Tag: Ayanuru Manjunath
-

ಮುದ್ದು ಮಕ್ಕಳ ಜೊತೆ ಸಿಎಂ – ರಿಲ್ಯಾಕ್ಸ್ ಮೂಡ್‍ನಲ್ಲಿ ರಾಜಾಹುಲಿ
ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ಜಂಜಾಟಗಳ ನಡುವೆ ಇಂದು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮುದ್ದಾದ ಮಕ್ಕಳ ಕೆನ್ನೆ ಸವರಿ ಪ್ರೀತಿ ತೋರಿ ಸ್ವಲ್ಪ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಣಿಸಿಕೊಂಡರು.

ಎಂ.ಎಲ್.ಸಿ. ಆಯನೂರು ಮಂಜುನಾಥ್ ಪುತ್ರ ಸಂತೋಷ್ ಹಾಗೂ ಕಾಂಗ್ರೆಸ್ ಮುಖಂಡ ವೈ.ಹೆಚ್ ನಾಗರಾಜ್ ಪುತ್ರಿ ಲಾವಣ್ಯ ಅವರ ಆರತಕ್ಷತೆ ಆಯೋಜಿಸಲಾಗಿತ್ತು. ಆರತಕ್ಷಕೆಗೆ ಪುತ್ರ ಸಂಸದ ರಾಘವೇಂದ್ರ ಜೊತೆ ಆಗಮಿಸಿದ ಸಿಎಂ, ನವಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದರು. ಈ ವೇಳೆ ಸಿಎಂ ಮಂಟಪದಲ್ಲಿದ್ದ ಮುದ್ದು ಮಕ್ಕಳ ಜೊತೆ ಸಮಯ ಕಳೆದರು.

ಮದುವೆಯಲ್ಲಿ ಭಾಗಿಯಾಗಿದ್ದ ಹಲವರು ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇನ್ನು ಸದಾ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ನಗುತ್ತಲೇ ಎಲ್ಲರ ಸೆಲ್ಫಿಗೆ ಪೋಸ್ ನೀಡಿದರು.
