Tag: Azaan

  • ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದ ಸರ್ಕಾರ

    ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದ ಸರ್ಕಾರ

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಆಜಾನ್ (Azaan) ದಂಗಾಲ್ ಹಿನ್ನೆಲೆ ಪರವಾನಗಿ ಇಲ್ಲದೇ ಲೌಡ್ ಸ್ಪೀಕರ್ (Loudspeaker) ಬಳಸುವಂತಿಲ್ಲ ಎಂದು ಸರ್ಕಾರ ನಿರ್ಬಂಧ ಹೇರಿತ್ತು. ಆ ಬಳಿಕ ಇದೀಗ ಪರವಾನಿಗೆ ನೀಡಿ ಒಟ್ಟು 10,889 ಮಸೀದಿಗಳಿಗೆ (Mosques)  ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದೆ.

    loudspeakers

    ಆಜಾನ್ ವಿರುದ್ಧ ವಿರೋಧ ಕೇಳಿ ಬಂದ ಬಳಿಕ ರಾಜ್ಯ ಸರ್ಕಾರ ಲೌಡ್ ಸ್ಪೀಕರ್‌ಗೆ ಬ್ರೇಕ್ ಹಾಕಲು ಮುಂದಾಗಿತ್ತು. ಪರವಾನಗಿ ಇಲ್ಲದೇ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು. ಆ ಬಳಿಕ ಪರವಾನಿಗೆ ನೀಡಲು ಮಸೀದಿ, ದೇವಾಲಯ (Temples), ಚರ್ಚ್‍ಗಳಿಗೆ (Churche) ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಿತ್ತು. ಈ ಹಿನ್ನೆಲೆ ಮಂದಿರ, ಮಸೀದಿ, ಚರ್ಚ್‍ಗಳಿಂದ 17 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿ ಕರ್ನಾಟಕ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಈ ಬಾರಿ ಸಂಪುಟ ವಿಸ್ತರಣೆಯೋ, ಪುನರ್‌ ರಚನೆಯೋ ಕಾದು ನೋಡಿ: ಬೊಮ್ಮಾಯಿ

    loud speaker

    17 ಸಾವಿರದ 850 ಅರ್ಜಿಗಳ ಪೈಕಿ 10 ಸಾವಿರ ಅರ್ಜಿಗಳಿಗೆ ಸರ್ಕಾರ ಎರಡು ವರ್ಷಗಳ ಅವಧಿಗೆ ಅನುಮತಿ ನೀಡಿ ಆದೇಶ ಮಾಡಿದೆ. 450 ರೂಪಾಯಿ ಶುಲ್ಕ ಪಡೆದು ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಪಡೆಯಲಾಗಿತ್ತು. ಈ ಪೈಕಿ ಬೆಂಗಳೂರಿನಲ್ಲಿ (Bengaluru) 1,841 ಮಸೀದಿಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: ಜನಪ್ರತಿನಿಧಿಗಳೇ ಬದುಕಿದ್ದೀರಾ? ಅಧಿಕಾರಿಗಳೇ ಇತ್ತ ಗಮನಿಸಿ – ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ

     17 ಸಾವಿರದ 850 ಅರ್ಜಿಗಳನ್ನು ಪರಿಶೀಲಿಸಿ ಸದ್ಯ 10 ಸಾವಿರ ಅರ್ಜಿದಾರರಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರ ಕೆಲ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

    ನಿಯಮಾವಳಿಗಳು:
    ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಲೌಡ್ ಸ್ಪೀಕರ್ ಬಳಸಬೇಕು. ನಿಯಮಿತ ಡೆಸಿಬಲ್ ಮಾತ್ರ ಬಳಸಬೇಕು. ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ. ರೆಸಿಡೆನ್ಸಿಯಲ್, ಕಮರ್ಷಿಯಲ್, ಕೈಗಾರಿಕಾ ಪ್ರದೇಶಗಳ ಅನುಗುಣವಾಗಿ ಡೆಸಿಬಲ್ ಅಳವಡಿಕೆ, ಮಸೀದಿ – ಮಂದಿರದ ಆವರಣದ ಒಳಗೆ ಲೌಡ್ ಸ್ಪೀಕರ್‌ಗಳು ಇರಬೇಕು. ಪೊಲೀಸರು ಸೂಚಿಸಿರುವಷ್ಟು ಮಾತ್ರ ಲೌಡ್ ಸ್ಪೀಕರ್ ಬಳಸಬೇಕು.

    Live Tv
    [brid partner=56869869 player=32851 video=960834 autoplay=true]

  • ಆಜಾನ್ ವಿವಾದ- ಜುಮಾ ಮಸೀದಿಯಿಂದ ನಮಾಜ್ ನೆನಪಿಸಲು ಆ್ಯಪ್ ಪ್ರಾರಂಭ

    ಆಜಾನ್ ವಿವಾದ- ಜುಮಾ ಮಸೀದಿಯಿಂದ ನಮಾಜ್ ನೆನಪಿಸಲು ಆ್ಯಪ್ ಪ್ರಾರಂಭ

    ಮುಂಬೈ: ನಮಾಜ್ ನೆನಪಿಸಲು ಬಾಂಬೆ ಟ್ರಸ್ಟ್‌ನ ಜುಮಾ ಮಸೀದಿ, ಅಲ್ ಇಸ್ಲಾಹ್ ಎಂಬ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.

    ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‍ಎಸ್) ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ನಮಾಜ್ ಸಮಯದಲ್ಲಿ ತಿಳಿಸಲು ಬಾಂಬೆ ಟ್ರಸ್ಟ್ ಈ ಆ್ಯಪ್‍ನ್ನು ಪ್ರಾರಂಭಿಸಿದೆ. ಈ ಆ್ಯಪ್ ದಿನಕ್ಕೆ ಐದು ಬಾರಿ ಪ್ರಾರ್ಥನೆಗೆ ಕರೆ ನೀಡುತ್ತದೆ. ಜೊತೆಗೆ ಪ್ರಾರ್ಥನೆ ಮಾಡಲು ಕರೆಗಳನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.

    mosque-loudspeakers

    ನಮಾಜ್‍ಗಾಗಿ ಈ ಮೊದಲು ಆ್ಯಪ್‍ಗಳಿದ್ದವು. ಆದರೆ ಆ ಎಲ್ಲಾ ಆ್ಯಪ್‍ಗಳಲ್ಲಿ ರೆಕಾರ್ಡ್ ಮಾಡಿದ್ದನ್ನು ಮಾತ್ರ ಪ್ಲೇ ಮಾಡಬಹುದಾಗಿತ್ತು. ಇದರಿಂದಾಗಿ ಬಾಂಬೆ ಟ್ರಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆ್ಯಪ್ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮಳೆ ಹಾನಿ ಕುರಿತು ಸಿಎಂ‌ ಸಭೆ: ತಕ್ಷಣವೇ ಮನೆ, ಬೆಳೆ ಪರಿಹಾರ ವಿತರಿಸುವಂತೆ ಡಿಸಿಗಳಿಗೆ ಸೂಚನೆ

    loud speaker

    ಈ ಬಗ್ಗೆ ಮಸೀದಿ ಟ್ರಸ್ಟ್‍ನ ಅಧ್ಯಕ್ಷ ಶುಐಬ್ ಖತೀಬ್ ಮಾತನಾಡಿ, ಧ್ವನಿವರ್ಧಕಗಳ ಬಳಕೆಯ ಕುರಿತು ಸುಪ್ರೀಂ ಕೋರ್ಟ್‍ನ ಮಾರ್ಗಸೂಚಿಗಳನ್ನು ಅನುಸರಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಆಜಾನ್ ವಿವಾದದ ಹಿನ್ನೆಲೆಯಲ್ಲಿ ಈ ಮೊದಲು ರೇಡಿಯೋ ತರಂಗಾಂತರದ ಮೂಲಕ ನಮಾಜ್ ಹಾಕಬೇಕು ಎಂದು ಪ್ರಯತ್ನಿಸಿದ್ದೆವು. ಆದರೆ ರೇಡಿಯೋ ತರಂಗಾಂತರವನ್ನು ಪಡೆಯಲು ತೊಂದರೆಯಾಗುತ್ತೆ. ಜೊತೆಗೆ ಕ್ಲಿಯರೆನ್ಸ್ ಇಲ್ಲದಿರುವುದರಿಂದ ಅದನ್ನು ಕೈಬಿಟ್ಟು ಈ ಆ್ಯಪ್‍ನ್ನು ಸಿದ್ಧಪಡಿಸಿದೆವು ಎಂದು ತಿಳಿಸಿದರು. ಇದನ್ನೂ ಓದಿ: ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ

    Live Tv
    [brid partner=56869869 player=32851 video=960834 autoplay=true]

  • ಪ್ರಾರ್ಥನಾ ಮಂದಿರಗಳಲ್ಲಿ ಮೈಕ್‌ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ – ಇಂದಿನಿಂದ ಪೊಲೀಸ್‌ ಕಾರ್ಯಾಚರಣೆ

    ಪ್ರಾರ್ಥನಾ ಮಂದಿರಗಳಲ್ಲಿ ಮೈಕ್‌ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ – ಇಂದಿನಿಂದ ಪೊಲೀಸ್‌ ಕಾರ್ಯಾಚರಣೆ

    ಬೆಂಗಳೂರು: ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಮೈಕ್ ಸಕ್ರಮಕ್ಕೆ ಸರ್ಕಾರ ನೀಡಿದ್ದ ಗಡುವು ನಿನ್ನೆಗೆ ಅಂತ್ಯವಾಗಿದೆ. ಇಂದಿನಿಂದ ಅನಧಿಕೃತ ಮೈಕ್‌ಗಳ ತೆರವು ಕಾರ್ಯಾಚರಣೆಯನ್ನು ಪೊಲೀಸರು ನಡೆಸಲಿದ್ದಾರೆ.

    ಯಾರೆಲ್ಲ ಅಕ್ರಮವಾಗಿ ಇನ್ನೂ ಮೈಕ್‌ಗಳನ್ನು ಹಾಕಿದ್ದಾರೋ ಅಂತಹವರ ವಿರುದ್ಧ ಪೊಲೀಸರು ಈಗ ಸಮರ ಸಾರಲಿದ್ದಾರೆ. ಅನಧಿಕೃತ ಮೈಕ್ ಅಳವಡಿಸಿಕೊಂಡಿರುವವರ ವಿರುದ್ಧ ಪೊಲೀಸರು ಫೀಲ್ಡ್‌ಗೆ ಇಳಿಯಲಿದ್ದು, ಕಾನೂನು ಅಸ್ತ್ರ ಪ್ರಯೋಗಿಸಲಿದ್ದಾರೆ. ಇದನ್ನೂ ಓದಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    loud speaker

    ಮಸೀದಿ, ಮಂದಿರ ಹಾಗೂ ಚರ್ಚ್‌ಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ 900ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 121 ಅರ್ಜಿ ವಿಲೇವಾರಿ ಮಾಡಿ ಪೊಲೀಸರು ಅನುಮತಿ ನೀಡಿದ್ದಾರೆ. ಕೋರ್ಟ್‌ ಆದೇಶ ಹಾಗೂ ಸರ್ಕಾರದ ಸೂಚನೆಗಳ ಅನುಸಾರವಾಗಿ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಜಾನ್‌ ವಿರೋಧಿಸಿ ರಾಜ್ಯಾದ್ಯಂತ ಜೂ. 1ರಿಂದ ಎರಡನೇ ಸುತ್ತಿನ ಹೋರಾಟ: ಮುತಾಲಿಕ್

    ಆಜಾನ್‌ ವಿರೋಧಿಸಿ ರಾಜ್ಯಾದ್ಯಂತ ಜೂ. 1ರಿಂದ ಎರಡನೇ ಸುತ್ತಿನ ಹೋರಾಟ: ಮುತಾಲಿಕ್

    ಹಾಸನ: ಆಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಜೂನ್ 1ರಿಂದ ಎರಡನೇ ಸುತ್ತಿನ ಹೋರಾಟವನ್ನು ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

    ಹಾಸನದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಸೀದಿಗಳಲ್ಲಿ ಆಜಾನ್ ನಿಲ್ಲಿಸಬೇಕಾಗಿದೆ ಹಾಗೂ ನಿರ್ದಿಷ್ಟ ಪ್ರಮಾಣದ ಧ್ವನಿಯೊಂದಿಗೆ ಆಜಾನ್ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದರೂ ಸಹ ಬಹುತೇಕ ಮಸೀದಿಗಳಲ್ಲಿ ಇದು ಪಾಲನೆ ಆಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಸಹ ಈ ಬಗ್ಗೆ ದೃಢ ನಿಲುವನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಆಜಾನ್ ನಿಲ್ಲಿಸದಿದ್ದರೆ ಜೂನ್ 1ರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    loud speaker

    ಪಠ್ಯದಲ್ಲಿ ಹೆಡ್ಗೆವಾರ್ ವಿಷಯ ಸೂಕ್ತ: ಪಠ್ಯ-ಪುಸ್ತಕಗಳಲ್ಲಿ ಆರ್‌ಎಸ್‍ಎಸ್ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ವಿಷಯಗಳನ್ನು ಅಳವಡಿಸುವುದು ಸೂಕ್ತವಾಗಿದೆ. ಅವರು ಎಂದೂ ಸಹ ದೇಶವಿರೋಧಿ ಕೆಲಸ ಮಾಡಿಲ್ಲ. ಅಂಥವರ ಬಗ್ಗೆ ಪಠ್ಯ-ಪುಸ್ತಕದಲ್ಲಿ ಪ್ರಕಟಿಸುವುದಕ್ಕೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಯಾಕೆ ಮೀನಮೇಷ ಎಣಿಸುತ್ತಿದ್ದಾರೆ ತಿಳಿಯುತ್ತಿಲ್ಲ. ಯಾವುದೇ ಕಾರಣಕ್ಕೂ ಹೆಡ್ಗೆವಾರ್ ಅವರ ವಿಷಯಗಳನ್ನು ಪಠ್ಯ-ಪುಸ್ತಕದಲ್ಲಿ ಅಳವಡಿಸುವುದರಿಂದ ಹಿಂಜರಿಯಬಾರದು ಎಂದು ಒತ್ತಾಯಿಸಿದರು.

    ಆರ್‌ಎಸ್‍ಎಸ್ ರಾಜಕೀಯೇತರ ದೇಶದ ನಂಬರ್ 1 ಸಂಘವಾಗಿದೆ. ಇದು ಭಯೋತ್ಪಾದಕರ ಸಂಘಟನೆಯಲ್ಲ. ದೇಶಭಕ್ತಿಯ ಸಂಘಟನೆಯಾಗಿದ್ದು, ಅದರ ಸಂಸ್ಥಾಪಕರಾದ ಹೆಡ್ಗೆವಾರ್ ಅವರ ವಿಷಯವನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತವಾಗಿದೆ.  ಇದನ್ನೂ ಓದಿ: 12 ಜ್ಯೋತಿರ್ಲಿಂಗಗಳಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗವೂ ಒಂದು: ವಿಹೆಚ್‌ಪಿ

    tippu

    ಹಲವು ದಶಕ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ನಡೆಸಿದ ಐದು ಮಂದಿ ಮುಸ್ಲಿಂ ಕೇಂದ್ರ ಶಿಕ್ಷಣ ಸಚಿವರು, ಕೇವಲ ಔರಂಗಜೇಬ್, ಟಿಪ್ಪು, ಬಾಬರ್‌ರಂತಹ ದೇಶವಿರೋಧಿ ವ್ಯಕ್ತಿಗಳ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಹಿಂದೂ ರಾಷ್ಟ್ರಕ್ಕೆ ತಪ್ಪು ಸಂದೇಶವನ್ನು ಸಾರುವಂತೆ ಮಾಡಿದರು. ಇದೀಗ ದೇಶಭಕ್ತರ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಏಕೆ ಎಂದು ಪ್ರಶ್ನಿಸಿದರು.

    ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಲೆಯೆತ್ತಿರುವ ಅನಧಿಕೃತ ಚರ್ಚ್‍ಗಳನ್ನು ನೆಲಸಮಮಾಡಬೇಕು ಎಂಬುದಾಗಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿ ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ

  • ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ

    ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ

    ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಲೌಡ್‌ಸ್ಪೀಕರ್‌ ಬಳಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದವು ನಂತರದ ದಿನಗಳಲ್ಲಿ ಧರ್ಮ ಸಂಘರ್ಷಕ್ಕೆ ಕಾರಣವಾಯಿತು. ಸಂಘರ್ಷ ಬಿಟ್ಟು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮುಸ್ಲಿಂ ಧರ್ಮ ಗುರುಗಳು ಉತ್ತಮ ನಿರ್ಧಾರವೊಂದಕ್ಕೆ ಬಂದಿದ್ದಾರೆ.

    ಹೌದು, ಇನ್ಮುಂದೆ ಬೆಳಗಿನ ಜಾವ ಮೈಕ್‌ ಮೂಲಕ ಆಜಾನ್‌ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ ಕೈಗೊಂಡಿದ್ದಾರೆ. ಶರಿಯತ್ ಎ ಹಿಂದ್ ಸಂಘಟನೆಯ ಅಡಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸಭೆಯಲ್ಲಿ ಶಾಸಕ ಜಮೀರ್‌ ಅಹ್ಮದ್‌, ಹ್ಯಾರಿಸ್‌ ವಕ್ಫ್‌ ಬೋರ್ಡ್‌ ಅಧ್ಯಕ್ಷ ಶಫಿ ಸಅದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

    loudspeakers

    ಮೈಕ್‌ ಮೂಲಕ ಆಜಾನ್‌ ಕೂಗುವುದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಇದು ದೇಶಾದ್ಯಂತ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಯಿತು. ಮಸೀದಿಗಳಲ್ಲಿ ಆಜಾನ್‌ ಕೂಗಿದರೆ, ಹಿಂದೂ ದೇವಾಲಯಗಳಲ್ಲಿ ಮಂತ್ರಘೋಷ ಮೊಳಗಿಸಲಾಗುವುದು, ಹನುಮಾನ್‌ ಚಾಲೀಸಾ ಪಠಿಸಲಾಗುವುದು ಎಂದು ಹಿಂದೂಪರ ಸಂಘಟನೆಗಳು ಘೋಷಿಸಿದ್ದವು. ಅಲ್ಲದೇ ಲೌಡ್‌ಸ್ಪೀಕರ್‌ ಬಳಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.

    ಈ ಸಂಬಂಧ ಆರಂಭದಲ್ಲಿ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಇದ್ದಾಗ, ಹಿಂದೂಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು. ಕೂಡಲೇ ಎಚ್ಚೆತ್ತ ಸರ್ಕಾರ, ಧಾರ್ಮಿಕ ಕೇಂದ್ರಗಳಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಲೌಡ್‌ಸ್ಪೀಕರ್‌ ಬಳಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿತು. ಇದರ ಬೆನ್ನಲ್ಲೇ ಅನೇಕ ಹಿಂದೂ ದೇವಾಲಯಗಳು, ಮಸೀದಿಗಳು ಹಾಗೂ ಚರ್ಚ್‌ಗಳಿಗೆ ನೋಟಿಸ್‌ ನೀಡಲಾಯಿತು. ಸುಪ್ರೀಂ ಕೋರ್ಟ್‌ ದೇಶದಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ಇದರಿಂದ ಎಚ್ಚೆತ್ತ ಮುಸ್ಲಿಂ ಧರ್ಮ ಗುರುಗಳು ಬೆಳಗಿನ ಜಾವ ಆಜಾನ್‌ ಕೂಗದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಎಲ್ಲ ಮಸೀದಿಗಳಿಗೂ ಸೂಚನೆ ನೀಡಲಾಗುವುದು ಎಂದು ಸಭೆಯಲ್ಲಿ ಹೇಳಿದ್ದಾರೆ.

  • ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ: ಕಮಲ್ ಪಂತ್

    ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ: ಕಮಲ್ ಪಂತ್

    ಬೆಂಗಳೂರು: ನಗರದಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸ್ಪಷ್ಟಪಡಿಸಿದ್ದಾರೆ.

    loudspeakers

    ನಗರದಲ್ಲಿ ಎಲ್ಲರೂ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ಹೊಸದಾಗಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಮೇಲೆ ನಿರ್ಮಾಣವಾದ ಯಾವುದೇ ಮಸೀದಿಯನ್ನೂ ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ: ಬಿಜೆಪಿ ನಾಯಕ

    2002ರಲ್ಲಿ ಸುಪ್ರೀಂ ಕೋರ್ಟ್ ಜಾರಿ ಮಾಡಿರುವ ಆದೇಶ ಪಾಲನೆ ಮಾಡಬೇಕು. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ 6 ಗಂಟೆಯ ತನಕ ನಗರದಲ್ಲಿ ಯಾವುದೇ ಲೌಡ್ ಸ್ಪೀಕರ್‌ಗಳನ್ನು ಬಳಕೆ ಮಾಡಬಾರದು. ವಿಶೇಷ ಸಮಯದಲ್ಲಿ ಅನುಮತಿ ಹೊರತುಪಡಿಸಿ ಯಾವುದೇ ಲೌಡ್‌ಸ್ಪೀಕರ್ ಬಳಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.

    mosque-loudspeakers
    ಸಾಂದರ್ಭಿಕ ಚಿತ್ರ

    ಲೌಡ್‌ಸ್ಪೀಕರ್ ಬಗ್ಗೆ ಸರ್ಕಾರ ಸಭೆ ಮಾಡಿ ಒಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ಅನಧಿಕೃತವಾಗಿರುವ ಮೈಕ್‌ಗಳಿಗೆ 15 ದಿನ ಸರ್ಕಾರ ಗಡುವು ನೀಡಿದೆ. 15 ದಿನಗಳ ಒಳಗಾಗಿ ಅರ್ಜಿ ಹಾಕಿ ಅಧಿಕೃತ ಮಾಡಿಕೊಳ್ಳಬೇಕು. 15 ದಿನದ ನಂತರ ಅನಧಿಕೃತ ಮೈಕ್‌ಗಳನ್ನು ತೆರವು ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಕೇಸರಿಧ್ವಜ ಕಟ್ಟಿ ಕಿಡಿಗೇಡಿಗಳ ವಿಕೃತಿ – ಸ್ಥಳದಲ್ಲೇ ಬೀಡುಬಿಟ್ಟ ಪೊಲೀಸರು

  • 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಬೆಳಗಾವಿ: ಮಸೀದಿಗಳಲ್ಲಿ ಅಜಾನ್ ಶಬ್ದದ ಕಿರಿಕಿರಿ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಇಂದಿನಿಂದ ರಾಜ್ಯಾದ್ಯಂತ ಅಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಸುಪ್ರಭಾತ, ಚಾಲಿಸಾ ಪಠಣ ಹಿನ್ನೆಲೆ ಬೆಳಗಾವಿಯಲ್ಲಿ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

    ಇಂದು ಬೆಳಗ್ಗೆ 5ಕ್ಕೆ ಬೆಳಗಾವಿ ನಗರದ ಆರ್‌ಟಿಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ದೇವರ ಮೂರ್ತಿಗೆ ಆರತಿ ಮಾಡಿ, ಹನುಮಾನ ಚಾಲೀಸಾ ಪಠಣ ಮಾಡಿ ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿದರು.

    ಹೀಗೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಭಜನೆ, ಹನುಮಾನ್ ಚಾಲೀಸಾ, ಮಂತ್ರ ಪಠಣ ಇಂದಿನಿಂದ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರದ ನೂರು, ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರಿಂದ ತೀವ್ರ ಭದ್ರತೆ ವಹಿಸಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

    ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸೀದಿಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಿಯವರೆಗೆ ಪಾಲನೆ ಮಾಡೊದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಮುಂದುವರಿಸುತ್ತೇವೆ ಎಂದು ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಹೇಳಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

  • ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

    ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

    ಮೈಸೂರು: ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಆದರೆ ಮಸೀದಿಗೆ ಯಾಕೆ ಕೊಡಲ್ಲ. ಈ ರೀತಿ ಮಾಡುತ್ತಿರುವ ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

    ಸುಪ್ರಭಾತಕ್ಕೆ ಚಾಲನೆ ನೀಡಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಸೀದಿ ಮೇಲಿನ ಮೈಕ್ ತೆಗೆಸಲು ಸರ್ಕಾರಕ್ಕೆ ಗಡುವು ನೀಡಿದ್ದೆವು. ಆದರೆ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಲಿಲ್ಲ. ಹೀಗಾಗಿ ದೇವಾಲಯಗಳಲ್ಲಿ ಸುಪ್ರಭಾತಕ್ಕೆ ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.

    loud speaker

    ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಇರಲಿ. ಮುಸ್ಲಿಮರ ಸೊಕ್ಕು, ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಲ್ಲ, ಪಾಕಿಸ್ತಾನವಲ್ಲ. ಈ ರೀತಿ ಹಠ ಸರಿಯಲ್ಲ. ಸಂಘರ್ಷಕ್ಕೆ ನೀವೇ ಅವಕಾಶ ಮಾಡಿ ಕೊಡುತ್ತಿದ್ದೀರಿ. ಈ ಆಂದೋಲನ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ

    ಅಜಾನ್, ಪ್ರಾರ್ಥನೆಗೆ ವಿರುದ್ಧವಿಲ್ಲ. ಆದರೆ ಶಬ್ದಕ್ಕೆ ವಿರೋಧವಿದೆ. ಇದರಿಂದಾಗಿ ಮುಂಜಾನೆಯಿಂದಲೇ ಪ್ರಾರ್ಥನೆ ಮಾಡಿದ್ದೇವೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಇದನ್ನೂ ಓದಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

  • ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಸುಪ್ರಭಾತ ಅಭಿಯಾನ- ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಅಜಾನ್ ವಿರುದ್ಧ ನಾಳೆ ಭಜನೆ ಮತ್ತು ಸುಪ್ರಭಾತ ಅಭಿಯಾನದ ಹಿನ್ನೆಲೆಯಲ್ಲಿ ಸರ್ಕಾರ ಸುಮ್ಮನಿದೆ ಎಂದು ಭಾವಿಸಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

    ಶರೇವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಗಡುವು ಕೊಟ್ಟಿದ್ದು ಗೊತ್ತಿಲ್ಲ. ಕಾನೂನು ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು. ಇದನ್ನೂ ಓದಿ: ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

    loud speaker

    ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕಿಂಗ್‍ಪಿನ್ ಹೆಸರು ಬಹಿರಂಗ ಪಡಿಸಿದರೆ ಸರ್ಕಾರ ಉರುಳುತ್ತದೆ ಎನ್ನುವ ಹೆಚ್‍ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವನ್ನು ಉರುಳಿಸೋದು, ಬಿಡುವುದು ಅವರ ಜವಾಬ್ದಾರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಅಕ್ರಮ ನೇಮಕಾತಿಯ ಬಗ್ಗೆ ಯಾರ ಹತ್ತಿರ ಮಾಹಿತಿ ಇದೆ ಅದನ್ನು ಅವರು ಕೊಡಲಿ. ಸಿಐಡಿ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನೇ ಬಂಧಿಸಲಾಗಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುವುದು ಕಡ್ಡಾಯ: ಸುಧಾಕರ್

  • ಮೇ 9ಕ್ಕೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ

    ಮೇ 9ಕ್ಕೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಜಾನ್ ದಂಗಲ್ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣ ಕಾಣ್ತಿದೆ. ಮಸೀದಿಗಳಲ್ಲಿ ಮೈಕ್ ತೆರವಿಗೆ ಶ್ರೀರಾಮಸೇನೆ ನೀಡಿದ್ದ ಗಡುವು ನಿನ್ನೆಗೆ ಮುಕ್ತಾಯವಾಗಿದೆ.

    ಮೇ 9ರಂದು ಸಾವಿರ ದೇಗುಲಗಳಲ್ಲಿ ಬೆಳಗ್ಗೆ ಐದಕ್ಕೆ ಹನುಮಾನ್ ಚಾಲೀಸಾ ಹಾಕ್ತೀವಿ. ತಾಕತ್ ಇದ್ರೆ ತಡೆಯಿರಿ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಸವಾಲು ಹಾಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುನೀಲ್ ಕುಮಾರ್, ಒಂದು ಧ್ವನಿವರ್ಧಕದಿಂದ ನೂರಾರು ಜನಕ್ಕೆ ತೊಂದರೆ ಆಗಬಾರದು. ಮುಸಲ್ಮಾನ ಸಮುದಾಯ ಈ ಬಗ್ಗೆ ಮರು ಆಲೋಚನೆ ಮಾಡಬೇಕು. ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಇದನ್ನೂ ಓದಿ: ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ

    ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಮಾತನಾಡಿ, ಮುಖ್ಯಮಂತ್ರಿಗಳೇ ನಿಮ್ಮ ಹಾರ್ಡ್‍ವೆಪನ್ ಶಾಂತಿ ಕದಡ್ತಿರೋ ಆರ್‍ಎಸ್‍ಎಸ್, ಭಜರಂಗದಳದವರ ಮೇಲೆ ಬಳಸಿ.. ಸರ್ಕಾರಕ್ಕೆ ನಿತ್ಯವೂ ಕೆಟ್ಟ ಹೆಸರು ತರ್ತಾ ಇದ್ದಾರೆ ಎಂದು ಗರಂ ಆಗಿದ್ದಾರೆ. ಅತ್ತ ರಂಜಾನ್ ಹಬ್ಬಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅಕ್ಷಯ ತೃತೀಯವಾದ ನಾಳೆ ಮಹಾರಾಷ್ಟ್ರದಲ್ಲಿ ಮಹಾ ಆರತಿ ನಡೆಸಬಾರದು ಎಂದು ಎಂಎನ್‍ಎಸ್‍ನ ರಾಜ್ ಠಾಕ್ರೆ ಸೂಚಿಸಿದ್ದಾರೆ. ಇದ್ರ ಬದಲು ಜೂನ್ 5ರಂದು ರಂದು ಚಲೋ ಅಯೋಧ್ಯೆಗೆ ರಾಜ್ ಠಾಕ್ರೇ ಕರೆ ನೀಡಿದ್ದಾರೆ.