Tag: Ayesha

  • ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿ ಹೈಡ್ರಾಮಾ

    ಜಾನಿ ಮಾಸ್ಟರ್ ಬಂಧನ: ಠಾಣೆ ಮುಂದೆ ಪತ್ನಿ ಹೈಡ್ರಾಮಾ

    ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿತ್ತು. ಐಎಫ್‍ ಆರ್‍ ಆಗುತ್ತಿದ್ದಂತೆಯೇ ಜಾನಿ ಮಾಸ್ಟರ್ (Jani Master) ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ತಂಡ ರಚನೆ ಮಾಡಲಾಗಿತ್ತು. ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಜಾನಿಯನ್ನು ಹೈದ್ರಾಬಾದ್ ಪೊಲೀಸರು ಬಂಧನ ಮಾಡಿದ್ದಾರೆ. ಈ ವಿಷ್ಯ ಗೊತ್ತಾಗುತ್ತಿದ್ದಂತೆಯೇ ಜಾನಿ ಮಾಸ್ಟರ್ ಪತ್ನಿ ಆಯೇಷಾ (Ayesha) ಪೊಲೀಸ್ ಸ್ಟೇಶನ್ ಗೆ ಬಂದು ಗಂಡನ ಬಂಧನದ ಬಗ್ಗೆ ವಿಚಾರಿಸಿದ್ದಾರೆ.  ನನ್ನ ಗಂಡನನ್ನು ನೋಡಬೇಕು ಅಂತ ಹೈಡ್ರಾಮಾ ಮಾಡಿದ್ದಾರೆ.

    ಜಾನಿ ಮಾಸ್ಟರ್ ವಿರುದ್ಧ ಹೈದರಾಬಾದ್‌ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ಜೊತೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ರಾಯದುರ್ಗ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಈಗ ಜಾನಿ ಮಾಸ್ಟರ್‌ ಅರೆಸ್ಟ್‌ ಮಾಡಿದ್ದಾರೆ. ಈ ಪ್ರಕರಣವನ್ನು ನರಸಿಂಗಿ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

    ಇತ್ತೀಚೆಗಷ್ಟೇ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ (Sexual Assault) ನೀಡಿದ್ದಾರೆ ಎಂದು 21 ವರ್ಷದ ಯುವತಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಾನಿ ಮಾಸ್ಟರ್ ಕೆಲವು ದಿನಗಿಳಿಂದ ನನಗೆ ಕಿರುಕುಳ ನೀಡುತ್ತಿದ್ದರು. ಹೊರಾಂಗಣ ಚಿತ್ರೀಕರಣ ವೇಳೆ, ದೈಹಿಕ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರ ಈ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಜಾನಿ ತನಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳಾ ನೃತ್ಯ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಯದುರ್ಗಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾನಿ ಮಾಸ್ಟರ್ ಅನೇಕ ಸ್ಟಾರ್ ಹೀರೋ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅನೇಕ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಧೀ, ಡ್ಯಾನ್ಸ್‌ ಶೋ ಮೂಲಕ ಪರಿಚಯವಾದ ಜಾನಿ ಮಾಸ್ಟರ್‌ ಈಗ ಟಾಲಿವುಡ್‌ನಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ, ಹಿಂದಿಯ ಅನೇಕ ಸಿನಿಮಾಗಳಿಗೆ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಇದೀಗ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ.

    ಜಾನಿ ವಿರುದ್ಧ ಕ್ರಮಕ್ಕೆ ವಾಣಿಜ್ಯ ಮಂಡಳಿ ನಿರ್ಧಾರ:

    ಜಾನಿ ಮಾಸ್ಟರ್‌ ಪೂರ್ತಿ ಹೆಸರು ಶಾಯಿಕ್‌ ಜಾನಿ ಭಾಷಾ. ಇತ್ತೀಚೆಗೆ ನಡೆದ ಎಪಿ ಚುನಾವಣೆಯಲ್ಲಿ ಜನಸೇನಾ ಪಕ್ಷದ ಸ್ಟಾರ್ ಪ್ರಚಾರಕರಾಗಿ ಜಾನಿ ಕೆಲಸ ಮಾಡಿದ್ದರು. ಆದರೆ, ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಜಾನಿ ಮಾಸ್ಟರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜನಸೇನಾ ಹೇಳಿಕೆ ಬಿಡುಗಡೆ ಮಾಡಿದೆ. ಮತ್ತೊಂದೆಡೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಜಾನಿ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ಸಾಮಾನ್ಯವಾಗಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರೇಮ ಸಲ್ಲಾಪಗಳೇ ಕೇಳಿ ಬರುವುದು ಕಾಮನ್. ಸಣ್ಣಪುಟ್ಟ ಮನಸ್ತಾಪ, ಕಿರಿಕಿರಿ ನಡುವೆಯೂ ತೀರಾ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಯಾರೂ ಹೋಗುವುದಿಲ್ಲ. ಹಾಗೊಂದು ವೇಳೆ ತೀರಾ ಅತಿರೇಕಗಳು ನಡೆದಾಗ ಅಂತಹ ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲಾಗತ್ತೆ. ಈ ಹಿಂದಿ ಪ್ರಥಮ್ (Pratham)ಮೇಲೆ ಹುಚ್ಚ ವೆಂಕಟ್ (Venkat) ಹಲ್ಲೆ ಮಾಡಿದಾಗ, ವೆಂಕಟ್ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿತ್ತು. ಅದು ಬಿಗ್ ಬಾಸ್ ನಿಯಮ. ಇದೀಗ ಅಂತಹದ್ದೇ ಘಟನೆ ತಮಿಳು ಬಿಗ್ ಬಾಸ್ ನಿಂದ ಬಂದಿದೆ.

    ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆಗಿರುವುದರಿಂದ, ಬಿಗ್ ಬಾಸ್ ಮನೆಯಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕಾಗತ್ತೆ. ಆದರೆ, ತಮಿಳಿನಲ್ಲಿ ಅದೆಲ್ಲವನ್ನೂ ಗಾಳಿಗೆ ತೂರಿ ಕಿತ್ತಾಡಿಕೊಂಡಿದ್ದಾರೆ ಬಿಗ್ ಬಾಸ್ ಮನೆಯ ಸದಸ್ಯರಾದ ಅಜೀಂ ಮತ್ತು ಆಯೇಷಾ. ಈ ಗಲಾಟೆ ಯಾವ ಮಟ್ಟಿಕ್ಕೆ ಹೋಗಿದೆ ಎಂದರೆ, ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಶೋ ಮೇಲೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ತಮಿಳಿನಲ್ಲಿ (Tamil) ಬಿಗ್ ಬಾಸ್ ಸೀಸನ್ 6 ಶುರುವಾಗಿದೆ. ಕಮಲ್ ಹಾಸನ್ ಈ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಎರಡು ವಾರಗಳಿಂದ ಸ್ಪರ್ಧಿಗಳ ಸಖತ್ ಮನರಂಜನೆಯನ್ನೇ ಕೊಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಅಜೀಂ (Azim) ಮತ್ತು ಆಯೇಷಾ (Ayesha) ನಡುವಿನ ಕಿತ್ತಾಟ ತಾರಕಕ್ಕೇರಿ, ಅನಾಹುತವೇ ನಡೆದು ಹೋಗಿದೆ. ಮಹಿಳಾ ಸ್ಪರ್ಧಿಗಳನ್ನು ಅಜೀಂ ಕೆಟ್ಟ ಭಾಷೆಯಿಂದ ನಿಂದಿಸಿದ ಎನ್ನುವ ಕಾರಣಕ್ಕಾಗಿ ಆಯೇಷಾ ಸಿಟ್ಟಿಗೆದ್ದಿದ್ದಾರೆ. ಕೋಪದಿಂದ ಶೂ (Shoo) ತಗೆದು ಅಜೀಂ ಮೇಲೆ ಎಸೆದಿದ್ದಾರೆ.

    ತಮಿಳು ಬಿಗ್ ಬಾಸ್ ಮನೆಯಲ್ಲಿ ಈ ಘಟನೆ ಭಾರೀ ಆಘಾತವನ್ನು ಮೂಡಿಸಿದೆ. ಮನೆಯ ಸದಸ್ಯರು ದಂಗಾಗಿದ್ದಾರೆ. ಆಯೇಷಾ ಬೇರೆ ರೀತಿಯಲ್ಲಿ ಹೇಳಬಹುದಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ, ಆಯೇಷಾ ಮಾತ್ರ ತಮ್ಮ ನಿರ್ಧಾರ ಸರಿ ಇದೆ ಎಂದೇ ವಾದಿಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ವಾರಾಂತ್ಯದ ಎಪಿಸೋಡ್ ನಲ್ಲಿ ಕಮಲ್ ಹಾಸನ್ ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ, ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ನಟ ಚಂದನ್ ಮದ್ವೆ ಫೋಟೋ ವೈರಲ್!

    ನಟ ಚಂದನ್ ಮದ್ವೆ ಫೋಟೋ ವೈರಲ್!

    ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ನಟ ಚಂದನ್ ಕುಮಾರ್ ಅವರು ಪೋಸ್ಟ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದಾರೆ.

    ಚಂದನ್ ಇನ್ ಸ್ಟಾಗ್ರಾಂನಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟಿ ಆಯೇಶಾ ಜೊತೆ ಮದುವೆ ಆಗಿರುವ ರೀತಿಯಲ್ಲಿ ಚಂದನ್ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ನಟ ಚಂದನ್ ತೆಲುಗಿನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್‍ನಲ್ಲಿ ಚಂದನ್‍ಗೆ ಜೋಡಿಯಾಗಿ ನಟಿ ಆಯೇಶಾ ನಟಿಸುತ್ತಿದ್ದಾರೆ. ಹೀಗಾಗಿ ಈ ಧಾರಾವಾಹಿಯಲ್ಲಿ ಇವರಿಬ್ಬರು ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನ್ ಫೋಟೋಗೆ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯ ಮೊದಲ ಫೋಟೋ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

    ಚಂದನ್ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಸೂಪರ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಚಂದನ್ ‘ಪ್ರೇಮ ಬರಹ’ ಸಿನಿಮಾದಲ್ಲಿ ಅಭಿನಯಿಸಿದ್ದು, ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಚಂದನ್ ‘ಕುರುಕ್ಷೇತ್ರ’ದಲ್ಲಿ ಸಹದೇವನ ಪಾತ್ರ ಮಾಡಿದ್ದು, ಸಿನಿಮಾ ಬಿಡುಗಡೆಯಾಗಬೇಕಿದೆ.

    https://www.instagram.com/p/BxPjT7MgXqe/