Tag: Ayushmann Khurrana

  • ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ರಶ್ಮಿಕಾ (Rashmika Mandanna) ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ `ಥಮಾ’ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿರುವ ರಶ್ಮಿಕಾ ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸ್ಕೊಂಡಿದ್ದಾರೆ.

    `ಥಮಾ’ (Thama) ಚಿತ್ರದ ಟ್ರೈಲರ್‌ ರಿಲೀಸ್ (Trailer Release) ಆಗಿದ್ದು, ರಶ್ಮಿಕಾ ದೆವ್ವದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಆಯುಷ್ಮಾನ್ ಖುರಾನ್‌ (Ayushmann Khurrana) ಜೊತೆ ತೆರೆ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ಥಮಾ ಒಂದು ಹಾರರ್‌ ಸಿನಿಮಾ ಆಗಿದ್ದು,ಫ್ಯಾಂಟಸಿ ಜೊತೆ ಕಾಮಿಡಿ ಕಥೆಯನ್ನು ಹೊಂದಿದೆ. ಹಿಂದ್ಯಾವತ್ತೂ ರಶ್ಮಿಕಾ ಮಂದಣ್ಣ ಈ ರೀತಿಯ ಪಾತ್ರದಲ್ಲಿ ಕಾಣಿಸ್ಕೊಂಡಿರಲಿಲ್ಲ. ಇದೀಗ ತಡ್ಕಾ ಪಾತ್ರದಲ್ಲಿ ಮನುಷ್ಯನನ್ನು ಪ್ರೀತಿಸುವ ದೆವ್ವವಾಗಿ ವಿಭಿನ್ನ ರೂಪದಲ್ಲಿ ತೆರೆ ಮೇಲೆ ಬರಲಿದ್ದಾರೆ. ಭಯ ಹುಟ್ಟಿಸಿ, ಎಮೋಷನಲ್ ಆಗಿ ಕನೆಕ್ಟ್ ಆಗುತ್ತಾರೆ. ಇದೀಗ ರಶ್ಮಿಕಾ ಅವರ ಹೊಸ ಪಾತ್ರದ ಆಯ್ಕೆ ಮತ್ತೆ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

  • ಥಮಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ

    ಥಮಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ

    ಶ್ಮಿಕಾ ಮಂದಣ್ಣ ಅಭಿನಯದ ವಿಭಿನ್ನ ಕಾನ್ಸೆಪ್ಟ್ ನ ಥಮಾ (Thama) ಸಿನಿಮಾದ ಬಿಗ್ ಅಪ್ ಡೇಟ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಬಿಗ್ ಅಪ್ ಡೇಟ್ ಇದೇ ಮಂಗಳವಾರ (ಆ.19) ರಂದು ಅಭಿಮಾನಿಗಳಿಗೆ ಸಿಗಲಿದ್ದು, ಈ ಅಪ್ ಡೇಟ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

    ಥಮಾ ಸಿನಿಮಾ ದೀಪಾವಳಿಗೆ ವಿಶ್ವದಾದ್ಯಂತ ತೆರೆಕಾಣಲಿದೆ. ಆದಿತ್ಯ ಸರ್ಪೋತ್ದಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನ ದಿನೇಶ್ ವಿಜನ್ ಹಾಗೂ ಅಮರ್ ಕೌಶಿಕ್ ನಿರ್ಮಾಣ ಮಾಡಿದ್ದಾರೆ.

     

    View this post on Instagram

     

    A post shared by Maddock Films (@maddockfilms)

    ಹಾರರ್ ಕಾಮಿಡಿ ಸಬ್ಜೆಕ್ಟ್ ನ ಥಮಾ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಜೊತೆಗೆ ಆಯುಶ್ಮಾನ್ ಖುರಾನ ನಟಿಸಿದ್ದಾರೆ. ಇದೇ ಮಂಗಳವಾರ ಬೆಳಗ್ಗೆ 11.11ಕ್ಕೆ ಮಹತ್ವದ ಅಪ್ ಡೇಟ್ ನೀಡೋದಾಗಿ ರಶ್ಮಿಕಾ ಜಾಲತಾಣದಲ್ಲಿ ಹಂಚಿಕೊಂಡಿರೋದಕ್ಕೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುಷ್ಪಾ ಹಾಗೂ ಛಾವಾ ಸಿನಿಮಾದ ಸಕ್ಸಸ್ ನಂತರ ಥಮಾ ಸಿನಿಮಾದ ಹೊಸ ಅಪ್ ಡೇಟ್ ಸಿಕ್ಕಿರೋದು ರಶ್ಮಿಕಾ ಭಕ್ತಗಣಕ್ಕೆ ಸಂಭ್ರಮ ಜೋರಾಗಿದೆ.

  • ‘ಸಿಕಂದರ್’ ಸೋಲಿನ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ

    ‘ಸಿಕಂದರ್’ ಸೋಲಿನ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಸಿಕಂದರ್’ ಚಿತ್ರದ ಸೋಲಿನ ಬೆನ್ನಲ್ಲೇ ಬಾಲಿವುಡ್‌ನ ‘ಥಾಮಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೋಲಿನ ಕಹಿ ನಡುವೆ ಹೊಸ ಸಿನಿಮಾದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ರೀಲ್ಸ್ ಕೇಸ್: ‘ಬಿಗ್ ಬಾಸ್’ ರಜತ್ ಮತ್ತೆ ಅರೆಸ್ಟ್, ವಿನಯ್‌ಗೂ ಬಂಧನ ಭೀತಿ

    ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ಜೊತೆ ನಟಿಸಿದ್ದ ‘ಸಿಕಂದರ್’ (Sikandar) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ‘ಸಿಕಂದರ್’ ಚಿತ್ರ ಹೀನಾಯವಾಗಿ ಸೋತಿದ್ರೂ ಕೂಡ ರಶ್ಮಿಕಾ ಮಂದಣ್ಣಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಸದ್ಯ ಅವರು ‘ಥಾಮಾ’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಡೈರೆಕ್ಟರ್ ಅದಿತ್ಯ ನಿರ್ದೇಶನದ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಅವರೊಂದಿಗೆ ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ರಿವೀಲ್ ಮಾಡಿದೆ.

    ಮೊದಲ ಬಾರಿಗೆ ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸುತ್ತಿರೋದ್ರಿಂದ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ‘ಸ್ತ್ರೀ 2’ ನಿರ್ಮಿಸಿ ಗೆದ್ದಿದ್ದ ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆ ‘ಥಾಮಾ’ (Thama) ಚಿತ್ರವನ್ನು ನಿರ್ಮಾಣ ಮಾಡ್ತಿದೆ.

  • ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ (Animal) ಸಿನಿಮಾ ಸಕ್ಸಸ್ ಆದ್ಮೇಲೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ‘ಸಿಖಂದರ್’ ಬಳಿಕ ಮತ್ತೊಂದು ಬಂಪರ್ ಅವಕಾಶ ರಶ್ಮಿಕಾಗೆ ಸಿಕ್ಕಿದೆ.

    ಬಾಲಿವುಡ್ ನಟ ಆಯುಷ್ಮಾನ್ ಖುರಾನಾಗೆ (Ayushmann Khurrana) ರಶ್ಮಿಕಾ ನಾಯಕಿಯಾಗಿ ಫೈನಲ್ ಆಗಿದ್ದಾರೆ. ‘ಮುಂಜ್ಯ’ ಚಿತ್ರದ ನಿರ್ದೇಶಕ ಆದಿತ್ಯಾ ಸತ್ಪೋದರ್ ಡೈರೆಕ್ಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ:ಲವ್‌, ಬ್ರೇಕಪ್‌ ಬಗ್ಗೆ ಸ್ಫೋಟಕ ವಿಚಾರ ಬಿಚ್ಚಿಟ್ಟ ‘ಕಿರಾತಕ’ ನಟಿ

    ಹಾರರ್ ಕಾಮಿಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ರಶ್ಮಿಕಾ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದೆಯಂತೆ. ನವೆಂಬರ್‌ನಿಂದ ಸಿನಿಮಾ ಶೂಟಿಂಗ್ ಶುರು ಆಗಲಿದೆ ಎನ್ನಲಾಗಿದೆ. ಮೊದಲ ಬಾರಿಗೆ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.


    ಅಂದಹಾಗೆ, ಪುಷ್ಪ 2, ಅನಿಮಲ್ 2, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

  • ಸೌರವ್ ಗಂಗೂಲಿ ಬಯೋಪಿಕ್‌ಗೆ ರಣ್‌ಬೀರ್ ಬದಲು ಮತ್ತೊಬ್ಬ ನಟನ ಎಂಟ್ರಿ

    ಸೌರವ್ ಗಂಗೂಲಿ ಬಯೋಪಿಕ್‌ಗೆ ರಣ್‌ಬೀರ್ ಬದಲು ಮತ್ತೊಬ್ಬ ನಟನ ಎಂಟ್ರಿ

    ಬಾಲಿವುಡ್ (Bollywood)  ಅಂಗಳದಲ್ಲಿ ಸೌರವ್ ಗಂಗೂಲಿ (Sourav Ganguly) ಬರುವ ಬಗ್ಗೆ ಈ ಹಿಂದೆಯೇ ಬಿಗ್ ಅಪ್‌ಡೇಟ್ ನೀಡಿದ್ದರು. ಸೌರವ್ ಗಂಗೂಲಿ ರೋಲ್‌ನಲ್ಲಿ ರಣಬೀರ್ ಕಪೂರ್ ನಟಿಸಬೇಕಿತ್ತು, ಆದರೆ ಸೌರವ್ ಪಾತ್ರಕ್ಕೆ ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಕಾಣಿಸಿಕೊಳ್ಳುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

    ಚಿತ್ರರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜಾಸ್ತಿಯಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಜೀವನವನ್ನು ಈಗಾಗಲೇ ಬೆಳ್ಳಿಪರದೆ ತೋರಿಸುವ ಟ್ರೆಂಡ್ ಶುರುವಾಗಿದೆ. ಕೆಲ ವರ್ಷಗಳ ಹಿಂದೆ ಕ್ರಿಕೆಟಿಗ ಎಂ.ಎಸ್ ಧೋನಿ (M.s Dhoni) ಬಯೋಪಿಕ್ ಸಿನಿಮಾ ಬಂದಿತ್ತು. ಚಿತ್ರಮಂದಿರದಲ್ಲಿ ಸಿನಿಮಾ ಕಮಾಲ್ ಮಾಡಿತ್ತು. ಈಗ ಮತ್ತೊಬ್ಬ ಕ್ರಿಕೆಟಿಗ ಸೌರವ್ ಗಂಗೂಲಿ ಜೀವನದ ಬಗ್ಗೆ ಬಯೋಪಿಕ್ ಬರುವ ಈ ಹಿಂದೆಯೇ ತಿಳಿಸಲಾಗಿತ್ತು. ಸೌರವ್ ಪಾತ್ರ ರಣಬೀರ್ ಕಪೂರ್ ನಟಿಸೋದು ಫೈನಲ್ ಆಗಿತ್ತು. ಆದರೆ ಈಗ ಹೀರೋ ಚೇಂಜ್ ಆಗಿದ್ದಾರೆ.

    ಈಗಾಗಲೇ ಸಂಜಯ್ ದತ್ ಬಯೋಪಿಕ್ ಮಾಡಿ ನಟಿಸಿ ಸೈ ಎನಿಸಿಕೊಂಡಿರುವ ರಣ್‌ಬೀರ್ ಕಪೂರ್ (Ranbir Kapoor) ಅವರು ಸೌರವ್ ಬಯೋಪಿಕ್‌ಗೆ ಸೆಲೆಕ್ಟ್ ಆಗಿದ್ದರು. ಆದರೆ ಈಗ ಸಿನಿಮಾದಲ್ಲಿ ಕೊಂಚ ಬದಲಾವಣೆ ಆಗಿದೆ. ರಣಬೀರ್ ಬದಲು ಆಯುಷ್ಮಾನ್ ಖುರಾನ್ ನಟಿಸಲಿದ್ದಾರೆ. ಸೌರವ್ ಗಂಗೂಲಿ ರೋಲ್‌ಗೆ ನಟ ಆಯುಷ್ಮಾನ್ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನೂ ಓದಿ:27 ವರ್ಷಗಳ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕೀರವಾಣಿ ಎಂಟ್ರಿ

    ಒಂದ್ ಕಡೆ ರಣ್‌ಬೀರ್- ಆಯುಷ್ಮಾನ್ ಹೆಸರು ಚಾಲ್ತಿಯಲ್ಲಿದ್ರೆ, ಮತ್ತೊಂದು ಕಡೆ ಈ ಚಿತ್ರಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajanikanth) ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ.? ಈ ಬಗ್ಗೆ ಚಿತ್ರತಂಡ ಹೇಳುವವರೆಗೂ ಕಾದುನೋಡಬೇಕಿದೆ.

  • ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

    ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಕುರಿತಾದ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಾಹಿರಾ ತನ್ನದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಕೆಲವು ಸಂಗತಿಗಳು ವೈರಲ್ ಆಗಿದೆ. ಆಯುಷ್ಮಾನ್ ಮಾಡಿರುವ ತಮಾಷೆಯ ಘಟನೆಯನ್ನು ಬರೆದುಕೊಂಡಿದ್ದಾರೆ. ಈ ಪುಸ್ತಕವು ಮೊದಲ ಬಾರಿ ತಾಯಿಯಾಗುವ ಮಹಿಳೆಯರು ಮತ್ತು ಸಮಾಜದ ಇತರ ಮಹಿಳೆಯರಿಂದ ಸ್ವೀಕರಿಸುವ ತೀರ್ಪು ಕುರಿತು ವಿವರಿಸಿದ್ದಾರೆ. ಜೊತೆಗೆ ಪತಿ ಆಯುಷ್ಮಾನ್ ತನ್ನ ಎದೆ ಹಾಲನ್ನು ಸೇವಿಸಿದರ ಬಗ್ಗೆ ಹೇಳಿಕೊಂಡಿದ್ದಾರೆ.

    ಆಯುಷ್ಮಾನ್ ಪತ್ನಿ ತಾಹಿರಾ ಎರಡನೇ ಹನಿಮೂನ್‍ಗೆ ಬ್ಯಾಂಕಾಕ್ ಹೋಗಲು ನಿರ್ಧರಿಸಿದ್ದರು. ಮೂರು ದಿನಗಳ ಪ್ರವಾಸ ಇದಾಗಿತ್ತು. ಈ ಸಮಯದಲ್ಲಿ ತನ್ನ ಏಳು ತಿಂಗಳ ಮಗು ವಿರಾಜ್‍ವೀರ್‍ನನ್ನು ತನ್ನ ಹೆತ್ತವರ ಆರೈಕೆಯಲ್ಲಿ ಬಿಟ್ಟುಹೋಗುವುದೆಂದು ನಿರ್ಧರಿಸಿದ್ದರು. ತಾಹಿರಾ ಮತ್ತು ಆಯುಷ್ಮಾನ್ ಬ್ಯಾಂಕಾಕ್‍ಗೆ ಹೊರಡುವ ಮೊದಲು ಮಗುವಿಗಾಗಿ ಕೆಲವು ಬಾಟಲಿಯಲ್ಲಿ ಎದೆ ಹಾಲು ತುಂಬಿಸಿ ನಂತರ ವಿಮಾನ ನಿಲ್ದಾಣಕ್ಕೆ ಹೊರಟು ಬಂದರು. ಏರ್ಪೋರ್ಟ್ ತಲುಪಿ ಅಲ್ಲಿ ತಪಾಸಣೆ ಮಾಡುವ ವೇಳೆ ತಾಹಿರಾಗೆ ಮನೆಯಿಂದ ಕರೆ ಬರುತ್ತದೆ. ಮಗುವಿಗಾಗಿ ನೀನು ತುಂಬಿಸಿಟ್ಟಿದ್ದ ಎದೆ ಹಾಲು ಮುಗಿದಿದೆ ಎಂದು ಹೇಳುತ್ತಾರೆ. ಅದು ಮುಗಿದಿದೆ ಎಂಬ ಸುದ್ದಿ ಕೇಳಿ ಆಕೆಗೆ ಶಾಕ್ ಆಗುತ್ತದೆ. ಇಷ್ಟು ಬೇಗ ಹೇಗೆ ಖಾಲಿಯಾಗಿತು ಎಂದು ಆಲೋಚಿಸುತ್ತಾಳೆ. ನಡೆದ ಘಟನೆಯನ್ನು ಗಂಡನ ಬಳಿ ವಿವರಿಸುತ್ತಾಳೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    ತಾಹಿರಾ ಪತಿಯ ಬಳಿ ಹೇಳಿದಾಗ ಆಯುಷ್ಮಾನ್ ನಗುತ್ತಲೇ ಉತ್ತರಿಸುತ್ತಾರೆ. ಅದರಲ್ಲಿ ಎಲ್ಲ ಪೋಷಕಾಂಶಗಳೂ ತುಂಬಿವೆ ಎಂದು ಹೇಳುತ್ತಾರೆ. ಅಷ್ಟಕ್ಕೂ ಆದಿದ್ದೇನೆಂದರೆ, ಆಯುಷ್ಮಾನ್ ತಾಹಿರಾ ತುಂಬಿಸಿಟ್ಟಿದ ಪೌಷ್ಟಿಕವಾದ ಎದೆ ಹಾಲನ್ನು ಪ್ರೋಟೀನ್ ಶೇಕ್‍ನೊಂದಿಗೆ ಬೆರೆಸಿ ಕುಡಿದಿದ್ದರು. ಅಂದಿನ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಲು ತನ್ನ ಪತಿ ಆಯುಷ್ಮಾನ್ ಮಗುವಿಗಾಗಿ ತೆಗೆದಿಟ್ಟ ಎದೆ ಹಾಲನ್ನು ಕದ್ದು ಕುಡಿದಿದ್ದಾರೆ ಎಂದು ತಾಹಿರಾ ಪುಸ್ತಕದಲ್ಲಿ ಹೇಳಿದ್ದಾಳೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ

  • ಗುಪ್ತಾಂಗ ತೋರಿಸಿದ್ರೆ ಚಾನ್ಸ್ ಕೊಡ್ತೀನಿ- ನಿರ್ಮಾಪಕನ ಕಥೆ ಬಿಚ್ಚಿಟ್ಟ ಆಯುಷ್ಮಾನ್

    ಗುಪ್ತಾಂಗ ತೋರಿಸಿದ್ರೆ ಚಾನ್ಸ್ ಕೊಡ್ತೀನಿ- ನಿರ್ಮಾಪಕನ ಕಥೆ ಬಿಚ್ಚಿಟ್ಟ ಆಯುಷ್ಮಾನ್

    ಮುಂಬೈ: ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಬಹುತೇಕರನ್ನು ಕಾಡಿದೆ. ಕೆಲವರು ಬಹಿರಂಗವಾಗಿ ಹೇಳಿಕೊಂಡ್ರೆ ಹಲವರು ವಿವಾದಕ್ಕೆ ಗುರಿಯಾಗೋದ ಬೇಡ ಅಂತ ಸುಮ್ಮನಾಗುತ್ತಾರೆ. ಇದೀಗ ಬಾಲಿವುಡ್ ನಟ ಆಯುಷ್ಮಾನ್ ಖುರಾನ ಆರಂಭದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಸಂದರ್ಶನದ ಕೆಲ ಲೇಖನಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ನಿರೂಪಕನಾಗಿ ವೃತ್ತಿ ಜೀವನ ಆರಂಭಿಸಿದ ಆಯುಷ್ಮಾನ್, ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ತದನಂತರ ಐಪಿಎಲ್ ಕಾರ್ಯಕ್ರಮದ ನಿರೂಪಕರಾಗಿ ಚಿರಪರಿಚಿತರಾದ ಆಯುಷ್ಮಾನ್ ಅವರನ್ನು ಬಣ್ಣದ ಲೋಕ ಸೆಳೆದಿತ್ತು. ಕಿರುತೆರೆಯಲ್ಲಿ ಹೆಸರು ಮಾಡಿದ್ದ ಆಯುಷ್ಮಾನ್ ಕೆಲಸದ ನಡುವೆಯೂ ಸಿನಿಮಾ ಆಡಿಷನ್ ಗಳಿಗೆ ಹಾಜರಾಗುತ್ತಿದ್ದರು. ಒಂದು ಬಾರಿ ಆಡಿಷನ್ ಗೆ ತೆರಳಿದ್ದಾಗ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಅವಕಾಶ ನೀಡುವ ಕುರಿತು ಭರವಸೆ ನೀಡಿದ್ದರು.

    ನನಗೆ ನಿನ್ನ ಗುಪ್ತಾಂಗ ತೋರಿಸಿದ್ರೆ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿನ್ನದಾಗಲಿದೆ ಅಂತ ಹೇಳಿದ್ರು. ಕೂಡಲೇ ನಾನು, ಏನು ಮಾತನಾಡುತ್ತಿದ್ದೀರಿ ಎಂದು ನಿಮಗೆ ಗೊತ್ತಿದೆಯಾ? ನಾನು ಸಲಿಂಗಿ ಅಲ್ಲ ಎಂದು ಹೇಳಿ ಹೊರಬಂದೆ ಅಂತ ಆಯುಷ್ಮಾನ್ ಸಂದರ್ಶನದಲ್ಲಿ ಹೇಳಿದ್ದರು. ಆದ್ರೆ ಸಂದರ್ಶನದಲ್ಲಿ ನಿರ್ಮಾಪಕನ ಹೆಸರನ್ನು ಆಯುಷ್ಮಾನ್ ಬಹಿರಂಗಗೊಳಿಸಲು ಇಷ್ಟಪಡಲಿಲ್ಲ.

    ಆಡಿಷನ್‍ಗೆ ಹೋದಾಗ ಸೋಲೋ ಟೆಸ್ಟ್ ಮಾಡಬೇಕೆಂದು ಹೇಳುವವರು. ದಿಢೀರ್ ಅಂತ ನನ್ನ ನಂಬರ್ 50ಕ್ಕೆ ಬರುತ್ತಿತ್ತು. ಯಾಕೆ ಹೀಗೆ ಅಂತ ಪ್ರಶ್ನಿಸಿದ್ರೆ ನನ್ನನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಇಂತಹ ತಿರಸ್ಕಾರಗಳನ್ನು ನನ್ನ ತಾಳ್ಮೆಯನ್ನ ಹೆಚ್ಚಿಸಿತು ಎಂದು ಹೇಳಿದ್ದಾರೆ.

  • ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಕಸ ಎತ್ತುವ ಮಹಿಳೆಯರಿಗೆ ಆಯುಷ್ಮಾನ್ ಸಹಾಯ – ಹಣತೆ ಖರೀದಿಸಿ ಸಂಬಂಧಿಕರಿಗೆ ಗಿಫ್ಟ್

    ಮುಂಬೈ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ಕಸ ಎತ್ತುವ ಮಹಿಳೆಯರಿಂದ ಹಣತೆ ಖರೀದಿಸುವ ಮೂಲಕ ಸಹಾಯ ಮಾಡಿದ್ದಾರೆ.

    ಆಯುಷ್ಮಾನ್ ಹಾಗೂ ಅವರ ಪತ್ನಿ ತಾಹಿರಾ ಕಶ್ಯಪ್ ಅವರು ದೀಪಾವಳಿಗಾಗಿ ಕಸ ಎತ್ತುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಹಾಗೂ ಕೌಶಲ್ಯ ವಿಕಾಸಕ್ಕಾಗಿ ಅವರ ಬಳಿ ದೀಪಗಳು ಹಾಗೂ ಮೇಣದಬತ್ತಿಯನ್ನು ಖರೀದಿಸಿದ್ದಾರೆ. ಈ ವರ್ಷ ದೀಪಾವಳಿಗೆ ತಮ್ಮ ಸಂಬಂಧಿಕರಿಗೆ ಉಡುಗೊರೆಯನ್ನು ಕಳುಹಿಸಿಕೊಡುತ್ತಿದ್ದಾರೆ. ಉಡುಗೊರೆಯಲ್ಲಿ ಈ ಮಹಿಳೆಯರು ತಯಾರಿಸಿದ ದೀಪಗಳನ್ನು ಹಾಗೂ ಮೇಣದಬತ್ತಿಯನ್ನು ಕೂಡ ನೀಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್, ದೀಪಾವಳಿ ಎಂದರೆ ಬೇರೊಬ್ಬರ ಜೀವನದಲ್ಲಿ ಖುಷಿ ತರುವುದು. ನಾವು ಈ ಹಬ್ಬವನ್ನು ನಮ್ಮ ನಮ್ಮ ಕುಟುಂಬಸ್ಥರ ಜೊತೆ ಆಚರಿಸುತ್ತೇವೆ. ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಈಗಲೂ ಹಲವು ಜನರಿಗೆ ನಮ್ಮ ಬೆಂಬಲ ಬೇಕಾಗಿದೆ. ನಾವು ಅವರ ಮುಖದಲ್ಲಿ ನಗುವನ್ನು ತರಬಹುದು. ನಾವು ಈ ಉಡುಗೊರೆಗಳ ಮೂಲಕ ಅವರ ಜೀವನದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೆವೆ ಎಂದು ಹೇಳಿದ್ದಾರೆ.

    ಆಯುಷ್ಮಾನ್ ಪತ್ನಿ ತಾಹಿರಾ ಕೂಡ, ನಾವು ಈ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೆವೆ. ಏಕೆಂದರೆ ಅವರ ಅದ್ಭುತ ಕೆಲಸ ಹಾಗೂ ಕಠಿಣ ಪರಿಶ್ರಮವನ್ನು ಜಗತ್ತಿನ ಮುಂದೆ ತರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವೆ. ನಾವೆಲ್ಲರೂ ಈ ರೀತಿಯ ಮಹಿಳೆಯರ ಭವಿಷ್ಯವನ್ನು ಸುರಕ್ಷಿತ ಮಾಡಬೇಕು. ಅಲ್ಲದೆ ಸಾಕಷ್ಟು ಮಂದಿ ಅವರ ಕೆಲಸವನ್ನು ತಿಳಿದು ಅವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ವರ್ಷ ದೀಪಾವಳಿ ಹಬ್ಬವನ್ನು ಆಯುಷ್ಮಾನ್ ತಮ್ಮ ಪತ್ನಿ ಮಕ್ಕಳ ಜೊತೆ ಜಾರ್ಖಂಡ್‍ನಲ್ಲಿ ಆಚರಿಸುತ್ತಿದ್ದಾರೆ. ಇಡೀ ಖುರಾನಾ ಕುಟುಂಬ ಒಟ್ಟಿಗೆ ಹಬ್ಬ ಆಚರಿಸಲಿದೆ ಎಂದು ವರದಿಯಾಗಿದೆ.

  • ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಗಡಿದಾಟಿದ ಡಿಟೆಕ್ಟಿವ್ ದಿವಾಕರ

    ಬೆಂಗಳೂರು: ಕಿರಿಕ್ ಪಾರ್ಟಿ ಡೈರೆಕ್ಟರ್ ರಿಷಬ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ ಡಿಟೆಕ್ಟಿವ್ ದಿವಾಕರ, ಕನ್ನಡಿಗರ ಮನೆ ಮನ ಗೆದ್ದು, ಈಗಾಗಲೇ 50 ದಿನದತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ಒಲವೇ ಮಂದಾರ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸದ್ಯ ಬೆಲ್ ಬಾಟಂ ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಆಯಾ ಭಾಷೆಗಳಲ್ಲಿ ಬೆಲ್ ಬಾಟಂನ್ನು ಯಾರು ಧರಿಸುತ್ತಾರೋ ಅನ್ನೋ ಕುತೂಹಲ ಎಲ್ಲರಲ್ಲಿದೆ.

    ಕನ್ನಡದಲ್ಲಿ ರಿಷಬ್ ಶೆಟ್ಟಿ ಮಾಡಿದ್ದ ಡಿಟೆಕ್ಟಿವ್ ಪಾತ್ರವನ್ನು ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಅಭಿನಯಿಸುವ ಸಾಧ್ಯತೆ ಇದೆಯಂತೆ. ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಿರುವ ಸಾಹಸ ನಿರ್ದೇಶಕ ರವಿ ವರ್ಮ ಆಯುಷ್ಮಾನ್ ಖುರಾನ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರಂತೆ. ಇನ್ನು ಆಯುಷ್ಮಾನ್ ನಿರ್ಧಾರವನ್ನಷ್ಟೇ ಹೇಳಬೇಕಿದೆ. ತೆಲುಗಿನಲ್ಲಿ ನಾನಿ ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಾಲಿವುಡ್ ನಲ್ಲಿ ನಟ ಆರ್ಯ ಪತ್ತೇದಾರಿ ದಿವಾಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಯಷ್ಟೇ ಹೊರ ಬೀಳಬೇಕಿದೆ.

    ಈಗಾಗಲೇ ಮೂರು ಭಾಷೆಗಳಲ್ಲಿ ರಿಮೇಕ್ ಹಕ್ಕು ಸೋಲ್ಡ್ ಔಟ್ ಆಗಿದೆ. ಎಪ್ಪತ್ತು ಎಂಬತ್ತರ ದಶಕದ ಕಾಲಘಟ್ಟದಲ್ಲಿ ನಡೆಯುವ ಚಿತ್ರದ ಪತ್ತೇದಾರಿ ಕಥೆ ಈಗ ಕರ್ನಾಟಕದಿಂದ ಗಡಿದಾಟಲು ರೆಡಿಯಾಗಿದೆ. ಕನ್ನಡದಲ್ಲಿ ಅಬ್ಬರಿಸಿದ ದಿವಾಕರ ಮಿಕ್ಕ ಭಾಷೆಗಳಲ್ಲಿ ಹೇಗೆಲ್ಲಾ ಕಮಾಲು ಮಾಡಬಹುದೆಂಬುದನ್ನು ಕಾದುನೋಡಬೇಕಿದೆ.

  • ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ಮುಂಬೈ: ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ.

    ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

    ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು.

    ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು.

    ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv