Tag: Ayanthi Riang

  • U-19 ಕ್ರಿಕೆಟ್ ಆಟಗಾರ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    U-19 ಕ್ರಿಕೆಟ್ ಆಟಗಾರ್ತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಅಗರ್ತಲಾ: ಅಂಡರ್ 19 ಕ್ರಿಕೆಟ್ ಆಟಗಾರ್ತಿ ಆಯಂತಿ ರಿಯಾಂಗ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಯಂತಿ ತ್ರಿಪುರ ರಾಜ್ಯದ ಪರವಾಗಿ ಅಂಡರ್-19 ವಿಭಾಗದಲ್ಲಿ ಆಡುತ್ತಿದ್ದರು.

    16 ವರ್ಷದ ಆಯಂತಿ ಉದಯಪುರ ಜಿಲ್ಲೆಯ ತೆನಾನಿ ಗ್ರಾಮದಲ್ಲಿ ಕುಟುಂಬಸ್ಥರೊದಿಗೆ ವಾಸವಾಗಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದು, ಸೂಸೈಡ್‍ಗೆ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ತ್ರಿಪುರ ಅಂಡರ್-23ಯ ಟಿಟ್ವೆಂಟಿಯಲ್ಲಿಯೂ ಆಯಂತಿ ಕ್ರಿಕೆಟ್ ಆಡಿದ್ದರು.

    ಆಯಂತಿ ನಿಧನಕ್ಕೆ ಸಂತಾಪ ಸೂಚಿಸಿರುವ ತ್ರಿಪುರ ಕ್ರಿಕೆಟ್ ಸಂಘದ ಮುಖ್ಯಸ್ಥ ತಿಮಿರ್ ಚಂದಾ, ರಾಜ್ಯ ಪ್ರತಿಭಾನ್ವಿತ ಕ್ರೀಡಾಪಟುವನ್ನು ಕಳೆದುಕೊಂಡಿದೆ. ವಿಷಯ ಕೇಳಿ ಒಂದು ಕ್ಷಣ ನಾನು ಆಘಾತಕ್ಕೊಳಗಾದೆ. ಲಾಕ್‍ಡೌನ್ ವೇಳೆ ಆನ್‍ಲೈನ್ ಕ್ಲಾಸ್ ಏರ್ಪಡಿಸಲಾಗಿತ್ತು. ಆದ್ರೆ ಆಯಂತಿ ಕುಟುಂಬದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.