Tag: Ayushmann Khurana

  • ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

    ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಸದ್ಯ ರಶ್ಮಿಕಾ ಮುಂಬರುವ ಸಿನಿಮಾ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ರಶ್ಮಿಕಾ ನಟಿಸಲಿರುವ ಹೊಸ ಸಿನಿಮಾಗಾಗಿ ಕರ್ನಾಟಕದ ಹಂಪಿಗೆ (Hampi) ಬರಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಲಿದ್ದಾರೆ.

    ಕನ್ನಡತಿ ರಶ್ಮಿಕಾ ಮಂದಣ್ಣ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗಂತ ಕನ್ನಡ ಸಿನಿಮಾಗಾಗಿ ಅಲ್ಲ, ಬಾಲಿವುಡ್‌ನ ‘ವ್ಯಾಂಪೈರ್ಸ್ ಆಫ್‌ ವಿಜಯನಗರ’ ಸಿನಿಮಾಗಾಗಿ ಬರುತ್ತಿದ್ದಾರೆ. ಈ ಸಿನಿಮಾದ ಕತೆ ಕರ್ನಾಟಕದಲ್ಲಿ ಶುರುವಾಗಲಿದೆ. ಅಕ್ಟೋಬರ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ಹಂಪಿಯಲ್ಲಿ ನಡೆಯಲಿದೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗಿದೆ.‌ ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಈ ರೀತಿಯ ಜಾನರ್ ಸಿನಿಮಾದಲ್ಲಿ ರಶ್ಮಿಕಾ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ನಟ ಆಯುಷ್ಮಾನ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ. ‘ಮುಂಜ್ಯಾ’ ಡೈರೆಕ್ಟರ್ ಆದಿತ್ಯಾ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

    ಪ್ರಸ್ತುತ ಪುಷ್ಪ 2, ಛಾವಾ, ಸಿಖಂದರ್, ಕುಬೇರ, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿವೆ.

  • ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದ ಮಂಗಳೂರು ಚೆಲುವೆ ಅಯ್ಯೋ ಶ್ರದ್ಧಾ

    ಬಹುಮುಖ ಪ್ರತಿಭೆ ಶ್ರದ್ಧಾ, ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕ `ಅಯ್ಯೋ ಶ್ರದ್ಧಾ’ (Aiyyo Shraddha) ಆಗಿ ಖ್ಯಾತಿಯಾಗಿದ್ದಾರೆ. ಮಂಗಳೂರು ಬ್ಯೂಟಿ ಶ್ರದ್ಧಾ ಪ್ರತಿಭೆ ಇದೀಗ ಬಿಟೌನ್‌ವೆರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್‌ ನಟನ ಜೊತೆ ಕನ್ನಡತಿ ಶ್ರದ್ಧಾಗೆ ನಟಿಸಲು ಚಾನ್ಸ್ ಸಿಕ್ಕಿದೆ.

    ಮಂಗಳೂರು ಚೆಲುವೆ ಶ್ರದ್ಧಾ ಇದೀಗ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ನಾವು ನಿತ್ಯ ನೋಡುವ ವಿಚಾರವನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ವಿಡಿಯೋ ಮೂಲಕ ತೋರಿಸೋ ಶ್ರದ್ಧಾ ಅವರ ಪ್ರತಿಭೆಗೆ ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶ್ರದ್ಧಾ ಬಿಟೌನ್‌ನಲ್ಲಿ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಇದನ್ನೂ ಓದಿ: ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushman khurran) ಜೊತೆ `ಡಾಕ್ಟರ್ ಜಿ’ (Doctor G) ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ. ಆಯುಷ್ಮಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಜತೆ ಶ್ರದ್ಧಾ ಕೂಡ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಕ್ಟರ್ ಪಾತ್ರಕ್ಕೆ ಕನ್ನಡದ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Shraddha (@aiyyoshraddha)

    ಅನುಭೂತಿ ನಿರ್ದೇಶನದ ʻಡಾಕ್ಟರ್‌ ಜಿʼ ಚಿತ್ರದಲ್ಲಿ  ಕನ್ನಡದ ನಟಿರೊಬ್ಬರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿರೋದು ಅಯ್ಯೋ ಶ್ರದ್ಧಾ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಅವರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದ್ಕಡೆ ದೀಪಿಕಾ ಎಂಟ್ರಿ, ಮತ್ತೊಂದ್ಕಡೆ ರಣ್‍ವೀರ್ ಎಕ್ಸಿಟ್

    ಒಂದ್ಕಡೆ ದೀಪಿಕಾ ಎಂಟ್ರಿ, ಮತ್ತೊಂದ್ಕಡೆ ರಣ್‍ವೀರ್ ಎಕ್ಸಿಟ್

    – ಆಯುಷ್ಮಾನ್ ಫುಲ್ ಕನ್ಫ್ಯೂಸ್

    ಮುಂಬೈ: ಬಾಲಿವುಡ್ ಕ್ಯೂಟ್ ಜೋಡಿಗಳಲ್ಲೊಂದಾದ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಫನ್ನಿ ವಿಷಯಗಳಿಗೆ ಚರ್ಚೆ ಆಗುತ್ತಿರುತ್ತಾರೆ. ಪತ್ನಿ ದೀಪಿಕಾಗಾಗಿ ನಟ ಆಯುಷ್ಮಾನ್ ಖುರಾನಾ ಜೊತೆಗಿನ ಲೈವ್ ಚಾಟ್‍ನಿಂದ ರಣ್‍ವೀರ್ ಸಿಂಗ್ ಹೊರ ಬಂದಿದ್ದಾರೆ.

    ಲಾಕ್‍ಡೌನ್ ಆದಾಗಿನಿಂದ ಹೋಮ್ ಕ್ವಾರಂಟೈನ್ ನಲ್ಲಿರೋ ಸೆಲೆಬ್ರಿಟಿಗಳ ಪೈಕಿ ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಅಪ್‍ಡೇಡ್ ನೀಡುತ್ತಿದ್ದಾರೆ. ಅದರಂತೆ ಗುಳಿಕೆನ್ನೆ ಮಸ್ತಾನಿ ಮತ್ತು ಬಾಜೀರಾವ್ ಮನೆಯಲ್ಲಿ ಬಂಧಿಯಾಗಿದ್ದು, ಜೊತೆಯಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ.

    ಆಯುಷ್ಮಾನ್ ಖುರಾನಾ ಮತ್ತು ರಣ್‍ವೀರ್ ಸಿಂಗ್ ಇನ್‍ಸ್ಟಾಗ್ರಾಂನಲ್ಲಿ ಲೈವ್ ಚಾಟ್ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂಬಂಧ ಕುರಿತ ಚರ್ಚೆಯಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದರು. ಲೈವ್ ಮಧ್ಯೆ ದಿಢೀರ್ ಅಂತ ರಣ್‍ವೀರ್ ಸಿಂಗ್ ಬೈ ಹೇಳಲು ಆರಂಭಿಸಿದ್ರು. ಆಗ ಆಯುಷ್ಮಾನ್ ಯಾರಿಗೆ ಬೈ ಹೇಳ್ತಿದ್ದೀಯಾ ಎಂದು ಪ್ರಶ್ನಿಸಿದರು.

    ಆಯುಷ್ಮಾನ ಪ್ರಶ್ನೆಗೆ ಉತ್ತರಿಸಿದ ರಣ್‍ವೀರ್, ನಿಮ್ಮ ಅತ್ತಿಗೆ (ದೀಪಿಕಾ) ಬೈಯುತ್ತಿದ್ದಾಳೆ. ಆಕೆ ಜೂಮ್ ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದು, ಕಿರುಚಾಡಬೇಡ ಎಂದು ಹೇಳುತ್ತಿದ್ದಾಳೆ. ಬೈ ಐ ಲವ್ ಯು ಅಂತಾ ಹೇಳಿ ಚಾಟ್‍ನಿಂದ ಹೊರ ಬಂದಿದ್ದಾರೆ. ಒಂದು ಕಡೆ ದೀಪಿಕಾ ಆನ್‍ಲೈನ್‍ಗೆ ಎಂಟ್ರಿಯಾಗುತ್ತಿದ್ದಂತೆ ಪತ್ನಿಗೆ ತೊಂದರೆ ನೀಡಬಾರದು ಅಂತಾ ರಣ್‍ವೀರ್ ತಮ್ಮ ಲೈವ್ ಚಾಟ್ ನಿಂದ ಎಕ್ಸಿಟ್ ಆಗಿದ್ದಾರೆ.

  • ಭೂಮಿ ಪೆಡ್ನೆಕರ್ ಗೆ ಗಂಟೆಗೊಮ್ಮೆ ಸೆಕ್ಸ್ ಬೇಕೆಂತೆ: ಆಯುಶ್ಮಾನ್ ಖುರಾನಾ

    ಭೂಮಿ ಪೆಡ್ನೆಕರ್ ಗೆ ಗಂಟೆಗೊಮ್ಮೆ ಸೆಕ್ಸ್ ಬೇಕೆಂತೆ: ಆಯುಶ್ಮಾನ್ ಖುರಾನಾ

    ಮುಂಬೈ: ಬಾಲಿವುಡ್ ನಟ ಆಯುಶ್ಮಾನ್ ಖುರಾನಾ ನಟಿ ಭೂಮಿ ಪೆಡ್ನೆಕರ್ ಗೆ ಗಂಟೆಗೊಮ್ಮೆ ಸೆಕ್ಸ್ ಬೇಕು ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಆಯುಶ್ಮಾನ್ ಮತ್ತು ಭೂಮಿ ಇಬ್ಬರು ಜೊತೆಯಾಗಿ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿ ನೇಹಾ ಧುಪಿಯಾ ಕೇಳಿದ ಪ್ರಶ್ನೆಗೆ ಆಯುಶ್ಮಾನ್ ಉತ್ತರಿಸಿದ್ದಾರೆ. ಖಾಸಗಿ ಚಾನೆಲ್ ನ ವೋಗ್ ಬಿಎಫ್‍ಎಫ್ ಶೋನಲ್ಲಿ ಪ್ರತಿವಾರ ಬಾಲಿವುಡ್ ಸೆಲೆಬ್ರೆಟಿಗಳನ್ನು ನೇಹಾ ಧುಪಿಯಾ ಸಂದರ್ಶನ ಮಾಡ್ತಾರೆ. ಸಂದರ್ಶನವು ಹಾಸ್ಯಮಯದಿಂದ ಕೂಡಿರುತ್ತದೆ. ನೇಹಾ ಕೇಳುವ ಫನ್ನಿ ಫನ್ನಿ ಪ್ರಶ್ನೆಗಳಿಗೆ ಅತಿಥಿಗಳು ಸಹ ಯಾವುದೇ ಮುಚ್ಚು ಮರೆಯಿಲ್ಲದೇ ಉತ್ತರಿಸುತ್ತಾರೆ.

    ಈ ವಾರದ ಕಾರ್ಯಕ್ರಮಕ್ಕೆ ಬಾಲಿವುಡ್ ನಲ್ಲಿ ಗುಡ್ ಪೇರ್ ಅಂತಾ ಕರೆಸಿಕೊಳ್ಳುವ ಆಯುಶ್ಮಾನ್ ಮತ್ತು ಭೂಮಿ ಆಗಮಿಸಿದ್ದರು. ಈ ಶೋನ ಪ್ರೋಮೋ ಟ್ವಟ್ಟರ್ ನಲ್ಲಿ ನೇಹಾ ಧುಪಿಯಾ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇಹಾ ಕಾರ್ಯಕ್ರಮದಲ್ಲಿ ಆಯುಶ್ಮಾನ್ ಗೆ ಸೆಕ್ಸ್ ಇಲ್ಲದೇ ನೀವು ಎಷ್ಟು ದಿನ ಇರುವಿರಿ ಅಂತಾ ಪ್ರಶ್ನೆ ಮಾಡಿದ್ರು. ಚಿತ್ರೀಕರಣಕ್ಕಾಗಿ ಹೊರಗೆ ತೆರಳಿದಾಗ ಮಾತ್ರ ಅಂತಾ ಹೇಳಿದ್ರು. ಇದೇ ಪ್ರಶ್ನೆಯನ್ನ ಭೂಮಿಗೆ ಕೇಳಿದಾಗ ಆಯುಶ್ಮಾನ್ ಕೇವಲ ಒಂದು ಗಂಟೆ ಮಾತ್ರ ಅಂತಾ ಹೇಳಿ ಕಾಲೆಳೆದ್ರು.

    ಆಯುಶ್ಮಾನ್ ಒಂದು ಗಂಟೆ ಅಂತಾ ಹೇಳುತ್ತಿದ್ದಂತೆ ಮೂವರು ಜೋರಾಗಿ ನಕ್ಕಿದ್ದಾರೆ. ಶೋ ಮುಗಿಯುವರೆಗೂ ಇಬ್ಬರು ಸ್ಟಾರ್ ಗಳು ಒಬ್ಬರ ಕಾಲನ್ನು ಎಳೆದು ಕಾಮಿಡಿ ಮಾಡಿದ್ದಾರೆ. ಕೊನೆಯದಾಗಿ ಭೂಮಿ ಜೊತೆ ಡೇಟ್ ಮಾಡುವ ಹುಡುಗನಿಗೆ ಏನು ಸಲಹೆ ಕೊಡ್ತಿರಾ ಅಂತಾ ಕೇಳಿದ್ದಕ್ಕೆ, ಅವನು ತುಂಬಾ ತಾಳ್ಮೆ ಮತ್ತು ಶಾಂತನಾಗಿರಬೇಕು ಅಂತಾ ಅಡ್ವೈಸ್ ಮಾಡಿದ್ರು.

    ಶುಭ ಮಂಗಲ ಸಾವ್‍ಧಾನ್ ಮತ್ತು ಧಮ್ ಲಗಾ ಕೇ ಐಸಾ ಚಿತ್ರದಲ್ಲಿ ಆಯುಶ್ಮಾನ್ ಮತ್ತು ಭೂಮಿ ಜೊತೆಯಾಗಿ ನಟಿಸಿದ್ದರು. ಸದ್ಯ ಇಬ್ರೂ ‘ಮನ್‍ಮರ್ಜಿಯಾ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.