷರ ಆಳ್ವಿಕೆಯಲ್ಲಿ ಅವರ ಏಂಜೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ RSS ಸಂಘಟನೆ ದೇಶಾಭಿಮಾನ ಹೆಸರಲ್ಲಿ ಡಾಂಭಿಕತೆಯನ್ನು ತೋರಿಸುತ್ತಿದೆ. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಂಧನ ಮಾಡಿದರೆ. ಚಳವಳಿಯಲ್ಲಿ ಭಾಗವಹಿಸಿಲ್ಲ. RSS ಸಂಘಟನೆಯು ಸ್ವಾತಂತ್ರ್ಯ ಹೋರಾಟಗರು ಎಂದು ಹೇಳುವ ನಾಯಕರು ನಿಜವಾದ ಹೋರಾಟಗಾರರು ಇಲ್ಲ. ಅವರೆಲ್ಲ ಬ್ರಿಟಿಷರ ಏಜೆಂಟರು ಆಗಿದ್ದರು.

    ಗಡಿಪಾರು ವ್ಯಕ್ತಿ ಅಮಿತ್ ಶಾ : ಕೇಂದ್ರದಲ್ಲಿ ಗೃಹ ಮಂತ್ರಿಯಾಗಿರುವ ಅಮಿತ್ ಶಾ ಅವರು ಗಡಿಪಾರು ಆಗಿರುವ ವ್ಯಕ್ತಿ, ಅವರಿಗೆ ಸಂವಿಧಾನ ಚೌಕಟ್ಟಿನಲ್ಲಿ ಏನೇನು ಇದೆ ಎನ್ನುವುದು ಮಾಹಿತಿಇಲ್ಲ. ನಮಗೆ ಹಿಂದಿ ಭಾಷೆ ಹೇರಿಕೆಯ ಬಗ್ಗೆ ಉಪದೇಶವನ್ನು ಮಾಡಲು ಹೊರಟಿದ್ದಾರೆ. ಅವರ ಉಪದೇಶ ನಮಗೆ ಬೇಕಾಗಿಲ್ಲ. ಗುಜರಾತ್ ಹೈಕೋರ್ಟ್ ಏನು ಆದೇಶವನ್ನು ನೀಡಿದೆ ಎನ್ನವುದು ಅಮಿತ್ ಶಾ ಸರಿಯಾಗಿ ತಿಳಿದುಕೊಳ್ಳಬೇಕು. ನಂತರ ಇನ್ನೊಬ್ಬರಿಗೆ ತಿಳಿಸಲು ಮುಂದಾಗಲಿ. ದೇಶದಲ್ಲಿ ಒಟ್ಟು 22 ಅಧಿಕೃತ ಭಾಷೆಗಳು ಇವೆ. ಅದರಲ್ಲಿ ಹಿಂದಿ ಭಾಷೆಯು ಕೂಡ ಒಂದು. ನಮಗೆ ಬೇಕೆನಿಸಿದ ಭಾಷೆಯಲ್ಲಿ ನಾವು ಮಾತನಾಡಬಹುದು. ಹಿಂದಿ ಭಾಷೆ ಬಳಕೆ ಕಡ್ಡಾಯ ಬಳಕೆ ಮಾಡುವುದು ಸಲ್ಲದು. ಒಟ್ಟು 19 ಸಾವಿರ ಭಾಷೆಗಳುಳ್ಳ ಬಹುತ್ವ ಭಾರತದಲ್ಲಿ ಯಾವುದೇ ಒಂದು ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ. ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಿರುವ ದೇಶ ಭಾರತ. ಹಾಗಾಗಿ ನಮಗಿರುವ ತ್ರಿಭಾಷಾ ಸೂತ್ರವೇ ಸರಿಯಿದೆ ಎಂದು ಹೇಳಿದರು.

    ಗಲ್ಫ್ ರಾಷ್ಟ್ರಗಳಿಂದ ಪೆಟ್ರೋಲ್ ತ್ಯಜಿಸಿ : ರಾಜ್ಯದಲ್ಲಿ ಕೆಲ ಹಿಂದೂ ಸಂಘಟನೆಗಳನ್ನು ಮುಂದು ಬಿಟ್ಟು, ಕೆಲ ರಾಜಕೀಯ ವ್ಯಕ್ತಿಗಳು ಮುಸ್ಲಿಂ ವ್ಯಾಪಾರಿಗಳ ವ್ಯಾಪಾರ ಬೇಡಾ, ಹಲಾಲ್, ಜಟ್ಕಾ ಕಟ್ ಸೇರಿದಂತೆ ನಾನಾ ಗೊಂದಲಗಳನ್ನು ಹುಟ್ಟು ಹಾಕಿದ್ದಾರೆ. ಹಿಂದುತ್ವದ ಹೆಸರಲ್ಲಿ ಹಿಂದೂ, ಮುಸ್ಲಿಂ ಧರ್ಮಗಳ ಮೇಲೆ ವೈಮನಸ್ಸು ಹುಟ್ಟು ಹಾಕುತ್ತಿದ್ದಾರೆ. ಹಿಂದುತ್ವದ ಮೇಲೆ ರಾಷ್ಟ್ರವನ್ನು ನಡೆಸಿಕೊಂಡು ಅಷ್ಟು ಅಭಿಮಾನ ಇದ್ದರೆ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿರುವ ಪೆಟ್ರೋಲ್, ಡಿಸೇಲ್ ತ್ಯಜಿಸಲಿ ನೋಡೋಣ. ಇವರೆಲ್ಲ ಮೂರ್ಖರು ಧರ್ಮ, ಜಾತಿ ಆಧಾರದ ಮೇಲೆ ದೇಶವನ್ನು ಇಬ್ಭಾಗ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ಗೊಂದಲದ ಬಗ್ಗೆ ಮಾತನಾಡಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಮ್ಮಿ ಎಂಜಿನ್ ಇದ್ದಂತೆ ಸರ್ಕಾರ ಡಬಲ್ ಎಂದಿನಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

  • ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ, ಬಿಜೆಪಿಗೆ ಹೊಸದಲ್ಲ: ಬಿ.ಕೆ ಹರಿಪ್ರಸಾದ್

    ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ, ಬಿಜೆಪಿಗೆ ಹೊಸದಲ್ಲ: ಬಿ.ಕೆ ಹರಿಪ್ರಸಾದ್

    ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಕೆ.ಎಸ್ ಈಶ್ವರಪ್ಪ ಹೇಳಿಕೆ ಅಶಾಂತಿ ಉಂಟುಮಾಡುವ ಹೇಳಿಕೆಯಾಗಿದೆ. ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿರುವ ಶಾಂತಿಯನ್ನ ಕದಡಿ ಯಾರನ್ನೋ ಸಿಲುಕಿಸುವ ಯತ್ನ ಎಂದು ವಿಧಾನಸೌಧದಲ್ಲಿ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

    ವಿಧಾನಪರಿಷತ್‍ನಲ್ಲಿ ಮಾತನಾಡಿದ ಅವರು, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಈಶ್ವರಪ್ಪರ ಹೇಳಿಕೆ ಸರಿಯಲ್ಲ. ಇದು ಅಶಾಂತಿ ಸೃಷ್ಟಿಸುವ ಹೇಳಿಕೆಯಾಗಿದೆ. ಇದು ಅವರ ಸ್ಥೂಲ ಕಲ್ಪನೆ, ಅಪರಾಧಿಗಳು ಯಾರು ಎಂಬುದು ಇನ್ನೂ ತನಿಖೆಯೇ ಆಗಿಲ್ಲ. ಈಗಲೇ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಈಗಾಗಲೇ ನಾವು ರಾಜೀನಾಮೆ ಕೇಳುತ್ತಿದ್ದೇವೆ, ಅದನ್ನ ಅವರು ಕೊಡಲೇಬೇಕು. ಪೊಲೀಸರ ತನಿಖೆಯಾಗದೆ ಆಪಾದನೆ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುವುದು ಅವರ ಜವಾಬ್ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಏನು ಮಾಡುತ್ತಿದೆ. ಡಿ.ಕೆ ಶಿವಕುಮಾರ್ ಮೇಲೆ ಆಪಾದನೆ ಮಾಡಿ ಏನೂ ಸಾಧಿಸಲಾಗದು. ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಸಚಿವರಾಗಿದ್ದಾರೆ. ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ ಅವರಿಗೆ, ಬಿಜೆಪಿ ಅವರಿಗೆ ಹೊಸದಲ್ಲ. ಈ ಹಿಂದೆಯೂ ಶಿವಮೊಗ್ಗದಲ್ಲಿ ಕೊಲೆ ನಡೆದಿತ್ತು, ಆಗಲೂ ಮುಸ್ಲಿಂರ ಮೇಲೆ ಆಪಾದನೆ ಮಾಡಿದ್ರು, ಆ ಬಳಿಕ ಹಿಂದೂಗಳು ತಪ್ಪಿಸ್ಥರು ಅಂತಾ ಗೊತ್ತಾಯ್ತು ಎಂದು ಈಶ್ವರಪ್ಪ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕೊಲೆ ಆದವರು ಸಹ ಒಂದು ಸಲ ಗಡಿಪಾರು ಆಗಿದ್ದರು. ಇಂಟಲಿಜೆನ್ಸ್ ಏನ್ ಮಾಡ್ತಾ ಇತ್ತು. ಇದೊಂದು ಇಂಟಲಿಜೆನ್ಸ್ ಫೇಲ್ಯೂರ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

  • ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

    ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

    ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನು ನಮ್ಮ ರಾಜ್ಯದಲ್ಲಿ ಮೂಲೆ ಗುಂಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು ತುಳುವರ ಸಂಖ್ಯೆ 18,46,427 ಹಾಗೆಯೇ ಕೊಡವ ಭಾಷೆಯನ್ನಾಡುವವರ ಸಂಖ್ಯೆ 1,13,857. ಆದರೆ, ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಮಾತ್ರ. ಇಷ್ಟು ಕಡಿಮೆ ಜನಸಂಖ್ಯೆಯ ಮೇಲೆ ಬಿಜೆಪಿ ಸರ್ಕಾರ ತನ್ನ ಅಗಾಧ ಪ್ರೀತಿಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯತ್ತ ಮಾತ್ರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

    ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದವು. ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ದೇಶದಲ್ಲಿ ಹಲವಾರು ರಾಜ್ಯಗಳು ತಮ್ಮ ಒಂದಕ್ಕೂ ಹೆಚ್ಚು ಭಾಷೆಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಆದರೆ ಕರ್ನಾಟಕ ರಾಜ್ಯ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನ ನೀಡಿಲ್ಲ. ಬಹುಜನರು ದಿನನಿತ್ಯ ಉಪಯೋಗಿಸುವ ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬಹುದಾಗಿದೆ. ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರ ಸುಲಭವಾಗಿ ನುಣುಚಿಕೊಳ್ಳುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯ ಸರ್ಕಾರ ಮೊದಲು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ

    ಸಂಸ್ಕೃತಕ್ಕೆ ನೀಡುತ್ತಿರುವಷ್ಟೇ ಮಹತ್ವವನ್ನು ನಮ್ಮ ಕನ್ನಡ, ತುಳು ಹಾಗೂ ಕೊಡವ ಭಾಷೆಗೂ ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಬಿಡಬೇಕು. ಹಾಗೆಯೇ ನಮ್ಮ ಭಾಷೆಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ಶಿಕ್ಷಕನ ವರ್ಗಾವಣೆ – ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

  • ಉಪ ಕದನದ ಬಳಿಕ ಜೆಡಿಎಸ್ ಜೊತೆಗೆ ಮೈತ್ರಿ ಸುಳಿವು ನೀಡಿದ ‘ಕೈ’ ನಾಯಕರು

    ಉಪ ಕದನದ ಬಳಿಕ ಜೆಡಿಎಸ್ ಜೊತೆಗೆ ಮೈತ್ರಿ ಸುಳಿವು ನೀಡಿದ ‘ಕೈ’ ನಾಯಕರು

    ಹುಬ್ಬಳ್ಳಿ: ಉಪ ಚುನಾವಣೆಯ ಬಳಿಕ ಬಿಜೆಪಿ ಕೈಯಿಂದ ಅಧಿಕಾರ ತಪ್ಪಿದರೆ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸುವ ಸುಳಿವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಉಪ ಚುನಾವಣೆಯ ಎಲ್ಲಾ 15 ಕ್ಷೇತ್ರಗಳ ಅಂಕಿ-ಅಂಶ ನೋಡಿದಾಗ ಕಾಂಗ್ರೆಸ್ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ಮೂಡಿಸಿದೆ. ಚುನಾವಣೆ ಬಳಿಕ ಕಾಂಗ್ರೆಸ್ ಜೊತೆ ಜೆಡಿಎಸ್ ಮತ್ತೆ ಕೈಜೋಡಿಸಿದರೆ ಮೈತ್ರಿ ಅಧಿಕಾರಕ್ಕೆ ಬರಲಿದೆ. ಮೈತ್ರಿ ವಿಚಾರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಚರ್ಚೆಯಾಗಿದೆ. ಈ ಬಗ್ಗೆ ಅವರು ಕೂಡ ಒಲವು ತೋರಿಸಿದ್ದಾರೆ. ನಮ್ಮ ಹೈಕಮಾಂಡ್ ಒಪ್ಪಿಕೊಂಡರೆ ಮೈತ್ರಿಗೆ ನಾವು ಮತ್ತೆ ಸಿದ್ಧ ಎಂದು ತಿಳಿಸಿದರು.

    ಬಿಜೆಪಿಯವರು ಕರ್ನಾಟಕ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮಾದರಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ಅಪವಿತ್ರ ಸರ್ಕಾರ ರಚಿಸಿದರು. ಇದೀಗ ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದು ಚುನಾವಣೆ ಎದುರಿಸುತ್ತಿದ್ದಾರೆ. ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೌಜನ್ಯವೇ ಇಲ್ಲ. ನೆರೆ ಸಂತ್ರಸ್ತರ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಸೌಜನ್ಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದೇ ಸರ್ಕಾರ ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿದ್ದಾರೆ. ಗುಜರಾತ್ ಹಾಗೂ ಮಹಾರಾಷ್ಟ್ರದ ರೀತಿಯಲ್ಲಿ ಜನತೆ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

    ಗ್ರಾಮೀಣಾಭಿದ್ಧಿ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅವರು ಈವರೆಗೂ ಹೇಳಿದಂತೆ ನಡೆದುಕೊಂಡಿದ್ದಾರಾ? ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಎಲ್ಲವೂ ಸರಿ ಇದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಬಿಜೆಪಿಯವರು ಮಹಾತ್ಮಾ ಗಾಂಧೀಜಿ ಅವರನ್ನ ರಾಷ್ಟ್ರಪಿತ ಅಂತ ಒಪ್ಪಿಕೊಂಡಿಲ್ಲ. ಅದು ಮಾತೃಪಕ್ಷ ಅಲ್ಲ, ಪಿತೃ ಪಕ್ಷ. ಅವರ ನಡೆ, ಹೇಳಿಕೆಗಳು ಸಂಸ್ಕೃತಿಯನ್ನ ಎತ್ತಿ ತೋರಿಸುತ್ತಿದೆ. ನಾಗ್ಪುರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಭಾವಚಿತ್ರ ಹಾಕಲಿ ನೋಡೋಣ ಎಂದು ಕಿಡಿಕಾರಿದರು.

  • ಆಯುಧಗಳ ಜೊತೆ ಫೋಟೋ ಇರೋ ಏನು ತಿಳಿಯದ ಹುಡ್ಗನಿಗೆ ಬಿಜೆಪಿ ಟಿಕೆಟ್: ನಟಿ ಅಭಿನಯ

    ಆಯುಧಗಳ ಜೊತೆ ಫೋಟೋ ಇರೋ ಏನು ತಿಳಿಯದ ಹುಡ್ಗನಿಗೆ ಬಿಜೆಪಿ ಟಿಕೆಟ್: ನಟಿ ಅಭಿನಯ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮಚ್ಚು, ಲಾಂಗ್ ಜೊತೆ ಫೋಟೋ ಇರುವ ಹುಡುಗನಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ನಟಿ ಅಭಿನಯ ಹೇಳಿದ್ದಾರೆ.

    ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಪರ ಮತ ಪ್ರಚಾರದ ಅಖಾಡಕ್ಕಿಳಿದಿರುವ ಇವರು, ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಏನೂ ತಿಳಿಯದ ಯುವಕನಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ಬಿಜೆಪಿ ಒಬ್ಬ ಉತ್ತಮ ಮಹಿಳೆಗೆ ಟಿಕೆಟ್ ತಪ್ಪಿಸಿದೆ. ಅದನ್ನು ಮಹಿಳೆಯೇ ತಿಳಿದುಕೊಳ್ಳಬೇಕು. ಅವರು ಕಷ್ಟಪಟ್ಟಿರುವ ಹೆಣ್ಣುಮಗಳು. ಹೀಗಾಗಿ ಅವರಿಗೆ ಮೋಸ ಮಾಡಿ ಆಯುಧಗಳನ್ನು ಹಿಡಿದುಕೊಂಡು ಕುಳಿತಿರುವ ಹಾಗೂ ಏನೂ ತಿಳಿಯದಿರುವ ಯುವಕನಿಗೆ ಈ ಬಾರಿ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಇದನ್ನು ಮನಗಂಡು ಮತದಾರರು ದಯವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

    ನೀವು ತಪ್ಪು ಮಾಡಿ 5 ವರ್ಷ ಸುಳ್ಳು ಹೇಳುವವರಿಗೆ ಮತ ಹಾಕಿದ್ದೀರಿ. ಈಗಲಾದರೂ ತಾವು ಅದನ್ನು ಅರಿತು, ನಮಗೆ ಆ ಪಕ್ಷ ಬೇಡ, ನಮಗೆ ಕಾಂಗ್ರೆಸ್ ಸರಿ ಎಂದು ದಯವಿಟ್ಟು ಈ ಬಾರಿ ಕಾಂಗ್ರೆಸ್ಸನ್ನು ಗೆಲ್ಲಿಸಿ. ನಮ್ಮ ದೇಶಕ್ಕೆ ಹಿತ ಆಗುವಂತೆ ಮಾಡಿ ಎಂದು ಮತದಾರರಲ್ಲಿ ಕೇಳಿಕೊಂಡರು.

    ಇದೇ ವೇಳೆ ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಪ್ರಚಾರಕ್ಕೆ ಇಳಿದಿದ್ದಾರೆ. ಗಾಂಧೀಜಿ, ವಿವೇಕಾನಂದ ಹಾಗೂ ಕೆಂಪೇಗೌಡ ಪ್ರತಿಮೆಗೆ ಹೂವಿನ ಹಾರ ಹಾಕಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೊರಟಿದ್ದೇವೆ ಅಂದ್ರು.

    ಬಸವನಗುಡಿ ಕ್ಷೇತ್ರದ ಗುಟ್ಟಲ್ಲಿ, ರಾಮಕೃಷ್ಣ ಆಶ್ರಮ ಗಾಂಧಿ ಬಜಾರ್ ಸುತ್ತಮುತ್ತ ಪ್ರಚಾರ ನಡೆಯುತ್ತಿದ್ದು, ನೂರಾರು ಕಾರ್ಯಕರ್ತರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಹರಿಪ್ರಸಾದ್ ಪರ ಘೋಷಣೆ ಕೂಗುವ ಮೂಲಕ ಭರ್ಜರಿ ಪ್ರಚಾರ ನಡೆಯುತ್ತಿದೆ.

    ತೇಜಸ್ವಿ ಸೂರ್ಯ ಹೇಳಿದ್ದು ಏನು?
    ಕತ್ತಿಗಳ ಜೊತೆ ತನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ತೇಜಸ್ವಿ ಸೂರ್ಯ, ಆಯುಧ ಪೂಜೆ ಸಮಯದಲ್ಲಿ ನಮ್ಮ ಕಾಫಿ ಎಸ್ಟೇಟ್ ನಲ್ಲಿ ಇರುವ ಆಯುಧಗಳ ಜೊತೆ ಕುಳಿತುಕೊಂಡ ಫೋಟೋವನ್ನು ನನ್ನ ಫೇಸ್‍ಬುಕ್ ನಿಂದ ಡೌನ್‍ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದರು.

    https://twitter.com/Tejasvi_Surya/status/885775335383379968

  • ಪುಲ್ವಾಮಾ ದಾಳಿ ಮೋದಿ, ಪಾಕ್ ಪ್ರಧಾನಿ ನಡುವೆಯಾದ ಮ್ಯಾಚ್ ಫಿಕ್ಸಿಂಗ್: ಬಿಕೆ ಹರಿಪ್ರಸಾದ್

    ಪುಲ್ವಾಮಾ ದಾಳಿ ಮೋದಿ, ಪಾಕ್ ಪ್ರಧಾನಿ ನಡುವೆಯಾದ ಮ್ಯಾಚ್ ಫಿಕ್ಸಿಂಗ್: ಬಿಕೆ ಹರಿಪ್ರಸಾದ್

    ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವೆ ಆಗಿರುವ ಮ್ಯಾಚ್ ಫಿಕ್ಸಿಂಗ್ ಎನ್ನುವ ಶಾಕಿಂಗ್ ಹೇಳಿಕೆಯನ್ನು ರಾಜ್ಯಸಭಾ ಸಂಸದ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ನೀಡಿದ್ದಾರೆ.

    ಈ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪುಲ್ವಾಮಾ ದಾಳಿ ಆಕ್ಸಿಡೆಂಟ್ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಈಗ ಬಿ.ಕೆ ಹರಿಪ್ರಸಾದ್ ಅವರು ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತ, ಮೋದಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಕೈಜೋಡಿಸಿದ್ದಾರೆ. ಪುಲ್ವಾಮ ದಾಳಿ ಮ್ಯಾಚ್ ಫಿಕ್ಸಿಂಗ್. ಬಿಜೆಪಿ ಹಾಗೂ ಮೋದಿಗೆ ಅವರಿಗೆ ಬೀಫ್ ಸಾಗಾಟ ಮಾಡಿದರೆ ಗೊತ್ತಾಗುತ್ತೆ ಆದರೇ ಆರ್ ಡಿಎಕ್ಸ್ ತಂದು ಸ್ಫೋಟ ಮಾಡುವಾಗ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಲೋಕಸಭೆ ಚುನಾವಣೆ ಗೆಲ್ಲಲು ಪ್ರಧಾನಿ ಪ್ಲಾನ್ ಮಾಡುತ್ತಿದ್ದಾರೆ. ಆದಕ್ಕಾಗಿ ಒಮ್ಮೆ ಭಾರತ ಪಾಕ್ ಮೇಲೆ ದಾಳಿ ಮಾಡುತ್ತದೆ. ಮತ್ತೊಮ್ಮೆ ಪಾಕ್ ಭಾರತದ ಮೇಲೆ ದಾಳಿ ಮಾಡುತ್ತದೆ. ಅದೆಲ್ಲ ಮ್ಯಾಚ್ ಫಿಕ್ಸಿಂಗ್. ಚುನಾವಣೆ ಗೆಲ್ಲಲು ಮೋದಿ ಈ ತಂತ್ರಗಳನ್ನು ಮಾಡುತ್ತಿದ್ದಾರೆ. ಪಾಕಿಸ್ತಾನದಿಂದ ಗೋಮಾಂಸ ಭಾರತಕ್ಕೆ ತಂದರೆ ಮೋದಿ ಅವರಿಗೆ ಗೊತ್ತಾಗುತ್ತದೆ. ಆದ್ರೆ ಆರ್ ಡಿಎಕ್ಸ್ ತಂದ್ರೆ ಯಾಕೆ ಗೊತ್ತಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    https://www.youtube.com/watch?v=wtAlLNNnQKI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಆಪರೇಷನ್ ಕಮಲ ಫೇಲ್ ಆಗಿ ಅಮಿತ್ ಶಾಗೆ ಎಚ್1ಎನ್1 ಬಂದಿದೆ: ಬಿ.ಕೆ ಹರಿಪ್ರಸಾದ್ ಟೀಕೆ

    ಬೆಂಗಳೂರು: ಆಪರೇಷನ್ ಕಮಲ ಸಂಪೂರ್ಣವಾಗಿ ವಿಫಲವಾಗಿದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಎಚ್1ಎನ್1 ಬಂದಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

    ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಇಂದು ಮೌರ್ಯ ಸರ್ಕಲ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಈ ವೇಳೆ ವೇದಿಕೆ ಮೇಲೆ ಭಾಷಣ ಮಾಡುವಾಗ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

    ಬಿಜೆಪಿ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಲೇ ಬಂದಿದೆ. ರಫೆಲ್ ಡೀಲ್‍ನಲ್ಲಿ ಬಿಜೆಪಿಗೆ 30 ಸಾವಿರ ಕೋಟಿ ಹಣ ಸಿಕ್ಕಿದೆ. ಇದೇ ಹಣದ ಅಹಂಕಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಬೀಳಿಸಲು ಹೊರಟಿತ್ತು ಎಂದು ವಾಗ್ದಾಳಿ ನಡೆಸಿದರು.

    ಈ ರೀತಿ ಹಗರಣ ಮಾಡಿ 1 ಲಕ್ಷ ಕೋಟಿ ಹಣ ಬಂದರೂ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ನಮ್ಮ ಶಾಸಕರನ್ನು ಅಮಿತ್ ಶಾ ಕಿಡ್ನಾಪ್ ಮಾಡಿದ್ದಾರೆ. ಕಾಣೆಯಾದ ಶಾಸಕರ ಕುಟುಂಬಸ್ಥರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಬೇಕು. ಕರ್ನಾಟಕ ಸರ್ಕಾರವನ್ನ ಬೀಳಿಸಲು ಹೋಗಿ ಅಮಿತ್ ಶಾಗೆ ಈಗ ಜ್ವರ ಬಂದಿದೆ. ಈಗ ಬಂದಿರುವ ಜ್ವರ ಸಾಮಾನ್ಯ ಜ್ವರ ಅಲ್ಲ ಹಂದಿ ಜ್ವರ. ಮೃತ್ರಿ ಸರ್ಕಾರದ ವಿಚಾರಕ್ಕೆ ಬಂದು ಎಚ್1ಎನ್1 ಜೊತೆಗೆ ವಾಂತಿ ಬೇಧಿ ಕೂಡ ಶುರುವಾಗುತ್ತದೆ ಎಂದು ಟಾಂಗ್ ನೀಡಿದರು.

    ಈ ಪ್ರತಿಭಟನೆಯಲ್ಲಿ ಆಪರೇಷನ್ ಕಮಲದ ಅಣಕು ಪ್ರದರ್ಶನ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv