Tag: Awareness

  • ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

    ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

    – ಸಿಎಂ ಸ್ಥಾನ ಬದಲಾವಣೆ ವಿಚಾರ ಮುಗಿದ ಅಧ್ಯಾಯ

    ಚಿತ್ರದುರ್ಗ: ಕೊರೊನಾ ಎರಡನೇ ಅಲೆ ಆರ್ಭಟ ದಿಂದಾಗಿ ಹಲವು ಕುಟುಂಬಗಳು ಮನೆಯ ಸದಸ್ಯರನ್ನು ಕಳೆದುಕೊಂಡು ವಿನಾಶದ ಅಂಚಿನಲ್ಲಿವೆ ಆದರು ಸಾರ್ವಜನಿಕವಾಗಿ ಜನರು ಜಾಗೃತರಾಗಿಲ್ಲವೆಂದು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೋಂಕಿನಿಂದ ನಿಧನರಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಚಿವ ಅರವಿಂದ ಲಿಂಬಾವಳಿ

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಬಿಎಂ ಜಿಹೆಚ್ ಪ್ರೌಢಶಾಲಾ ಆವರಣದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡನೇ ಅಲೆಯ ಬಗ್ಗೆ ಯಾರು ಸಹ ಗಂಭೀರವಾಗಿ ಪರಿಗಣಿಸಲಿಲ್ಲ. ಈಗಾಗಲೇ ಕೋರೊನಾದಿಂದಾಗಿ ಹಲವರು ತಂದೆ ತಾಯಿಗಳನ್ನು ಕಳೆದುಕೊಂಡಿದ್ದಾರೆ. ಕೆಲವರು ಮಕ್ಕಳು ಅಣ್ಣತಮ್ಮರನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲೂ ನಿರ್ಲಕ್ಷ್ಯವಹಿಸದೇ ಎಲ್ಲರು ತಪ್ಪದೇ ಕೊರೊನಾ ವ್ಯಾಕ್ಸಿನ್ ಪಡೆದು ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯರನ್ನ ಪತಿಯಾಗಿ ಪಡೆದ ನಾನೇ ಅದೃಷ್ಟವಂತೆ: ಕೊಂಡಾಡಿದ ಪತ್ನಿ ಸುಮಿತ್ರಾ

    ಸಾರ್ವಜನಿಕರು ಎಲ್ಲೆಡೆ ಕಡ್ಟಾಯವಾಗಿ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡ ಕೊರೊನಾವನ್ನು ಹಿಮ್ಮೆಟ್ಟಿಸಬೇಕು. ಪೌರಕಾರ್ಮಿಕರು ಇಲ್ಲದಿದ್ದರೆ ನಗರ ಪರಸ್ಥಿತಿ ಹೇಳತೀರದಾಗಿರುತ್ತು. ನಗರ ಸ್ವಚ್ಚ ಕಾರ್ಯದಲ್ಲಿ ತೋಡಗುವ ಕಾರ್ಮಿಕರು ವೈಯಕ್ತಿಕ ಬದುಕನ್ನು ಬದಿಗೊತ್ತಿ ನಗರ ಸ್ವಚ್ಚತೆಗೆ ಆದ್ಯತೆ ನೀಡುತ್ತಾರೆ. ಮೊದಲು ಪೌರಕಾರ್ಮಿರು ಲಸಿಕೆಯನ್ನು ಪಡೆಯಿರಿ ತಮ್ಮ ಅರೋಗ್ಯ ಕಾಪಾಡುವ ಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಸಿಎಂ ಸ್ಥಾನ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎನಿಸಿದೆ. ನಿನ್ನೆ ರಾಜ್ಯ ಉಸ್ತುವಾರಿ ಅರುಣ್ ಜಿ ಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಸಿಎಂ ಬದಲಾವಣೆ ವಿಚಾರ ಕೇಂದ್ರದಲ್ಲೂ ಇಲ್ಲ, ರಾಜ್ಯದಲ್ಲೂ ಇಲ್ಲ ಹೀಗಾಗಿ ಸಾಮಾನ್ಯ ಕಾರ್ಯಕರ್ತನಿಂದ ರಾಜ್ಯ ನಾಯಕರವರೆಗೆ ಇದೇ ಧೋರಣೆ ನಮ್ಮಲ್ಲಿದೆ. ಸಿಎಂ ಸ್ಥಾನದಿಂದ ಬಿಎಸ್‍ವೈ ಬದಲಾವಣೆ ಚರ್ಚೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

    ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ನಗರಸಭೆ ಸದಸ್ಯ ಜಯಣ್ಣ,ಶಿವಕುಮಾರ್, ಬಿಜೆಪಿ ಮುಖಂಡರಾದ ಜಯಪಾಲ ಬಾಳೆಮಂಡಿ ರಾಮದಾಸ್, ದೇವರಾಜ್, ತಿಮ್ಮರಾಜ್, ಶಿಮಮೂರ್ತಿ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್ ಇತರರಿದ್ದರು.

  • ವೇಷಭೂಷಣ ತೊಟ್ಟು ಬೆಣ್ಣೆ ನಗರಿ ಯುವಕರಿಂದ ಕೊರೊನಾ ಜಾಗೃತಿ

    ವೇಷಭೂಷಣ ತೊಟ್ಟು ಬೆಣ್ಣೆ ನಗರಿ ಯುವಕರಿಂದ ಕೊರೊನಾ ಜಾಗೃತಿ

    ದಾವಣಗೆರೆ: ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಕೊರೊನಾದಿಂದ ದೂರವಿರಲು ಹಲವರು ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ಬೆಣ್ಣೆ ನಗರಿ ದಾವಣಗೆರೆಯ ಯುವಕರು ಜನರಿಗೆ ಕೊರೊನಾ ಜಾಗೃತಿ ಮೂಡಿಸಲು ವಿನೂತನ, ವಿಶೇಷವಾದ ಪ್ರಯತ್ನ ನಡೆಸಿದ್ದಾರೆ. ಇದನ್ನೂ ಓದಿ: ರಾಜಾಹುಲಿ ಮನತುಂಬಿದ ನಗುವಿನ ಹಿಂದೆ ಅವರು..!

    ದಾವಣಗೆರೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡದೆ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಭರತ್ ಕಾಲೋನಿಯ ಯುವಕ ರಾಕೇಶ್ ಹಾಗೂ ಆತನ ಸ್ನೇಹಿತರು ವಿನೂತನವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ಅಭಿಯಾನ: ನಾರಾಯಣಗೌಡ

    ಕೊರೊನಾದ ವೇಷಭೂಷಣಗಳನ್ನು ಹಾಕಿಕೊಂಡು ಕೆಆರ್ ಮಾರುಕಟ್ಟೆ ಸೇರಿದಂತೆ ಜನಸಂದಣಿ ಇರುವ ಕಡೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾರು ಮಾಸ್ಕ್ ಹಾಕೋದಿಲ್ವೋ ಅಂತವರಿಗೆ ಮಾಸ್ಕ್ ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

    ವೇಸ್ಟ್ ಆಗಿ ಬಿದ್ದಿರುವ ಥರ್ಮಕೋಲ್‍ಗಳನ್ನು ಬಳಸಿ ಕೊರೊನಾ ವೇಷಭೂಷಣಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಹಲವು ದಿನಗಳಿಂದ ಈ ಯುವಕರ ತಂಡ ಸಾಕಷ್ಟು ಕೊರೊನಾ ಜಾಗೃತಿಯನ್ನು ಮೂಡಿಸುತ್ತಿದ್ದು, ಈ ಬಾರಿ ಕೊರೊನಾ ವೇಷಭೂಷಣಗಳನ್ನು ಧರಿಸಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿಯನ್ನು ಹಾಗೂ ಕೊರೊನಾ ಸೋಂಕಿನಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

  • ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    – ಉತ್ತರ ಪ್ರದೇಶದ ಜಿಲ್ಲಾಡಳಿತದಿಂದ ಆದೇಶ ಜಾರಿ
    – ಲಸಿಕೆ ಟಾರ್ಗೆಟ್ ರೀಚ್ ಆಗಲು ತಂತ್ರಗಾರಿಕೆ

    ಲಕ್ನೋ: ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ.

    ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ಟಾಪ್ 10 ರಾಜ್ಯಗಳು ಯಾವುದು?

    ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ “ಲಸಿಕೆ ಪಡೆದವರು ಮಾತ್ರ ಮದ್ಯ ಖರೀದಿಗೆ ಅರ್ಹರು” ಎಂದು ನೋಟಿಸ್ ಅಂಟಿಸಿದ್ದಾರೆ. ಈ ಆದೇಶದ ಅನ್ವಯ ಗ್ರಾಹಕರು ಆರಂಭದಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಮದ್ಯವನ್ನು ನೀಡಲಾಗುತ್ತದೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಸರ್ಕಾರ ಈ ಆದೇಶ ಹೊರಡಿಸಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ. ಲಸಿಕೆ ಗುರಿಯನ್ನು ಮುಟ್ಟಲು ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

    ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿಲ್ಲ.

    ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಲಸಿಕೆ ವಿತರಣೆಯಲ್ಲಿ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

  • ಲಸಿಕೆ ಪಡೆಯಲು ಹಿಂದೇಟು – ಮನವೊಲಿಸಿ, ಜಾಗೃತಿ ಮೂಡಿಸಿ ಲಸಿಕೆ ಕೊಡಿಸಿದ ಶಾಸಕ

    ಲಸಿಕೆ ಪಡೆಯಲು ಹಿಂದೇಟು – ಮನವೊಲಿಸಿ, ಜಾಗೃತಿ ಮೂಡಿಸಿ ಲಸಿಕೆ ಕೊಡಿಸಿದ ಶಾಸಕ

    ಬೀದರ್: ವಾಕ್ಸಿನ್ ಪಡೆದರೆ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ವದಂತಿ ಹಿನ್ನಲೆಯಲ್ಲಿ ಬಸವಕಲ್ಯಾಣದ ಮುಸ್ಲಿಂ ಬಾಂಧವರು ಲಸಿಕೆ ಪಡೆಯಲು ಭಯದಲ್ಲಿ ಹಿಂದೇಟು ಹಾಕಿದ್ದಾರೆ. ವದಂತಿಗಳಿಂದ ಲಸಿಕೆ ಹಾಕಿಕೊಳ್ಳಲು ಭಯಗೊಂಡು ಹಿಂದೇಟು ಹಾಕಿದ ಮುಸ್ಲಿಂ ಬಾಂಧವರಲ್ಲಿ ಬಸವಕಲ್ಯಾಣ ಬಿಜೆಪಿ ನೂತನ ಶಾಸಕ ಶರಣು ಸಲಗಾರ ಜಾಗೃತಿ ಮೂಡಿಸಿದ್ದಾರೆ.

    ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಿಎಂ ಇಬ್ರಾಹಿಂಗೆ ವೀಡಿಯೋ ಕಾಲ್ ಮಾಡಿ ಮುಸ್ಲಿಂ ಸಮುದಾಯದ ಜೊತೆ ಮಾತನಾಡಿಸಿ ಶಾಸಕರು ಮನವೊಲಿಸುವುದರ ಜೊತೆ ಲಇಕೆ ಕುರಿತಾಗಿ ಜಾಗೃತಿಯನ್ನು ಮೂಡಿಸಿದ್ದಾರೆ.

    ಮುಸ್ಲಿಂ ಬಾಂಧವರಲ್ಲಿ ಲಸಿಕೆ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ಶಾಸಕರು ಜಾಗೃತಿ ಮೂಡಿಸುವ ಮೂಲಕ ಬಗೆಹರಿಸಿ ಮುಸ್ಲಿಂ ಬಾಂಧವರಿಗೆ ಲಸಿಕೆ ಕೊಡಿಸಿದ ಕಲ್ಯಾಣ ಶಾಸ ಬಿಜೆಪಿ ಶಾಸಕ ಶರಣು ಸಲಗಾರ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೆಡ್ಲಿ ಕೊರೊನಾವನ್ನು ಗೆದ್ದ ಶತಾಯುಷಿ ಅಜ್ಜ- ಪಟಾಕಿ ಸಿಡಿಸಿ ಸಂಭ್ರಮಿಸಿದ ಕುಟುಂಬಸ್ಥರು

    ಮುಸ್ಲಿಂ ಬಾಂಧವರು ಲಸಿಕೆ ಹಾಕಿಸಿಕೊಳ್ಳಲು ಹೆದರುತ್ತಿರುವ ವಿಷಯ ತಿಳಿದು ಅವರಿಗೆ ಜಾಗೃತಿ ಮೂಡಿಸಿದೆ, ಜೊತೆಗೆ ಸಮುದಾಯದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಜೊತೆ ಮಾತನಾಡಿಸಿ ಲಸಿಕೆ ಕೊಡಿಸಿದ್ದೆನೆ ಎಂದು ನೂತನ ಬಿಜೆಪಿ ಶಾಸಕ ಶರಣು ಸಲಗಾರ ಹೇಳಿದ್ದಾರೆ.

  • ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಭೋಪಾಲ್: ಕೊರೊನಾ ರೋಗಕ್ಕೆ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ   ಗ್ರಾಮಸ್ಥರು ಥಳಿಸಿರುವ ಘಟನೆ ಮಧ್ಯಪ್ರದೇಶದ ಒಂದು ಹಳ್ಳಿಯೊಂದರಲ್ಲಿ ನಡೆದಿದೆ.

    ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಿಬ್ಬಂದಿಗಳ ತಂಡವು ಮಹಿಳಾ ತಹಶೀಲ್ದಾರ್ ನೇತೃತ್ವದಲ್ಲಿ ಮಧ್ಯಪ್ರದೇಶದ ಉಜ್ಜೈನ್ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಪರ್ಡಿ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ತಮ್ಮ ಹಳ್ಳಿಗೆ ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

    ಈ ಮೊದಲು ಕೂಡ ಆರೋಗ್ಯ ಸಿಬ್ಬಂದಿ ಈ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಆದರೆ ಆಗಲೂ ಸಹ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿರಲಿಲ್ಲ. ಮತ್ತೆ ತಂಡವು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಹೇಳಲು ಮುಂದಾಗಿದ್ದರು. ಈ ವೇಳೆ, ಕೆಲವು ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ತಂಡದ ಓರ್ವ ವ್ಯಕ್ತಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಮೊಹಮ್ಮದ್ ಖುರೇಷಿ ಅದೇ ಗ್ರಾಮ ಪಂಚಾಯತಿಯ ಮಹಿಳಾ ಪದಾಧಿಕಾರಿಯ ಪತಿ ಎಂದು ತಿಳಿದು ಬಂದಿದ್ದು, ಆತ ಕೂಡ ಆರೋಗ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಮಹಿಳಾ ತಹಶೀಲ್ದಾರ್, ಎನ್‍ಎಂ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪಟ್ವಾಡಿಗಳು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಗೊಂದಲಗಳನ್ನು ನಿವಾರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಪ್ರೇರೇಪಿಸಲು ಮುಂದಾಗಿದ್ದರು. ಈ ಕುರಿತಾಗಿ ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಸ್ಥರ ಜೊತೆ ಮಾತನಾಡುತ್ತಿರುವಾಗ, 50 ಮಂದಿಯನ್ನೊಳಗೊಂಡ ಒಂದು ಗುಂಪು   ನಮ್ಮ ಮೇಲೆ ಮೇಲೆ ದಾಳಿ ಮಾಡಿದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

    ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರೆ, ಗ್ರಾಮಸ್ಥರು ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ತಹಶೀಲ್ದಾರ್ ಹಾಗೂ ತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾದರು. ಆದರೆ ಈ ದಾಳಿಯಲ್ಲಿ ನನ್ನ ತಲೆಗೆ ಪೆಟ್ಟಾಗಿದೆ ಎಂದು ಗಾಯಗೊಂಡ ವ್ಯಕ್ತಿ ಶಕೀಲ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಎಸ್‍ಪಿ ಆಕಾಶ್ ಭೂರಿಯಾ ಹೇಳಿದರು.

  • ಕೊರೊನಾ ನಿಯಂತ್ರಣ ಅಭಿಯಾನ- ಧರ್ಮ ಪ್ರಚಾರ ಮಾಡಿದ ಡಾಕ್ಟರ್

    ಕೊರೊನಾ ನಿಯಂತ್ರಣ ಅಭಿಯಾನ- ಧರ್ಮ ಪ್ರಚಾರ ಮಾಡಿದ ಡಾಕ್ಟರ್

    ಭೋಪಾಲ್: ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೊನಾವೈರಸ್ ಸೋಂಕಿನಿಂದ ದೂರವಿರಲು, ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುತ್ತಾ ಧರ್ಮ ಪ್ರಚಾರ ಮಾಡಿರುವ ಡಾಕ್ಟರ್ ವೀಡಿಯೋ ವೈರಲ್ ಆಗಿದೆ.

    ರಾಟ್ಲಾಂ ಜಿಲ್ಲೆಯ ಭಜ್ನಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಅಭಿಯಾನ ವೇಳೆ ಸರ್ಕಾರದ ಗುತ್ತಿಗೆ ವೈದ್ಯೆಯೊಬ್ಬರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಧಾರ್ಮಿಕ ಕರಪತ್ರಗಳು ಕೂಡಾ ಆ ಮಹಿಳೆ ಬಳಿ ಪತ್ತೆಯಾಗಿವೆ. ವರದಿ ತಯಾರಿಸಿ, ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಬಿಎಸ್ ಠಾಕೂರ್ ಹೇಳಿದ್ದಾರೆ.

    ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವ್ಯಕ್ತಿಯೊಂದಿಗೆ ಮಾಸ್ಕ್ ಧರಿಸಿರುವ ಮಹಿಳಾ ಡಾಕ್ಟರ್ ಮಾತನಾಡುವ ದೃಶ್ಯ ವೀಡಿಯೋದಲ್ಲಿದೆ. ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗುವುದಾಗಿ ಏಕೆ ಜನರಿಗೆ ಹೇಳುತ್ತಿದ್ದೀರಿ? ತಮ್ಮ ಸ್ವಂತ ಧರ್ಮದ ಪ್ರಾರ್ಥನೆ ಮಾಡುವಂತೆ ಜನರಿಗೆ ಏಕೆ ಹೇಳುತ್ತಿಲ್ಲ? ಎಂದು ಕೇಳುತ್ತಾನೆ. ಆದಕ್ಕೆ ಪ್ರತಿಕ್ರಿಯಿಸುವ ಆ ಮಹಿಳೆ, ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗಿದ್ದಾಗಿ ಜನರು ಹೇಳುತ್ತಿರುವುದನ್ನು ಕೇಳಿದ್ದಾಗಿ ಹೇಳುವುದು ವಿಡಿಯೋದಲ್ಲಿದೆ.

    ಈ ವಿಡಿಯೋವನ್ನು ಕೆಲ ಬಿಜೆಪಿ ಮುಖಂಡರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ತನಿಖೆ ನಂತರ ಕೇಸ್ ದಾಖಲಿಸಲಾಗುವುದು ಎಂದು ಭಜ್ನಾ ಪೊಲೀಸ್ ಠಾಣೆ ಉಸ್ತುವಾರಿ ದಿಲೀಪ್ ರಾಜೊರಿಯಾ ಹೇಳಿದ್ದಾರೆ. ಈವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

  • ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಲಾವಿದ ಮಂಜುನಾಥ ಹಿರೇಮಠ ನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದು ಜಾಗೃತಿ ಮೂಡಿಸುತ್ತಿರುವುದಕ್ಕಿ ಡಿಸಿಪಿ ಕೈ ಜೋಡಿಸಿದ್ದಾರೆ.

    ಮಂಜುನಾಥ ಅವರ ಕಲಾಕೃತಿ ನೋಡಿದ ಡಿಸಿಪಿ ರಾಮರಾಜನ್ ಅವರು, ತಾವೂ ಕೂಡಾ ಕೈಯಲ್ಲಿ ಬ್ರಷ್ ಹಿಡಿದು ಪೇಂಟಿಂಗ್ ಮಾಡಿದರು. ನಗರದ ಜುಬ್ಲಿ ವೃತ್ತದಲ್ಲಿ ಮಾಸ್ಕ್ ಧರಿಸಿ ಕೊರೊನಾ ಓಡಿಸಿ ಎಂದು ಗೋಡೆ ಬರಹ ಬರೆದು ಜಾಗೃತಿ ಮೂಡಿಸುತ್ತಿರುವ ಮಂಜುನಾಥ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಜನರು ಸರಿಯಾಗಿ ಕೈ ತೊಳೆಯಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂದು ಡಿಸಿಪಿ ರಾಮರಾಜನ್ ಕರೆ ನೀಡಿದರು.

    ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದೆ, ಕಳೆದ 24 ಗಂಟೆಗಳ ಅವಧಿಯಲ್ಲಿ 2.57 ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4,194 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ  ವೈದ್ಯ

    ಪಾಸಿಟಿವ್ ಬಂದ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಿದ ವೈದ್ಯ

    ಮಡಿಕೇರಿ: ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಬ್ಬಂದಿಯನ್ನು ಕರೆಸಿ ಕರ್ತವ್ಯ ಮಾಡಿಸಿ ವೈದ್ಯರೊಬ್ಬರು ಎಡವಟ್ಟು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಿಬ್ಬಂದಿ ಲ್ಯಾಬ್ ಟೆಕ್ನಿಷಿಯನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಂಟು ದಿನ ಕಳೆದ ಬಳಿಕ ಮತ್ತೆ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಅಗಲೂ ಅವರಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಅದ್ರೂ ಅರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ ಕೊರತೆಯಿಂದ ಲ್ಯಾಬ್ ಟೆಕ್ನಿಷಿಯನ್ ಕರೆಸಿ ಕರ್ತವ್ಯ ಮಾಡುವಂತೆ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರು ಅಸ್ಪತ್ರೆಯ ಸಿಬ್ಬಂದಿಯಿಂದ ಕೊರೊನಾ ಮಾಹಾಮಾರಿ ಊರಿಗೆ ಹರಡುವ ಸಾಧ್ಯತೆ ಇದೆ. ಕೆಲವು ಜನರಿಗೆ ಸೋಂಕು ಹರಡಿದೆ ಎಂದು ಸಾರ್ವಜನಿಕರು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಲ್ಲಿನ ಪಂಚಾಯಿತಿ ಸದಸ್ಯರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿಯ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಅಸ್ಪತ್ರೆಯ ವೈದ್ಯ ಜೀವನ್ ಅವರ ಬಳಿ ಕೇಳುಲು ಮುಂದಾಗುತ್ತಿದಂತೆ. ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರ ವಿರುದ್ಧವೇ ವೈದ್ಯ ಜೀವನ್ ಕರ್ತವ್ಯ ಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ವೈದ್ಯರ ದೂರು ಪಡೆದ ಠಾಣಾಧಿಕಾರಿ ಪುನೀತ್ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರುಗಳನ್ನು ಠಾಣೆಗೆ ಕರೆಸಿ ಪಂಚಾಯಿತಿ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದೀರಾ. ಪಂಚಾಯಿತಿ ಸದಸ್ಯರು ಟೆಕ್ನಿಷಿಯನ್ ಹಾಗೂ ವೈದ್ಯರ ವಿರುದ್ದವೇ ದೂರು ನೀಡಲು ಪಂಚಾಯಿತಿ ಅಡಳಿತ ಮಂಡಳಿಯಿಂದ ಮುಂದಾಗಿದ್ದರು. ಆಗ ಠಾಣಾಧಿಕಾರಿ ಪುನೀತ್ ರಾಜಿ ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ. ಸದ್ಯ ಪಾಸಿಟಿವ್ ಬಂದ ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗಿದೆ ಎಂದು ಪಂಚಾಯತಿ ಪಿಡಿಓ ವೇಣುಗೋಪಾಲ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ವೈದ್ಯರೇ ಈ ರೀತಿ ಎಡವಟ್ಟು ಮಾಡಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

  • ಲಸಿಕೆ ಹಾಕಿಸಿಕೊಳ್ಳುವಂತೆ ವೀಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ

    ಲಸಿಕೆ ಹಾಕಿಸಿಕೊಳ್ಳುವಂತೆ ವೀಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ

    ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರೂ ಹಿಂಜರಿಯಬೇಡಿ. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು 97 ವರ್ಷದ ವೃದ್ಧೆಯೊಬ್ಬರು ವೀಡಿಯೋ ಮೂಲಕ ನೀಡಿದ ಸಂದೇಶ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

    ನನಗೆ 97 ವರ್ಷವಾಗಿದೆ. ಮಾರ್ಚ್ 9ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಎರಡನೇ ಡೋಸ್ ಮೇ 9ರಂದು ಪಡೆಯಬೇಕಿತ್ತು. ಅದಕ್ಕಾಗಿ ಕಾಯುತ್ತಿದ್ದೇನೆ. ನನಗೆ ಲಸಿಕೆ ಪಡೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮ ಆಗಿಲ್ಲ. ನೋವು, ಜ್ವರ ಏನೂ ಕಾಣಿಸಿಕೊಂಡಿಲ್ಲ. ಯಾರೂ ಲಸಿಕೆಯ ಬಗ್ಗೆ ಹೆದರಬೇಡಿ. ಕೊರೊನಾ ಲಸಿಕೆ ಪಡೆಯುವುದರಿಂದ ನಿಮಗೇ ಒಳ್ಳೆಯದು. ಅಷ್ಟೇ ಅಲ್ಲ, ನಿಮ್ಮ ಸುತ್ತಲೂ ಇರುವವರಿಗೂ ಒಳ್ಳೆಯದೇ. ಲಸಿಕೆ ಸುರಕ್ಷಿತವಾಗಿದ್ದು, ಸಹಜ ಜೀವನ ನಡೆಸಲು ಇದನ್ನು ಪಡೆಯುವುದೊಂದೇ ಮಾರ್ಗ ಎಂದು ಈ ಅಜ್ಜಿ ಹೇಳಿದ್ದನ್ನು ವಿಡಿಯೋದಲ್ಲಿ ಹೇಳುವ ಮೂಲಕವಾಗಿ ಎಲ್ಲರಲ್ಲಿಯೂ ಕೊರೊನಾ ಲಸಿಕೆ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವೃದ್ಧೆ ಮಾಡಿದ್ದಾರೆ.

    ಭಾರತದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಹಂತದಲ್ಲಿ 18-44ವರ್ಷದವರೆಗಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಎಲ್ಲ ರಾಜ್ಯಗಳಲ್ಲೂ ಇನ್ನೂ ಸರಿಯಾಗಿ ಪ್ರಾರಂಭವಿಲ್ಲ. ಕೆಲವು ಕಡೆಗಳಲ್ಲಿ ಪ್ರಾರಂಭವಾದರೆ ಅಡ್ಡಪರಿಣಾಮದ ಭಯದಿಂದ ಜನರೇ ಹಿಂದೇಟು ಹಾಕುತ್ತಿದ್ದಾರೆ.

    ದೇಶದಲ್ಲಿ ಜನವರಿ 16ರಿಂದ ಕೊವಿಡ್ ಲಸಿಕೆ ವಿತರಣೆ ಶುರುವಾಗಿದ್ದು, ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್‍ಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗಿತ್ತು. ನಂತರ ಅದನ್ನು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿತ್ತು. ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ಮೇ 1-ಮೇ 7ರ ನಡುವೆ ಸುಮಾರು 11.6 ಮಿಲಿಯನ್ ಡೋಸ್‍ಗಳಷ್ಟು ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸರ್ಕಾರಗಳು ಸಿದ್ಧತೆ ನಡೆಸಿವೆ.

  • ವೀಡಿಯೋ ವೈರಲ್-ಗರ್ಭಿಣಿ ಅಧಿಕಾರಿಯಿಂದ ಜನರಿಗೆ ಕೋವಿಡ್ ಪಾಠ

    ವೀಡಿಯೋ ವೈರಲ್-ಗರ್ಭಿಣಿ ಅಧಿಕಾರಿಯಿಂದ ಜನರಿಗೆ ಕೋವಿಡ್ ಪಾಠ

    ಚತ್ತೀಸ್‍ಗಢ: ಸೋಂಕಿನ ನಿಯಂತ್ರಣಕ್ಕೆ ಕೊರೊನಾ ವಾರಿಯರ್ಸ್‍ಗಳು ತಮ್ಮ ಜೀವ ಪಣಕ್ಕಿಟ್ಟು ಹಗಲು ರಾತ್ರಿ ಕಷ್ಟ ಪಡುತ್ತಿದ್ದು, ಎಚ್ಚರಿಕೆ ಮೂಡಿಸುತ್ತಲೇ ಇದ್ದಾರೆ. ಇದೇ ರೀತಿ ಬಸ್ತಾರ್‍ನ ದಂತೇವಾಡದ ಡಿಎಸ್‍ಪಿ ಗರ್ಭಿಣಿಯಾಗಿದ್ದರೂ ಸುಡುವ ಬಿಸಿಲಿನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ.

    ಛತ್ತೀಸ್‍ಗಢದ ದಂತೇವಾಡದ ಡಿಎಸ್‍ಪಿ ಶಿಲ್ಪಾ ಸಾಹು ಗರ್ಭಿಣಿಯಾಗಿದ್ದರು ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ತಿಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾ ವಾರಿಯರ್ ಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಕೆಲಸ ಮಾಡುತ್ತಿರುವ ಈ ಹೊತ್ತಿನಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂಬುದನ್ನು ಈ ವೀಡಿಯೋ ಹೇಳುತ್ತಿದೆ.

    ಕೊರೊನಾ ಸೋಂಕಿನಿಂದ ಸಾಮಾನ್ಯ ಜನರ ರಕ್ಷಣೆಗೆ ಕೊರೊನಾ ವಾರಿಯರ್‍ಗಳು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಕೋವಿಡ್‍ನ ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ. ಜನರು ಈ ಬಗ್ಗೆ ನಿರ್ಲಕ್ಷ್ಯವಹಿಸದೆ ಸ್ವಯಂ ಪ್ರೇರಿತವಾಗಿ ಕೋವಿಡ್ ನಿಯಮಾವಳಿ ಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಗರ್ಭಿಣಿ ಅಧಿಕಾರಿ ಕೆಲಸವನ್ನು ಮೆಚ್ಚಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.