Tag: Ayyappaswamy Temple

  • ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

    ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

    ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ಪಟ್ಟಣದ ಮುಸ್ಲಿಂ ಸಮುದಾಯದ ವ್ಯಕ್ತಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ.

    ಅಯ್ಯಪ್ಪ ಮಾಲೆ ಧರಿಸಿದ ವ್ಯಕ್ತಿಯನ್ನು ದೇವದುರ್ಗ ಪಟ್ಟಣದ ಬಾಬು ಗೌರಂಪೇಟ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ಪ್ರತೀ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ಬಾಬು ಸರತಿ ಸಾಲಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗಿ ಬಂದಿದ್ದಾರೆ. ಧರ್ಮದ ಬೇಧ ಭಾವವಿಲ್ಲದೆ ಅಯ್ಯಪ್ಪ ಸ್ವಾಮಿಯನ್ನ ಪೂಜಿಸುವ ಬಾಬು ಕಳೆದ 10 ವರ್ಷಗಳಿಂದ ಮಾಲೆ ಧರಿಸಿ ಶಬರಿಮಲೆಗೆ ತೆರಳುತ್ತಿದ್ದಾರೆ.

    ಸ್ಥಳೀಯ ಅಯ್ಯಪ್ಪ ಮಾಲಾಧಾರಿಗಳ ಜೊತೆ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದು, ಬಾಬು ಭಕ್ತಿ ಭಾವಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಆಡ್ತಾರಾ? – ಗೌತಮ್‌ ಗಂಭೀರ್‌ ಹೇಳಿದ್ದೇನು?

  • ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    – ದೇವಾಲಯದ ಕುಂಭಾಭಿಷೇಕದಲ್ಲಿ ಡಿಕೆ ಶಿವಕುಮಾರ್‌ ದಂಪತಿ ಭಾಗಿ, ಹೋಮ-ಹವನ ನೆರವೇರಿಕೆ

    ರಾಮನಗರ: ಕನಕಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಯ್ಯಪ್ಪಸ್ವಾಮಿ ದೇವಾಲಯದ (AyyappaSwamy Temple) ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ದಂಪತಿ ಭಾಗಿಯಾಗಿದ್ದಾರೆ.

    ಗುರುವಾರ ರಾತ್ರಿ ಸ್ವಕ್ಷೇತ್ರ ಕನಕಪುರಕ್ಕೆ (Kanakapura) ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ತಮ್ಮ ಆಪ್ತನ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಳಿಕ ಅಯ್ಯಪ್ಪಸ್ವಾಮಿ ದೇವಾಲಯದ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸಿ ಹೋಮ-ಹವನ ನೆರವೇರಿಸಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

    ನಂತರ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ದೇವಾಲಯದಲ್ಲೇ ಪ್ರಸಾದ ಸೇವಿಸಿದ್ದಾರೆ. ಶುಕ್ರವಾರ (ಜೂ.2) ಸಚಿವ ಸಂಪುಟ ಸಭೆ (Cabinet Meeting) ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ವಾಪಸ್ಸ್ ಆಗಿದ್ದಾರೆ. ಜೂ.3ರಂದು ಕನಕಪುರ ಕ್ಷೇತ್ರದ ಮತದಾರರಿಗೆ ಅಭಿನಂದನೆ ತಿಳಿಸಲು ವಿಶೇಷ ಸಭೆಗಳನ್ನ ಹಮ್ಮಿಕೊಂಡಿದ್ದು ಇಡೀ ದಿನ ಕ್ಷೇತ್ರದೆಲ್ಲೆಡೆ ಡಿಸಿಎಂ ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

  • ಮಹಿಳೆಯರಿಗೂ ಮುಕ್ತವಾಗುತ್ತಾ ಶಬರಿಮಲೈಯ ಅಯ್ಯಪ್ಪನ ಬಾಗಿಲು..?

    ಮಹಿಳೆಯರಿಗೂ ಮುಕ್ತವಾಗುತ್ತಾ ಶಬರಿಮಲೈಯ ಅಯ್ಯಪ್ಪನ ಬಾಗಿಲು..?

    ನವದೆಹಲಿ: ಕಳೆದ 3 ದಿನಗಳಿಂದ ಸಾಲು ಸಾಲು ಮಹತ್ವದ ತೀರ್ಪುಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟ್ ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಲಿದೆ. ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆರಿಗೂ ಪ್ರವೇಶ ನೀಡುವ ಸಂಬಂಧ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಲಿದೆ. ಮಹಿಳೆಯರ ಪ್ರವೇಶ ಮಾತ್ರವಲ್ಲದೆ ತಿಂಗಳ ಋತುಮತಿಯಾದ ಮಹಿಳೆಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇದೆಯೋ ಇಲ್ವೋ ಅಂತ ತೀರ್ಪು ನೀಡಲಿದೆ.

    ಪ್ರಸಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ 800 ವರ್ಷಗಳ ಹಿಂದಿನ ನಿಯಮವನ್ನು ಪ್ರಶ್ನಿಸಿ, ಯಂಗ್ ಲಾಯರ್ಸ್ ಅಸೋಸಿಯೇಷನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ ಅಂತ ವಾದ ಮಂಡಿಸಿತ್ತು. ಅಲ್ಲದೆ ಮುಟ್ಟಾದ ಹೆಣ್ಣುಮಕ್ಕಳ ದೇವಸ್ಥಾನ ಪ್ರವೇಶ ನಿರಾಕರಣೆಯನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ಆಲಿಸಿದ್ದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು.

    ಪ್ರಕರಣ ವಿಚಾರಣೆ ವೇಳೆ ಮುಟ್ಟಾದ ಮಹಿಳೆಯರು ಅಪವಿತ್ರಳು ಹಾಗಾಗಿ ಅವರಿಗೆ ಪ್ರವೇಶ ನಿರ್ಬಂಧಿಸಿಲಾಗಿದೆ ಅಂತಾ ದೇವಸ್ಥಾನ ಆಡಳಿತ ಮಂಡಳಿ ಮಂಡಿಸಿದ ವಾದಕ್ಕೆ ಸಾಂವಿಧಾನಿಕಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಿರಿ ಅಂತಾ ಚಾಟಿ ಬೀಸಿತ್ತು. ಮಹಿಳೆಯರಿಗೂ ಪುರುಷರಷ್ಟೆ ಸಮಾನ ಹಕ್ಕಿದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದಡಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು ಅಂತ ಅಭಿಪ್ರಾಯಪಟ್ಟಿತ್ತು.

    ಬಳಿಕ ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ದೀಪಕ್ ಮಿಶ್ರಾ, ನ್ಯಾ.ರೋಹಿಂಗ್ಟನ್, ನ್ಯಾ. ಖಾನ್ವೀಲ್ಕರ್, ನ್ಯಾ.ಡಿ.ವೈ ಚಂದ್ರಚೂಡ್, ನ್ಯಾ.ಇಂಧು ಮಲ್ಹೋತ್ರಾ ನೇತೃತ್ವದ ಪಂಚಪೀಠ ಇಂದು ತೀರ್ಪು ನೀಡಲಿದೆ. ಹಾಗಾದರೆ ಶಬರಿಮಲೈಗೆ ಇನ್ಮುಂದೆ ಮಹಿಳೆಯರಿಗೂ ಪ್ರವೇಶ ಸಿಗುತ್ತಾ..? ಅಥವಾ ಹಳೆಯ ಸಂಪ್ರದಾಯವೇ ಮುಂದುವರಿಯುತ್ತಾ..? ಕಾದುನೋಡ್ಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv