Tag: AYUSH Department

  • ಕೊರೊನಾದಿಂದ ಚಾಮರಾಜನಗರ ಜಿಲ್ಲಾ ಆಯುಷ್ ಅಧಿಕಾರಿ ನಿಧನ

    ಕೊರೊನಾದಿಂದ ಚಾಮರಾಜನಗರ ಜಿಲ್ಲಾ ಆಯುಷ್ ಅಧಿಕಾರಿ ನಿಧನ

    ಚಾಮರಾಜನಗರ: ಜಿಲ್ಲಾ ಅಯುಷ್ ವೈದ್ಯಾಧಿಕಾರಿ ಡಾ.ರಾಚಯ್ಯ ಕೋವಿಡ್-19 ಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ನಂತರ ಜುಲೈ 26ರಿಂದ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಡಾ.ರಾಚಯ್ಯ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮೈಸೂರಿನ ಉದಯಗಿರಿ ನಿವಾಸಿಯಾಗಿದ್ದ ರಾಚಯ್ಯ ಅವರು ಕಳೆದ 22 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 31 ರಂದು ಇವರು ನಿವೃತ್ತರಾಗಿದ್ದರೂ ಸಹ ಆಸ್ಪತ್ರೆಯಲ್ಲಿ ಇದ್ದುದ್ದರಿಂದು ಇನ್ನು ಅಧಿಕಾರಿ ಹಸ್ತಾಂತರ ಮಾಡಿರಲಿಲ್ಲ. ಅಷ್ಟರೊಳಗೆ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

    ಡಾ.ರಾಚಯ್ಯ ಅವರಿಗೆ ಮಧುಮೇಹ ಹಾಗು ರಕ್ತದೊತ್ತಡ ಇತ್ತು ಎಂದು ಹೇಳಲಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಯುಷ್ ಇಲಾಖೆಯ ಇಬ್ಬರು ಸಿಬ್ಬಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದೆ.

  • ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    – ಮೈಸೂರು, ಕೊಳ್ಳೆಗಾಲ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ

    ಚಾಮರಾಜನಗರ: ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಬೆನ್ನಲ್ಲೆ ಆಯುಷ್ಯ ಇಲಾಖೆಯಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ಇತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಚ್ಯವನ್ ಪ್ರಾಶ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಯ ಇಲಾಖೆಯಿಂದ ಚ್ಯವನ್ ಪ್ರಾಶ್ ಖರೀದಿಸಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗು ಸರಬರಾಜು ಮಾಡಲಾಗಿದ್ದು, ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೆ ವಿತರಣೆ ಆಗಲಿದೆ. ಗಡಿ ಜಿಲ್ಲೆ ಚಾಮರಾಜನಗರಕ್ಕೂ ಚ್ಯವನ್ ಪ್ರಾಶ್ ಸರಬರಾಜು ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ರಾಚಯ್ಯ ತಿಳಿಸಿದ್ದಾರೆ.

    ಇತ್ತ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಮೈಸೂರು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಚಾಮರಾಜನಗರ ಕೂಡ ಗ್ರೀನ್ ಝೋನ್‍ನಲ್ಲಿದೆ, ಇದೀಗ ಮೈಸೂರು ಕೂಡ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಬಹುತೇಕ ವ್ಯವಹಾರ, ವ್ಯಾಪಾರ, ವಹಿವಾಟು ಮೈಸೂರನ್ನು ಅವಲಂಬಿಸಿದೆ. ಇದರಿಂದ ಮೈಸೂರು ಹಾಗೂ ಕೊಳ್ಳೆಗಾಲ ನಡುವಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

    ಸಂಚಾರದ ಕುರಿತು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜೊತೆ ಚರ್ಚೆ ನಡೆಸಿ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡ್ತೀನಿ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಹಾಗೂ ಮೈಸೂರು ಸಂಚಾರ ಆರಂಭವಾಗಲೇ ಬೇಕು, ಯಾಕಂದ್ರೆ ಬಹುತೇಕ ಜನರು ಮೈಸೂರಿನಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಕೊಳ್ಳೆಗಾಲಕ್ಕೆ ಬಂದು ಮಾರಾಟ ಮಾಡ್ತಾರೆ. ಇದರಿಂದ ಕೂಡಲೇ ಇತ್ತ ಸಚಿವರು ಗಮನಹರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆಗ್ರಹಿಸಿದ್ದಾರೆ.

  • ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    -ಹೊರಗುತ್ತಿಗೆ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಸ್ವಾಗತ
    -ಈ ರೀತಿ ತಾರತಮ್ಯ ನೀತಿ ಏಕೆ?

    ಶಿವಮೊಗ್ಗ : ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಶ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಕೇವಲ ಎಂಬಿಬಿಎಸ್ ವೈದ್ಯರ ವೇತನವನ್ನು ಹೆಚ್ಚಳ ಮಾಡಿದೆ, ಅದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಇವರಷ್ಟೇ ಕೆಲಸ ನಿರ್ವಹಿಸುವ ಆಯುಷ್ ವೈದ್ಯರಿಗೆ, ಸ್ಟಾಫ್ ನರ್ಸ್ ಗಳಿಗೆ ಮಾತ್ರ ಹೆಚ್ಚಳ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಸರ್ಕಾರವೇ ಈ ರೀತಿ ತಾರತಮ್ಯ ಮಾಡಿದರೇ ಇವರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಎಂಎಲ್ ಸಿ ಆಯನೂರು ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡಿದಂತೆ ಆಯುಷ್ ವೈದ್ಯರು ಹಾಗೂ ಸ್ಟಾಪ್ ನರ್ಸ್ ಗಳ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ.