Tag: Ayodhya Airport

  • ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

    ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

    ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಸಂಪೂರ್ಣ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ (Railway Station) ಉದ್ಘಾಟನೆ ನೆರವೇರಿಸಿದರು.

    ಬಳಿಕ ರೈಲು ನಿಲ್ದಾಣವನ್ನ ಪರಿಶೀಲಿಸಿದ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ 2 ಅಮೃತ್‌ ಭಾರತ್‌ ರೈಲು ಹಾಗೂ 6 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌, ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.

    ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.

    ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್‌ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.

    ಮೋದಿಗೆ ದಾರಿಯುದ್ಧಕ್ಕೂ ಪುಷ್ಪಾರ್ಚನೆ:
    ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶಾಲುಹೊದಿಸಿ ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಿದರು. ರೈಲ್ವೆ ನಿಲ್ದಾಣ ಉದ್ಘಾಟನೆಗೂ ಮುನ್ನ ನಡೆದ ರೋಡ್‌ ಶೋನಲ್ಲಿ ಹಲವು ಅಂಶಗಳು ಗಮನ ಸೆಳೆದವು.

    ಮೋದಿ ಬರುವ ದಾರಿಯಲ್ಲಿ ನಿರ್ಮಿಸಲಾಗಿದ್ದ ಸುಮಾರು 40 ವೇದಿಕೆಗಳಲ್ಲಿ 1,400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಅಲ್ಲದೇ ಮೋದಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದ ಜನರು ರೋಡ್‌ಶೋ ಹಾದಿಯುದ್ಧಕ್ಕೂ ವಿವಿಧ ಹೂಗಳಿಂದ ಮೋದಿಗೆ ಪುಷ್ಪಾರ್ಚನೆ ಮಾಡಿ ಜಯಘೋಷ ಹಾಕಿದರು.

  • ಅಯೋಧ್ಯೆಗೆ ಬಂದ ಪ್ರಧಾನಿ ಮೋದಿ – ಶ್ರೀರಾಮನೂರಿನಲ್ಲಿ ʻನಮೋʼ ಹೆಜ್ಜೆ

    ಅಯೋಧ್ಯೆಗೆ ಬಂದ ಪ್ರಧಾನಿ ಮೋದಿ – ಶ್ರೀರಾಮನೂರಿನಲ್ಲಿ ʻನಮೋʼ ಹೆಜ್ಜೆ

    ಅಯೋಧ್ಯೆ: ವಿವಿಧ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ (Narendra Modi) ಅವರು ರಾಮನೂರು ಅಯೋಧ್ಯೆಗೆ ಆಗಮಿಸಿದ್ದಾರೆ. ನೂತನ ವಿಮಾನ ನಿಲ್ದಾಣ ಹಾಗೂ ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣ ಉದ್ಘಾಟನೆ ನೆರವೇರಿಸುವುದಕ್ಕೂ ಮುನ್ನ ಸುಮಾರು 15 ಕಿಮೀ ರೋಡ್‌ ಶೋ ಹಮ್ಮಿಕೊಂಡಿದ್ದು, ಈಗಾಗಲೇ ರೋಡ್‌ ಶೋ ಆರಂಭಿಸಿದ್ದಾರೆ.

    ದೆಹಲಿಯಿಂದ (New Delhi) ವಿಶೇಷ ವಿಮಾನದಲ್ಲಿ 10.45ರ ಸುಮಾರಿಗೆ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ (Ayodhya Airport) ಆಗಮಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಶಾಲುಹೊದಿಸಿ ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದರು.

    ರೋಡ್‌ ಶೋ ನಂತರ ರೈಲ್ವೆ ನಿಲ್ದಾಣ ಉದ್ಘಾಟಿಸಲಿದ್ದಾರೆ. ಪ್ರಧಾನಿ ರೋಡ್‌ ಶೋ (Road Show) ನಡೆಯಲಿರುವ ರಸ್ತೆಯ ಎರಡೂ ಕಡೆಗಳಲ್ಲಿ ಸಾವಿರಾರು ಜನ ನೆರೆದು ಮೋದಿಯವರನ್ನು ಪುಷ್ಪಾರ್ಚನೆ ಹಾಗೂ ಜಯಘೋಷಗಳಿಂದ ಸ್ವಾಗತಿಸಿದರು. ದೇಶದ ನಾನಾ ಕಡೆಗಳಿಂದ ಬಂದ ಸಾಂಸ್ಕೃತಿಕ ಕಲಾ ತಂಡಗಳು ದಾರಿಯುದ್ದಕ್ಕೂ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿ ನೋಡುಗರ ಮನಸೂರೆಗೊಂಡವು. ಸುಮಾರು 1,400 ಕಲಾವಿದರು 40ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶನದೊಂದಿಗೆ ಪ್ರಧಾನಿಗಳನ್ನು ಸ್ವಾಗತಿಸಿದವು.

    ಅಯೋಧ್ಯೆಯಲ್ಲಿಂದು ಏನೇನು ಕಾರ್ಯಕ್ರಮ?
    * ಬೆಳಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
    * ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
    * 2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
    * 2183 ಕೋಟಿ ರೂ. ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು
    * 300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
    * ನವೀಕರಣಗೊಂಡಿರುವ ನಯಾಘಾಟ್‌ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
    ( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್‌ಘಾಟ್, ರಾಜ್‌ಘಾಟ್‌ನಿಂದ ರಾಮ ಮಂದಿರ ರಸ್ತೆ)
    * ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
    * ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
    * ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
    * ಮಧ್ಯಾಹ್ನ 1 ಗಂಟೆ ಬಳಿಕ ಮೋದಿ ಮೆಗಾ ರೋಡ್ ಶೋ
    * ಏರ್‌ಪೋರ್ಟ್‌ನಿಂದ ಅಯೋಧ್ಯೆ ನಗರದಲ್ಲಿ 15 ಕಿ.ಮೀ. ರೋಡ್ ಶೋ

  • ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಯೋಧ್ಯೆ – ರಾಮನೂರಿನಲ್ಲಿ ಸಾಂಸ್ಕೃತಿಕ ವೈಭವ

    ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಯೋಧ್ಯೆ – ರಾಮನೂರಿನಲ್ಲಿ ಸಾಂಸ್ಕೃತಿಕ ವೈಭವ

    ಅಯೋಧ್ಯೆ: ಅಯೋಧ್ಯೆಯಲ್ಲಿ ನೂತನ ವಿಮಾನ ನಿಲ್ದಾಣ ಹಾಗೂ ಪುನರಾಭಿವೃದ್ಧಿಗೊಂಡಿರುವ ರೈಲು ನಿಲ್ದಾಣ (Ayodhya Railaway Station) ಉದ್ಘಾಟಿಸಲು ಆಗಮಿಸುತ್ತಿರುವ ಶನಿವಾರ (ಇಂದು) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಸ್ವಾಗತಿಸಲು ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

    ಒಂದೆಡೆ ಹೂವು ತೋರಣಗಳ ಅಲಂಕಾರ ಮತ್ತೊಂದೆಡೆ ಸಾಂಸ್ಕೃತಿಕ ಕಲಾ ತಂಡಗಳ ವೈಭವ ಮೆರಗುಗೊಂಡಿದೆ. ವಿವಿಧ ಗೀತೆ, ನೃತ್ಯಗಳಿಗೆ ಹೆಜ್ಜೆಹಾಕುವ ಮೂಲಕ ಪ್ರಧಾನಿಗಳನ್ನ ಬರಮಾಡಿಕೊಳ್ಳಲು ಕಲಾ ತಂಡಗಳು ಕಾದು ಕುಳಿತಿವೆ. ಇದನ್ನೂ ಓದಿ: Ram Mandir Inauguration: ಪ್ರಾಣ ಪ್ರತಿಷ್ಠಾಪನೆಗೆ ಶ್ರೀ ರಾಮಲಲ್ಲಾ ವಿಗ್ರಹ ಆಯ್ಕೆ- ಇಂದು ಅಂತಿಮ ನಿರ್ಣಯ

    ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ರಾಮ ಪಥ ವರೆಗಿನ ಮಾರ್ಗದಲ್ಲಿ ನಿರ್ಮಿಸಲಾದ ಒಟ್ಟು 40 ವೇದಿಕೆಗಳಲ್ಲಿ 1,400ಕ್ಕೂ ಹೆಚ್ಚು ಕಲಾವಿದರು ಜನಪದ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಪ್ರಸ್ತುತಪಡಿಸಲಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ನಂತರ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದು, 15,700 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: Ram Mandir; ರಾಮಮಂದಿರ ಉದ್ಘಾಟನೆಯ ಕೇಂದ್ರಬಿಂದು ಗರ್ಭಗುಡಿ ವಿಶೇಷತೆ ನಿಮಗೆಷ್ಟು ಗೊತ್ತು?

    ಮೋದಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ: ಮೋದಿ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ 3 ದಿನಗಳಿಂದ ಭದ್ರತಾ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಅಯೋಧ್ಯೆ ಸಂಪೂರ್ಣ ಪೊಲೀಸ್ ಭದ್ರಕೋಟೆಯಾಗಿದೆ. ಡ್ರೋನ್‌ಗಳ ಮೂಲಕವೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಈಗಾಗಲೇ ರಾಮನಗರಿಯಲ್ಲಿ ಮೋದಿ ಸ್ವಾಗತಕ್ಕಾಗಿ ತಳಿರು ತೋರಣ, ಹೂವಿನ ಅಲಂಕಾರ, ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಮಿರಮಿರ ಮಿಂಚುತ್ತಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಶ್ವದರ್ಜೆಯ ವಿಮಾನ, ರೈಲು ನಿಲ್ದಾಣದ ವಿಶೇಷತೆಗಳು ಏನು?

    ಅಯೋಧ್ಯೆಯಲ್ಲಿಂದು ಮೋದಿ ಕಾರ್ಯಕ್ರಮಗಳು ಹೇಗಿವೆ?
    * ಬೆಳಗ್ಗೆ 10:45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
    * ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
    * 2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
    * 2183 ಕೋಟಿ ರೂ. ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು
    * 300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
    * ನವೀಕರಣಗೊಂಡಿರುವ ನಯಾಘಾಟ್‌ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
    ( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್‌ಘಾಟ್, ರಾಜ್‌ಘಾಟ್‌ನಿಂದ ರಾಮ ಮಂದಿರ ರಸ್ತೆ)
    * ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
    * ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
    * ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ
    * ಮಧ್ಯಾಹ್ನ 1 ಗಂಟೆ ಬಳಿಕ ಮೋದಿ ಮೆಗಾ ರೋಡ್ ಶೋ
    * ಏರ್‌ಪೋರ್ಟ್‌ನಿಂದ ಅಯೋಧ್ಯೆ ನಗರದಲ್ಲಿ 15 ಕಿ.ಮೀ. ರೋಡ್ ಶೋ

  • ರಾಮನೂರಿನಲ್ಲಿಂದು ಮೋದಿ ಮೆಗಾ ಶೋ – 15,000 ಕೋಟಿ ರೂ. ಯೋಜನೆಗೆ ಚಾಲನೆ

    ರಾಮನೂರಿನಲ್ಲಿಂದು ಮೋದಿ ಮೆಗಾ ಶೋ – 15,000 ಕೋಟಿ ರೂ. ಯೋಜನೆಗೆ ಚಾಲನೆ

    ಅಯೋಧ್ಯೆ: ರಾಮಮಂದಿರ (Ayodhya Ram Mandir) ನಿರ್ಮಾಣದ ಮೂಲಕ ಕೋಟ್ಯಾನುಕೊಟಿ ರಾಮನ ಭಕ್ತರ ಸ್ವಾಗತಕ್ಕೆ ಸಜ್ಜಾಗಿರುವ ರಾಮನೂರು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಭೇಟಿ ನೀಡುತ್ತಿದ್ದಾರೆ.

    ಜನವರಿ 22ಕ್ಕೆ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತಿದೆ. ಆದ್ರೆ ಅದಕ್ಕೂ ಮುನ್ನ ನಡೆಯಲಿರುವ ಈ ಭೇಟಿ ವೇಳೆ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಹೊಸ ವಿಮಾನ ನಿಲ್ದಾಣ, ಅಭಿವೃದ್ಧಿಗೊಂಡಿರುವ ರೈಲು ನಿಲ್ದಾಣವನ್ನೂ (Revamped Railway Station) ಮೋದಿ ಉದ್ಘಾಟಿಸಲಿದ್ದಾರೆ.

    ಜೊತೆಗೆ 11 ಸಾವಿರ ಕೋಟಿ ರೂ. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4,600 ಕೋಟಿ ರೂ.ಗಳಷ್ಟು ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಇದರಲ್ಲಿ, ರಸ್ತೆ, ಹೆದ್ದಾರಿ, ವಿಮಾನ, ರೈಲ್ವೇ ಸೇರಿದಂತೆ ಮೂಲಭೂತ ಸೌಕರ್ಯಗಳ ಯೋಜನೆಗಳು ಒಳಗೊಂಡಿವೆ. ಹೀಗಾಗಿ ಪ್ರಧಾನಿ ಮೋದಿ ಸ್ವಾಗತಕ್ಕೆ ಶ್ರೀರಾಮಜನ್ಮಭೂಮಿ ಸಜ್ಜಾಗಿದೆ. ವಿಶೇಷವೆಂದರೆ ಇದೇ ದಿನ 6 ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಾಗೂ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

    ಮೋದಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ:
    ಮೋದಿ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ 3 ದಿನಗಳಿಂದ ಭದ್ರತಾ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಅಯೋಧ್ಯೆ ಸಂಪೂರ್ಣ ಪೊಲೀಸ್ ಭದ್ರಕೋಟೆಯಾಗಿದೆ. ಡ್ರೋನ್‌ಗಳ ಮೂಲಕವೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಈಗಾಗಲೇ ರಾಮನಗರಿಯಲ್ಲಿ ಮೋದಿ ಸ್ವಾಗತಕ್ಕಾಗಿ ತಳಿರು ತೋರಣ, ಹೂವಿನ ಅಲಂಕಾರ, ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಮಿರಮಿರ ಮಿಂಚುತ್ತಿದೆ.