‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಉಗ್ರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲಿಸಿದ ಟರ್ಕಿಗೆ (Turkey) ಭಾರತೀಯ ಚಿತ್ರರಂಗ ಬಿಸಿ ಮುಟ್ಟಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ:ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್
ಪಾಕ್ ಬೆಂಬಲಕ್ಕೆ ನಿಂತಿರೋ ಟರ್ಕಿಗೆ ಭಾರತ ಪಾಠ ಕಲಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಕಡೆಯಿಂದ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ
ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ, ಇದರಿಂದ ಭಾರತದ ಭದ್ರತೆ ತೊಂದರೆ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಸಾಥ್ ನೀಡಿದೆ.
ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ನವದೆಹಲಿ: ಉಗ್ರರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲ ನೀಡಿದ ಟರ್ಕಿ (Turkey) ಮತ್ತು ಅಜೆರ್ಬೈಜಾನ್‌ಗೆ (Azerbaijan) ಭಾರತ ಪೆಟ್ಟು ನೀಡಿದೆ. ಪ್ರಮುಖ ಪ್ರಯಾಣ ಕಂಪನಿಗಳು ಈ ಎರಡೂ ದೇಶಗಳಿಗೆ ಎಲ್ಲಾ ಪ್ಯಾಕೇಜ್‌ಗಳನ್ನು ಸ್ಥಗಿತಗೊಳಿಸಿವೆ.
ಭಯೋತ್ಪಾದನೆ ವಿರುದ್ಧ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ನಡೆಸುತ್ತಿದೆ. ಪರಿಣಾಮವಾಗಿ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಉಗ್ರರ ಬೆಂಬಲಿಸುವ ಪಾಕಿಸ್ತಾನಕ್ಕೆ ಈ ಎರಡು ದೇಶಗಳು ಬೆಂಬಲ ಘೋಷಿಸಿವೆ. ಅದರ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ಇದನ್ನೂ ಓದಿ: ದಾಳಿ ವೇಳೆ ಕುತಂತ್ರ ಮಾಡಿದ್ರೂ ಭಾರತದ ಉತ್ತರಕ್ಕೆ ಪಾಕ್ ತತ್ತರ!
ಈಸ್‌ಮೈಟ್ರಿಪ್, ಕಾಕ್ಸ್ & ಕಿಂಗ್ಸ್ ಹಾಗೂ ಟ್ರಾವೊಮಿಂಟ್, ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಬುಕಿಂಗ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಇದು ರಾಷ್ಟ್ರೀಯ ಭಾವನೆಗೆ ಅನುಗುಣವಾಗಿ ಮತ್ತು ಸುರಕ್ಷತೆ ಮತ್ತು ರಾಜತಾಂತ್ರಿಕ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಪ್ರತಿಬಿಂಬಿಸುತ್ತದೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಅಜೆರ್ಬೈಜಾನ್, ಉಜ್ಬೇಕಿಸ್ತಾನ್ ಮತ್ತು ಟರ್ಕಿಗೆ ಎಲ್ಲಾ ಹೊಸ ಪ್ರಯಾಣ ಕೊಡುಗೆಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ನಮಗೆ ಮತ್ತು ನಮ್ಮ ದೇಶದ ಜನರಿಗೆ ಬದ್ಧತೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಕಾಕ್ಸ್ & ಕಿಂಗ್ಸ್‌ನ ನಿರ್ದೇಶಕ ಕರಣ್ ಅಗರ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ದೇಶದ ಕರೆಗೆ ಹನಿಮೂನ್ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ
ಪರಿಸ್ಥಿತಿ ಸ್ಪಷ್ಟವಾಗುವವರೆಗೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಅವರು ಭಾರತೀಯ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಈ ಅನಿಶ್ಚಿತ ಸನ್ನಿವೇಶದಲ್ಲಿ ಪ್ರಯಾಣಿಕರ ಸುರಕ್ಷತೆಯ ಮಹತ್ವವನ್ನು ಈಸ್‌ಮೈಟ್ರಿಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಶಾಂತ್ ಪಿಟ್ಟಿ ಒತ್ತಿ ಹೇಳಿದ್ದಾರೆ.
ಅಜೆರ್ಬೈಜಾನ್ (Azerbaijan) ಮತ್ತು ಅರ್ಮೇನಿಯಾ (Armania) ನಡುವೆ ನಾಗೋರ್ನೊ-ಕರಾಬಖ್ ಪ್ರದೇಶದ ವಿಚಾರವಾಗಿ ವಿವಾದಗಳಿವೆ. ಈ ವಿವಾದವು ಜನಾಂಗೀಯ ಮತ್ತು ಪ್ರಾದೇಶಿಕ ಸಂಘರ್ಷಕ್ಕೂ ಕಾರಣವಾಗಿದೆ. ಈ ವಿಚಾರವಾಗಿ ಕಳೆದ ಮೂರು ದಶಕಗಳಿಂದಲೂ ಈ ಪ್ರದೇಶದಲ್ಲಿ ಉದ್ವಿಗ್ನತೆ ಇದೆ. ಸ್ವಲ್ಪ ಸಮಯ ತಣ್ಣಗಾಗಿದ್ದ ಈ ವಿವಾದ ಮತ್ತೆ ಈಗ ಶುರುವಾಗಿದೆ.
ನಾಗೋರ್ನೋ-ಕರಾಬಖ್ ಎಂದರೇನು?
ಅರ್ಮೇನಿಯನ್ನಿಯರಿಂದ ಆಟ್ರ್ಸಾಖ್ ಎಂದು ಕರೆಯಲ್ಪಡುವ ನಾಗೋರ್ನೊ-ಕರಾಬಖ್ ಆಗಾಗ ಭೂಕುಸಿತ ಸಂಭವಿಸುವ ಪರ್ವತಗಳ ಪ್ರದೇಶವಾಗಿದೆ. ಅಲ್ಲಿ ಪ್ರಧಾನವಾಗಿ ಅರ್ಮೇನಿಯನ್ನರು 1,20,000 ಸಂಖ್ಯೆಯಷ್ಟಿದ್ದಾರೆ. ಅವರು ತಮ್ಮದೇ ಆದ ಸರ್ಕಾರವನ್ನು ಸಹ ಮಾಡಿಕೊಂಡಿದ್ದಾರೆ. ಕ್ರಿಶ್ಚಿಯನ್ನರಾದ ಇವರು ಈ ಪ್ರದೇಶದಲ್ಲಿ ಶತಶತಮಾನಗಳಿಂದಲೂ ವಾಸವಾಗಿದ್ದಾರೆ. ಈ ಪ್ರದೇಶ ಅರ್ಮೇನಿಯಾದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಆದರೆ ಅರ್ಮೇನಿಯಾ ಅಥವಾ ಯಾವುದೇ ಇತರ ದೇಶದೊಂದಿಗೆ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ.
ಅಜೆರ್ಬೈಜಾನ್, ಈ ಪ್ರದೇಶದ ನಿವಾಸಿಗಳು ಹೆಚ್ಚಾಗಿ ಮುಸ್ಲಿಮರು. ಈ ಹಿಂದೆ ಇದು ಪರ್ಷಿಯನ್ನರು, ತುರ್ಕರು ಮತ್ತು ರಷ್ಯನ್ನರ ಆಳ್ವಿಕೆಗೆ ಒಳಪಟ್ಟಿತ್ತು. ಸೋವಿಯತ್ ಒಕ್ಕೂಟ ಕುಸಿದ ಬಳಿಕ ಇಲ್ಲಿ ಸ್ವತಂತ್ರ್ಯ ಸರ್ಕಾರ ರಚನೆಯಾಯಿತು. ಇದಾದ ಬಳಿಕ ನಾಗೋರ್ನೊ-ಕರಾಬಖ್ ವಿಚಾರವಾಗಿ ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ವಿವಾದ ಹುಟ್ಟಿಕೊಂಡಿತು.
ಮೊದಲ ಕರಾಬಖ್ ಯುದ್ಧ
ಸೋವಿಯತ್ ಒಕ್ಕೂಟವು ಕುಸಿಯುತ್ತಿದ್ದಂತೆ ಮೊದಲ ಕರಾಬಾಖ್ (Karabakh War) ಯುದ್ಧ 1988-1994ರ ನಡುವೆ ಅರ್ಮೇನಿಯನ್ನರು ಮತ್ತು ಅಜೆರ್ಬೈಜಾನ್ ನಡುವೆ ನಡೆಯಿತು. ನಾಗೋರ್ನೊ-ಕರಾಬಖ್ ಪ್ರದೇಶವನ್ನು ಈ ವೇಳೆ ಅರ್ಮೇನಿಯನ್ ಪಡೆಗಳು ಅಜೆರ್ಬೈಜಾನ್‍ನಿಂದ ವಶಪಡಿಸಿಕೊಂಡಿತು. ಈ ಯುದ್ಧದಲ್ಲಿ ಸುಮಾರು 30,000 ಜನರು ಕೊಲ್ಲಲ್ಪಟ್ಟರು. ಅಲ್ಲದೇ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಯಿತು.
ಎರಡನೇ ಕರಾಬಖ್ ಯುದ್ಧ
ದಶಕಗಳ ನಂತರ ಅಜೆರ್ಬೈಜಾನ್ ಮಿಲಿಟರಿ ಕಳೆದುಕೊಂಡಿದ್ದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅದು ಎರಡನೇ ಕರಾಬಖ್ ಯುದ್ಧವಾಗಿ ತಿರುಗಿತು. ಯುದ್ಧದಲ್ಲಿ ಅಜೆರ್ಬೈಜಾನ್ ಗೆಲುವು ಸಾಧಿಸಿತು. ಈ ಹಿಂದೆ ಅರ್ಮೇನಿಯನ್ ಗೆದ್ದಿದ್ದ ಪ್ರದೇಶಗಳನ್ನು ಮರಳಿ ಪಡೆಯಿತು.
ಈ ಯುದ್ಧದಲ್ಲಿ ಟರ್ಕಿ ಮತ್ತು ಇಸ್ರೇಲ್‍ನಿಂದ ಖರೀದಿಸಿದ ಡ್ರೋನ್‍ಗಳ ಬಳಕೆ ಮಾಡಲಾಗಿತ್ತು. ಇದು ಅಜೆರ್ಬೈಜಾನ್ ವಿಜಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಉಲ್ಲೇಖವಾಗಿದೆ. ಈ ಯುದ್ಧದಲ್ಲಿ ಕನಿಷ್ಠ 6,500 ಜನರು ಸಾವಿಗೀಡಾಗಿದ್ದಾರೆ.
ಅರ್ಮೇನಿಯಾದ ಹಾಗೂ ಅಜೆರ್ಬೈಜಾನ್ ಜೊತೆಗೆ ರಷ್ಯಾ ಉತ್ತಮ ಸಂಬಂಧವನ್ನು ಹೊಂದಿದೆ. ಇದರಿಂದಾಗಿ ಈ ವೇಳೆ ಕದನ ವಿರಾಮದ ಮಾತುಕತೆ ನಡೆಸಿತ್ತು. ಬಳಿಕ ಈ ವಿವಾದ ಆ ಸಮಯಕ್ಕೆ ನಿಂತಿತ್ತು.
ಮತ್ತೆ ಆರಂಭಗೊಂಡ ಬಿಕ್ಕಟ್ಟು
ಏಪ್ರಿಲ್ 2023 ರಲ್ಲಿ ಅಜೆರ್ಬೈಜಾನ್ ತನ್ನ ಗಡಿಯಲ್ಲಿ ಭದ್ರತಾ ತಪಾಸಣಾ ಕೇಂದ್ರವನ್ನು ಸ್ಥಾಪಿಸಿತು. ಈ ಮೂಲಕ ಅರ್ಮೇನಿಯಾ ಮತ್ತು ನಾಗೋರ್ನೊ-ಕರಾಬಖ್‍ನ ರಸ್ತೆ ಮಾರ್ಗವನ್ನು ತುರ್ತು ವೈದ್ಯಕೀಯ ವಿಚಾರ ಹೊರತುಪಡಿಸಿ ಸರಕು ಸಾಗಾಣಿಕೆಗೆ ನಿರ್ಬಂಧಿಸಿತು. ಇದು ಆಹಾರ ಸಾಮಾಗ್ರಿಗಳ ಕೊರತೆಯ ಆತಂಕವನ್ನು ಹುಟ್ಟು ಹಾಕಿತು. ಇದು ಮತ್ತೆ ಎರಡು ಪ್ರದೇಶಗಳ ನಡುವಿನ ವಿವಾದಕ್ಕೆ ಕಾರಣವಾಯಿತು. ಇದು ಮತ್ತೆ ಯುದ್ಧಕ್ಕೆ ಪ್ರಚೋದನೆಯನ್ನು ನೀಡಿತು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಯುದ್ಧದಲ್ಲಿ 25ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಬಳಿಕ ರಷ್ಯಾ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ ನಡೆಸಲಾಯಿತು.
ಈ ವೇಳೆ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್, ಅರ್ಮೇನಿಯನ್ ಹೋರಾಟಗಾರರ ನಡುವಿನ ಯುದ್ಧ ಕೊನೆಯಾಗಿದೆ. ಪ್ರತ್ಯೇಕವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ನಾಗೋರ್ನೊ-ಕರಾಬಖ್ ಮೇಲೆ ಸರ್ಕಾರ ಮರಳಿ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ.
ಸ್ಫೋಟದ ಸ್ಥಳದಲ್ಲಿ 13 ಅಪರಿಚಿತ ಶವಗಳು ಪತ್ತೆಯಾಗಿವೆ. ಏಳು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಟ್ಟಗಾಯಗಳಾಗಿರುವ 290 ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಅಜೆರ್ಬೈಜಾನ್ (Azerbaijan) ನಾಗೋರ್ನೊ-ಕರಾಬಖ್ ಅನ್ನು ವಶಪಡಿಸಿಕೊಂಡ ನಂತರ, ಯೆರೆವಾನ್‌ನಲ್ಲಿನ ಅರ್ಮೇನಿಯನ್ ಸರ್ಕಾರವು ಹೋರಾಟದಿಂದ ನಿರಾಶ್ರಿತರಾದವರನ್ನು ಸ್ಥಳಾಂತರಿಸುವ ಯೋಜನೆಗಳನ್ನು ಘೋಷಿಸಿದೆ. ಸಾವಿರಾರು ಜನರು ಈ ಪ್ರದೇಶವನ್ನು ತೊರೆದಿದ್ದಾರೆ.
ಬಾಕು: ಅಜರ್‌ಬೈಜಾನ್‌ನಲ್ಲಿ (Azerbaijan) ನಡೆಯುತ್ತಿದ್ದ ಸೇನೆ ಹಾಗೂ ಪ್ರತ್ಯೇಕತಾವಾದಿ ಅರ್ಮೇನಿಯನ್ ಹೋರಾಟಗಾರರ ನಡುವಿನ ಯುದ್ಧ ಕೊನೆಯಾಗಿದೆ. ಪ್ರತ್ಯೇಕವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ಬೇರ್ಪಟ್ಟಿದ್ದ ನಾಗೋರ್ನೊ-ಕರಾಬಖ್ (Karabakh) ಮೇಲೆ ಸರ್ಕಾರ ಮರಳಿ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಅಜರ್‌ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಹೇಳಿದ್ದಾರೆ.
ಬೇರ್ಪಟ್ಟ ಪ್ರದೇಶವನ್ನು ಅಜರ್‌ಬೈಜಾನ್‌ನ ಉಳಿದ ಭಾಗಗಳ ಮರುಜೋಡಣೆ ಕುರಿತು ಇಂದು (ಗುರುವಾರ) ಯೆವ್ಲಾಖ್ ನಗರದಲ್ಲಿ ಮಾತುಕತೆ ನಡೆಯಲಿದೆ. ಈ ವೇಳೆ ಸರ್ಕಾರದ ಪ್ರತಿನಿಧಿಗಳು ಹಾಗೂ ಪ್ರತ್ಯೇಕವಾದಿಗಳ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್ ಮಿಲಿಟರಿ ದಾಳಿ – 25 ಮಂದಿ ಸಾವು
ಸೋಮವಾರ ನಡೆದಿದ್ದ ಮಿಲಿಟರಿ ದಾಳಿಯಿಂದಾಗಿ 25 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದರು. ಈ ಬಗ್ಗೆ ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಸೋವಿಯತ್ ಒಕ್ಕೂಟವು ಇಲ್ಲಿಂದ ಬೇರ್ಪಟ್ಟ ನಂತರ ಅರ್ಮೇನಿಯನ್ ಪ್ರತ್ಯೇಕತಾವಾದಿಗಳು 1990ರ ದಶಕದ ಆರಂಭದಲ್ಲಿ ಅಜರ್‌ಬೈಜಾನ್ ಪ್ರದೇಶವನ್ನು ವಶಪಡಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ನಡೆದ ಘರ್ಷಣೆಯಲ್ಲಿ ಸುಮಾರು 30,000 ಜನರನ್ನು ಬಲಿ ತೆಗೆದುಕೊಂಡಿದೆ. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?
ಬಾಕು: ಅಜರ್‌ಬೈಜಾನ್ ಮಿಲಿಟರಿ (Azerbaijani Military) ದಾಳಿಯಿಂದಾಗಿ 25 ಮಂದಿ ದಾರುಣ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯೇಕತಾವಾದಿ ಅರ್ಮೇನಿಯನ್ ಮಾನವ ಹಕ್ಕುಗಳ ಅಧಿಕಾರಿ ಹೇಳಿದ್ದಾರೆ. ಘಟನೆಯಲ್ಲಿ ಸ್ಥಳೀಯ ಇಬ್ಬರು ಸೇರಿದಂತೆ 138 ಜನರು ಗಾಯಗೊಂಡಿದ್ದಾರೆ.
ಅರ್ಮೇನಿಯನ್-ನಿಯಂತ್ರಿತ ಕರಾಬಾಖ್‌ನಲ್ಲಿ ಕಾರ್ಯಾಚರಣೆಗೆ ಅಜರ್‌ಬೈಜಾನ್ ಸೈನ್ಯ ಕಳುಹಿಸಿದೆ. ಈ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಲಾಗಿದೆ. ನೆರೆಯ ಅರ್ಮೇನಿಯಾದೊಂದಿಗೆ ಯುದ್ಧದ ಬೆದರಿಕೆಯನ್ನು ಹಾಕಲಾಗಿದೆ. ಇದನ್ನೂ ಓದಿ: ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ
ಕರಾಬಾಖ್ ಅಂತಾರಾಷ್ಟ್ರೀಯವಾಗಿ ಅಜರ್‌ಬೈಜಾನ್ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆದರೆ ಅದರ ಭಾಗವನ್ನು ಪ್ರತ್ಯೇಕತಾವಾದಿ ಅರ್ಮೇನಿಯನ್ ಅಧಿಕಾರಿಗಳು ನಿಯಂತ್ರಿಸುತ್ತಿದ್ದಾರೆ. ಈ ಪ್ರದೇಶ ನಮ್ಮ ಪೂರ್ವಜರ ತಾಯ್ನಾಡು ಎಂದು ಹೇಳುತ್ತಿದ್ದಾರೆ.
ಈ ಪ್ರದೇಶವು ಎರಡು ಯುದ್ಧಗಳ ಕೇಂದ್ರವಾಗಿದೆ. ಅಜರ್‌ಬೈಜಾನ್ ಪಡೆಗಳು ಇದುವರೆಗೆ 60 ಕ್ಕೂ ಹೆಚ್ಚು ಮಿಲಿಟರಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದೆ. ಇತರ ಯಂತ್ರಾಂಶಗಳೊಂದಿಗೆ 20 ಮಿಲಿಟರಿ ವಾಹನಗಳನ್ನು ನಾಶಪಡಿಸಿವೆ ಬಾಕು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಒಂದೇ ಕುಟುಂಬದ ದಂಪತಿ, ಇಬ್ಬರು ಮಕ್ಕಳು, 3 ನಾಯಿಗಳಿಗೆ ಗುಂಡಿಕ್ಕಿ ಹತ್ಯೆ
ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳು ಅಜರ್‌ಬೈಜಾನ್ ಮಿಲಿಟರಿ ಕ್ರಮವನ್ನು ಖಂಡಿಸಿವೆ. ಕರಾಬಾಖ್‌ನ ಭವಿಷ್ಯದ ದೃಷ್ಟಿಯಿಂದ ಅರ್ಮೇನಿಯಾದೊಂದಿಗೆ ಶಾಂತಿ ಮಾತುಕತೆಗೆ ಕರೆ ನೀಡಿವೆ.
ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಸಚಿನ್ ಬಿಷ್ಣೋಯ್‌ನನ್ನು (Sachin Bishnoi) ಅಜರ್‌ಬೈಜಾನ್‌ನ (Azerbaijan) ಬಾಕುದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಹರಗೋಬಿಂದರ್ ಸಿಂಗ್ ಧಲಿವಾಲ್ ಹೇಳಿದ್ದಾರೆ.
ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ದರೋಡೆಕೋರ ಸಚಿನ್ ಬಿಷ್ಣೋಯ್‌ನನ್ನು ಬಂಧಿಸಲು ಭದ್ರತಾ ಏಜೆನ್ಸಿಗಳ ತಂಡವನ್ನು ಅಜೆರ್ಬೈಜಾನ್‌ಗೆ ಕಳುಹಿಸಲಾಗಿತ್ತು. ಎರಡು ದೇಶಗಳ ಮಾತುಕತೆ ಬಳಿಕ ಆರೋಪಿಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
ಸಚಿನ್ ಬಿಷ್ಣೋಯ್ ಬಂಧನಕ್ಕೆ ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ರಾತ್ರಿ ಅಜೆರ್ಬೈಜಾನ್ ತಲುಪಿತ್ತು. ಸಹಾಯಕ ಪೊಲೀಸ್ ಕಮಿಷನರ್ ಮತ್ತು ಕೌಂಟರ್ ಇಂಟೆಲಿಜೆನ್ಸ್ ಘಟಕದ ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡಕ್ಕೆ ಬಿಷ್ಣೋಯ್ ಹಸ್ತಾಂತರಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು 2022ರ ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಒಂದು ದಿನದ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸೇಡು ತೀರಿಸಿಕೊಳ್ಳಲು ಕೊಲೆಯನ್ನು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದ. ಇದನ್ನೂ ಓದಿ: ಸಿನಿಮಾ ಪೈರಸಿ ಮಾಡಿದರೆ 3 ವರ್ಷ ಜೈಲೂಟ ಫಿಕ್ಸ್: ಸಚಿವ ಠಾಕೂರ್
ಬೆಂಗಳೂರು: 2018ರ ಲೇಡಿ ಸುಪರ್ ಸ್ಟಾರ್ ಖ್ಯಾತಿಯ ಬಹುಭಾಷಾ ನಟಿ ನಯನತಾರಾ ಮಗುವಿನೊಂದಿಗೆ ಮಗುವಾಗಿ ಕಾಲ ಕಳೆದಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ.
ಅಜೆರ್ಬೈಜಾನ್ ಎಸ್‍ಕೆ 13 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿಗೆ ಬಂದಿದ್ದ ಪುಟ್ಟ ಬಾಲಕಿಯ ಜೊತೆಗೆ ನಯನತಾರಾ ಮಕ್ಕಳಂತೆ ಕಾಲಕಳೆದಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ 80 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಈ ವಿಡಿಯೋ 2,435 ರೀ ಟ್ವೀಟ್ ಆಗಿದ್ದು, 20,978 ಜನರು ಲೈಕ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ಮುದ್ದಾದ ಬಾಲಕಿಯೊಬ್ಬಳು ನಯನತಾರಾ ಪಕ್ಕದಲ್ಲಿ ನಿಂತಿರುತ್ತಾಳೆ. ಬಾಲಕಿಯ ಎತ್ತರಕ್ಕೆ ಸರಿಹೋಗುವಂತೆ ಕುಳಿತ ನಟಿ ನಯನತಾರಾ ಆಕೆಯ ಜೊತೆಗೆ ಆಟವಾಡುತ್ತಾರೆ. ಬಾಲಕಿ ಕೂಡ ಅಷ್ಟೇ ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಾಳೆ. ಬಳಿಕ ನಗುತ್ತಾ ನಯನತಾರಾ ಕೆನ್ನೆ ಸವರಿ ನಗೆಯನ್ನು ಬೀರುತ್ತಾಳೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.