Tag: ayudha pooje

  • ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ

    ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ

    ಮೈಸೂರು: ದೇಶದೆಲ್ಲೆಡೆ ಇಂದು ಆಯುಧ ಪೂಜೆ. ಮೈಸೂರಿನ (Mysuru) ಅಂಬಾವಿಲಾಸ ಅರಮನೆಯಲ್ಲಿ ಆಯುಧಪೂಜೆ (Ayudha Pooje) ಸಂಭ್ರಮ ಕಳೆಗಟ್ಟಿದ್ದು, ಯದುವೀರ್ ಒಡೆಯರ್ (Yaduveer Wadiyar) ಅವರು ಪೂಜೆ ಕಾರ್ಯ ನೆರವೇರಿಸಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿದ್ದು, ಬಳಿಕ 7:55ಕ್ಕೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಗಿದೆ. ಬಳಿಕ ಆಯುಧಗಳನ್ನು ಶುಚಿಗೊಳಿಸಿ ವಾಪಸ್ ಅರಮನೆಗೆ ರವಾನಿಸಲಾಗುತ್ತದೆ. ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಮಾಡಿ, ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಮಾಡಲಾಗುತ್ತದೆ. ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

    ಕರಿಕಲ್ಲು ತೊಟ್ಟಿಯಲ್ಲಿ ಯದುವೀರರಿಂದ ಪೂಜೆ ನಡೆಯುತ್ತಿದ್ದು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಮಾಡಲಾಗುತ್ತದೆ.

    ಇನ್ನೂ ಸಂಜೆ ಖಾಸಗಿ ದರ್ಬಾರ್ ನಡೆಯಲಿದ್ದು, ಬೆಳ್ಳಿದ್ವಾರದಿಂದ ರಾಜರು ಪ್ರವೇಶಿಸುತ್ತಾರೆ. ಈ ಸಂದರ್ಭದಲ್ಲಿ ಹಸ್ತಲಾಘವದ ಮೂಲಕ ಸಿಂಹಾಸನದ ಏಳು ಮೆಟ್ಟಿಲು ಏರುತ್ತಾರೆ. ಸಿಂಹಾಸನವೇರಿ ರಾಜರು ದರ್ಬಾರ್ ಮಾಡುತ್ತಾರೆ. ದರ್ಬಾರ್ ಬಳಿಕ ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್‌ನಲ್ಲಿ ನುಡಿಸಲಾಗುತ್ತದೆ. ಸಭಾಸದರು ರಾಜರಿಗೆ ಗೌರವ ಮತ್ತು ರಕ್ಷೆ ನೀಡುತ್ತಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರವರಿಗೆ ಪರಾಕ್‌ಗಳನ್ನ ಕೂಗಲಾಗುತ್ತದೆ. ರಾಣಿಯವರು ಬಂದು ರಾಜರಿಗೆ ನಮಸ್ಕರಿಸುತ್ತಾರೆ. ಬಳಿಕ ದರ್ಬಾರ್ ಮುಗಿಸಿ ಪೂಜೆ ನಡೆಸಲಾಗುತ್ತದೆ. ಬಳಿಕ ಕಂಕಣ ವಿಸರ್ಜನೆ ಮಾಡಿದಾಗ ನವರಾತ್ರಿ ಪೂಜೆ ಸಂಪನ್ನವಾಗುತ್ತದೆ. ಈ ವೇಳೆ ರಾಣಿಯವರಿಂದ ಮಹಾರಾಜರ ಪಾದ ಪೂಜೆ ನೆರವೇರಿಸಿ, ಆಯುಧ ಪೂಜೆ ದಿನದ ಎಲ್ಲಾ ಪೂಜೆ ಕೈಂಕರ್ಯಗಳು ಮುಕ್ತಾಯವಾಗುತ್ತವೆ.ಇದನ್ನೂ ಓದಿ: ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ

  • VHP ಉ. ಕರ್ನಾಟಕದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪಗೆ ನೋಟಿಸ್

    VHP ಉ. ಕರ್ನಾಟಕದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪಗೆ ನೋಟಿಸ್

    ಕಲಬುರಗಿ: ಆಯುಧ ಪೂಜೆ (Ayudha Pooja) ಯಂದು ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೋ ವೈರಲ್ (Viral Video) ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗರಾಜಪ್ಪ ಅಪ್ಪಗೆ ನೋಟಿಸ್ ನೀಡಲಾಗಿದೆ.

    ದಕ್ಷಿಣ ವಿಭಾಗದ ಪೋಲಿಸ್ ಸಹಾಯಕ ಆಯುಕ್ತರು ಈ ನೋಟಿಸ್ (Notice) ನೀಡಿದ್ದಾರೆ. ಗನ್ ಪಿಸ್ತೂಲ್ ಗಳ ಲೈಸೆನ್ಸಿನ ಪ್ರತಿ ಪ್ರಸ್ತುತ ಪಡಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಆಯುಧದ ಲೈಸೆನ್ಸ್ ಪ್ರತಿಯೊಂದಿಗೆ ವಿವರಣೆಯನ್ನು ಸಲ್ಲಿಸುಂತೆ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಜನಸಾಮಾನ್ಯರಿಗೆ ಕೈಯಾರೆ ಊಟ ಬಡಿಸಿದ ಸಿಎಂ ಬೊಮ್ಮಾಯಿ

    ವಿಜಯದಶಮಿ ಹಬ್ಬದ ದಿನ ವಿಶ್ವ ಹಿಂದೂ ಪರಿಷತ್‍(VHP) ನ ಉತ್ತರ ಕರ್ನಾಟಕದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ (Lingarajappa Appa) ಎರಡು ಬಂದೂಕುಗಳಿಂದ ಹಲವು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗೋದುತಾಯಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬನ್ನಿ ಮುಡಿಯುವ ಮುನ್ನ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎರಡು ಬಂದೂಕುಗಳಿಂದ 8 ಸುತ್ತು ಗುಂಡು ಹಾರಿಸಲಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    -ಕಾರ್, ಜೀಪ್ ಪೂಜೆಗೆ 40 ರೂಪಾಯಿ

    ಬೆಂಗಳೂರು: ಸರ್ಕಾರಿ ಬಸ್ ಆಯುಧ ಪೂಜೆಗಾಗಿ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿರುವುದು ಸುದ್ದಿಯಾಗಿದೆ.

    ಸಾರಿಗೆ ಸಚಿವರೇನೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಮಾಡುತ್ತಾರೆ. ಅವ್ರಿಗೇನು ಕಡಿಮೆ ಹೇಳಿ, ಸಾರಿಗೆ ಇಲಾಖೆ ನನಗೆ ಬೇಡ ಎನ್ನುತ್ತಿದ್ದ ಅವರು ಕೊನೆಗೆ ಅನಿವಾರ್ಯವಾಗಿ ಸಾರಿಗೆ ಸಚಿವರಾಗಿ ಮುಂದುವರೆಯುತ್ತಿದ್ದು, ಶ್ರೀರಾಮುಲು ಅವ್ರಿಗೆ ಸಾರಿಗೆ ನೌಕರರ ಕಷ್ಟವೇನು ಅನ್ನೋದು ತಿಳಿದಿಲ್ಲ. ಸಾರಿಗೆ ನೌಕರರ ಕಷ್ಟ ತಿಳಿದಿದ್ರೆ ಖಂಡಿತ ಹೀಗೆ ಬಸ್ ಪೂಜೆಗೆ ಅಂತಾ 100 ರೂ ನೀಡ್ತಿರಲಿಲ್ಲ. ಸಾರಿಗೆ ಇಲಾಖೆಯವರು ಆಯುಧ ಪೂಜೆ ಪ್ರಯುಕ್ತ ಬಸ್ ಪೂಜೆಗೆ 100 ರೂ ನೀಡಿದ್ದಾರೆ. ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಏನ್ ಬರುತ್ತೆ ಎಂದು ನೌಕರರು ಈ ಬಗ್ಗೆ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ

    100 ರೂಪಾಯಿಯಲ್ಲಿ ಹೂ, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡೋದಕ್ಕೆ ಆಗುತ್ತಾ? ಕೋಟ್ಯಂತರ ರೂಪಾಯಿ ಸಂಪಾದನೆಗೆ ಕಾರಣವಾಗಿರೋ ಬಸ್ ಗಳ ಪೂಜೆಗೆ ಹಣ ಕೊಡಲು ಸಾರಿಗೆ ಇಲಾಖೆ ಹೀಗೆ ಯಾಕೆ ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿ ಸಮಸ್ಯೆ ಆಲಿಸಿದ ಶ್ರೀರಾಮುಲು

    100 ರೂಪಾಯಿ ಆಯುಧ ಪೂಜೆ ಮಾಡಬೇಕಾದ ದಾರುಣ ಪರಿಸ್ಥಿತಿ ಮಾತ್ರ ನಮ್ಮ ಸಾರಿಗೆ ನೌಕರರದ್ದು. ಅಷ್ಟೇ ಅಲ್ಲ ಸಾರಿಗೆ ಇಲಾಖೆಯಲ್ಲಿರುವ ಕಾರ್, ಜೀಪ್ ಪೂಜೆಗೂ ಸಾರಿಗೆ ಇಲಾಖೆ 40 ರೂಪಾಯಿ ನೀಡಿದೆ. 40 ರೂಪಾಯಿ ತಗೊಂಡು ಯಾವ ಮಾರ್ಕೆಟ್‍ಗೆ ಹೋಗಿ ಶಾಪಿಂಗ್ ಮಾಡಿ ಪೂಜೆ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಸಾರಿಗೆ ನೌಕರರು.

  • ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಚಿಕ್ಕಮಗಳೂರು: ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಈಜಲು ಕೆರೆಯಲ್ಲಿ ಇಳಿದಿದ್ದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಳಿ, ಜೀವಿತ್ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಸ್ಥಳದಲ್ಲಿ ಪೊಲೀಸ್ ಹಾಗೂ ಸ್ಥಳೀಯರಿಂದ ಶೋಧಕಾರ್ಯ ಮುಂದುವರಿದಿದೆ.

    ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಚಿಕ್ಕಮಗಳೂರು: ನಾಡಿನೆಲ್ಲೆಡೆ ಇಂದು ದಸರಾ ಹಾಗೂ ಆಯುಧ ಪೂಜೆಯ ಸಂಭ್ರಮ. ಕಾಫಿನಾಡಿ ಚಿಕ್ಕಮಗಳೂರಿನಲ್ಲೂ ಜನಸಾಮಾನ್ಯರು ಸಂಭ್ರಮದಿಂದ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಂತೆ ತನ್ನ ವಾಹನಗಳಿಗೆ ಆಯುಧ ಪೂಜೆ ಮಾಡಿರೋದು ಮಾತ್ರ ವಿಶೇಷವಾಗಿದೆ.

    ಎಸ್‍ಎಂಎಸ್ ಬಸ್ ಮಾಲೀಕರಾದ ಸಿರಾಜ್ ಹಿಂದೂಗಳಿಗೆ ಕಡಿಮೆ ಇಲ್ಲದಂತೆ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಹಿಂದು-ಮುಸ್ಲಿಂ ಎಂಬ ಭೇದ-ಭಾವವಿಲ್ಲ. ನಾವು ವಾಹನಗಳನ್ನ ಇಟ್ಟಿದ್ದೇವೆ. ಅನ್ನ ತಿನ್ನುತ್ತಿರೋದು ಅದರಲ್ಲೇ. ನಾವೆಲ್ಲರೂ ಒಂದೇ. ಭೂಮಿಯ ಮೇಲೆ ಇರುವುದು ಎರಡೇ ಜಾತಿ. ಒಂದು ಹೆಣ್ಣು, ಮತ್ತೊಂದು ಗಂಡು ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಮಾಡೋದು ಕಿಡಿಗೇಡಿಗಳು ನಾವೆಲ್ಲರೂ ಒಂದೇ ಎಂದು ಹೇಳಿ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸಿದ್ದಾರೆ.

    ತನ್ನ ಬಸ್ಸುಗಳಿಗೆ ಚೆಂಡು ಹೂವಿನಿಂದ ಸಿಂಗಾರ ಮಾಡಿ, ಬಲೂನ್, ಬಾಳೆದಿಂಡು, ಮಾವಿನತೋರಣ ಕಟ್ಟಿ ಪೂಜೆ ಮಾಡಿ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ರೂಟ್ ಬಸ್‍ಗಳ ಪೂಜೆ ವೆಚ್ಚಕ್ಕೆ 10 ರೂ. ಕೊಟ್ಟ ಸಾರಿಗೆ ಸಂಸ್ಥೆ!

    ರೂಟ್ ಬಸ್‍ಗಳ ಪೂಜೆ ವೆಚ್ಚಕ್ಕೆ 10 ರೂ. ಕೊಟ್ಟ ಸಾರಿಗೆ ಸಂಸ್ಥೆ!

    ಕೊಪ್ಪಳ: ದಸರಾ ಹಬ್ಬ ಆಚರಣೆಯಲ್ಲಿ ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ಬಸ್‍ಗಳ ಪೂಜೆಗಾಗಿ ನೀಡಿರುವ ಹಣ ಎಷ್ಟು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಅದು ಅಪಹಾಸ್ಯಕ್ಕೂ ಗುರಿಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ರೂಟ್ ಬಸ್‍ಗಳಿಗೆ ಪೂಜೆ ವೆಚ್ಚವೆಂದು ಕೇವಲ 10 ರೂ ಕೊಟ್ಟಿದೆ.

    ಇಂದು ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ರೂಟ್ ಬಸ್‍ಗಳಿಗೆ 10 ರೂಪಾಯಿ ಪೂಜಾ ವೆಚ್ಚವನ್ನಾಗಿ ನೀಡಲು ಆದೇಶ ಮಾಡಲಾಗಿದೆ. ಹೀಗಾಗಿ ಆಯಾ ಘಟಕಗಳಿಂದ ರೂಟ್ ಬಸ್‍ಗಳಿಗೆ ಪೂಜಾ ವೆಚ್ಚವಾಗಿ 10 ರೂಪಾಯಿಯನ್ನು ನೀಡಲಾಗಿದೆ. ಸಂಸ್ಥೆ ನೀಡಿರುವ ಈ ಪೂಜಾ ವೆಚ್ಚದ ಭಾರೀ ಮೊತ್ತದಲ್ಲಿ ಏನನ್ನು ಖರೀದಿಸಬೇಕು ಎಂದು ಚಾಲಕರು ಹಾಗೂ ನಿರ್ವಾಹಕರು ಯೋಚನೆ ಮಾಡುವಂತಾಗಿದೆ. ಅಲ್ಲದೆ ಇಷ್ಟೊಂದು ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಲೆಕ್ಕ ತಿಳಿಯದಂತಾಗಿದ್ದಾರೆ.

    ಕೆಲ ಚಾಲಕರು ಹಾಗೂ ನಿರ್ವಾಹಕರು ಆ 10 ರೂಪಾಯಿಯನ್ನು ತೆಗೆದುಕೊಳ್ಳದೆ ಸಂಸ್ಥೆಗೆ ಇರಲಿ ಎಂದು ಬಿಟ್ಟು ಬಂದಿದ್ದಾರೆ. ಸಿಬ್ಬಂದಿಬಡತನದಲ್ಲಿರುವ ನಮ್ಮ ಸಂಸ್ಥೆಗಾಗಿ ಆ 10 ರೂಪಾಯಿ ಜಮೆಯಾಗಲಿ ಎಂದು ಬಿಟ್ಟು ಹೋಗಿದ್ದಾರೆ ಎನ್ನುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5 ಘಟಕಗಳಿದ್ದು ಕೊಪ್ಪಳ ಘಟಕದ 137, ಕುಷ್ಟಗಿ ಘಟಕದ 97, ಯಲಬುರ್ಗಾ ಘಟಕದ 66, ಗಂಗಾವತಿ ಘಟಕದ 132 ಹಾಗೂ ಕುಕನೂರು ಘಟಕದ 40 ರೂಟ್ ಬಸ್‍ಗಳು ಸೇರಿದಂತೆ ಒಟ್ಟು 472 ರೂಟ್ ಬಸ್‍ಗಳಿಗೆ ತಲಾ 10 ರೂಪಾಯಿಯಂತೆ ಪೂಜಾ ವೆಚ್ಚ 4,720 ರೂಪಾಯಿ ಮಂಜೂರು ಮಾಡಲಾಗಿದೆ.

    10 ರೂಪಾಯಿಯಲ್ಲಿ ಈಗ ಮೊಳ ಹೂವು ಬರುವುದಿಲ್ಲ. ಕಳೆದ ಬಾರಿ ಪೂಜಾ ವೆಚ್ಚಕ್ಕಾಗಿ ಕೇವಲ 7 ರೂಪಾಯಿ ನೀಡಲಾಗಿತ್ತು. ಆಗಲೂ ಬಹುತೇಕ ಸಿಬ್ಬಂದಿ ಇದನ್ನು ಸ್ವೀಕರಿಸಿರಲಿಲ್ಲ. ಈ ವರ್ಷ ಉದಾರಭಾವ ತೋರಿ 3 ರೂಪಾಯಿ ಹೆಚ್ಚಳ ಮಾಡಿ ಒಟ್ಟು 10 ರೂಪಾಯಿಯಂತೆ ಪೂಜಾ ವೆಚ್ಚ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಯ ಪೂಜಾ ವೆಚ್ಚದ ಈ ಆದೇಶ ಈಗ ಅಪಹಾಸ್ಯಕ್ಕೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv