Tag: Azadika Amrit Mahotsav

  • ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ನವಹದೆಲಿ: ದೇಶವು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ವಿಮಾನವಾಹಕ ಯುದ್ಧನೌಕೆ ‘ವಿಕ್ರಾಂತ್‌’ ಅನ್ನು ಸೆಪ್ಟೆಂಬರ್‌ 2ರಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಿದ್ದಾರೆ.

    ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ಯುದ್ಧ ನೌಕೆ ವಿಕ್ರಾಂತ್‌ ಅನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದ್ದು, ಅಂದು ಪ್ರಧಾನಿ ಅಧೀಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ನೌಕೆ ಕಾರ್ಯ ನಿರ್ವಹಿಸಲಿದೆ. ವಿಕ್ರಾಂತ್‌ ಕಳೆದ ಜುಲೈನಲ್ಲಿ ತನ್ನ ಅಂತಿಮ ಹಂತದ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ವಿಕ್ರಾಂತ್ ನಿರ್ಮಾಣವನ್ನು 2009ರ ಫೆಬ್ರವರಿ 28ರಿಂದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಪ್ರಾರಂಭಿಸಲಾಯಿತು. 2020ರ ಡಿಸೆಂಬರ್ ನಲ್ಲಿ ಸಿಎಸ್ಎಲ್ ನಡೆಸಿದ ಜಲಾನಯನ ಪ್ರಯೋಗಗಳಲ್ಲಿ ವಿಮಾನವಾಹಕ ನೌಕೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. 40 ಸಾವಿರ ಟನ್ ತೂಕದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಎಲ್ಲಾ 4 ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲ ಪರೀಕ್ಷೆಯು ಕಳೆದ ವರ್ಷ ಆಗಸ್ಟ್ 21ರಂದು ಪೂರ್ಣಗೊಂಡಿತು. 2ನೇಯದು ಅಕ್ಟೋಬರ್ 21ರಂದು ಮತ್ತು 3ನೇ ಪರೀಕ್ಷೆಯು ಈ ವರ್ಷ ಜನವರಿ 22 ರಂದು ಪೂರ್ಣಗೊಂಡಿತು. ವಿಕ್ರಾಂತ್ ಕೊನೆಯ ಮತ್ತು 4ನೇ ಸಮುದ್ರ ಪ್ರಯೋಗಗಳು ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದು ಈ ತಿಂಗಳ ಆರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.

    ಇದು MiG-29K ಫೈಟರ್ ಜೆಟ್‌ಗಳು, Kamov-31, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳ ಜೊತೆಗೆ ಸ್ಥಳೀಯವಾಗಿ ನಿರ್ಮಿಸಲಾದ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಸೇರಿದಂತೆ ಸುಮಾರು 30 ವಿಮಾನಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು Kamov Ka-31 ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಅನ್ನು ಅಳವಡಿಸಲಾಗಿದೆ. ವಿಕ್ರಾಂತ್‌ ಅನ್ನು ಸೇನೆಗೆ ಸೇರಿಸುವ ಮೂಲಕ ಭಾರತವು ಸ್ಥಳೀಯವಾಗಿ ವಿಮಾನನೌಕೆ ವಿನ್ಯಾಸಗೊಳಿಸುವ ಮತ್ತು ಸ್ಥಾಪಿಸುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಗುಂಪಿಗೆ ಸೇರಿದೆ.

    ವಿಕ್ರಾಂತ್‌ ವಿಶೇಷತೆ ಏನು?

    • ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಓಆರ್) ಭಾರತದ ಸ್ಥಾನವನ್ನು ಮತ್ತು ನೀಲಿಜಲ ನೌಕಾಪಡೆಯ ಅನ್ವೇಷಣೆಯನ್ನು ಹೆಚ್ಚಿಸಲು‌ ಕಾರ್ಯನಿರ್ವಹಿಸುತ್ತದೆ.
    • 2,300 ವಿಭಾಗಗಳನ್ನು ಹೊಂದಿದ್ದು, ಮಹಿಳಾ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ 1,700 ಸಿಬ್ಬಂದಿಗಾಗಿ ವಿನ್ಯಾಸ ಮಾಡಲಾಗಿದೆ.
    • ನೌಕೆಯು 262 ಮೀಟರ್‌ ಉದ್ದ, 62 ಮೀಟರ್‌ ಅಗಲ ಮತ್ತು 59 ಮೀಟರ್ ಎತ್ತರವಿದೆ. ಇದರ ನಿರ್ಮಾಣಕಾರ್ಯ 2009ರಲ್ಲಿ ಆರಂಭಗೊಂಡಿತ್ತು.
    • 8 ಪವರ್‌ ಜನರೇಟರ್‌ಗಳನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಆಸ್ಪತ್ರೆಯನ್ನೂ ಇದೇ ಸಂಕಿರ್ಣದಲ್ಲಿ ನಿರ್ಮಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ನವದೆಹಲಿ: ಇಂದು ದೆಹಲಿಯ ಕೆಂಪುಕೋಟೆಯಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ವಾತಂತ್ರ್ಯೋತ್ಸವವನ್ನುದ್ದೇಶಿಸಿ ಮಾತನಾಡಿದರು.

    ಇದೇ ವೇಳೆ ಕೇಂದ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು, ಕೇಂದ್ರ ಸರ್ಕಾರ ತನ್ನ ರಾಜಕೀಯ ಪ್ರಚಾರವನ್ನು ಹೆಚ್ಚಿಸಲು ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿದೆ. ನೆಹರು ಅವರನ್ನ ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ ಪೊಲೀಸರ ವಶಕ್ಕೆ

    ಇಲ್ಲಿ ಸತ್ಯವೆಂದರೆ ಸಾವರ್ಕರ್ ಎರಡು ರಾಷ್ಟ್ರದ ಸಿದ್ಧಾಂತಗಳನ್ನು ಹುಟ್ಟುಹಾಕಿದರು. ಮೊಹಮದ್ ಅಲಿ ಜಿನ್ನಾ ಅದನ್ನು ಪೂರ್ಣಗೊಳಿಸಿದರು. ಅಂದು ನಾವು ದೇಶ ವಿಭಜನೆಯನ್ನು ಒಪ್ಪಿಕೊಳ್ಳದೇ ಇದ್ದಿದ್ದರೆ ಭಾರತವು ಹಲವಾರು ಭಾಗಗಳಾಗಿ ಛಿದ್ರವಾಗುತ್ತಿತ್ತು ಎಂದು ಸರ್ದಾರ್ ಪಟೇಲ್ ಅವರ ಹೇಳಿಕೆಯನ್ನು ಸೋನಿಯಾ ಗಾಂಧಿ ಪುನರುಚ್ಚರಿಸಿದ್ದಾರೆ.

    ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಭಾರತೀಯ ಸೇನೆಗಳು ಮಾಡಿದ ತ್ಯಾಗವನ್ನು ಸಂಕುಚಿತಗೊಳಿಸಲಾಗಿದೆ. ಐತಿಹಾಸಿಕ ಸತ್ಯಗಳನ್ನು ಸುಳ್ಳು ಮಾಡಲು ಗಾಂಧಿ, ನೆಹರು, ಆಜಾದ್ ಚಂದ್ರಶೇಖರ್, ಸರ್ದಾರ್ ವಲ್ಲಬಾಯ್ ಪಟೇಲ್ ಅವರಂತಹ ದಕ್ಷ ನಾಯಕರನ್ನು ಕಡೆಗಣಿಸಿದೆ. ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

    Sonia and Modi

    76ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕೆ ಶುಭ ಹಾರೈಸಿದ ಸೋನಿಯಾ ಗಾಂಧಿ, ಕಳೆದ 75 ವರ್ಷಗಳಲ್ಲಿ, ಹೆಚ್ಚು ಪ್ರತಿಭಾವಂತ ಭಾರತೀಯರು ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿಯ ಹಾದಿಯತ್ತ ಮುನ್ನಡೆಸಿದ್ದಾರೆ. ಭಾರತವೂ ಸಹ ತನ್ನ ವೈವಿಧ್ಯತೆ, ಸಂಸ್ಕೃತಿ ಹಾಗೂ ಭಾಷೆಯ ಗತವೈಭವದ ರಾಷ್ಟ್ರವಾಗಿ ತನ್ನ ತನವನ್ನು ಉಳಿಸಿಕೊಂಡಿದೆ ಎಂದು ಶ್ಲಾಘಿಸಿದರು.

    ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಭ್ರಷ್ಟಾಚಾರ ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ವಿರುದ್ಧ ಸಮರ ಸಾರಿದ ಪ್ರಧಾನಿ ಮೋದಿ ಭಾರತದ ಪ್ರತಿಭೆಗಳನ್ನು ಮರೆಮಾಚಿದ್ದಾರೆ ಎಂದು ಟೀಕಿಸಿದ್ದಾರೆ.

    Live Tv