Tag: ayyappa maladhari

  • ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಶಬರಿಮಲೆಯಲ್ಲಿ  ಕೂಗು

    ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಶಬರಿಮಲೆಯಲ್ಲಿ ಕೂಗು

    ತಿರುವನಂತಪುರಂ: ಅಯ್ಯಪ್ಪ ಮಾಲಾಧಾರಿ ಬಾಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು ಶಬರಿಮಲೆಯಲ್ಲಿ ಪ್ರತಿಧ್ವನಿಸಿದೆ.

    ಬಾದಾಮಿ ಪಟ್ಟಣದ ನಿವಾಸಿಯಾಗಿರುವ ಹನಮಂತ ಖಾನಗೌಡ್ರ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದಾರೆ. ಹನುಮಂತರವರು ಸಿದ್ದುರವರು ಮುಂದಿನಸಾರಿ ಸಿಎಂ ಆಗಲಿ ಅಂತಾ ಅಯ್ಯಪ್ಪ ಸ್ವಾಮಿ ಹತ್ತಿರ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ – ಇಬ್ಬರು ಅರೆಸ್ಟ್, ಮದುಮಗ ನಾಪತ್ತೆ

    ಶಬರಿಮಲೆಗೆ ತೆರಳುವ ದಾರಿಯುದ್ದಕ್ಕೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಕೋರುತ್ತಾ ಹೆಜ್ಜೆ ಹಾಕಿದ್ದಾರೆ.

  • ಉಡುಪಿಯ ಅಯ್ಯಪ್ಪ ಶಿಬಿರದಲ್ಲಿ ಮಾಲಾಧಾರಿಗೆ ಆವೇಶ

    ಉಡುಪಿಯ ಅಯ್ಯಪ್ಪ ಶಿಬಿರದಲ್ಲಿ ಮಾಲಾಧಾರಿಗೆ ಆವೇಶ

    ಉಡುಪಿ: ಕಟ್ಟುನಿಟ್ಟಿನ ವ್ರತಾಚರಣೆಯನ್ನು ಮಾಡಿ ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಯೊಬ್ಬರಿಗೆ ಉಡುಪಿಯಲ್ಲಿ ಮಣಿಕಂಠನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮೈಮೇಲೆ ಆವೇಶ ಬಂದಿರುವ ಘಟನೆ ನಡೆದಿದ್ದು, ಗುರುಸ್ವಾಮಿಗಳು ತೀರ್ಥ ಮತ್ತು ಭಸ್ಮ ಸಂಪ್ರೋಕ್ಷಣೆ ಮಾಡಿಸಿದ್ದಾರೆ.

    ಉಡುಪಿಯ ಕಸ್ತೂರಬಾ ನಗರದಲ್ಲಿ ಮಣಿಕಂಠನಿಗೆ ಪೂಜೆ ನಡೆಯುತ್ತಿತ್ತು. ಆ ವೇಳೆಗೆ ಅಯ್ಯಪ್ಪ ಸ್ವಾಮಿಯ ಭಜನೆ ಮಾಡುತ್ತಿದ್ದ ಮಾಲಾಧಾರಿಯೊಬ್ಬರು ಆವೇಶಭರಿತರಾಗಿದ್ದಾರೆ. ಭಕ್ತರ ಗುಂಪಿನಲ್ಲಿದ್ದ ಮಾಲಾಧಾರಿಗೆ ಕೆಲಕಾಲ ಮೈಮೇಲೆ ಆವೇಶ ಬಂದಿದ್ದು, ಗುರುಸ್ವಾಮಿಗಳು ತೀರ್ಥ ಪ್ರೋಕ್ಷಣೆ ಮಾಡಿಸಿದ ನಂತರ ಸಹಜ ಸ್ಥಿತಿಗೆ ಬಂದಿದ್ದಾರೆ.

    ಮುಂಬೈಯ ಶ್ರೀ ಧರ್ಮಸ್ಥಳ ಅಯ್ಯಪ್ಪ ಭಕ್ತವೃಂದ ಕೊರೊನಾ ಸಂಕಟದ ನಡುವೆ ಶಬರಿಮಲೆ ಯಾತ್ರೆ ಮಾಡುತ್ತಿದೆ. ಈ ಶಿಬಿರದಲ್ಲಿ 67 ಮಾಲಾಧಾರಿಗಳಿದ್ದು, ಕಳೆದ 40 ವರ್ಷದಿಂದ ಯಾತ್ರೆ ಮಾಡುತ್ತಿದ್ದಾರೆ. ತಂಡದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದವರು ಮತ್ತು ಮಹಾರಾಷ್ಟ್ರದವರು ಇದ್ದಾರೆ.

    ಹೋಟೆಲ್, ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಉದ್ಯಮ ಮಾಡುವ ಗೆಳೆಯರ ತಂಡ ಪ್ರತಿವರ್ಷ ಯಾತ್ರೆಯನ್ನು ಮಾಡುತ್ತಿದ್ದಾರೆ. ಮುಂಬೈನಿಂದ ರೈಲು ಮೂಲಕ ಬಂದ ಅಯ್ಯಪ್ಪ ಮಾಲಾಧಾರಿಗಳು, ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮಾಡಿ ಉಡುಪಿಯ ಕಸ್ತೂರ್‌ಬಾ ನಗರದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕೊರೊನಾ

    ಪೂಜೆಯ ಸಂದರ್ಭ ಸ್ಥಳೀಯರು ವೃತಾಚರಣೆಯನ್ನು ಕೈಗೊಂಡು ಮುಂಬೈನ ತಂಡದ ಜೊತೆ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗುರುಸ್ವಾಮಿಗಳಿಂದ ವಿಶೇಷ ಪೂಜೆ ಹಾಗೂ ಆರತಿ ಸೇವೆ ನಡೆಯಿತು.

    ಕೊರೊನಾ ಮಾರ್ಗಸೂಚಿ ಇರುವುದರಿಂದ ಶಬರಿಮಲೆಯಲ್ಲಿ ಪ್ರತಿದಿನ ಸುಮಾರು 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಮಕರ ಸಂಕ್ರಾಂತಿ ಜ್ಯೋತಿಯ ಸಂದರ್ಭ ಸರ್ಕಾರ ಯಾವೆಲ್ಲ ನಿಯಮಗಳನ್ನು ರೂಪಿಸುತ್ತದೆ ಎಂಬ ಬಗ್ಗೆ ಅಯ್ಯಪ್ಪ ಭಕ್ತರಲ್ಲಿ ಕುತೂಹಲ ಇದೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

  • ಭದ್ರಾ ನದಿಯಲ್ಲಿ ಈಜಲು ಹೋಗಿ ಅಯ್ಯಪ್ಪ ಮಾಲಾಧಾರಿ ಸಾವು

    ಭದ್ರಾ ನದಿಯಲ್ಲಿ ಈಜಲು ಹೋಗಿ ಅಯ್ಯಪ್ಪ ಮಾಲಾಧಾರಿ ಸಾವು

    ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋದ ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದ ಶಿವಪ್ರಸಾದ್ (35) ಮೃತ ದುರ್ದೈವಿ. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಗುಂಡ್ಲುಪೇಟೆಯಿಂದ 22 ಜನ ಮಾಲಾಧಾರಿಗಳು ಟಿಟಿ ವಾಹನದಲ್ಲಿ ಹೆಬ್ಬಾಳೆ ಸೇತುವೆಗೆ ಬಂದಿದ್ದರು. ಅಲ್ಲಿಯೇ ವಾಹನ ನಿಲ್ಲಿಸಿ ಎಲ್ಲರೂ ಸ್ನಾನಕ್ಕೆ ಇಳಿದಿದ್ದಾಗ ಶಿವಪ್ರಸಾದ್ ಅವರು ಭದ್ರಾ ನದಿಯ ಆಳದ ಅರಿವಿಲ್ಲದ ಮುಂದೆ ಹೋಗಿದ್ದಾರೆ. ಮುಂದೆ ಹೋದಂತೆ ಆಳದ ಇದ್ದಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಶಿವಪ್ರಸಾದ್ ಅವರು ನೀರಿಗೆ ಇಳಿಯುವ ಮುನ್ನ ಹೆಬ್ಬಾಳೆ ಸೇತುವೆ ಅಕ್ಕಪಕ್ಕದ ಅಂಗಡಿಯವರು ಹೋಗಬೇಡಿ ತುಂಬಾ ಆಳ ಇದೆ ಎಂದಿದ್ದರು. ಆದರೆ ಸ್ಥಳೀಯರ ಮಾತು ಕೇಳದ ನದಿಗೆ ಇಳಿದು ಮುಳುಗುತ್ತಿದ್ದ ಶಿವಪ್ರಸಾದ್ ಅವರ ರಕ್ಷಣೆಗೆ ಮುಂದಾಗ ಕೆಲವರು ಒಬ್ಬರ ಕೈ ಒಬ್ಬರು ಹಿಡಿಕೊಂಡು ಎಳೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ ನೀರು ರಭಸವಾಗಿ ಹರಿಸುತ್ತಿದ್ದರಿಂದ ಶಿವಪ್ರಸಾದ್ ಮೃತಪಟ್ಟಿದ್ದಾರೆ.

    ಕೆಲ ಸಮಯದ ಬಳಿಕ ಶಿವಪ್ರಸಾದ್ ಅವರ ಮೃತದೇಹ ಪತ್ತೆಯಾಗಿದೆ. ಶಿವಪ್ರಸಾದ್ ಅವರಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಘಟನಾ ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

    ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!

    ಮಂಗಳೂರು: ಶಬರಿಮಲೆ ವಿಚಾರದ ಹಿನ್ನೆಲೆ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದ್ದು, ಗುರುವಾರ ರಾತ್ರಿ ಕಿಡಿಗೇಡಿಗಳು ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡದ ಮಂಜೇಶ್ವರ ಬಳಿಯ ಕುಂಜತ್ತೂರಿನಲ್ಲಿ ನಡೆದಿದೆ.

    ಹಲ್ಲೆಗೊಳಗಾದವರನ್ನು ಕುಂಜತ್ತೂರಿನ ನಿವಾಸಿಗಳಾದ ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಎಂದು ಗುರುತಿಸಲಾಗಿದೆ. ಈ ಹಲ್ಲೆಯಲ್ಲಿ ಇಬ್ಬರು ಗಂಭೀರ ಗಾಯವಾಗಿದ್ದು, ಎಲ್ಲರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಷ್ಟೇ ಅಲ್ಲದೆ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೂ ತಲ್ವಾರ್‍ನಿಂದ ಹಲ್ಲೆ ಮಾಡಲಾಗಿದೆ. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಕಾಸರಗೋಡಿನಲ್ಲಿ ಮುಂದುವರಿದ ಹಿಂಸಾಕೃತ್ಯ ಹಿನ್ನೆಲೆ ಇಂದು ಮಂಜೇಶ್ವರ ತಾಲೂಕಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಗೆಯೇ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಈ ಸಂಬಂಧ ಹಿಂಸಾಚಾರ ಮುಂದುವರಿದು ಕೋಮುದ್ವೇಷಕ್ಕೆ ತಿರುಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರವಾಗಿ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಎಲ್ಲೆಡೆ ಈ ವಿಚಾರವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ, ಹಿಂಸಾಚಾರ, ಕಲ್ಲು ತೂರಾಟ ಹೀಗೆ ಪ್ರತಿಭಟನಾಕಾರರು ಸಿಡಿದೆದ್ದಿದ್ದಾರೆ. ಇದೇ ಬಿಸಿ ಗಡಿಜಿಲ್ಲೆ ಕಾಸರಗೋಡಿಗೂ ತಟ್ಟಿದೆ. ಗುರುವಾರ ಹಲವೆಡೆ ಕಲ್ಲು ತೂರಾಟ ಹಾಗೂ ಗಲಾಟೆಗಳು ಕೂಡ ನಡೆದಿತ್ತು. ಇಂದು ಕೂಡ ಕೇರಳದ ಕಾಸರಗೋಡಿನಲ್ಲಿ ಹಿಂಸಾಕೃತ್ಯ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಾಸಕರ ಭರ್ಜರಿ ಡ್ಯಾನ್ಸ್- ವಿಡಿಯೋ ನೋಡಿ

    ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಾಸಕರ ಭರ್ಜರಿ ಡ್ಯಾನ್ಸ್- ವಿಡಿಯೋ ನೋಡಿ

    ರಾಯಚೂರು: ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಮಾಲಾಧಾರಿಗಳ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ.

    ಬುಧವಾರದಂದು ರಾಯಚೂರಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಲಾಧಾರಿಗಳ ಶೋಭಾಯಾತ್ರೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರ ಜೊತೆ ಕುಣಿದು ಖುಷಿಪಟ್ಟಿದ್ದಾರೆ. ಶಿವರಾಜ್ ಪಾಟೀಲ್ ಅವರು ದೇವಾಲಯದಲ್ಲಿ ಕುಣಿದಿರೋ ವಿಡಿಯೋವನ್ನು ಸ್ಥಳದಲ್ಲಿದ್ದವರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಂದೆಡೆ ಶಾಸಕರ ನೃತ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನುಳಿದವರು ರಾಯಚೂರು ನಗರದ ಸಮಸ್ಯೆಗಳನ್ನ ನೋಡುವವರು ಯಾರು ಅಂತ ಪ್ರಶ್ನಿಸಿದ್ದಾರೆ. ಕಳೆದ ಒಂದು ವಾರದಿಂದ ಇಡೀ ರಾಯಚೂರು ನಗರಕ್ಕೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಆದ್ರೆ ಶಾಸಕರು ಮಾತ್ರ ಖುಷಿಯಿಂದ ಕುಣಿಯುತ್ತಿದ್ದಾರೆ ಅಂತ ಕೆಲವರು ಗರಂ ಆಗಿದ್ದಾರೆ.

    ಸಮಸ್ಯೆಗಳತ್ತ ಗಮನಹರಿಸುವ ಬದಲು ಡ್ಯಾನ್ಸ್ ಮಾಡಿದ ಶಾಸಕರ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

    https://www.youtube.com/watch?v=IRrUIdFUKOA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv