Tag: Ayyappa Swami

  • ಅಯ್ಯಪ್ಪ ಮಾಲಾಧಾರಿಯಂತೆ ಬಂದು ಬಾಳೆ ತೋಟ ನಾಶ ಮಾಡಿದ್ರು

    ಅಯ್ಯಪ್ಪ ಮಾಲಾಧಾರಿಯಂತೆ ಬಂದು ಬಾಳೆ ತೋಟ ನಾಶ ಮಾಡಿದ್ರು

    ಧಾರವಾಡ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವೇಷದಲ್ಲಿ ಬಂದು ಹಾಡಹಗಲೇ ಬಾಳೆ ತೋಟವನ್ನು ಗಿಡಗಳ ಸಮೇತ ಲೂಟಿ ಮಾಡಿಕೊಂಡು ಹೋಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ರಾಯಪ್ಪ ಸುಳ್ಳದ ಎಂಬವರ ತೋಟದಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 1 ಲಕ್ಷ ಮೌಲ್ಯದಷ್ಟು 200 ಬಾಳೆಗೊಣೆ ಹಾಗೂ ಅಷ್ಟೇ ಬಾಳೆ ಗಿಡಗಳನ್ನು ಸಹ ಕಡಿದುಕೊಂಡು ಹೋಗಿದ್ದಾರೆ.

    ತೋಟದ ಮಾಲೀಕ ರಾಯಪ್ಪ ಇಲ್ಲದ ಸಂದರ್ಭದಲ್ಲಿ ಕಳ್ಳರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಂತೆ ಬಂದಿದ್ದರು. ಆದರೆ ಅಕ್ಕಪಕ್ಕದ ಜಮೀನನಲ್ಲಿ ಇದ್ದವರು ರಾಯಪ್ಪ ಅವರೇ ಬಾಳೆ ತೆಗೆದುಕೊಳ್ಳಲು ಹೇಳಿರಬಹುದು ಎಂದು ತಿಳಿದುಕೊಂಡು ಸುಮ್ಮನಾಗಿದ್ದಾರೆ.

    ಈ ಕಳ್ಳತನ ನಡೆದಿದ್ದರೂ ಸುಮಾರು ಒಂದೂವರೆ ಗಂಟೆಗಳ ಕಾಲ ಯಾರಿಗೂ ಸಂಶಯ ಬಂದಿಲ್ಲ. ಆದ್ರೆ ಇಂದು ಬೆಳಗ್ಗೆ ಮಾಲೀಕ ರಾಯಪ್ಪ ತೋಟಕ್ಕೆ ಬಂದು ನೋಡಿದಾಗಲೇ ಹಾಡಹಗಲೇ ತಮ್ಮ ತೋಟವನ್ನು ದೋಚಿದ್ದು ತಿಳಿದು ಒಂದು ಕ್ಷಣ ದಂಗಾದ್ರು.

    ಅಯ್ಯಪ್ಪ ಸ್ವಾಮಿ ಪೂಜೆ ಎಲ್ಲೆ ನಡೆದರೂ ರಾಯಪ್ಪ ಅವರು ದೇಣಿಗೆ ರೂಪದಲ್ಲಿ ಬಾಳೆ ಹಣ್ಣು ಕೊಡುತ್ತಾ ಬಂದಿದ್ದಾರೆ. ಆದರೆ ಇಂದು ತನ್ನ ತೋಟವನ್ನು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ವೇಷದಲ್ಲೇ ಬಂದು ಲೂಟಿ ಮಾಡಿದ್ದರಿಂದ ಅವರಿಗೆ ಸಾಕಷ್ಟು ನೋವುಂಟಾಗಿದೆ.

    ಈ ಘಟನೆ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ

    ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿವಾದ ದೇಶಾದ್ಯಂತ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇತ್ತ ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

    ಅಯ್ಯಪ್ಪ ಸನ್ನಿಧಿಗೆ ಭಕ್ತರು ತೆರಳುವ ಮುನ್ನ ಇರುವ 18 ಮೆಟ್ಟಲ ಬಳಿಯ ಬೃಹತ್ ಅಶ್ವತ್ಥ ಮರಕ್ಕೂ ಭಕ್ತರು ನಮಿಸಿ ಮುಂದೇ ಸಾಗುತ್ತಾರೆ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.

    ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಪಡೆದ ಆಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಪರಿಣಾಮ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಭಕ್ತರನ್ನು ವಾಲಿಯ ನಡಪಂಥಲ್ ಬಳಿ ಕೆಲ ಸಮಯ ತಡೆಯಲಾಯಿತು. ಬೆಂಕಿ ನಂದಿಸಿದ ಬಳಿಕ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ಮರದ ಪಕ್ಕದಲ್ಲೇ ಅಗ್ನಿ ಕುಂಡವಿದ್ದು, ಹಲವು ಶತಮಾನಗಳಿಂದ ಅಗ್ನಿ ಕುಂಡದಲ್ಲಿ ಭಕ್ತರು ಸಮರ್ಪಿಸಿದ ತುಪ್ಪ ಕಾಯಿ ಅರ್ಪಿಸುತ್ತಿದ್ದರು ಯಾವುದೇ ಅವಘಡ ನಡೆದ ಬಗ್ಗೆ ಮಾಹಿತಿ ಇಲ್ಲ. ಅಗ್ನಿ ಕುಂಡದ ಮೇಲೆ ಕೊಂಬೆಗಳು ಚಾಚಿಕೊಂಡಿದ್ದರು ಇದುವರೆಗೂ ಬೆಂಕಿಯ ತಾಪದಿಂದ ಮರಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಇಂತಹ ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.

    ಶತಮಾನಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದ ಅಯ್ಯಪ್ಪ ಸನ್ನಿಧಿಗೆ ಜನವರಿ 1 ರಂದು ಮಹಿಳೆಯರ ಪ್ರವೇಶ ನಡೆದಿತ್ತು. ಇದಕ್ಕೆ ಕೇರಳ ಸರ್ಕಾರ ಸಂಪೂರ್ಣ ಬೆಂಬಲ ನೀಡಿತ್ತು. ಸದ್ಯ ಮರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಪಾಯದ ಮುನ್ಸೂಚನೆಯೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಂಡ ಹಾಯುವಾಗ ಆಯತಪ್ಪಿ ಬಿದ್ರು-ಬಾಲಕನಿಗೆ ಗಂಭೀರ ಗಾಯ

    ಕೊಂಡ ಹಾಯುವಾಗ ಆಯತಪ್ಪಿ ಬಿದ್ರು-ಬಾಲಕನಿಗೆ ಗಂಭೀರ ಗಾಯ

    ಕಾರವಾರ: ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದಿದರಿಂದ ಅಯ್ಯಪ್ಪ ಮಾಲಾಧಾರಿಗಳು ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ನೆಲಗುಣಿ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಅಯ್ಯಪ್ಪ ಸ್ವಾಮಿ ಭಕ್ತರು ಕೊಂಡ ಹಾಯುವಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಾಲಾಧಾರಿಯಾಗಿದ್ದ 5ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರಜ್ವಲ್ ಜೊತೆಯಲ್ಲಿದ್ದ ಗುರು ಸ್ವಾಮಿ ಮಾಲಾಧಾರಿಗೂ ಗಾಯಗಳಾಗಿವೆ.

    ವಿಡಿಯೋದಲ್ಲಿ ಏನಿದೆ?: ಗುರು ಸ್ವಾಮಿ ಮಾಲಾಧಾರಿಗಳು ತಮ್ಮ ಕೈಯಲ್ಲಿ ಚಿಕ್ಕ ಬಾಲಕರನ್ನು ಹಿಡಿದುಕೊಂಡು ದಾಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಬಂದ ಒಬ್ಬರು ಸಲೀಸಾಗಿ ಕೊಂಡ ಹಾಯುತ್ತಾರೆ. ಎರಡನೇಯದಾಗಿ ಬರುವ ವ್ಯಕ್ತಿ ತಮ್ಮ ಜೊತೆಯಲ್ಲಿ ಪ್ರಜ್ವಲ್ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕೊಂಡದ ಮಧ್ಯಭಾಗದಲ್ಲಿ ಬಂದಾಗ ಕಾಲುಜಾರಿ ಬಿದ್ದಿದ್ದಾರೆ.

    ಈ ಘಟನೆಯಲ್ಲಿ ಗುರು ಸ್ವಾಮಿ ಮತ್ತು ಪ್ರಜ್ವಲ್ ಇಬ್ಬರ ದೇಹದ ಬಹುತೇಕ ಭಾಗಗಳು ಸುಟ್ಟ ಹೋಗಿದೆ ಎಂದು ತಿಳಿದು ಬಂದಿದೆ. ಬಾಲಕ ಪ್ರಜ್ವಲನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.