Tag: B.ED

  • ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು

    ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು

    ಧಾರವಾಡ: ನಕಲಿ ಅಂಕಪಟ್ಟಿ (Fake Marks Card) ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲನ (Principal) ಮೇಲೆ ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬವರು ನಕಲಿ ಬಿ.ಎಡ್ (B.Ed) ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಾರ್ಡನ್ (Warden) ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ ಉತ್ತರ ಪ್ರದೇಶದಲ್ಲಿ ನಕಲಿ ಬಿ.ಎಡ್ ಅಂಕಪಟ್ಟಿಯನ್ನು ಮಾಡಿಸಿದ್ದರು. 2001ರಲ್ಲೇ ಉತ್ತರ ಪ್ರದೇಶದ (Uttar Pradesh) ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಸಂಜಯ್ ರಾವತ್‍ಗೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‍ನಿಂದ ಕೊಲೆ ಬೆದರಿಕೆ 

     2006ರ ವರೆಗೂ ವಾರ್ಡನ್ ಆಗಿದ್ದ ಕಲ್ಲನಗೌಡರ ನಕಲಿ ಅಂಕಪಟ್ಟಿಯನ್ನು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಿ, ಅಲ್ಲಿಂದ ಪ್ರಾಂಶುಪಾಲ ಹುದ್ದೆಗೇರಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಅಂಕಪಟ್ಟಿಗೆ ಮಾನ್ಯತೆ ಇಲ್ಲದಿದ್ದರೂ ಅದನ್ನು ಕೊಟ್ಟು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. 2007-08ರ ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿ.ಎಡ್ ಪದವಿ ಪಡೆದ ಕಲ್ಲನಗೌಡರ, ಇದನ್ನೂ ಸಹ ಕಾನೂನು ಬಾಹಿರವಾಗಿಯೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿ ವಂಚಿಸಿದ್ದ ಆರೋಪಿ ಬಂಧನ

    ಹುಬ್ಬಳ್ಳಿಯ ಆಲ್ ಮಿಜಾನ್ ಎಜ್ಯುಕೇಶನ್ ಅಸೋಸಿಯೇಶನ್ ಕಾಲೇಜಿನಲ್ಲಿ ಕಲ್ಲನಗೌಡರ ಕಾನೂನು ಬಾಹಿರವಾಗಿ ಬಿ.ಎಡ್ ಪದವಿ ಪಡೆದಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡೇ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ಇದೀಗ ಕಲ್ಲನಗೌಡರ ಮೇಲೆ ಸಿದಪ್ಪ ಅಕ್ಕಿ ಎನ್ನುವವರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    ಈ ಕುರಿತು ದೂರು ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

  • ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!

    ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!

    ದುವೆ ಮಂಟಪದಿಂದಲೇ ವಧು ಅಥವಾ ವರ ಪರಾರಿಯಾಗಿರುವ ಘಟನೆ ಕೇಳಿದ್ದೇವೆ. ಅಲ್ಲದೆ ಕೆಲವೊಂದು ರಾದ್ಧಾಂತಗಳು ನಡೆಯುವುದು ಸಹಜ. ಇದೀಗ ಅಂಥದ್ದೇ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

    ವಧು- ವರ ಪರಸ್ಪರ ಹೂಮಾಲೆ ಹಾಕಿಕೊಳ್ಳುತ್ತಿರುವ ಸಂದರ್ಭದಲ್ಲಿ ವಧು ಏಕಾಏಕಿ ನನಗೆ ಈ ಮದುವೆ ಬೇಡ ಎಂದು ಹೇಳಿರುವುದು ಸಂಬಂಧಿಕರನ್ನು ಅಚ್ಚರಿಗೊಳಿಸಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಹುಡುಗಿ ಮತ್ತು ಹುಡುಗ ರೆಡಿಯಾಗಿ ಇನ್ನೇನು ತಾಳಿ ಕಟ್ಟುತ್ತಿದ್ದರು. ಇದಕ್ಕೂ ಮುನ್ನ ಹಾರ ಬದಲಿಸಿಕೊಳ್ಳೋ ಸಂಪ್ರದಾಯವಿದೆ. ಅಂತೆಯೇ ಇಲ್ಲಿ ವರ ಹಾಗೂ ವಧು ಪರಸ್ಪರ ಹಾರ ಬದಲಿಸಿಕೊಳ್ಳುತ್ತಿದ್ದರು. ವರ ಹೂಮಾಲೆಯನ್ನು ವಧುವಿನ ಕೊರಳಿಗೆ ಹಾಕಲು ರೆಡಿಯಾಗುತ್ತಿದ್ದಂತೆಯೇ ವಧು ಈ ಮದುವೆ ನನಗೆ ಬೇಡವೆಂದು ಹೇಳಿದ್ದಾಳೆ. ವರ ಅನಕ್ಷರಸ್ಥನಾಗಿದ್ದು, ನಾನು ಬಿಎಡ್ ಓದಿದ್ದೇನೆ. ಹೀಗಾಗಿ ಈತನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ – ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ನಟ ವಿಜಯ್ ಬಾಬು

    ಈ ವೇಳೆ ಸಂಬಂಧಿಕರು ಸೇರಿಕೊಂಡು ವಧುವನ್ನು ಪ್ರಶ್ನಿಸಿದ್ದಾರೆ. ಮದುವೆಗೆ ಬಂದಿದ್ದ ವ್ಯಕ್ತಿ ಜೊತೆ ವಧು ಮಾತನಾಡುತ್ತಾ, ನಾನು ವಿದ್ಯಾವಂತಳಾಗಿದ್ದು, ಬಿಎಡ್ ಓದುತ್ತಿದ್ದೇನೆ. ಆದರೆ ಅವನು ಸಂಪೂರ್ಣ ಅನಕ್ಷರಸ್ಥ. ಮುಂದೆ ನಾನು ಅವನೊಂದಿಗೆ ಸಂತೋಷವಾಗಿರಲು ಸಾಧ್ಯವೇ..?. ನೀನೇ ಹೇಳು. ಹೀಗಾಗಿ ನಾನು ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.

    ಇದೇ ವೇಳೆ ಕಾರ್ಯಕ್ರಮಕ್ಕೆ ಬಂದ ಮತ್ತೊಬ್ಬ ವ್ಯಕ್ತಿ ಗೊತ್ತಿದ್ದರೂ ಯಾಕೆ ಮದುವೆಗೆ ಒಪ್ಪಿಕೊಂಡೆ ಎಂದು ಪ್ರಶ್ನಿಸುತ್ತಾರೆ. ಈ ವೇಳೆ ಆಕೆ, ಹಣಕ್ಕೋಸ್ಕರ ನಮ್ಮ ತಂದೆ ಆತನನ್ನೇ ಮದುವೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದೇ ವೇಳೆ ಹಲವು ಮಂದಿ ವಧುವನ್ನು ಬೇರೆ ಬೇರೆ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಅವಳು, ನನಗೆ ನನ್ನಷ್ಟೇ ಓದಿದ ಯುವಕ ಬೇಕು. ಇದರಿಂದ ನಾವಿಬ್ಬರು ಇಂಗ್ಲಿಷ್ ಮಾತನಾಡಿಕೊಳ್ಳಬಹುದು. ಆದರೆ ಅಕ್ಷರ ಜ್ಞಾನ ಇಲ್ಲದವನನ್ನು ಮದುವೆಯಾಗಿ ಏನು ಮಾಡಲಿ ಎಂದು ಅಲವತ್ತುಕೊಂಡಿದ್ದಾಳೆ.

     

  • ಗುಲಬರ್ಗಾ ವಿವಿ ಬಿಇಡಿ ಪ್ರಶ್ನೆಪತ್ರಿಕೆ ಔಟ್

    ಗುಲಬರ್ಗಾ ವಿವಿ ಬಿಇಡಿ ಪ್ರಶ್ನೆಪತ್ರಿಕೆ ಔಟ್

    ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಬಿಇಡಿ ಪ್ರಶ್ನಪತ್ರಿಕೆ ಬಹಿರಂಗವಾಗಿದೆ. ಆದರೆ ಇದೂವರೆಗೂ ವಿವಿಯಿಂದ ಯಾವುದೇ ದೂರು ದಾಖಲಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇಂದು ನಡೆಯಬೇಕಿದ್ದ ಬಿಇಡಿ ಪ್ರಶ್ನೆ ಪತ್ರಿಕೆ ಭಾನುವಾರ ಸಂಜೆಯೇ ವಾಟ್ಸಪ್ ಗಳಲ್ಲಿ ಹರಿದಾಡಿತ್ತು. ಶೈಕ್ಷಣಿಕ ಸಾಮಾಗ್ರಿ, ಕೌಶಲ್ಯ ಮತ್ತು ವಿಧಾನ ವಿಷಯ ಪರೀಕ್ಷೆ ಇಂದು ನಡೆದಿದ್ದರೂ ನಿನ್ನೆಯ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ವರದಿ ಪ್ರಸಾರ ಮಾಡಿತ್ತು.

    ಇಂದು ಮುಂಜಾನೆ ಹತ್ತು ಗಂಟೆಗೆ ಪ್ರಾರಂಭವಾಗಿರುವ ಪರೀಕ್ಷೆ ನಗರದ ಖಾಸಗಿ ಕಾಲೇಜ್‍ನಲ್ಲಿ ಪ್ರಶ್ನೆಪತ್ರಿಕೆ ಪರಿಶೀಲನೆ ಮಾಡಿದ ಪಬ್ಲಿಕ್ ಟಿವಿ ತಂಡಕ್ಕೆ ನಿನ್ನೆ ಬಹಿರಂಗವಾದ ಪ್ರಶ್ನೆಪತ್ರಿಕೆ ಮತ್ತು ಇಂದು ವಿದ್ಯಾರ್ಥಿಗಳು ಬರೆಯುತ್ತಿರುವ ಪ್ರಶ್ನೆಪತ್ರಿಕೆ ಎರಡು ಒಂದೆ ಎನ್ನುವುದು ದೃಢಪಟ್ಟಿದೆ.

    ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿರೋದು ಇಂದು ಬೆಳಗ್ಗೆ 10.30 ಕ್ಕೆ ಗಮನಕ್ಕೆ ಬಂದಿದೆ. ಈ ಬಗ್ಗೆ ವಿವಿ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದಿರ್ತಾರೆ. ಬಹಿರಂಗಗೊಂಡ ಪ್ರಶ್ನೆ ಪತ್ರಿಕೆ ಮೇಲೆ ವಿವಿ ಬಾರ್‍ಕೋಡ್ ಇಲ್ಲ. ವಿವಿಯ ಪ್ರತಿಯೊಂದು ಪತ್ರಿಕೆಯ ಮೇಲೆ ಬಾರ್‍ಕೋಡ್‍ಗಳಿರುತ್ತವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ ಸಿಎಸ್ ಪಾಟೀಲ್ ಹೇಳಿದ್ದಾರೆ.

    https://www.youtube.com/watch?v=I8wQNtBu00w