Tag: AzadiSAT

  • ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ

    ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ

    ನವದೆಹಲಿ: ಭಾನುವಾರ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿ ಉಡಾವಣೆಗೊಂಡ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ) ತನ್ನ ಉದ್ದೇಶಿತ ಗುರಿಯನ್ನು ತಲುಪಲಿಲ್ಲ. ಇಒಎಸ್-02 ಉಪಗ್ರಹ ಉಡಾವಣೆ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.

    ವೆಲೋಸಿಟಿ ಟ್ರಿಮ್ಮಿಂಗ್ ಮಾಡ್ಯುಲ್(ವಿಟಿಎಂ) ಉಪಗ್ರಹವನ್ನು ತನ್ನ ಕಕ್ಷೆಗೆ ಸೇರಿಸಬೇಕಿತ್ತು. ಆದರೆ ಅದು ಟರ್ಮಿನಲ್ ಹಂತದಲ್ಲಿ ಉರಿದಿರಲಿಲ್ಲ. ವಿಟಿಎಂ 30 ಸೆಕೆಂಡುಗಳ ಕಾಲ ಉರಿಯಬೇಕಿತ್ತು. ಆದರೆ ಅದು ಸರಿಯಾಗಿ ಉರಿಯದೇ ಇದ್ದುದು ವೈಫಲ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ – 5 ದಿನ ಇಂಟರ್‌ನೆಟ್ ಸ್ಥಗಿತ

    ಇಸ್ರೋ ಮೊದಲಿಗೆ ಉಪಗ್ರಹ ಉಡಾವಣೆ ಹಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಘೋಷಿಸಿತ್ತು. ಆದರೆ ತಾಂತ್ರಿಕ ದೋಷದ ಸುಳಿವು ಮೊದಲೇ ಸಿಕ್ಕಿದ್ದರಿಂದ ಮಿಷನ್ ಯಶಸ್ವಿಯಾಗಿದೆ ಎಂದು ತಕ್ಷಣವೇ ಘೋಷಿಸಿರಲಿಲ್ಲ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ

    ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ 8 ಕೆಜಿ ತೂಕದ ಆಜಾದಿ ಸ್ಯಾಟ್ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ ಇಂದು ಬೆಳಗ್ಗೆ 9:18ರ ವೇಳೆಗೆ ಉಡಾವಣೆಗೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    ನವದೆಹಲಿ: ಭಾರತ ತನ್ನ 75 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿದೆ. ಈ ವಿಶೇಷ ಸಂದರ್ಭವನ್ನು ಗುರುತಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ನಿರ್ಮಿಸಿರುವ ಉಪಗ್ರಹವನ್ನು ಉಡಾವಣೆ ಮಾಡಲಿದೆ.

    ಇಸ್ರೋ ತನ್ನ SSLV-D1/EOS-02 ಕಾರ್ಯಾಚರಣೆಯನ್ನು ಆಗಸ್ಟ್ 7 ರಂದು ಭಾನುವಾರ ಬೆಳಗ್ಗೆ 9:18 ಕ್ಕೆ ಪ್ರಾರಂಭಿಸಲಿದೆ. ಆಜಾದಿಸ್ಯಾಟ್(AzadiSAT) ಹೆಸರಿನ ಉಪಗ್ರಹ ಇಸ್ರೋವಿನ ಸಣ್ಣ ಉಪಗ್ರಹ ಉಡಾವಣಾ ವಾಹನದ(ಎಸ್‌ಎಸ್‌ಎಲ್‌ವಿ) ಮೂಲಕ ನಭಕ್ಕೆ ಚಿಮ್ಮಲಿದೆ.

    ಏನಿದರ ವಿಶೇಷತೆ?
    6 ತಿಂಗಳ ಅವಧಿಯ ಈ ಯೋಜನೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಒಂದು ಭಾಗವಾಗಿದೆ. ಈ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ(SDSC) ಉಡಾವಣೆಯಾಗಲಿದೆ. 8 ಕೆಜಿ ತೂಕದ ಉಪಗ್ರಹ ಹಲವು ಪ್ರಯೋಗಗಳನ್ನು ಹೊಂದಿದೆ. ತನ್ನದೇ ಆದ ಸೌರ ಫಲಕಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಸೆಲ್ಫಿ ಕ್ಯಾಮೆರಾಗಳು ಮತ್ತು ದೀರ್ಘ ಶ್ರೇಣಿಯ ಸಂವಹನ ಟ್ರಾನ್ಸ್ಪಾಂಡರ್‌ಗಳನ್ನು ಹೊಂದಿದೆ. ಇದನ್ನೂ ಓದಿ: ನಾಳೆ ಉಡುಪಿ, ದ. ಕನ್ನಡ, ಉ.ಕನ್ನಡ ಕೊಡಗು, ಚಿಕ್ಕಮಗಳೂರಿಗೆ ರೆಡ್‌ ಅಲರ್ಟ್‌ ಜಾರಿ: ಎಷ್ಟು ಮಳೆಯಾಗಬಹುದು?

    ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳಲ್ಲಿ ವಿದ್ಯಾರ್ಥಿನಿಯರಿಗೆ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಕಲಿಕೆಗೆ ಉತ್ತೇಜನ ನೀಡಲು ಈ ಯೋಜನೆಯನ್ನು ಮಾಡಲಾಗಿದೆ. ಮಾತ್ರವಲ್ಲದೇ ಕೇವಲ ಮಹಿಳೆಯರೇ ಸೇರಿ ತಯಾರಿಸಿರುವ ಮೊದಲ ಉಪಗ್ರಹವೂ ಇದಾಗಿದೆ.

    ಭೂಮಿ ಹಾಗೂ ಪರಿಸರದ ಅಧ್ಯಯನಗಳು, ಅರಣ್ಯ, ಜಲವಿಜ್ಞಾನ, ಕೃಷಿ, ಮಣ್ಣು ಹಾಗೂ ಕರಾವಳಿ ಭಾಗಗಳ ಉಷ್ಣ ವೈಪರೀತ್ಯಗಳ ಬಗ್ಗೆ ಇದು ಮಾಹಿತಿಯನ್ನು ಒದಗಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ರಾಜಾಹುಲಿ ನೀಡಿದ ಫಸ್ಟ್ ರಿಪೋರ್ಟ್ ರಿವೀಲ್ – ಸಿದ್ದರಾಮೋತ್ಸವ ಎಫೆಕ್ಟ್!

    Live Tv
    [brid partner=56869869 player=32851 video=960834 autoplay=true]