Tag: Ayurvedic Medicine

  • ರಾಜ್ಯದಲ್ಲಿ ಹಂಚಿಕೆಯಾಗುತ್ತಿದೆ ಆನಂದಯ್ಯರ ಕೊರೊನಾ ಆಯುರ್ವೇದ ಔಷಧಿ- ಮುಗಿಬಿದ್ದ ಜನ

    ರಾಜ್ಯದಲ್ಲಿ ಹಂಚಿಕೆಯಾಗುತ್ತಿದೆ ಆನಂದಯ್ಯರ ಕೊರೊನಾ ಆಯುರ್ವೇದ ಔಷಧಿ- ಮುಗಿಬಿದ್ದ ಜನ

    ಬಳ್ಳಾರಿ: ಕೊರೊನಾ ಸೋಂಕು ನಿರೋಧಕ ಆಯುರ್ವೇದ ಔಷಧಿ ಪಡೆಯಲು ಜನ ಮುಗಿಬಿದ್ದಿದ್ದು, ರಾಜ್ಯದಲ್ಲಿ ಆನಂದಯ್ಯ ಅವರ ಔಷಧಿ ಹಂಚಿಕೆ ಆಗುತ್ತಿದೆ. ಹೀಗಾಗಿ ಸಾವಿರಾರು ಜನ ಆಗಮಿಸಿ ಕೊರೊನಾಗೆ ಆಯುರ್ವೇದ ಔಷಧಿ ಪಡೆಯುತ್ತಿದ್ದಾರೆ.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಆನಂದಯ್ಯನ ಔಷಧಿ ವಿತರಣೆ ಆಗುತ್ತಿದೆ. ಸುಮಾರು 500 ಕುಟುಂಬಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಲಾಗಿದ್ದು, ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರಿಂದ ಔಷಧಿ ವಿತರಣೆ ಮಾಡಲಾಗುತ್ತಿದೆ.

    ಆನಂದಯ್ಯನವರ ಔಷಧಿಗೆ ಆಂಧ್ರ ಪ್ರದೇಶದ ಆಯುಷ್ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಕಮಲಾಪುರದ ಶ್ರೀ ನಗರೇಶ್ವರ ಆಂಜನೇಯ ದೇವಾಲಯದಲ್ಲಿ ಶ್ರೀಗಳು ವಿತರಣೆ ಮಾಡಿದ್ದಾರೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ಇದಾಗಿದ್ದು, ಅಂದಾಜು 5 ಲಕ್ಷ ರೂ. ಮೌಲ್ಯದ ಆಯುರ್ವೇದ ಔಷಧಿಯನ್ನು ಆನಂದಯ್ಯ ಅವರು ಉಚಿತವಾಗಿ ನೀಡಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣ ಪಟ್ಟಣಂನಲ್ಲಿ ಆನಂದಯ್ಯ ಅವರು ನಾಟಿ ವೈದ್ಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಔಷಧಿ ಭಾರೀ ಸದ್ದು ಮಾಡಿತ್ತು.

  • ಕೋವಿಡ್‌ 19ಗೆ ಪತಂಜಲಿಯಿಂದ ಔಷಧಿ – 545 ರೂ.ಗೆ ಕೊರೊನಿಲ್ ಕಿಟ್‌

    ಕೋವಿಡ್‌ 19ಗೆ ಪತಂಜಲಿಯಿಂದ ಔಷಧಿ – 545 ರೂ.ಗೆ ಕೊರೊನಿಲ್ ಕಿಟ್‌

    – 3 ರಿಂದ 7 ದಿನದ ಒಳಗಡೆ ರೋಗಿಗಳು ಗುಣಮುಖ
    – ಪತಂಜಲಿ, ನಿಮ್ಸ್‌ ಜೊತೆಗೂಡಿ ಕ್ಲಿನಿಕಲ್‌ ಟ್ರಯಲ್‌

    ನವದೆಹಲಿ: ಕೋವಿಡ್‌ 19ಗೆ ಪತಂಜಲಿ ಸಂಸ್ಥೆ ಆಯುರ್ವೇದ ಔಷಧಿಯನ್ನು ಕಂಡು ಹಿಡಿದಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

    ಕೋವಿಡ್‌ 19ಗೆ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ಶ್ರಮಿಸುತ್ತಿದ್ದರೆ ರಾಮದೇವ್‌ ಪತಂಜಲಿ ಸಂಸ್ಥೆ ಮೊದಲ ಆಯುವೇರ್ದಿಕ್‌ ಔಷಧಿ ಕಂಡುಹಿಡಿದಿದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ.

    ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದದ ಅವರು, ʼಕೊರೊನಿಲ್‌ʼ ಮತ್ತು ʼಸಸ್ವರಿʼ ಹೆಸರಿನ ಎರಡು ಔಷಧಿ ಸೇವಿಸಿದರೆ 7 ದಿನದಲ್ಲಿ ಕೊರೊನಾ ಗುಣವಾಗುತ್ತದೆ. ರೋಗಿಗಳು ಸಂಪೂರ್ಣವಾಗಿ ಗುಣವಾಗುತ್ತಾರೆ ಎಂದು ಶೇ.100 ರಷ್ಟು ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಪತಂಜಲಿ ಸಂಶೋಧನಾ ಕೇಂದ್ರ ಮತ್ತು ಜೈಪುರದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ನಿಮ್ಸ್‌) ಜೊತೆ ಜಂಟಿಯಾಗಿ ಕ್ಲಿನಿಕಲ್‌ ಟ್ರಯಲ್‌ ಮಾಡಿದೆ. 3 ರಿಂದ 7 ದಿನದ ಒಳಗಡೆ ರೋಗಿಗಳು ಶೇ.100ರಷ್ಟು ಗುಣಮುಖರಾಗುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

    ಎರಡು ಕ್ಲಿನಿಕಲ್‌ ಟ್ರಯಲ್‌ ಮಾಡಿದ್ದೇವೆ. ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯೋಗ ಮಾಡಿದ್ದೇವೆ. 280 ರೋಗಿಗಳಿಗೆ ನೀಡಿದ್ದು, ಔಷಧಿ ಪಡೆದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ಕಿಟ್‌ ಬೆಲೆ 545 ರೂ. ಇದ್ದು, 30 ದಿನಗಳ ಕಾಲ ಬಳಸಬಹುದು. ಸದ್ಯಕ್ಕೆ ಈ ಔಷಧಿ ಎಲ್ಲಿಯೂ ಸಿಗುವುದಿಲ್ಲ. ಒಂದು ವಾರದಲ್ಲಿ ಪತಂಜಲಿ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೊರೊನಾ ಕಿಟ್‌ ವಿತರಣೆ ಸಂಬಂಧ ಒಂದು ಅಪ್ಲಿಕೇಶನ್‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

     

    ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಿಲ್ಲ. ಬದಲಾಗಿ ಕೊರೊನಾವನ್ನು ಗುಣಪಡಿಸುತ್ತದೆ. ಶೇ.69 ರಷ್ಟು ರೋಗಿಗಳು 6 ದಿನದಲ್ಲಿ ಗುಣವಾಗಿದ್ದಾರೆ. ನಾವು ಸಂಶೋಧನೆ ಮಾಡಿಯೇ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ಪ್ರತಿ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿದೆ ಎಂದು ಬಾಬಾ ರಾಮ್‌ದೇವ್‌ ತಿಳಿಸಿದ್ದಾರೆ.

    ಕೋವಿಡ್‌ 19 ಸ್ಫೋಟಗೊಂಡಾಗಲೇ ನಾವು ವಿಜ್ಞಾನಿಗಳ ತಂಡವನ್ನು ನೇಮಕ ಮಾಡಿದ್ದೆವು. ದೇಹದ ಯಾವ ಕಾಂಪೌಂಡ್ಸ್‌ ವೈರಸ್‌ ವಿರುದ್ಧ ಹೋರಾಡಿ ದೇಹದಲ್ಲಿ ಹರಡುವಿಕೆಯನ್ನು ನಿಲ್ಲಿಸಬಹುದು ಎಂಬುದನ್ನು ನಾವು ಮೊದಲು ಅಧ್ಯಯನ ನಡೆಸಿ ಈ ಔಷಧಿ ಬಿಡುಗಡೆ ಮಾಡಿದ್ದೇವೆ. ನಾವು ನೀಡಿದ ಔಷಧಿ ಸೇವಿಸಿದ ಪಾಸಿಟಿವ್‌ ರೋಗಿಗಳ ಪರೀಕ್ಷಾ ವರದಿ 3-4 ದಿನದಲ್ಲಿ ನೆಗೆಟಿವ್‌ ಬಂದಿದೆ. ಹೀಗಾಗಿ ಆಯುರ್ವೇದ ಮೂಲಕ ಕೋವಿಡ್‌ 19 ಗುಣಪಡಿಸಬಹುದು. ಮುಂದಿನ 4-5 ದಿನದಲ್ಲಿ ಈ ಅಧ್ಯಯನಕ್ಕೆ ಸಂಬಂಧಿಸಿದ ಡೇಟಾವನ್ನು ರಿಲೀಸ್‌ ಮಾಡುತ್ತೇವೆ ಎಂದು ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

  • ಕೃಷಿಯಲ್ಲಿ ತೊಡಗಿಕೊಂಡ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿ

    ಕೃಷಿಯಲ್ಲಿ ತೊಡಗಿಕೊಂಡ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿ

    ದಾವಣಗೆರೆ: ಮುಂಗಾರು ಶುರುವಾಗಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೆಲ ಕಡೆ ಉತ್ತಮ ಬೆಳೆಯಾಗಿದ್ದು, ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ದಾವಣಗೆರೆಯ ಹೆಬ್ಬಾಳು ಗ್ರಾಮದ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಬಿದ್ದ ಮಳೆಗೆ ಮೆಕ್ಕೆಜೋಳ ಬೆಳೆ ಹಸನಾಗಿ ಬೆಳೆದಿದ್ದು, ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಎಡೆಕುಂಟೆ ಹೊಡೆದು ಮಾದರಿಯಾಗಿದ್ದಾರೆ. ಮಠದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ಕಳೆ ಇದ್ದು ಸ್ವತಃ ಸ್ವಾಮೀಜಿಗಳೇ ಎಡೆಕುಂಟೆ ಹೊಡೆದು ಕಳೆ ತೆಗೆದಿದ್ದಾರೆ.

    ಶ್ರೀಗಳು ಕೇವಲ ಕೃಷಿಯೊಂದೆ ಅಲ್ಲ ಗೋವುಗಳನ್ನು ಸಂರಕ್ಷಿಸುವುದು, ಭಕ್ತರಿಗೆ ಉಚಿತವಾಗಿ ನಾಟಿ ಔಷಧಿಯನ್ನು ನೀಡುತ್ತಿದ್ದು ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಲಿದ್ದಾರೆ. ಮಹಾಂತ ಸ್ವಾಮೀಜಿಗಳು ಕಾವಿ ತೊಟ್ಟು ಕೃಷಿ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದ್ದಾರೆ.