Tag: Ayyappa Male

  • ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ

    ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ

    ತುಮಕೂರು: ಆತ್ಮಹತ್ಯೆ (Suicide) ರೀತಿ ಬಿಂಬಿಸಿ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ (Missing) ಪೊಲೀಸ್ ಪೇದೆಯೊಬ್ಬರು (Cop) ಅಯ್ಯಪ್ಪ ಮಾಲೆ (Ayyappa Male) ಧರಿಸಿ ಪತ್ತೆಯಾಗಿರುವ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ.

    ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪೇದೆಯಾಗಿರುವ ವೀರೇಶ್ ಕಳೆದೊಂದು ವಾರದ ಹಿಂದೆ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದರು. ಕರೆಯೊಂದರ ಬಳಿ ಮೊಬೈಲ್, ಬಟ್ಟೆ, ಚಪ್ಪಲಿ ಬಿಟ್ಟು ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಕಳೆದ 1 ವಾರದಿಂದ ಪೊಲೀಸರು ವೀರೇಶ್‌ಗಾಗಿ ನಿರಂತರ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

    ಆದರೆ ಇದೀಗ ವೀರೇಶ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಅನಂತಪುರದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವೀರೇಶ್ ಮಾಲೆ ಧರಿಸಿರುವುದು ತಿಳಿದುಬಂದಿದೆ. ಇದನ್ನೂ ಓದಿ: 45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

  • ಅಯ್ಯಪ್ಪ ಮಾಲೆ ಧರಿಸಿ ಮುಂಬೈ ವಿನಾಯಕ ದೇಗುಲದಲ್ಲಿ ಕಾಣಿಸಿಕೊಂಡ ರಾಮ್ ಚರಣ್

    ಅಯ್ಯಪ್ಪ ಮಾಲೆ ಧರಿಸಿ ಮುಂಬೈ ವಿನಾಯಕ ದೇಗುಲದಲ್ಲಿ ಕಾಣಿಸಿಕೊಂಡ ರಾಮ್ ಚರಣ್

    ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಮುಂಬೈನಲ್ಲಿ (Mumbai) ಪ್ರತ್ಯಕ್ಷರಾಗಿದ್ದಾರೆ. ಎಂದಿನಂತೆ ದುಬಾರಿ ಬಣ್ಣದ ಬಟ್ಟೆ, ಶೂ, ಗ್ಲಾಸ್ ಯಾವುದನ್ನೂ ಧರಿಸದೇ ಅಚ್ಚರಿ ಮೂಡಿಸಿದ್ದಾರೆ. ಕಪ್ಪು ಬಣ್ಣದ ಸಾಧಾರಣಾ ಕುರ್ತಾ ಶರ್ಟ್ ಧರಿಸಿ, ಬರಿಗಾಲಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಮ್ ಚರಣ್ ತೇಜ ಶಬರಿಮಲೆ ಅಯ್ಯಪ್ಪ ಮಾಲೆ  (Ayyappa Male) ಧರಿಸಿದ್ದಾರೆ. ಅದೇ ಕಾರಣಕ್ಕೆ ಕಪ್ಪು ಬಣ್ಣದ ಸರಳ ಉಡುಗೆ ತೊಟ್ಟು, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಲ್ಲಿ ಓಡುತ್ತಿದ್ದರು. ಚೆರ್ರಿ ನಿನ್ನೆ ಮುಂಬೈನ ಶ್ರೀ ಸಿದ್ಧಿವಿನಾಯಕ (Siddi Vinayak) ದೇವಸ್ಥಾನದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ಮಗಳು ಕ್ಲಿನ್ ಕ್ಲಾರ್ ಜನಿಸಿದ ಬಳಿಕ ಅಯ್ಯಪ್ಪಮಾಲೆ ಧರಿಸಿದ್ದ ರಾಮ್ ನಿನ್ನ ದೀಕ್ಷೆಯನ್ನು ಮುಕ್ತಾಯಗೊಳಿಸಿದ್ದಾರೆ.

    ತ್ರಿಬಲ್ ಆರ್ ಸೂಪರ್ ಡೂಪರ್ ಹಿಟ್ ಬಳಿಕ ರಾಮ್ ಚರಣ್ ಮಾಲೆ ಧರಿಸಿದ್ದ ಅವರು, ಕೇವಲ ಒಂದೆರಡು ದಿನಗಳಿಗಾಗಿ ಮಾಲೆ ಧರಿಸಿರಲಿಲ್ಲ. ಬದಲಿಗೆ ಬರೋಬ್ಬರಿ 41 ದಿನಗಳ ಕಾಲ ಅವರು ಮಾಲಾಧಾರಿಯಾಗಿ ಅಯ್ಯಪ್ಪನ ಸ್ಮರಣೆ ಮಾಡಿದ್ದರು. ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳು 41 ದಿನಗಳ ವರೆಗೆ ಪಾಲಿಸಿದ್ದರು, ಇದೀಗ ಮಗಳ ಹುಟ್ಟಿದ ಬಳಿಕ ಮಾಲೆ ಧರಿಸಿದ್ದ ರಾಮ್ ಚರಣ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನದ ಬಳಿಕ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ.

     

    ದೇಗುಲಕ್ಕೆ ಚೆರ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಸದ್ಯ ರಾಮ್ ಚರಣ್ ಶಂಕರ್ ನಿರ್ದೆಶನದ ಗೇಮ್ ಚೇಂಜರ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಾವಿದರು ದೇವರಲ್ಲ: ಅಪ್ಪು ಅಭಿಮಾನಿಯ ನಡೆಗೆ ಬೇಸರಿಸಿಕೊಂಡ ಪ್ರಥಮ್

    ಕಲಾವಿದರು ದೇವರಲ್ಲ: ಅಪ್ಪು ಅಭಿಮಾನಿಯ ನಡೆಗೆ ಬೇಸರಿಸಿಕೊಂಡ ಪ್ರಥಮ್

    ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ (Hospet) ಅಪ್ಪು ಹುಡುಗರು ಡಾ.ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿ ಬಳಗದ ವತಿಯಿಂದ ‘ಅಪ್ಪು ದೇವರ ಮಾಲೆ ವ್ರತ’ ಆಚರಣೆಯನ್ನು ಮಾಡಲಾಗುತ್ತಿದೆ. ಅಯ್ಯಪ್ಪ ಸ್ವಾಮಿಗೆ ವ್ರತ ಆಚರಿಸುವಂತೆ, ಅಪ್ಪು ದೇವರ ಮಾಲೆ ವ್ರತದಲ್ಲೂ ಹಲವು ನಿಯಮಗಳನ್ನು ಮತ್ತು ಆಚರಣೆಯ ಮಾಡುವ ವಿಧಾನದ ಕುರಿತು ಬಳಗವು ಪೋಸ್ಟರ್ ಪ್ರಿಂಟ್ ಮಾಡಿದೆ. ಈ ಕುರಿತು ಬಿಗ್ ಬಾಸ್ ವಿನ್ನರ್ ಪ್ರಥಮ್ (Pratham) ಕಿಡಿಕಾರಿದ್ದಾರೆ. ಕಲಾವಿದರನ್ನು ದೇವರು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಅಪ್ಪು ದೇವರ ಮಾಲೆ ಧರಿಸಿ ವ್ರತ ಆಚರಣೆ ಮಾಡುವವರು ಹತ್ತು ಹಲವು ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಪೋಸ್ಟರ್ ನಲ್ಲಿರುವ ವಿಧಾನಕ್ಕೂ ಮತ್ತು ಅಯ್ಯಪ್ಪ ಮಾಲೆ (Ayyappa Male) ಹಾಕುವವರು ಆಚರಿಸುವ ನಿಯಮಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಹಾಗಾಗಿ ಪ್ರಥಮ್ ಬೇಸರಿಸಿಕೊಂಡಿದ್ದಾರೆ. ‘ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ. ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ, ಶ್ರದ್ಧಾ ಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಪ್ರಥಮ್ ಮಾತಿಗೆ ಕೆಲವರು ಬೆಂಬಲ ಸೂಚಿಸಿದ್ದೂ, ಇನ್ನೂ ಕೆಲವರು ವಿರೋಧಿಸಿದ್ದಾರೆ. ನಮ್ಮ ಪಾಲಿಗೆ ಪುನೀತ್ ಅವರೇ ದೇವರು. ಹಾಗಾಗಿ ನಾವು ವ್ರತ ಮಾಡುತ್ತೇವೆ. ಕೇಳುವುದಕ್ಕೆ ನೀನ್ಯಾರು? ಅಂದವರೂ ಇದ್ದಾರೆ. ವ್ರತ ಆಚರಿಸಿದರೆ ಇದರಲ್ಲಿ ಧಾರ್ಮಿಕ ನಂಬಿಕೆಯ ಅತಿರೇಕ ಹೇಗೆ ಆಗುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ಕುರಿತು ಆರೋಗ್ಯಕರ ಚರ್ಚೆಯಂತೂ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ಚರ್ಚೆಗಳು ಏನೇ ನಡೆದರೂ, ಮಾರ್ಚ್ 1 ರಿಂದ ಮಾರ್ಚ್ 17ರ ತನಕ ಈ ಆಚರಣೆಯನ್ನು ಮಾಡಲು ಪುನೀತ್ ಅಭಿಮಾನಿಗಳು ತಯಾರಾಗಿದ್ದಾರೆ. ಹೊಸಪೇಟೆಯ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಮಾಲೆ ಧರಿಸುವುದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k