Tag: aysh

  • ಬಾಹುಬಲಿ-ಕೆಜಿಎಫ್ ‘ರಾಕಿ ಭಾಯ್’ ಮುಂಬೈನಲ್ಲಿ ಭೇಟಿಯಾಗಿದ್ದೇಕೆ?

    ಬಾಹುಬಲಿ-ಕೆಜಿಎಫ್ ‘ರಾಕಿ ಭಾಯ್’ ಮುಂಬೈನಲ್ಲಿ ಭೇಟಿಯಾಗಿದ್ದೇಕೆ?

    ಮುಂಬೈ: ಈಗ ಏನಿದ್ರೂ ಕೆಜಿಎಫ್ ರಾಕಿ ಭಾಯಿಯದ್ದೇ ಹವಾ…! ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ರಾಕಿ ಭಾಯ್ ಯಶ್ ಮುಂಬೈನಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದಾರೆ. ಇಲ್ಲಿನ ಪಾಲಿ ಭವನ್ ನಲ್ಲಿ ಭೇಟಿಯಾಗಿರೋ ಇಬ್ಬರು ಸೂಪರ್ ಸ್ಟಾರ್ ಗಳ ಫೋಟೋ ಈಗ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದೆ.

    ಪಾಲಿಭವನ್ ನಿಂದ ಹೊರಡುವಾಗ ಇಬ್ಬರು ನಟರೂ ಪರಸ್ಪರ ತಬ್ಬಿಕೊಂಡು ಬಾಯ್ ಹೇಳಿದ್ದಾರೆ. ಆ್ಯಕ್ಷನ್ ಸಿನಿಮಾದಿಂದ ಖ್ಯಾತಿಗೊಂಡ ಇಬ್ಬರನ್ನು ನೋಡಿ ಎಲ್ಲರಿಗೂ ಖುಷಿಯಾಗಿದೆ. ಇದೇ ವೇಳೆ ಇಬ್ಬರು ಸ್ಟಾರ್ ನಟರೂ ಯಾವುದೇ ಹಮ್ಮಿಲ್ಲದೆ ಫೋಟೋಗೆ ಪೋಸ್ ಕೊಟ್ಟು ಅಭಿಮಾನಿಗಳಿಗೆ ಖುಷಿ ನೀಡಿದರು.

    ಇತ್ತೀಚೆಗೆ ಪ್ರಮುಖ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್, ಬಾಹುಬಲಿ ಯಶಸ್ಸಿನಿಂದ ಪ್ರೇರಿತನಾಗಿ ಕೆಜಿಎಫ್ ಸಿನಿಮಾವನ್ನು ಬಹುಭಾಷೆಯಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದೆವು. ದಕ್ಷಿಣ – ಉತ್ತರ ಎಂಬ ಎಲ್ಲ ಗಡಿಗಳನ್ನೂ ಬಾಹುಬಲಿ ಅಳಿಸಿ ಹಾಕಿತ್ತು. ಈ ಹಿಂದೆ ದಕ್ಷಿಣ ಭಾರತದ ಹಲವು ಸಿನಿಮಾಗಳು ಬಾಲಿವುಡ್ ನಲ್ಲಿ ಹಿಟ್ ಆಗಿದೆ. ಆದರೆ ಇದೊಂದು ಹೊಸ ಲೆವೆಲ್. ಕೆಜಿಎಫ್ ಸಿನಿಮಾವನ್ನು ಆ ಸಿನಿಮಾಗಳಿಗೆ ಹೋಲಿಸುತ್ತಿರುವುದು ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದರು.

    ಕೆಜಿಎಫ್ ಚಿತ್ರ ಎರಡು ಭಾಗದಲ್ಲಿ ಬಿಡುಗಡೆಯಾಗುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ. ಡಿ.21ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv