Tag: Ayodhya Ram Temple

  • ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜ – ನ.25 ಕ್ಕೆ ಮೋದಿ ಧ್ವಜಾರೋಹಣ

    ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜ – ನ.25 ಕ್ಕೆ ಮೋದಿ ಧ್ವಜಾರೋಹಣ

    – ಧ್ವಜದ ಮೇಲೆ ಸೂರ್ಯವಂಶಿ & ತ್ರೇತಾಯುಗದ ಚಿಹ್ನೆ

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಿರುವ ಭವ್ಯ ರಾಮಮಂದಿರದ (Ram Mandir) ಗರ್ಭಗುಡಿಯ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜವನ್ನು ಹಾರಿಸಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರು ರಾಮಮಂದಿರದ ಮೇಲ್ಭಾಗದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ.

    ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಧಾರ್ಮಿಕ ಸಮಿತಿಯ ಸದಸ್ಯರ ಮಹತ್ವದ ಸಭೆ ಜಾನಕಿ ಘಾಟ್‌ನ ವೈದೇಹಿ ಭವನದಲ್ಲಿ ನಡೆಯಿತು. ನವೆಂಬರ್ 25 ರಂದು ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದ ರೂಪುರೇಷೆಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಧಾರ್ಮಿಕ ಸಮಿತಿಯ ಸದಸ್ಯ ಗೋಪಾಲ್ ರಾವ್ ಹೇಳಿದರು. ಇದನ್ನೂ ಓದಿ: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ; ತನಿಖೆ ಕೈಗೊಳ್ಳಲು SITಗೆ ಕೇರಳ ಹೈಕೋರ್ಟ್ ಸೂಚನೆ

    191 ಅಡಿ ಎತ್ತರದ ರಾಮಮಂದಿರದ ಮೇಲ್ಭಾಗದಲ್ಲಿ 11 ಅಡಿ ಅಗಲ ಮತ್ತು 22 ಅಡಿ ಉದ್ದದ ತ್ರಿಕೋನಾಕಾರದ ಕೇಸರಿ ಧ್ವಜವನ್ನು ಹಾರಿಸಲು ನಿರ್ಧರಿಸಿದೆ. ಧ್ವಜದ ಮೇಲೆ ಸೂರ್ಯವಂಶಿ ಮತ್ತು ತ್ರೇತಾಯುಗದ ಚಿಹ್ನೆಗಳನ್ನು ಇರಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿಯು ಒಮ್ಮತಕ್ಕೆ ಬಂದಿದೆ.

    ದೀಪಾವಳಿ ಬಳಿಕ ಎಲ್ಲಾ ಅತಿಥಿಗಳಿಗೆ ಆಹ್ವಾನ ಪತ್ರಗಳನ್ನು ಕಳುಹಿಸಲಾಗುವುದು. ಎಂಟರಿಂದ ಹತ್ತು ಸಾವಿರ ಅತಿಥಿಗಳು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಖಜಾಂಚಿ ಗೋವಿಂದ್ ದೇವಗಿರಿ, ಸದಸ್ಯರಾದ ಡಾ. ಅನಿಲ್ ಮಿಶ್ರಾ, ಗೋಪಾಲ್ ರಾವ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಸುಪ್ರೀಂಗೆ ಮನವಿ

    ದೀಪಾವಳಿ ಲಕ್ಷ ದೀಪೋತ್ಸಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಕೆಲಸಗಳು ಶುರುವಾಗಿವೆ. ಭಕ್ತರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ, ಬೆಳಕು, ವಿಶ್ರಾಂತಿ ಕೊಠಡಿಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು, ಕುಡಿಯುವ ನೀರು ಮತ್ತು ರ‍್ಯಾಂಪ್‌ಗಳಂತಹ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ಕೆಲಸಗಳು ಅ.15 ರೊಳಗೆ ಪೂರ್ಣಗೊಳ್ಳಲಿವೆ.

  • ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ

    ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ

    – ರಾಮಮಂದಿರ ಸ್ಫೋಟಿಸಿ ಬಾಬರಿ ಮಸೀದಿ ನಿರ್ಮಿಸುವ ಎಚ್ಚರಿಕೆ

    ಲಕ್ನೋ: ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮಭೂಮಿ ದೇವಸ್ಥಾನವನ್ನು (Ayodhya Ram Mandir) ಆರ್‌ಡಿಎಕ್ಸ್‌ನೊಂದಿಗೆ ಸ್ಫೋಟಿಸುವ ಮತ್ತು ಬಾಬರಿ ಮಸೀದಿಯನ್ನು ನಿರ್ಮಿಸುವ ಬೆದರಿಕೆಗಳು ಬಂದಿವೆ. ಟ್ರಸ್ಟ್‌ನ ಸಿಎ ಚಂದನ್ ಕುಮಾರ್ ರೈ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    2024ರ ಆಗಸ್ಟ್ 22 ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೆಲ್ಪ್‌ ಡೆಸ್ಕ್ ವಾಟ್ಸಾಪ್‌ಗೆ ಈ ಸಂದೇಶ ಬಂದಿದೆ. ಉರ್ದು ಭಾಷೆಯಲ್ಲಿ ಬರೆದ ಸಂದೇಶದಲ್ಲಿ ರಾಮಜನ್ಮಭೂಮಿ ದೇವಸ್ಥಾನವನ್ನು ನಾಲ್ಕು ಸಾವಿರ ಕಿಲೋ ಆರ್‌ಡಿಎಕ್ಸ್‌ನಿಂದ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಪ್ರಕರಣದ ತನಿಖೆಯ ವೇಳೆ ಬಿಹಾರ ಪ್ರಾಂತ್ಯದ ಭಾಗಲ್ಪುರ ಜಿಲ್ಲೆಯ ಬಾಬರ್ ಗಂಜ್ ನಿವಾಸಿ ಮೊಹಮ್ಮದ್ ಅಮನ್ ಹೆಸರು ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಮಮಂದಿರ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಬೆದರಿಕೆ; ಖಲಿಸ್ತಾನಿ ಉಗ್ರ ಪನ್ನುನ್ ವೀಡಿಯೋ ರಿಲೀಸ್‌

    ಪ್ರಕರಣ ಬೆನ್ನಲ್ಲೆ ಈ ಹಿನ್ನೆಲೆ ಪ್ರಕರಣದ ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈಗಾಗಲೇ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿ ಮೊಹಮ್ಮದ್ ಅಮಾನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ III ಅಶೋಕ್ ಕುಮಾರ್ ದುಬೆ ಈ ಆದೇಶ ನೀಡಿದ್ದಾರೆ.

    ಘಟನೆಯ ತನಿಖೆ ನಡೆಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ಮೂಲ ಕೇಸ್ ಡೈರಿ ಮತ್ತು ಅದರ ಎಲ್ಲಾ ನಮೂನೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಹಿಂದೂ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು

  • ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    – ಬೆಚ್ಚಗಿನ ನೀರಲ್ಲಿ ರಾಮಲಲ್ಲಾನಿಗೆ ಸ್ನಾನ

    ಲಕ್ನೋ: ಚಳಿಗಾಲ ಸಮೀಪಿಸಿದ್ದು, ಅಯೋಧ್ಯೆ (Ayodhya) ರಾಮಮಂದಿರದ (Ram Mandir) ಬಾಲರಾಮನನ್ನು ಬೆಚ್ಚಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನವೆಂಬರ್‌ 20 ರಿಂದ ಬರುವ ‘ಅಘರ್‌ ಕಿ ಪಂಚಮಿ’ಯಿಂದ ರಾಮಲಲ್ಲಾನಿಗೆ ಚಾದರ, ಪಶ್ಮಿನಾ ಶಾಲು ಹೊದಿಸಿ ಅಲಂಕಾರ ಮಾಡಲಾಗುವುದು. ಹೀಟರ್‌ ಅಳವಡಿಕೆ ಮಾಡಿ ಮೂರ್ತಿಗೆ ಬಿಸಿ ನೀರಿನ ಅಭಿಷೇಕ ಮಾಡುವುದು. ಬಾಲರಾಮನಿಗೆ ಮೊಸರು ನೈವೇದ್ಯದ ಬದಲು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಣ ಹಣ್ಣುಗಳ ನೈವೇದ್ಯ ಇರುತ್ತದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

    ಚಳಿಗಾಲದ ಉಡುಗೆಯನ್ನು ದೆಹಲಿ ಮೂಲದ ವಿನ್ಯಾಸಕರು ಹೊಲಿಯುತ್ತಿದ್ದಾರೆ. ನ.20 ರಿಂದ, ರಾಮಲಲ್ಲಾ ಮೂರ್ತಿಗೆ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಲಾಗುವುದು ಮತ್ತು ಗರ್ಭಗುಡಿಯಲ್ಲಿ ಹೀಟರ್‌ಗಳನ್ನು ಅಳವಡಿಸಿ ಅದನ್ನು ಬೆಚ್ಚಗಿಡಲಾಗುತ್ತದೆ. ಹವಾಮಾನ ವೈಪರೀತ್ಯದ ಸಮಯದಲ್ಲಿ ಗರ್ಭಗುಡಿಯಲ್ಲಿ ಬ್ಲೋವರ್‌ನಿಂದ ಬೆಚ್ಚಗಿನ ಗಾಳಿಯನ್ನು ಸಹ ಒದಗಿಸಲಾಗುತ್ತದೆ.

    ರಾಮಲಲ್ಲಾ ಬಾಲಕ. ಹೀಗಾಗಿ, ಅವನ ಆರೈಕೆ ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ಬಾಲಕ ರಾಮನಿಗೆ ವಿಶೇಷ ಗಮನ ಕೊಡಲಾಗುವುದು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ದೇವಾಲಯದ ಟ್ರಸ್ಟ್‌ನ ವಕ್ತಾರ ಓಂಕಾರ್ ಸಿಂಗ್, ರಾಮಲಲ್ಲಾ ರಾಮಮಂದಿರದಲ್ಲಿ ರಾಜಕುಮಾರನಾಗಿ ಕುಳಿತಿದ್ದಾನೆ. ಆದ್ದರಿಂದ ಅವನ ಬಟ್ಟೆಗಳು ಅವನ ರಾಜಪ್ರಭುತ್ವಕ್ಕೆ ಹೊಂದಿಕೆಯಾಗಬೇಕು ಎಂದು ಸಿಂಗ್ ಹೇಳಿದರು.

  • ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ – ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಎಚ್ಚರಿಕೆ

    ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ – ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಎಚ್ಚರಿಕೆ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಬಾಲರಾಮನ ದರ್ಶನಕ್ಕೆ ಸಂಬಂಧಿಸಿದಂತೆ ನಕಲಿ ಲಿಂಕ್‌ ನಂಬಿ ಮೋಸ ಹೋಗಬೇಡಿ ಎಂದು ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಎಚ್ಚರಿಕೆ ನೀಡಿದೆ.

    ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲ. ವಿಶೇಷ ಆರತಿಗಳಿಗೆ ಮಾತ್ರ ಪಾಸ್ ಅನ್ನು ವೆಬ್‌ಸೈಟ್ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಪಾಸ್ ವಿತರಣೆ ಹೆಸರಲ್ಲಿ ನಕಲಿ ವೆಬ್ಸೈಟ್‌ಗಳು ಹುಟ್ಟಿಕೊಂಡಿದ್ದು ಹಣ ವಂಚಿಸುವ ಸಾಧ್ಯತೆಗಳಿದೆ. ಈ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮೈತ್ರಿ ಮಾತುಕತೆ ಯಶಸ್ವಿ – 13 ಸೀಟು ಶಿಂಧೆ ಬಣಕ್ಕೆ, 4 ರಲ್ಲಿ ಎನ್‌ಸಿಪಿ ಸ್ಪರ್ಧೆ

    ದರ್ಶನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್, ಆಯೋಧ್ಯೆಗೆ ಪ್ರತಿನಿತ್ಯವೂ 1 ರಿಂದ 1.5 ಲಕ್ಷ ಜನ ನಿತ್ಯವೂ ದರ್ಶನಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 6:30 ರಿಂದ 9:30 ರವರೆಗೆ ದರ್ಶನ ಪಡೆಯಲು ದೇಗುಲಕ್ಕೆ ಬರಬಹುದು. 60-75 ನಿಮಿಷದೊಳಗೆ ರಾಮಲಲ್ಲಾನ ದರ್ಶನ ಮುಗಿಸಿ ಹೊರಗೆ ಬರಬಹುದು. ಮೊಬೈಲ್, ಪರ್ಸ್ ಎಲ್ಲವನ್ನೂ ದೇಗುಲದ ಹೊರಗೆ ಇಟ್ಟು ಬಂದರೆ ಉತ್ತಮ. ಮುಖ್ಯವಾಗಿ ದರ್ಶನಕ್ಕೆ ಬರುವ ಭಕ್ತರು ಹೂವು ಹಣ್ಣು, ಪ್ರಸಾದ ಯಾವುದೂ ತರುವಂತಿಲ್ಲ ಎಂದು ಮನವಿ ಮಾಡಿದೆ.

    ಪ್ರತಿದಿನ ಬೆಳಗ್ಗೆ 4 ಗಂಟೆಗೆ ಮಂಗಳ ಆರತಿ ನಡೆಯಲಿದೆ. ಶಯನಾರತಿ 10 ಗಂಟೆ ರಾತ್ರಿ ನಡೆಯಲಿದೆ ಈ ಆರತಿಗಳಿಗೆ ಮಾತ್ರ ವಿಶೇಷ ಪಾಸ್ ಅಗತ್ಯವಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ ಸೈಟ್ ನಲ್ಲಿ ಈ ಪಾಸ್‌ನ್ನು ಪಡೆಯಬಹುದು. ಪಾಸ್ ನೀಡಲು ಹಣ ಪಾವತಿಸಲು ಕೇಳಿದರೆ ಅದು ನಕಲಿ ಮತ್ತು ವಂಚನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಅರಿತುಕೊಳ್ಳಬೇಕು. ವಿಶೇಷ ದರ್ಶನಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಇದಕ್ಕೆ ದುಡ್ಡು ಪಾವತಿ ಮಾಡಬೇಕಾಗಿಲ್ಲ. ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ ಎಂದು ಟ್ರಸ್ಟ್ ಎಚ್ಚರಿಸಿದೆ. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ

    ವಯಸ್ಸಾದವರಿಗೆ, ವಿಶೇಷ ಚೇತನಕರಿಗೆ, ವ್ಹೀಲ್ ಚೇರ್ ವ್ಯವಸ್ಥೆಯೂ ಇದ್ದು, ವೃದ್ಧರೂ ಬಂದು ಬಾಲರಾಮನ ದರ್ಶನ ಮಾಡಬಹುದು. ಇದಕ್ಕೆ ಬೇಕಾದ ಎಲ್ಕ ಅಗತ್ಯ ವ್ಯವಸ್ಥೆಗಳನ್ನು ದೇವಸ್ಥಾನದಲ್ಲಿ ಮಾಡಿದ್ದು, ಜನರು ಅಯೋಧ್ಯೆಗೆ ಬಂದು ಪ್ರಭು ಶ್ರೀರಾಮನ ದರ್ಶನ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಅಯೋಧ್ಯೆ ಬಾಲಕರಾಮನಿಗೆ ನಿತ್ಯ ಬೆಳಗ್ಗೆ ಆರತಿ – ದೂರದರ್ಶನದಲ್ಲಿ ನೇರಪ್ರಸಾರ

    ಅಯೋಧ್ಯೆ ಬಾಲಕರಾಮನಿಗೆ ನಿತ್ಯ ಬೆಳಗ್ಗೆ ಆರತಿ – ದೂರದರ್ಶನದಲ್ಲಿ ನೇರಪ್ರಸಾರ

    ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಗೊಂಡಿರುವ ಬಾಲಕರಾಮನಿಗೆ (Ramlala) ಪ್ರತಿ ದಿನ ಬೆಳಗ್ಗೆ 6:30 ಕ್ಕೆ ಆರತಿ ಬೆಳಗಲಾಗುವುದು. ಇದನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುವುದು.

    ಈಗ ಪ್ರತಿದಿನವೂ ಭಗವಾನ್ ರಾಮಲಲ್ಲಾನ ದಿವ್ಯ ದರ್ಶನವಾಗುತ್ತದೆ. ಅಯೋಧ್ಯೆಯ ಬಾಲಕರಾಮನಿಗೆ ಪ್ರತಿ ದಿನ ಆರತಿ ಬೆಳಗುವುದರ ನೇರ ಪ್ರಸಾರವನ್ನು ವೀಕ್ಷಿಸಬಹುದು. ಪ್ರತಿದಿನ ಬೆಳಗ್ಗೆ 6:30 ಕ್ಕೆ #DDNational ನೇರ ಪ್ರಸಾರವಾಗಲಿದೆ ಎಂದು ಸಾರ್ವಜನಿಕ ಪ್ರಸಾರಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆಗೆ ಮಲ್ಲಿಕಾರ್ಜುನ ಖರ್ಗೆ ಹಿಂದೇಟು?

    ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಂತರ, ನಾವು ಬೆಳಗ್ಗೆ ದೈನಂದಿನ ಆರತಿಯ ನೇರ ಪ್ರಸಾರಕ್ಕೆ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದೆವು. ಈಗ ಅನುಮೋದನೆ ನೀಡಲಾಗಿದೆ. ವಿವಿಧ ಕಾರಣಗಳಿಂದ ಅಯೋಧ್ಯೆಗೆ ಭೇಟಿ ನೀಡಲು ಸಾಧ್ಯವಾಗದ ಎಲ್ಲ ಭಕ್ತರು ಡಿಡಿ ನ್ಯಾಷನಲ್ ಮೂಲಕ ಶ್ರೀರಾಮನ ಮಂಗಳಕರ ದರ್ಶನವನ್ನು ಪಡೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಯೋಧ್ಯೆ ರಾಮಮಂದಿರದಲ್ಲಿ ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಿಸಲಾಯಿತು. ರಾಮಲಲ್ಲಾನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕರ್ನಾಟಕ ಫಸ್ಟ್ ಲಿಸ್ಟ್ ಇಂದೇ ರಿಲೀಸ್ ಸಾಧ್ಯತೆ- ಸಂಭಾವ್ಯ ಅಭ್ಯರ್ಥಿಗಳು ಯಾರು?

  • ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಹೈದರಾಬಾದ್‌: ಜನವರಿ 22ರಂದು ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠೆಗಾಗಿ ದೇಶ ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರು ಪ್ರತಿದಿನ ಒಂದೊಂದು ಕೆಜಿ ಲಡ್ಡುವನ್ನು ಮೀಸಲಿಟ್ಟು, ಶ್ರೀರಾಮನ ನೈವೇದ್ಯಕ್ಕಾಗಿ 1,265 ಕೆ.ಜಿ ತೂಕದ ವಿಶೇಷ ಲಡ್ಡು (Speical Laddu) ತಯಾರಿಸಿದ್ದಾರೆ.

    ಹೈದರಾಬಾದ್‌ ಮೂಲದ ವ್ಯಕ್ತಿ ನಾಗಭೂಷಣ ರೆಡ್ಡಿ ಎಂಬವರು ಜ.22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ನೈವೇದ್ಯಕ್ಕಾಗಿ 1,265 ಕೆಜಿ ತೂಕದ ಲಡ್ಡು ತಯಾರಿಸಿದ್ದು, ಬುಧವಾರ (ಇಂದು) ರಾಮಮಂದಿರಕ್ಕೆ ಅರ್ಪಿಸಲಿದ್ದಾರೆ. ಇದರೊಂದಿಗೆ ಸಹೋದರ ಲಕ್ಷ್ಮಣ, ಪತ್ನಿ ಸೀತಾ, ಭಂಟ ಹನುಮಾನ್‌ ಹೆಸರಿನ ಲಡ್ಡುಗಳನ್ನೂ ತಯಾರಿಸಲಾಗಿದೆ  ಈ ಮೂಲಕ ಶ್ರೀರಾಮ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

    ದುಶಾಸನ್‌ ಎಂಬ ಸ್ವೀಟ್‌ ಮಾಸ್ಟರ್‌ ಈ ಲಡ್ಡುವನ್ನು ತಯಾರಿಸಿದ್ದಾರೆ. ಜೊತೆಗೆ ಸುಮಾರು 30 ಜನರ 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಈ ವಿಶೇಷ ಲಡ್ಡು ತಯಾರಿಸಿದ್ದಾರೆ, ಇದನ್ನ ಜೋಡಿಸಲು 4 ಗಂಟೆ ತೆಗೆದುಕೊಂಡಿದ್ದಾರೆ ಎಂದು ನಾಗಭೂಷಣರೆಡ್ಡಿ ತಿಳಿಸಿದರು.

    ಈ ಕುರಿತು ಮಾತನಾಡಿರುವ ನಾಗಭೂಷಣ್‌ ರೆಡ್ಡಿ, 2000ನೇ ಇಸವಿಯಿಂದ ನಾನು ಶ್ರೀ ರಾಮ ಕ್ಯಾಟರಿಂಗ್ ಎಂಬ ಕೆಲಸ ಪ್ರಾರಂಭಿಸಿದೆ. ರಾಮಜನ್ಮಭೂಮಿಯಲ್ಲಿ ದೇವಸ್ಥಾನದ ಭೂಮಿಪೂಜೆ ನಡೆಯುತ್ತಿದ್ದಾ ನಾವು ಶ್ರೀರಾಮನಿಗೆ ಏನು ನೈವೇದ್ಯ ನೀಡಬಹುದು ಎಂದು ಯೋಚಿಸಿದ್ದೆವು.‌ ಕೊನೆಗೆ ದೇವಸ್ಥಾನ ಭೂಮಿಪೂಜೆ ಆರಂಭವಾದ ದಿನದಿಂದ ದೇವಸ್ಥಾನ ತೆರೆಯುವ ದಿನದ ವರೆಗೆ ಪ್ರತಿದಿನ 1 ಕೆಜಿ ಲಡ್ಡು ಮೀಸಲಿಡಲು ನಿರ್ಧರಿಸಿದೆವು. ಅದರಂತೆ ಮಂದಿರಕ್ಕಾಗಿ 1,265 ಕೆಜಿ ಲಡ್ಡು ಸಿದ್ಧಪಡಿಸಿದ್ದು, ಇದನ್ನು ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ಇಟ್ಟಿದ್ದೇವೆ. ಇಂದೇ ಅಯೋಧ್ಯೆಗೆ ಕೊಂಡೊಯ್ದು ರಾಮನ ನೈವೇದ್ಯಕ್ಕೆ ಅರ್ಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

    ಒಟ್ಟಿನಲ್ಲಿ ನನಗೆ ತುಂಬಾ ಸಂತೋಷವಾಗಿದೆ. ನಾನು ಇದೇ ಮೊದಲಬಾರಿಗೆ ಶ್ರೀರಾಮನಿಗಾಗಿ ಇಂತಹ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

  • ಗರ್ಭಗುಡಿಯಲ್ಲಿ ರಾಮ – ಮಂದಿರದ ಬೇರೆ ಗುಡಿಗಳಲ್ಲಿ ಯಾವ ದೇವರು ಇರುತ್ತಾರೆ?

    ಗರ್ಭಗುಡಿಯಲ್ಲಿ ರಾಮ – ಮಂದಿರದ ಬೇರೆ ಗುಡಿಗಳಲ್ಲಿ ಯಾವ ದೇವರು ಇರುತ್ತಾರೆ?

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣಪ್ರತಿಷ್ಠೆ (Prana Pratishta) ಆಗುವುದರ ಜೊತೆಗೆ ಆವರಣದಲ್ಲಿ 6 ದೇವರ ಗುಡಿಗಳು ಇರಲಿದೆ.

    ಆವರಣದ 4 ಮೂಲೆಯಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ, ಮತ್ತು ಶಿವನ ಗುಡಿಗಳು ಇರಲಿದೆ. ಇಷ್ಟೇ ಅಲ್ಲದೇ ಉತ್ತರ ಭಾಗದಲ್ಲಿ ಅನ್ನಪೂರ್ಣ ಮತ್ತು ದಕ್ಷಿಣದಲ್ಲಿ ಹನುಮಂತನ ಗುಡಿ ಇರಲಿದೆ.

    ಅಯೋಧ್ಯೆ ರಾಮಮಂದಿರ ಸಂಕೀರ್ಣದ ಒಳಗೆ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ಗುಡಿಗಳಿರಲಿವೆ. ಬಾಲ ರಾಮನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದ್ದರೆ ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.

    ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಮಂದಿರದಲ್ಲಿ ಪೂಜೆ-ಪುನಸ್ಕಾರಕ್ಕೆ ಅರ್ಚಕರ ಆಯ್ಕೆಯೂ ಆಗಿದೆ. ದೇಶಾದ್ಯಂತ ಆಯ್ಕೆಯಾದ 24 ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಒಬ್ಬರು ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನದವರೆಗೆ ಯುಪಿ ಸರ್ಕಾರಿ ಬಸ್‌ಗಳಲ್ಲಿ ರಾಮ ಭಜನೆ ಪ್ರಸಾರ

    ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಮಂದಿರ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ಹೆಚ್ಚುವರಿ 500 ಕಾರ್ಮಿಕರನ್ನು ಕರೆತರಲಾಗಿದೆ.

    ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಮನವಿ ಮಾಡಿತ್ತು. ಎಲ್ಲರಿಂದ ಬಂದ ಮಾಹಿತಿಯನ್ನು ಸಮನ್ವಯಗೊಳಿಸಿ ಕೊನೆಗೆ ಮುಹೂರ್ತ ಸಮಯ ಅಂತಿಮಗೊಳಿಸಲಾಗಿದೆ.  ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ

    ಕಾಶಿಯ ಜ್ಯೋತಿಷಿಯ ಮುಹೂರ್ತ ಆಯ್ಕೆ
    ಕಾಶಿಯ ಜ್ಯೋತಿಷಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು 84 ಸೆಕೆಂಡ್‌ ಅವಧಿಯ ಮುಹೂರ್ತವನ್ನು ಸೂಚಿಸಿದ್ದರು. ಜನವರಿ 22ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್ ಶುಭ ಮುಹೂರ್ತ ಎಂದು ಸೂಚಿಸಿದ್ದರು.

    5 ದಿನಾಂಕಗಳು ಮುಂದಿತ್ತು!
    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮನ ಮೂರ್ತಿ ಸ್ಥಾಪನೆಗೆ ದಿನಾಂಕಗಳನ್ನು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ದಿನಾಂಕಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಜನವರಿ ತಿಂಗಳ 17ರಿಂದ 25ನೇ ತಾರೀಕಿನ ನಡುವೆ 5 ದಿನಾಂಕಗಳು ಇದ್ದವು. ಕೊನೆಗೆ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು ಜನವರಿ 22ರ ದಿನಾಂಕ ಹಾಗೂ ಪುಣ್ಯ ಮುಹೂರ್ತವನ್ನು ಆಯ್ಕೆ ಮಾಡಿದರು. ಜನವರಿ 22ರ ಮುಹೂರ್ತ ದೇಶಕ್ಕೆ ಸಂಜೀವಿನಿ ಯೋಗ ತರುತ್ತದೆ ಎಂದು ಗಣೇಶ್ವರ ಶಾಸ್ತ್ರಿ ಹೇಳಿದ್ದಾರೆ.