Tag: Ayodya

  • ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ನವದೆಹಲಿ: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ (Ram Mandir) ಕಾಮಗಾರಿ ಮುಂದಿನ ಸಂಕ್ರಮಣದ ವೇಳೆಗೆ ಅಂತ್ಯವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಅಕ್ಟೋಬರ್ ವೇಳೆಗೆ ಮೊದಲ ಮಹಡಿ ಸಿದ್ಧವಾಗಲಿದ್ದು, ಮುಂದಿನ ಜನವರಿಗೆ ಕಾಮಗಾರಿ ಅಂತ್ಯವಾಗಲಿದೆ ಎಂದರು.

    ಸುದ್ದಿಗೋಷ್ಠಿ ನಡೆಸಿ ಮಂದಿರ ನಿರ್ಮಾಣ ಪ್ರಗತಿ ಬಗ್ಗೆ ತಿಳಿಸಿದ ಅವರು, ದೇವಸ್ಥಾನದ ಕಾಮಗಾರಿ 60%ರಷ್ಟು ಅಂತ್ಯವಾಗಿದೆ. ವೇಗವಾಗಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ನಿಗದಿತ ಅವಧಿಗಿಂತ ಮುಂಚೆ ಕಾಮಗಾರಿ ಅಂತ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    2024ರ ಮಕರ ಸಂಕ್ರಾಂತಿಯ (Makar Sankranti) ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮಲಾಲಾ ಅವರ ಪ್ರಾಣ ಪ್ರತಿಸ್ಥಾಪಿಸಲಾಗುವುದು, ಸದ್ಯದ ಸಿದ್ಧತೆಗಳ ಪ್ರಕಾರ ಜನವರಿ 1 ರಿಂದ 14ರೊಳಗೆ ಪ್ರಾಣ ಪ್ರತಿಷ್ಠಾನ ಕಾರ್ಯ ನಡೆಯುವ ಯೋಜನೆ ಇದೆ ಎಂದರು. ಇದನ್ನೂ ಓದಿ: ನಿರಾಣಿ ಆ ಹುಲಿ ಜೊತೆ ಮಾತಾಡಲಿ- ಯತ್ನಾಳ್‍ರನ್ನ ಹುಲಿಗೆ ಹೋಲಿಕೆ ಮಾಡಿದ ಸ್ವಾಮೀಜಿ

    ಶ್ರೀರಾಮನ ವಿಗ್ರಹವು ಟ್ರಸ್ಟ್ ಪ್ರಕಾರ 8.5 ಅಡಿ ಎತ್ತರವಿರುತ್ತದೆ. ರಾಮ ನವಮಿಯಂದು ಸೂರ್ಯ ಕಿರಣ ರಾಮನ ಮೇಲೆ ಬೀಳುವಂತೆ ವಿನ್ಯಾಸ ಮಾಡಿರುವ ಹಿನ್ನಲೆ ಮೂರ್ತಿ 8.5 ಅಡಿ ಎತ್ತರಕ್ಕೆ ನಿರ್ಧರಿಸಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ರಾಮನ ಮೂರ್ತಿಯೂ 5 ರಿಂದ 7 ವರ್ಷ ವಯಸ್ಸಿನ ಮಗುವಿನ ರೂಪದಲ್ಲಿರಲಿದೆ.

    ಈ ಮೂರ್ತಿ ಆಕಾಶ ನೀಲಿ ಬಣ್ಣದಲ್ಲಿರಲಿದ್ದು, ವಿಗ್ರಹಕ್ಕೆ ಅಂತಹ ಕಲ್ಲನ್ನು ಆಯ್ಕೆ ಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಶಿಲ್ಪಿ ರಾಮಲಾಲಾ ವಿಗ್ರಹದ ಆಕಾರವನ್ನು ಮಾಡಲಿದ್ದಾರೆ. ಓರಿಸ್ಸಾದ ಹಿರಿಯ ಶಿಲ್ಪಿಗಳಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್ ಮತ್ತು ಕರ್ನಾಟಕ ಮೂಲದ ರಾಮಯ್ಯ ವಾಡೇಕರ್ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚಂಪತ್ ರೈ ತಿಳಿಸಿದರು. ಇದನ್ನೂ ಓದಿ: ಸ್ಯಾಂಟ್ರೋ ಟ್ರಾವೆಲ್ಸ್ ಹತ್ತಿದವರಿಗೆ ಸಿಡಿ ಭಯ- ರವಿ ಹತ್ರ ಸಿಡಿ ಇವೆಯಾ..!?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಯೋಧ್ಯೆಯಲ್ಲಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ವಿತರಣೆ

    ಅಯೋಧ್ಯೆಯಲ್ಲಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ವಿತರಣೆ

    ಲಕ್ನೋ: ಅಯೋಧ್ಯೆಯಲ್ಲಿ ರಾಷ್ಟ್ರಧ್ವಜವನ್ನು ಕಸದ ಗಾಡಿಯ ಮೂಲಕ ವಿತರಣೆ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

    ಅಜಾದಿ ಕಿ ಅಮೃತ ಮಹೋತ್ಸವದ ಅಡಿಯಲ್ಲಿ ಮನೆ ಮನೆಯಲ್ಲೂ ಧ್ವಜವೂ ಹಾರಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಧ್ವಜವನ್ನು ವಿತರಣೆ ಮಾಡುತ್ತಿದ್ದವರು ಕಸದ ಗಾಡಿಯಲ್ಲಿ ಧ್ವಜವನ್ನು ಇಟ್ಟುಕೊಂಡಿದ್ದರು. ಇದರಿಂದಾಗಿ ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ತಿರಂಗಾ ಯಾತ್ರೆ ಸಾಧು, ಸಂತರ ನೇತೃತ್ವದಲ್ಲಿ ನಡೆದಿದ್ದು, ಅಯೋಧ್ಯೆ ಮುನ್ಸಿಪಲ್ ಕಾರ್ಪೋರೇಷನ್‍ಗೆ ಸೇರಿದ ವಾಹನ ಇದಾಗಿದೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಪೊಲೀಸರು, ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವ – ರಾಷ್ಟ್ರಪತಿಯಾಗಿ ದೇಶವನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ದ್ರೌಪದಿ ಮುರ್ಮು

    ಈ ಬಗ್ಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್ ಮಾಡಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ನೇತೃತ್ವದಲ್ಲಿ ರಾಷ್ಟ್ರಧ್ವಜವನ್ನು ಕಸದ ಟ್ರಕ್‍ನಲ್ಲಿ ಸಾಗಿಸುವ ಮೂಲಕ ರಾಷ್ಟ್ರಧ್ವಜವನ್ನು ಅವಹೇಳನ ಮಾಡಿದ್ದಾರೆ. ಈ ರೀತಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಬಿಂದು ಅನ್ಮೋಲ್ ಅಪಾರ್ಟ್‍ಮೆಂಟ್ ನಿವಾಸಿಗಳಿಂದ ತಿರಂಗಾ ಅನಾವರಣ

    Live Tv
    [brid partner=56869869 player=32851 video=960834 autoplay=true]

  • ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ

    ಬಳ್ಳಾರಿ: ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಬಳಕೆ ಮಾಡಲಾಗುತ್ತದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿ ನಗರ ಹೊರವಲಯದ ಅಲ್ಲೀಪುರ ಕೆರೆಯ ಎಚ್‍ಎಲ್‍ಸಿ ಕಾಲುವೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರೋದು ನಮಗೆಲ್ಲ ಖುಷಿ ತಂದಿದೆ. ಅಂಜನಾದ್ರಿ ಬೆಟ್ಟದಲ್ಲಿ ವಾಯು, ಸುಗ್ರೀವ, ರಾಮನೂ ಕೂಡ ನೆಲೆಸಿದ್ದ ಎಂಬ ಪ್ರತೀತಿಯಿದೆ. ಹೀಗಾಗಿ ಅಲ್ಲಿಂದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಒಂದು ಕಲ್ಲನ್ನು ಒಯ್ಯಲಾಗಿದೆ. ರಾಮಮಂದಿರದಲ್ಲೂ ಕೂಡ ಅಂಜನಾದ್ರಿ ಬೆಟ್ಟದ ಕಲ್ಲನ್ನು ನಾವು ನೋಡಬಹುದಾಗಿದೆ ಎಂದರು.

    ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ನಿನ್ನೆ ಗೊತ್ತಾಯ್ತು. ವಿಷಯ ಕೇಳಿ ತುಂಬಾ ನೋವಾಯ್ತು. ಮುಖ್ಯಮಂತ್ರಿಗಳು ಆದಷ್ಟು ಬೇಗ ಗುಣಮುಖರಾಗಿ ಬರಬೇಕು. ಈ ನಾಡಿಗೆ ಅವರ ಸೇವೆ ಅತ್ಯಗತ್ಯವಾಗಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುವುದಾಗಿ ಎಂದು ಸೋಮಶೇಖರ್ ತಿಳಿಸಿದರು.

  • ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ ಗುರುವೈಭವೋತ್ಸವ

    -ಅಯೋಧ್ಯ ರಾಮ ಮಂದಿರದ ಕುರಿತು ಸುಬುಧೇಂದ್ರ ತೀರ್ಥ ಶ್ರೀಗಳ ಮಾತು
    -ಯೋಧರಿಗಾಗಿ ರುದ್ರಯಾಗ

    ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವೈಭೋತ್ಸವ ಕಾರ್ಯಕ್ರಮಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಚಾಲನೆ ನೀಡಿದ್ದು, ಇಂದಿನಿಂದ ಆರು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿದೆ.

    ಗುರು ರಾಯರ 424ನೇ ವರ್ಧಂತೋತ್ಸವ ಹಾಗು 398ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಈ ಕಾರ್ಯಕ್ರಮಗಳು ಮಾರ್ಚ್ 13ರ ವರೆಗೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೂ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಈ ಆರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗೆಯೇ ಪ್ರತಿದಿನ ಸಂಜೆ ಅನುಗ್ರಹ ಪ್ರಶಸ್ತಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೆ ಕೊನೆಯ ದಿನ ನಾದಹಾರ ಕಾರ್ಯಕ್ರಮ ನಡೆಯಲಿದ್ದು, ಭಜನಾ ಮಂಡಳಿಗಳ ನೂರಾರು ಸಂಗೀತಗಾರರು ಒಟ್ಟಿಗೆ ರಾಯರ ಕೀರ್ತನೆ ಹಾಡಲಿದ್ದಾರೆ.

    ಈ ವೈಭವೋಪೇತ ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ರಾಯರ ಆಶೀರ್ವಾದ ಪಡೆಯಲು ಗುರುವೈಭವೋತ್ಸವಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ಅಲ್ಲದೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ, ಸುಬುಧೇಂದ್ರ ತೀರ್ಥ ಶ್ರೀಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿದರು. ಅಯೋಧ್ಯ ಸಂಧಾನಕ್ಕೆ ಸಂಧಾನಕಾರರನ್ನ ನೇಮಿಸಿರುವುದು ಸ್ವಾಗತರ್ಹ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ರಾಮ ಜನಿಸಿದ ನಾಡಿನಲ್ಲಿ ಮಂದಿರ ನಿರ್ಮಾಣವಾಗಬೇಕು. ಆದ್ರೆ ಶಾಂತಿ ಮತ್ತು ಸೌಹಾರ್ದತೆಯಿಂದ ಮಂದಿರ ನಿರ್ಮಾಣವಾಗಬೇಕು. ನ್ಯಾಯಾಲಯ ಈ ನಿಟ್ಟಿನಲ್ಲಿ ಸಂಧಾನ ಸಮಿತಿ ರಚಿಸಿರುವುದನ್ನ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ:ಸಂಧಾನದ ಮೂಲಕವೇ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಿ- ಸುಪ್ರೀಂ ಕೋರ್ಟ್

    ನಿವೃತ್ತ ನ್ಯಾಯಮೂರ್ತಿ ಎಫ್.ಎಂ ಇಬ್ರಾಹಿಂ ಖಲೀಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಸಂಧಾನ ತಜ್ಞ ವಕೀಲ ಶ್ರೀರಾಮ್ ಪಾಂಚುರನ್ನ ಸಂಧಾನಕಾರರಾಗಿ ಆಯ್ಕೆ ಮಾಡಿರುವುದಕ್ಕೆ ಸಹಮತ ಸೂಚಿಸಿದರು. ಹಾಗೆಯೇ ದೇಶದಲ್ಲಿ ಶಾಂತಿ ನೆಲಸಲು, ಯೋಧರ ರಕ್ಷಣೆಗಾಗಿ ಶ್ರೀ ಮಠದಲ್ಲಿ ಮಾರ್ಚ್ 12 ರಂದು ಮಹಾರುದ್ರ ಯಾಗವನ್ನು ನಡೆಸಲಾಗುವುದು. ದೇಶದ ನಾನಾ ಕಡೆಯಿಂದ 200 ಜನ ರುದ್ರಯಾಗ ಮಾಡುವವರು ಆಗಮಿಸಲಿದ್ದಾರೆ ಅಂತ ಸುಬುಧೇಂದ್ರ ತೀರ್ಥ ಶ್ರೀಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv