Tag: Ayushmann Khurrana

  • ನಾನು ಎಲ್ಲ ಕನ್ನಡ ಅಭಿಮಾನಿಗಳನ್ನ ಇಷ್ಟಪಡುತ್ತೇನೆ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ

    ನಾನು ಎಲ್ಲ ಕನ್ನಡ ಅಭಿಮಾನಿಗಳನ್ನ ಇಷ್ಟಪಡುತ್ತೇನೆ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ

    ಬೆಂಗಳೂರು: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕನ್ನಡ ಅಭಿಮಾನಿಗಳು ಎಂದರೇ ನನಗೆ ಇಷ್ಟ, ನಾನು ಒಳ್ಳೇ ಹುಡುಗ ಎಂದು ಹೇಳಿದ್ದಾರೆ.

    ಕನ್ನಡತಿ ಪ್ರಣೀತಾ ಸುಭಾಷ್ ಅವರೊಂದಿಗೆ ಅಲ್ಬಂಸಾಂಗ್ ಒಂದರಲ್ಲಿ ನಟಿಸಿದ್ದ ಬಾಲಿವುಡ್ ನಟ ಆಯುಷ್ಮಾನ್ ಕುರಾನ್ ಪ್ರಣೀತಾ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಕನ್ನಡದಲ್ಲೇ ಮಾತನಾಡಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ಸದ್ಯ ಈ ವಿಡಿಯೋವನ್ನು ನಟಿ ಪ್ರಣೀತಾ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಯಾರು ಕನ್ನಡ ಕಲಿಯುತ್ತಿದ್ದಾರೆ ನೋಡಿ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ಪ್ರಣೀತಾ ಹಾಗೂ ಆಯುಷ್ಮಾನ್ ಖುರಾನಾ ಇಬ್ಬರು ಒಟ್ಟಿಗೆ ಕಾಣಿಸಿದ್ದ ಆಲ್ಬಂಸಾಂಗ್ ಅನ್ನು ಸುರೇಶ್ ತ್ರಿವೇಣಿ ನಿರ್ದೇಶಿಸಿದ್ದರು. ಈ ಆಲ್ಬಂನ `ಚನ್ ಕಿತ್ತಾನ್’ ಶೀರ್ಷಿಕೆ ಅಡಿ ಬಿಡುಗಡೆಯಾಗಿದ್ದ ಹಾಡಿನಲ್ಲಿ ಪ್ರಣೀತಾ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಒಂದೇ ಹಾಡಿನಲ್ಲಿ ಉತ್ತಮ ಸಂದೇಶ, ಸನ್ನಿವೇಶ ಮೂಡುವಂತೆ ಮಾಡಿ ನಿರ್ದೇಶಕರು ಸೈ ಎನಿಸಿಕೊಂಡಿದ್ದರು.

    ಹಾಡಿನ ಕುರಿತು ಬಾಲಿವುಡ್ ನ ಹಲವು ಸ್ಟಾರ್ ಸೆಲೆಬ್ರೆಟಿಗಳು ನಟಿ ಪ್ರಣೀತಾ ಅವರಿಗೆ ಅಭಿನಂದನೆ ತಿಳಿಸಿದ್ದರು. ಅಲ್ಲದೇ ಹಾಡಿಗೆ ಜನತೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಣೀತಾ ಸಂತಸ ವ್ಯಕ್ತಪಡಿಸಿದ್ದರು.