Tag: Ayodhya Mosque

  • ಅಯೋಧ್ಯೆ ಮಸೀದಿ ತಾಜ್‌ಮಹಲ್‌ಗಿಂತಲೂ ಸುಂದರವಾಗಿರುತ್ತೆ: ಬಿಜೆಪಿ ಮುಖಂಡ ಹಾಜಿ ಶೇಖ್‌

    ಅಯೋಧ್ಯೆ ಮಸೀದಿ ತಾಜ್‌ಮಹಲ್‌ಗಿಂತಲೂ ಸುಂದರವಾಗಿರುತ್ತೆ: ಬಿಜೆಪಿ ಮುಖಂಡ ಹಾಜಿ ಶೇಖ್‌

    ಮುಂಬೈ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮೊಹಮ್ಮದ್‌ ಬಿನ್‌ ಅಬ್ದುಲ್ಲಾ ಮಸೀದಿಯು (Ayodhya Mosque) ತಾಜ್‌ಮಹಲ್‌ಗಿಂತಲೂ ಸುಂದರವಾಗಿರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫಾತ್‌ ಶೇಖ್‌ (Haji Arfat Shaikh) ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಶಿಲಾನ್ಯಾಸ ಮುಂದಿನ ವರ್ಷ ನಡೆಯಲಿದೆ. ಈ ಸಮಾರಂಭಕ್ಕೆ ಸಂತರು, ಪೀರರು ಮತ್ತು ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಶೇಖ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ನಾನು ಋಣಿ: ಮೋದಿ ವಿಶ್‍ಗೆ ಹೆಚ್‍ಡಿಕೆ ಧನ್ಯವಾದ

    ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಮಸೀದಿ ಸಿದ್ಧವಾದಾಗ, ಮೆಕ್ಕಾ ಮಸೀದಿಯಲ್ಲಿ ನಮಾಜ್‌ನ ನೇತೃತ್ವ ವಹಿಸುವ ಇಮಾಮ್-ಎ-ಹರಾಮ್ ಸೇರಿದಂತೆ ಎಲ್ಲಾ ದೇಶಗಳ ಉನ್ನತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ.

    ಬಾಬ್ರಿ ಮಸೀದಿಯ ಬದಲಿಗೆ ಪ್ರವಾದಿಯ ಹೆಸರನ್ನು ಇಡಲಾಗಿದೆ. ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರದ ಬೇರೆ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ನಿರ್ಮಿಸಲಾಗುತ್ತಿದೆ. ಅಯೋಧ್ಯೆ ರಾಮಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಮತ್ತೊಂದು ಜಾಗವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ಮಸೀದಿ ಪಕ್ಕದಲ್ಲಿರುವ ಜಾಗದಲ್ಲಿ ದಂತಚಿಕಿತ್ಸೆ, ಕಾನೂನು, ವಾಸ್ತುಶಾಸ್ತ್ರ ಹಾಗೂ ಅಂತಾರಾಷ್ಟ್ರೀಯ ಸಂಬಂಧ ವಿಷಯಗಳನ್ನು ಬೋಧಿಸುವ ಕಾಲೇಜು ನಿರ್ಮಿಸಲಾಗುವುದು. ಅಲ್ಲದೇ ಕ್ಯಾನ್ಸರ್‌ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗೆ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎರಡು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.

  • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

    ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

    ಲಕ್ನೋ/ಅಯೋಧ್ಯೆ: ರಾಮಜನ್ಮಭೂಮಿ (Ram Janmabhoomi) -ಬಾಬ್ರಿ ಮಸೀದಿ (Babri Masjid) ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ತೀರ್ಪಿನ ಅನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಯೋಜನೆಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ADA) ಅಂತಿಮ ಅನುಮೋದನೆ ನೀಡಿದೆ.

    ಸುಪ್ರೀಂ ತೀರ್ಪಿನ ಅನುಸಾರ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವು (UP Government) 5 ಎಕರೆ ಭೂಮಿ ಮಂಜೂರು ಮಾಡಿದೆ. `ಮಸೀದಿ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಅನುಮೋದನೆ ಪಡೆದ ನಕ್ಷೆಯನ್ನು ಐಐಸಿಎಫ್ ಪ್ರತಿನಿಧಿಗಳಿಗೆ ನೀಡಲಾಗುವುದು’ ಎಂದು ಎಡಿಎನ ಹೆಚ್ಚುವರಿ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ. ಇದನ್ನೂ ಓದಿ: 

    Babri Masjid

    ಮಸೀದಿಯ ಜೊತೆಗೆ ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆಮನೆ, ಗ್ರಂಥಾಲಯ ನಿರ್ಮಾಣ ಮಾಡಲು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್ (IICF) ನಿರ್ಧರಿಸಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಅನುಮೋದನೆ ನೀಡುವುದು ವಿಳಂಬ ಮಾಡಿದ್ದರಿಂದಾಗಿ ನಿರ್ಮಾಣ ಚಟುವಟಿಕೆ ಇದುವರೆಗೂ ಆರಂಭವಾಗಿರಲಿಲ್ಲ.

    ಐಐಸಿಎಫ್ ಕಾರ್ಯದರ್ಶಿ ಅತ್ತಾರ್ ಹುಸೇನ್ ಅವರು, ಮಂಜೂರಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮಸೀದಿ ನಿರ್ಮಾಣ ಯೋಜನೆಗೆ ಅಂತಿಮರೂಪ ನೀಡಲು ಟ್ರಸ್ಟ್ ಸಭೆ ನಡೆಸಲಿದೆ ಎಂದು ತಿಳಿಸಿದ್ದಾರೆ.

    Babri Masjid

    ಮಸೀದಿ ನಿರ್ಮಿಸಲು ಜನವರಿ 26, 2021ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಭಾರತದ ಸಂವಿಧಾನವು ಜಾರಿಗೆ ಬಂದ ದಿನವಾದ ಕಾರಣ ಆ ದಿನದಂದೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬ್ರಿ ಮಸೀದಿ ವಿವಾದ: ಅಡ್ವಾಣಿ ಸೇರಿ ಹಲವು ನಾಯಕರನ್ನು ಖುಲಾಸೆಗೊಳಿಸಿದ್ದ ಅರ್ಜಿ ಆ.1ಕ್ಕೆ ವಿಚಾರಣೆ

    ಸುಪ್ರೀಂ ಕೋರ್ಟ್ ತೀರ್ಪು ಏನು?
    ಸುಪ್ರೀಂ ಕೋರ್ಟ್ ತನ್ನ ಅಯೋಧ್ಯೆ ತೀರ್ಪಿನಲ್ಲಿ 2019ರ ನವೆಂಬರ್ 2019 ರಂದು ರಾಮಜನ್ಮಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆಕ್ಟ್ 1993 ಅಥವಾ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಯೋಧ್ಯೆಯ ಯಾವುದೇ ಸೂಕ್ತ ಪ್ರಮುಖ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು. ಅದರಂತೆ ಇದೀಗ ಧನ್ನಿಪುರದಲ್ಲಿ ಸರ್ಕಾರ ನೀಡಿದ 5 ಎಕರೆ ಕೃಷಿ ಭೂಮಿಯನ್ನು ಭೂ ಬಳಕೆ ಮಾಡುವ ಕುರಿತು ಪ್ರಾಧಿಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ.

  • ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ (Ayodhya Mosque) ಕಾಮಗಾರಿಯು 2023ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಟ್ರಸ್ಟ್‌ ಮಾಹಿತಿ ನೀಡಿದೆ.

    ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ. ಪ್ರಸ್ತಾವಿತ ಮಸೀದಿ, ಆಸ್ಪತ್ರೆ, ಸಮುದಾಯ ಅಡುಗೆ ಕೋಣೆ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರದ ನಕ್ಷೆಗೆ ಈ ತಿಂಗಳ ಅಂತ್ಯದೊಳಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಸಿಗಲಿದೆ ಎಂದು ನಾವು ಭಾವಿಸಿದ್ದೇವೆ. ಶೀಘ್ರದಲ್ಲೇ ನಾವು ಮಸೀದಿಯ ನಿರ್ಮಾಣವನ್ನು ಪ್ರಾರಂಭಿಸುತ್ತೇವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಿಕ್ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತ, ಉಪನಿಷತ್ ಕಲಿಕೆ- ಕೇಂದ್ರದ ನಡೆಗೆ ನೆಟ್ಟಿಗರ ಮೆಚ್ಚುಗೆ

    ಧನ್ನಿಪುರ ಅಯೋಧ್ಯೆ ಮಸೀದಿಯ ನಿರ್ಮಾಣವು ಡಿಸೆಂಬರ್ 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಐದು ಎಕರೆ ವಿಸ್ತೀರ್ಣದಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಸುದೀರ್ಘ ಕಾಲದ ಅಯೋಧ್ಯೆ ವಿವಾದದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಬಾಬರಿ ಮಸೀದಿ ಇದ್ದ 2.77 ಎಕರೆ ಜಾಗದಲ್ಲಿ ರಾಮಮಂದಿರವನ್ನು (Rama Mandir) ನಿರ್ಮಿಸಲು ಆದೇಶಿಸಿತು. ಉತ್ತರ ಪ್ರದೇಶದಲ್ಲೇ ಬೇರೆಡೆ ಮಸೀದಿ ನಿರ್ಮಿಸಲು ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಆದೇಶಿಸಿತ್ತು. ಇದನ್ನೂ ಓದಿ: ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

    ಅಯೋಧ್ಯೆ ರಾಮಮಂದಿರ ದೇವಾಲಯದ ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020 ರಲ್ಲಿ ನೆರವೇರಿಸಿದರು. ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 2024 ರ ವೇಳೆಗೆ ರಾಮಮಂದಿರ ಭಕ್ತರ ದರ್ಶನಕ್ಕೆ ತೆರೆಯುವ ಸಾಧ್ಯತೆಯಿದೆ.

    ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ರಚಿಸಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಆಸ್ಪತ್ರೆ, ಸಮುದಾಯ ಅಡುಗೆ ಮನೆ, ಗ್ರಂಥಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ನಿರ್ಮಿಸಲು ನಿರ್ಧರಿಸಿದೆ. ಆಸ್ಪತ್ರೆಯು ಆರಂಭದಲ್ಲಿ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ನಂತರ ಅದನ್ನು 200ಕ್ಕೆ ಹಾಸಿಗೆ ವ್ಯವಸ್ಥೆಗೆ ನವೀಕರಿಸಲಾಗುವುದು. ಸಮುದಾಯ ಅಡುಗೆಮನೆಯು ಆರಂಭದಲ್ಲಿ ಪ್ರತಿದಿನ 1,000 ಜನರಿಗೆ ಆಹಾರ ಪೂರೈಸುವ ವ್ಯವಸ್ಥೆ ಹೊಂದಿರುತ್ತದೆ ಎಂದು ಹುಸೇನ್‌ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನವರಿ 26ಕ್ಕೆ ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ ಆರಂಭ

    ಜನವರಿ 26ಕ್ಕೆ ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ ಆರಂಭ

    ಲಕ್ನೋ: ಜನವರಿ 26, 2020ಕ್ಕೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಡಿಸೆಂಬರ್ 19ರಂದು ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ (ಐಐಸಿಎಫ್) ಮಸೀದಿ ಮತ್ತು ಆಸ್ಪತ್ರೆಯ ನೀಲಿ ನಕ್ಷೆಯನ್ನ ಬಿಡುಗಡೆಗೊಳಿಸಿತ್ತು. ಆದ್ರೆ ನಿರ್ಮಾಣ ಕಾರ್ಯ ಆರಂಭದ ದಿನಾಂಕ ಪ್ರಕಟಿಸಿರಲಿಲ್ಲ. ಅಲಿಗಢ ಮುಸ್ಲಿಂ ಯುನಿವರ್ಸಿಟಿಯ ವಾಸ್ತು ವಿಭಾಗದದ ಡೀನ್ ಎಂ ಎಸ್ ಅಖ್ತರ್ ಅವರು ಮಸೀದಿಯನ್ನು ವಿನ್ಯಾಸಗೊಳಿಸಿದ್ದಾರೆ.

    ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರ ಪ್ರದೇಶ ಸರ್ಕಾರ ಮಸೀದಿ ನಿರ್ಮಾಣಕ್ಕೆ ಧನ್ನಿಪುರದಲ್ಲಿ 5 ಎಕರೆ ಜಮೀನು ನೀಡಿದೆ. ಇದೀಗ ಇದೇ ಸ್ಥಳದಲ್ಲಿ ಮಸೀದಿ ಮತ್ತು ಆಸ್ಪತ್ರೆ ನಿರ್ಮಾಣವಾಗಲಿದೆ. ಐಐಸಿಎಫ್ ಪ್ರಧಾನ ಕಾರ್ಯದರ್ಶಿ ಅತ್ಹರ್ ಹುಸೈನ್ ಗಣರಾಜ್ಯೋತ್ಸವ ದಿನದಂದು ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಜನವರಿ 26ರಂದೇ ದೇಶದ ಸಂವಿಧಾನ ರಚನೆ ಆದ ದಿನ. ಇದಕ್ಕಿಂತ ಒಳ್ಳೆಯ ದಿನ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

    ಹೇಗಿರಲಿದೆ ಮಸೀದಿ?:
    ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿಗೆ ಗುಂಬಜ್ ಇರಲ್ಲ. ಬದಲಾಗಿ ಮಸೀದಿ ಗೋಲಾಕಾರದ ವಿನ್ಯಾಸದಲ್ಲಿ ಭೂಮಿಯಂತೆ ಗಾಜಿನಿಂದ ಮಾಡಲ್ಪಟ್ಟ ಗೋಲರೂಪದಲ್ಲಿ ಮಿಂಚಲಿದೆ ಮಸೀದಿಗೆ ಯಾವುದೇ ರಾಜನ ಹೆಸರು ಇಡಲ್ಲ. ಕ್ಯಾಂಪಸ್‍ನಲ್ಲಿ ಮ್ಯೂಸಿಯಂ, ಗೃಂಥಾಲಯ ಹಾಗೇ ಒಂದು ಸಮುದಾಯದಯ ಪಾಕ ಶಾಲೆ ಸಹ ಇರಲಿದೆ.

    200 ರಿಂದ 300 ಬೆಡ್ ಸಾಮರ್ಥ್ಯದ ಆಸ್ಪತ್ರೆ ಮಸೀದಿ ಹಿಂಭಾಗದಲ್ಲಿ ಇರಲಿದೆ. ಎರಡು ಅಂತಸ್ತಿನ ಮಸೀದಿ ತಲೆ ಎತ್ತಲಿದೆ. ಇಲ್ಲಿ ಏಕಕಾಲದಲ್ಲಿ 2 ಸಾವಿರ ಮಂದಿ ನಮಾಝ್ ಮಾಡಬಹುದು. ಇದರಲ್ಲಿ ಮಹಿಳಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಆಸ್ಪತ್ರೆ ಒಟ್ಟು ನಾಲ್ಕು ಫ್ಲೋರ್ ಹೊಂದಿರಲಿದ್ದು, ಇನ್ನೂರರಿಂದ ಮುನ್ನೂರು ಬೆಡ್‍ಗಳ ಸಾಮರ್ಥ್ಯದ ಗುರಿಯನ್ನ ಹೊಂದಲಾಗಿದೆ. ಆಸ್ಪತ್ರೆ ನಿರ್ಮಾಣದ ಬಳಿಕ ಚಾರಿಟಿ ಮಾಡೆಲ್ ನಲ್ಲಿ ಕಾರ್ಯನಿರ್ವಹಿಸಲಿದೆ.