Tag: Ayodhya Dham

  • ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್‌ ನೌಕರ

    ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್‌ ನೌಕರ

    ಬೆಂಗಳೂರು: ಹೊಸಪೇಟೆಯಲ್ಲಿ (Hosapete) ರಾಮ ಭಕ್ತರಿಂದ ರೈಲಿಗೆ (Indian Railways) ಬೆಂಕಿ ಹಚ್ಚುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಶೇಖ್ ಸಾಬ್ ಬಂಧಿತ ಆರೋಪಿ. ಈತ ರೈಲ್ವೇಯಲ್ಲಿ ಗ್ರೂಪ್ ಸಿ (Group C) ನೌಕರನಾಗಿದ್ದಾನೆ ಎಂದು ಪಬ್ಲಿಕ್ ಟಿವಿಗೆ ರೈಲ್ವೇಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಒಕ್ಕಲಿಗ ಸಚಿವರ ನಡುವೆ ಕೋಲ್ಡ್ ವಾರ್!

     

    ಶೇಖ್ ಸಾಬ್ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಲು ಅಯೋಧ್ಯಾ ಧಾಮ್ (Ayodhya Dham) ರೈಲಿನಿಂದ ಹೊಸಪೇಟೆ ಗುಂತಕಲ್‌ ರೈಲಿಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರಾಮಭಕ್ತರಿಗೂ ಆತನಿಗೂ ಮಾತಿಗೆ ಮಾತು ಬೆಳೆದಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಏನಿದು ಘಟನೆ?
    ಮೈಸೂರಿನಿಂದ ಅಯೋಧ್ಯೆಗೆ ತೆರಳಿದ್ದ ರಾಮ ಭಕ್ತರು ಮರಳಿ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಅಯೋಧ್ಯೆಯಿಂದ ಮೈಸೂರಿಗೆ ಬರುತ್ತಿದ್ದ ರೈಲು ಹೊಸಪೇಟೆಯಲ್ಲಿ ನಿಂತಾಗ ನಾಲ್ಕು ಮಂದಿ ಅನ್ಯಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಅನ್ಯ ಕೋಮಿನ ಯುವಕರಲ್ಲಿ ಓರ್ವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ರಾಮ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ರೈಲು ಎರಡು ಗಂಟೆ ತಡವಾಗಿ ಹೊಸಪೇಟೆಯಿಂದ ಹೊರಟಿದೆ.

     

  • ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    – ಡಿ. 30 ರಂದು ಪ್ರಧಾನಿಯಿಂದ ಉದ್ಘಾಟನೆ

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ವಿಗ್ರಹ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳಿರುವ ಹೊತ್ತಿನಲ್ಲಿ ಉತ್ತರಪ್ರದೇಶದ (Uttar Pradesh) ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇದೀಗ ಅಯೋಧ್ಯೆಯ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಜಂಕ್ಷನ್ (Ayodhya Dham) ಎಂದು ಮರುನಾಮಕರಣ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದ ಲುಲ್ಲು ಸಿಂಗ್, ಇದೇ ತಿಂಗಳ 30ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) `ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣ ಉದ್ಘಾಟಿಸಲಿದ್ದಾರೆ. ರೈಲ್ವೇ ನಿಲ್ದಾಣದ ಎಸ್ಕಲೇಟರ್‌ಗಳು ಮತ್ತು ಗೋಡೆಗಳ ಮೇಲೆ ಭಗವಾನ್ ರಾಮನ ಭಿತ್ತಿಚಿತ್ರಗಳನ್ನು ಚಿತ್ರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಲಿಫ್ಟ್‌ಗಳು, ಪ್ರವಾಸಿ ಮಾಹಿತಿ ಕೇಂದ್ರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಜನರ ನಿರೀಕ್ಷೆಯಂತೆ ಈ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ನಿಲ್ದಾಣದ ಮುಖ್ಯ ಕಟ್ಟಡವು ರಾಮ ಮಂದಿರವನ್ನು ಹೋಲುತ್ತದೆ. ಕಟ್ಟಡದ ನಿರ್ಮಾಣಕ್ಕೆ ರಾಮ ಮಂದಿರದ ನಿರ್ಮಾಣದಲ್ಲಿ ಬಳಸಿದ ರಾಜಸ್ಥಾನದಿಂದ ತಂದ ಗುಲಾಬಿ ಬನ್ಸಿ ಪಹರ್ಪುರ್ ಕಲ್ಲುಗಳನ್ನು ಬಳಸಲಾಗಿದೆ. 10,000 ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ ಈ ನಿಲ್ದಾಣವು ಮೂರು ಪ್ಲಾಟ್‍ಫಾರ್ಮ್‍ಗಳನ್ನು ಒಳಗೊಂಡಿದೆ. 240 ಕೋಟಿ ರೂ. ಬಜೆಟ್‍ನಲ್ಲಿ ಈ ರೈಲ್ವೇ ನಿಲ್ದಾಣ ಪೂರ್ಣಗೊಂಡಿದೆ.

    ಕೇಂದ್ರ ಸರ್ಕಾರದ ಒಂದು ಅಂಗವಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ಸ್ ಸರ್ವಿಸ್ ಇದರ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದೆ. ಮುಂಬರುವ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ 480 ಕೋಟಿ ರೂ. ಬಜೆಟ್ ಮೀಸಲಿಡಲಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್