Tag: Awareness

  • ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆ

    ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆ

    ಹುಬ್ಬಳ್ಳಿ: 73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕು ಎಂದು 73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾದ (Electoral Officer) ಡಾ.ಬಿ.ಗೋಪಾಲಕೃಷ್ಣ (Dr.B.Gopalakrishna) ಹೇಳಿದರು.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ 73 ಮತಕ್ಷೇತ್ರ ವ್ಯಾಪ್ತಿ, ಚುನಾವಣಾ ಸಿದ್ಧತೆ, ಸಿಬ್ಬಂದಿ ನೇಮಕ, ಅಕ್ರಮ ತಡೆಗೆ ಕೈಗೊಂಡ ಕ್ರಮಗಳು, ಚೆಕ್ ಪೋಸ್ಟ್ ಹಾಗೂ ಇತರ ವಿಷಯಗಳ ಕುರಿತು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಏಪ್ರಿಲ್ 1ಕ್ಕೆ 18 ವರ್ಷ ಪೂರ್ಣಗೊಂಡಿರುವ ಅರ್ಹ ಯುವ ಮತದಾರರು (Voters) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಮತದಾನ (Voting) ನಡೆಯುವ 10 ದಿನ ಮುಂಚಿತವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿರುವುದು. ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್  

    ಈ ಕ್ಷೇತ್ರದ ವ್ಯಾಪ್ತಿಯಲ್ಲಿ 2,46,120 ಮತದಾರರು ಇದ್ದು, ಅದರಲ್ಲಿ 1,22,006 ಪುರುಷರು, 1,24,076 ಮಹಿಳೆಯರು, 38 ಇತರೆ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 6,434 ಮತದಾರರಿದ್ದಾರೆ. ಅದರಲ್ಲಿ 3,146 ಪುರುಷರು ಹಾಗೂ 3,288 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಕೋವಿಡ್ ರೋಗಿಗಳು ಮನೆಯಿಂದಲೇ ಮತ ಚಲಾಯಿಸುವ ಒಪ್ಪಿಗೆ ಪತ್ರ 12 ಡಿ ಅರ್ಜಿಯನ್ನು ನೀಡಲಾಗುವುದು. ಅಧಿಕಾರಿಗಳ ತಂಡ ಪೋಸ್ಟಲ್ ಮೂಲಕ ಗೌಪ್ಯ ಮತದಾನವನ್ನು ಮಾಡಿಸಲಿದ್ದಾರೆ. 1,468 ವಿಕಲಚೇತನ ಮತದಾರರಿದ್ದು, ಅವರಲ್ಲಿ 850 ಪುರುಷರು ಮತ್ತು 168 ಮಹಿಳಾ ಮತದಾರರು ಇದ್ದಾರೆ. 79 ಪುರುಷರು ಹಾಗೂ 8 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 87 ಸರ್ಕಾರಿ ಸೇವೆಯಲ್ಲಿರುವ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ 7810 ಮತದಾರರಿಗೆ ಅಂಚೆ ಮೂಲಕ ಗುರುತಿನ ಚೀಟಿಗಳನ್ನು ರವಾನಿಸಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಶೇ.100 ರಷ್ಟು ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು 

    ಒಟ್ಟು 254 ಮತಗಟ್ಟೆಗಳಿದ್ದು, ಅದರಲ್ಲಿ 2 ಸೂಕ್ಷ್ಮ ಹಾಗೂ 20 ಅತೀ ಸೂಕ್ಷ್ಮ ಮತಗಟ್ಟೆಗಳಿರುತ್ತವೆ. ವಿಕಲಚೇತನರಿಗಾಗಿ 1, ಯುವ ಮತದಾರರಿಗಾಗಿ 1, ವಿಷಯಾಧಾರಿತ ಹಾಗೂ ವಿಶೇಷವಾಗಿ ಗುರುತಿಸಲಾದ ಪ್ರದೇಶದ ಜನರಿಗಾಗಿ ತಲಾ ಒಂದೊಂದು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ವಿಶೇಷವಾಗಿ ಮಹಿಳಾ ಮತದಾರರಿಗಾಗಿ 5 ಸಖಿ ಮತಗಟ್ಟೆಗಳನ್ನು ತೆರೆಯಲಾಗುವುದು. ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುವರು. ಅಲ್ಲದೇ ಮತಗಟ್ಟೆಗಳು (Polling Booths) ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. 1450ಕ್ಕಿಂತ ಹೆಚ್ಚು ಮತದಾರರಿರುವ ಒಟ್ಟು 6 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ತೆರೆಯಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ! 

    ಚುನಾವಣೆ (Election) ಅಕ್ರಮಗಳನ್ನು ತಡೆಗಟ್ಟಲು ಸುಳ್ಳ ರಸ್ತೆ, ನವಲಗುಂದ ರಸ್ತೆ ಹಾಗೂ ಗದಗ ರಸ್ತೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳನ್ನು ತಪಾಸಣೆ ಮಾಡುತ್ತಿವೆ ಎಂದರು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ

  • ಬೆಂಗ್ಳೂರಿನಲ್ಲಿ ರಾಷ್ಟ್ರೀಯ ನಗ್ನ ದಿನ ರಹಸ್ಯ ಆಚರಣೆ

    ಬೆಂಗ್ಳೂರಿನಲ್ಲಿ ರಾಷ್ಟ್ರೀಯ ನಗ್ನ ದಿನ ರಹಸ್ಯ ಆಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಗ್ನ ದಿನವನ್ನು ಆಚರಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಒಂದು ವಾರಗಳ ಹಿಂದೆ ಜುಲೈ 14 ರಂದು ಬೆಂಗಳೂರಿನ ಸರ್ಜಾಪುರದಲ್ಲಿ ಜಮಾಯಿಸಿದ ನಗ್ನವಾದಿಗಳ ಗುಂಪು ನಗ್ನ ದಿನವನ್ನು ಆಚರಿಸಿದೆ.

    ಒಂದೆಡೆ ಜಮಾಯಿಸಿದ ನಗ್ನವಾದಿಗಳು, ತಾವೇ ಸಾಮಾನ್ಯ ಅಡುಗೆ ಮಾಡಿ ಊಟ ಮಾಡಿದ್ದಾರೆ. ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಶಿಕ್ಷಕರು, ವೈದ್ಯರು, ಉದ್ಯಮಿಗಳು ಸೇರಿದಂತೆ ಸುಮಾರು 20 ರಿಂದ 50 ವರ್ಷದ ವರೆಗಿನ ಟೆಕ್ಕಿಗಳು ನಗ್ನ ದಿನದಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ಇದರಲ್ಲಿ ಅನೇಕ ದಂಪತಿಯೂ ಇದ್ದರು. ಆಗಾಗ್ಗೆ ಸದಸ್ಯರು ತಮ್ಮ ರಹಸ್ಯ ಟೆಲಿಗ್ರಾಂ ಗುಂಪಿನಲ್ಲಿ ಮಾಹಿತಿ ಹಂಚಿಕೊಂಡು ಸಭೆ ಸೇರುತ್ತಾರೆ. ದೇಶದ ಕಾನೂನುಗಳು ಹೊರಾಂಗಣದಲ್ಲಿ ನಗ್ನತೆ ಪ್ರದರ್ಶನ ಮಾಡುವುದನ್ನು ನಿಷೇಧಿಸುವುದಿಂದ ಇದರ ಸದಸ್ಯತ್ವವನ್ನು ಈಗ ನಿಲ್ಲಿಸಲಾಗಿದೆ. ಇದನ್ನೂ ಓದಿ: ಸಮಂತಾ ಡಿವೋರ್ಸ್ ಕೊಡಲು ಕಾರಣ ಯಾರು? ಕರಣ್ ಶೋನಲ್ಲಿ ಬಹಿರಂಗ

    ಕಾರ್ಯಕ್ರಮದ ಸಂಯೋಜಕಿ ಹಾಗೂ ಉದ್ಯಮಿಯೂ ಆಗಿರುವ ಪೂಜಾ ಈ ದಿನವನ್ನಾಚರಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಮ್ಮ ಚರ್ಮವು ಉಸಿರಾಡಲು ಸಾಧ್ಯವಾಗುತ್ತದೆ ಎಂಬುದು ತಿಳಿದಾಗ ಅದು ಸುಂದರ ಜೈವನಶೈಲಿ ಎಂದೆನಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನ ಉದ್ಯಮಿ ಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸಮಾನ ಮನಸ್ಕರನ್ನು ಸಂಪರ್ಕಿಸುವ ಮೂಲಕ ನಗ್ನತೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ತಮ್ಮದೇ ಗುಂಪನ್ನು ರಚಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್‌ ಹೌಸ್‌

    ಅಲ್ಲದೆ `2015ರಲ್ಲಿ ಮಹಿಳಾ ಸ್ನೇಹಿತೆಯೊಬ್ಬರು ನನಗೆ ನಗ್ನತೆಯ ಜೀವನ ಶೈಲಿಯನ್ನು ಪರಿಚಯಿಸಿದರು. ನಂತರ ನಾನು ಪುರುಷರು ಹಾಗೂ ಮಹಿಳೆಯರು ಒಟ್ಟಿಗೇ ಸೇರುವ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದೆ. ಅಲ್ಲಿಂದ ಅಶ್ಲೀಲ ನೋಟಗಳನ್ನು ತೆಗೆದುಹಾಕುವುದು ಹೇಗೆ ಎಂಬುದು ಅರ್ಥವಾಯಿತು. ಇದು ವಿಮೋಚನೆಯ ಹಾದಿಯೂ ಹೌದು ಎಂದೂ ಅವರು ಹೇಳಿಕೊಂಡಿದ್ದಾರೆ.

    ನ್ಯೂಡಿಸಂ ಒಂದು ಭಾವೋದ್ರಿಕ್ತ ಜೀವನ ಆಯ್ಕೆಯಾಗಿದೆ. ಅನೇಕರು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಮ್ಮ ಟೆಲಿಗ್ರಾಂ ಗುಂಪಿನಲ್ಲೂ ಬಟ್ಟೆಯಿಲ್ಲದ ಜೀವನ ಶೈಲಿಯ ಬಗ್ಗೆ ಚರ್ಚೆಗಳನ್ನು ನಡೆಸುತ್ತೇವೆ. ಆದರೆ ಇದರಲ್ಲಿ ಲೈಂಗಿಕ ದೃಷ್ಟಿಕೋನ ಅಥವಾ ಲೈಂಗಿಕತೆಯ ಸಂಪರ್ಕ ಇರುವುದಿಲ್ಲ ಎಂದು ಹೇಳಿದ್ದಾರೆ.

    ನಗ್ನ ದಿನದ ವಿಶೇಷತೆ ಏನು?
    ಪ್ರತಿ ವರ್ಷ ಜುಲೈ 14ರಂದು ರಾಷ್ಟ್ರೀಯ ನಗ್ನದಿನವನ್ನು ಆಚರಿಸಲಾಗುತ್ತದೆ. ನ್ಯೂಜಿಲೆಂಡ್‌ನಿಂದ ಆರಂಭವಾದ ಈ ಆಚರಣೆ ಪಾಶ್ಚಿಮಾತ್ಯ ದೇಶಗಳಿಗೆ ಹರಡಿತು. ಈ ದಿನದಂದು ತಮ್ಮ ಬಟ್ಟೆಗಳನ್ನು ತೆಗೆದುಹಾಕುತ್ತಾರೆ. ಅನೇಕರು ಇದನ್ನು ವಿಕೃತ ಕಲ್ಪನೆ ಅಂದುಕೊಳ್ಳುತ್ತಾರೆ. ಆದರೆ ಈ ದಿನವು ಮಾನವನ ದೇಹ ಸೌಂದರ್ಯದ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಈ ಪರಿಕಲ್ಪನೆಗೆ ಮೀಸಲಾದ ಸಂಪೂರ್ಣ ಚಳವಳಿಯೂ ಇದೆ. ಇದನ್ನು ನ್ಯಾಚುರಿಸಂ ಅಥವಾ ನಗ್ನತೆ ಎಂದು ಕರೆಯಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವ ಅಂಗಾಂಗ ದಿನ-ಮೋಹನ್ ಫೌಂಡೇಶನ್ ನಿಂದ ಜನ ಜಾಗೃತಿ

    ವಿಶ್ವ ಅಂಗಾಂಗ ದಿನ-ಮೋಹನ್ ಫೌಂಡೇಶನ್ ನಿಂದ ಜನ ಜಾಗೃತಿ

    ಬೆಂಗಳೂರು: ವಿಶ್ವ ಅಂಗಾಂಗ ದಿನ ಪ್ರಯುಕ್ತ ಮೋಹನ್ ಫೌಂಡೇಶನ್ (ಅಂಗಾಂಗ ದಾನ) ವತಿಯಿಂದ ನಗರದಲ್ಲಿ ಜನ್ರಿಗೆ ಜಾಗೃತಿ ಮೂಡಿಸಲಾಯಿತು.

    ನಗರದ ವಿವಿಧಡೆ ಜಾಗೃತಿ ಮೂಡಿಸಿ, ಅಂಗಾಂಗ ದಾನ ಎಷ್ಟು ಮುಖ್ಯ ಯಾರಿಗೆ ಅವಶ್ಯಕತೆ ಇರುತ್ತದೆ. ಅವಶ್ಯಕತೆ ಇದ್ದವರಿಗೆ ಹೇಗೆ ಅಂಗಾಂಗ ದಾನಗಳನ್ನ ಮಾಡಬೇಕೆಂಬ ಕಾನೂನಾತ್ಮಕ ಪ್ರಕ್ರಿಯೆಗಳನ್ನ ತಿಳಿಸಲಾಯಿತು.

    ನಗರದ ಖಾಸಗಿ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗ ದಾನ ಪ್ರಕ್ರಿಯೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲಾಯಿತು. 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಅಂಗಾಂಗ ದಾನದಿಂದ ಏನು ಪ್ರಯೋಜನ, ಯಾಕೆ ಮಾಡಬೇಕು, ಇನ್ನೊಬ್ಬರ ಜೀವನಕ್ಕೆ ಹೇಗೆ ಸಹಾಯಕಾರಿಯಾಗಲಿದೆ ಎಂದು ಮೋಹನ್ ಫೌಂಡೇಶನ್‍ನ ಪ್ರಾಜೆಕ್ಟ್ ಮ್ಯಾನೆಜರ್ ರಂಜಿನಿ ಶಂಕರ್ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಿದ್ದಾರೆ.

    ಮೋಹನ್ ಫೌಂಡೇಶನ್ ಎಂಬುದು, ಸರ್ಕಾರದ ಅಧಿನದಲ್ಲಿ ಬರುವ ಬಹು ಅಂಗಾಂಗಗಳನ್ನ ದಾನ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಸರ್ಕಾರದ ಜೀವ ಸಾರ್ಥಕತೆಯ ತಂಡದೊಂದಿಗೆ ಸೇರಿ ಹಲವರಿಗೆ ಬಹು ಅಂಗಾಂಗಗಳನ್ನ ಜೋಡಣೆ ಮಾಡಿ, ಜೀವವನ್ನ ಉಳಿಸಿದ್ದಾರೆ

  • ನೇತ್ರದಾನ ಜನಾಂದೋಲನ ಆಗಬೇಕು: ಡಾ.ಕೆ.ಸುಧಾಕರ್

    ನೇತ್ರದಾನ ಜನಾಂದೋಲನ ಆಗಬೇಕು: ಡಾ.ಕೆ.ಸುಧಾಕರ್

    – ಎರಡನೇ ಡೋಸ್ ಲಸಿಕೆ ಪಡೆಯಲು ಉದಾಸೀನ ಬೇಡ

    ಬೆಂಗಳೂರು: ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಮಿಂಟೋ ಕಣ್ಣಾಸ್ಪತ್ರೆಯ 125 ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‍ಕುಮಾರ್ ನೇತ್ರದಾನ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ತಂತ್ರಜ್ಞಾನ ವಿಶಿಷ್ಟವಾಗಿ ಬೆಳೆದಿರುವುದರಿಂದ ಒಬ್ಬರು ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯವಾಗುತ್ತದೆ. ದೇಶದಲ್ಲಿ 3-4 ಕೋಟಿ ಜನರಿಗೆ ಅಂಧತ್ವ ಇದೆ. ಆದ್ದರಿಂದ ದಾನಿಗಳ ಸಂಖ್ಯೆ ಹೆಚ್ಚಬೇಕಿದೆ. ಮರಣ ಹೊಂದಿದ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿ ಅವರಿಗೆ ಜಗತ್ತು ನೋಡಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ನಾನು ಕೂಡ ಕಳೆದ ವರ್ಷವೇ ನೇತ್ರದಾನ ಮಾಡಲು ಪ್ರತಿಜ್ಞೆ ಮಾಡಿದ್ದೇನೆ. ಇದನ್ನು ಆಂದೋಲನದಂತೆ ನಡೆಸಿ ನೇತ್ರದಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.

    ಕೋವಿಡ್ ಸಮಯದಲ್ಲಿ ಮಿಂಟೋ, ವಿಕ್ಟೋರಿಯಾ ಆಸ್ಪತ್ರೆಯನ್ನು ಮೀಸಲಿಡಲಾಗಿತ್ತು. ಆದರೆ ಈಗ ಎಲ್ಲ ಬಗೆಯ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಧೈರ್ಯವಾಗಿ ಬಂದು ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂದರು. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

    ಅನೇಕ ವೈದ್ಯರು, ಶುಶ್ರೂಷಕರು, ವೈದ್ಯಕೀಯೇತರ ಸಿಬ್ಬಂದಿಯ ಶ್ರಮದಿಂದಾಗಿ ಮಿಂಟೋ ಕಣ್ಣಾಸ್ಪತ್ರೆಯು 125 ನೇ ವರ್ಷಕ್ಕೆ ಕಾಲಿಟ್ಟಿದೆ. ಇಂತಹ ಸಂಸ್ಥೆ ಇರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರ. 1896 ರಲ್ಲಿ ಡಿಸ್ಪೆನ್ಸರಿಯಾಗಿ ಆರಂಭವಾದ ಸಂಸ್ಥೆ 125 ವರ್ಷದವರೆಗೂ ಸೇವೆ ನೀಡಿದೆ. ಪ್ಲೇಗ್ ನಿಂದ ಆರಂಭವಾಗಿ ಇತ್ತೀಚೆಗೆ ಕೋವಿಡ್ ತಡೆಗಟ್ಟುವವರೆಗೂ ಈ ಸಂಸ್ಥೆ ಕಾರ್ಯನಿರ್ವಹಿಸಿದೆ. ಇಂದು ಒಪಿಡಿಗೆ ಸುಮಾರು 800 ರೋಗಿಗಳು ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 10 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ 89% ಹಾಗೂ ಎರಡನೇ ಡೋಸ್ 48% ರಷ್ಟು ಪ್ರಗತಿ ಕಂಡಿದೆ. ಎರಡನೇ ಡೋಸ್ ಪಡೆಯಲು ಜನರು ಉದಾಸೀನ ಮಾಡಬಾರದು. ಕೋವಿಡ್ ವಿರುದ್ಧ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಲು ಎರಡೂ ಡೋಸ್ ಪಡೆಯಬೇಕು. ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಎಚ್ಚರವಾಗಿರಬೇಕು ಎಂದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಮಕ್ಕಳ ಲಸಿಕೆ ನೀಡಲಿದೆ. ಮಕ್ಕಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಆರೋಗ್ಯ ನಂದನ ಕಾರ್ಯಕ್ರಮದಡಿ ಈಗಾಗಲೇ ಆರೋಗ್ಯ ಶಿಬಿರ ಮಾಡಿ ಪಟ್ಟಿ ಮಾಡಲಾಗಿದೆ. ಮುಂದಿನ ವಾರ ಲಸಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಆರೂಮುಕ್ಕಾಲು ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಲಸಿಕೆ ವಿತರಣೆ ಈಗ ಕಷ್ಟದ ವಿಚಾರವಲ್ಲ ಎಂದರು. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

  • ಮಗಳ ಹುಟ್ಟುಹಬ್ಬಕ್ಕೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ ತಂದೆ

    ಮಗಳ ಹುಟ್ಟುಹಬ್ಬಕ್ಕೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ ತಂದೆ

    ಹುಬ್ಬಳ್ಳಿ: ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಅಚರಿಸಿದ ತಂದೆ, ರಸ್ತೆ ಸುರಕ್ಷತೆಯ ಜಾಗೃತಿಯನ್ನು ಮೂಡಿಸಿ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ್ದಾರೆ.

    ನಗರದ ಯುವ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ತಮ್ಮ ಮಗಳು ಅಶ್ವಿಕಾಮಾನ್ಯಾ ಹೆಬಸೂರ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಇದರ ಅಂಗವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಇರುವುದರಿಂದ ರಸ್ತೆ ಅಪಘಾತಗಳಲ್ಲಿ ಸಾಕಷ್ಟು ಸಾವು ಸಂಭವಿಸುತ್ತವೆ. ಹೀಗಾಗಿ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ದೇವಾಲಯ ಕಟ್ಟಲು ಬಂದವರು ನಾವು, ಕೆಡವಲು ಬಂದವರಲ್ಲ: ಸಿ.ಟಿ ರವಿ

    ನಗರದ ಚೆನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುವ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದರು. ಕಳೆದ ವರ್ಷ ಕೂಡ ಇಪ್ಪತ್ತೈದು ಹೆಲ್ಮೆಟ್ ನೀಡಲಾಗಿತ್ತು. ಈ ವರ್ಷ ಕೂಡ ಇಪ್ಪತ್ತೈದು ಹೆಲ್ಮೆಟ್ ಸಾರ್ವಜನಿಕರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

    ಈ ಸಂದರ್ಭದಲ್ಲಿ ಮಂಜುನಾಥ ಹಾಗೂ ಸುಪ್ರಿಯಾ ಹೆಬಸೂರ, ಲಿಂಗರಾಜ ಪಾಟೀಲ್, ಬಸವರಾಜ್ ಕುಂದಗೋಳಮಠ, ಸಂಚಾರಿ ಇನ್ಸ್‌ಪೆಕ್ಟರ್‌ ಎಸ್ ವಿ ಕಾಡದೇವರಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ

    ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ

    ಬೆಂಗಳೂರು: ಕೊರೊನಾ ಮೂರನೇ ಅಲೆ ತಡೆಯಲು ಜನ ಸಜ್ಜಾಗಬೇಕು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದ್ದಾರೆ.

    ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸದ್ದ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಂಡಲ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕೊರೊನಾ ಸಮಯದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಟ ನಡೆಸಿದ ಡಾಕ್ಟರ್ ಮತ್ತು ಅಧಿಕಾರಿಗಳ ವರ್ಗ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಿದರು. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಈ ವೇಳೆ ಮಾತನಾಡಿದ ಅವರು, ಒಂದನೇ ಅಲೆ ನಮ್ಮ ಕಾರ್ಯಕರ್ತರೊಂದಿಗೆ ಸುಲಭವಾಗಿ ನಿಭಾಯಿಸಿದ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದರಿಂದ ಎಲ್ಲರೂ ತುಂಬಾ ಶ್ರಮಿಸ ಬೇಕಾಗಿತ್ತು. 24 ಗಂಟೆಗಳ ಕಾಲ ನಮ್ಮ ಡಾಕ್ಟರಗಳು ಕಾರ್ಯಕರ್ತರು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು ಕರೆ ಬಂದಕಡೆ ಮನೆ ಮನೆಗೆ ಔಷಧಿ ಕಿಟ್ ಗಳನ್ನು ನಮ್ಮ ಮುಖಂಡರು ತಲುಪಿಸುತ್ತಿದ್ದರು ಎಂದರು.

     

    ಡಾಕ್ಟರ್ ನಾಗೇಂದ್ರ ಅವರ ತಂಡವನ್ನು ರಚಿಸಿ ಮನೆಮನೆಗೆ ಆಕ್ಸಿಜನ್ ಕಿಟ್ ನೀಡಲು ನಿರ್ಧರಿಸಿದ್ದು, ಅಂತೆಯೇ ಹಣವನ್ನು ನೀಡಿ ಆಕ್ಸಿಜನ್ ಸಿಲಿಂಡರುಗಳನ್ನು ಕೊಂಡು ಕೊಂಡವು. ನನ್ನ ಮುಂಬೈ ಸ್ನೇಹಿತರು 300ಕ್ಕಿಂತ ಹೆಚ್ಚು ಸಿಲಿಂಡರುಗಳನ್ನು ಉಚಿತವಾಗಿ ನೀಡಿದರು. ಪ್ರತಿದಿನ ಹತ್ತರಿಂದ ಇಪ್ಪತ್ತು ಜನರಿಗೆ ಉಚಿತವಾಗಿ ಆಕ್ಸಿಜನ್ ನೀಡಲಾಗುತ್ತಿತ್ತು. ಕಂಟ್ರೋಲ್ ರೂಮ್ ಮಾಡಿ 24 ಗಂಟೆಗಳ ಕಾಲ ಕರೆ ಬಂದ ತಕ್ಷಣ ಸ್ಪಂದಿಸುವಂತೆ ಕಾರ್ಯಕರ್ತರು ಮತ್ತು ಡಾಕ್ಟರುಗಳು ಕೆಲಸ ಮಾಡುತ್ತಿದ್ದರು ಅಂತಾ ಶ್ಲಾಘಿಸಿದ್ರು.

  • ಕೂಲಿ ಕೆಲಸಕ್ಕೆ ಮಕ್ಕಳನ್ನು ಕಳಿಸುವ ಪಾಲಕರಿಗೆ ದಂಡ- ಗ್ರಾಮದಲ್ಲಿ ಡಂಗೂರ

    ಕೂಲಿ ಕೆಲಸಕ್ಕೆ ಮಕ್ಕಳನ್ನು ಕಳಿಸುವ ಪಾಲಕರಿಗೆ ದಂಡ- ಗ್ರಾಮದಲ್ಲಿ ಡಂಗೂರ

    ಬಳ್ಳಾರಿ: ಕೂಲಿ ಕೆಲಸಕ್ಕೆ ಮಕ್ಕಳನ್ನು ಕಳಿಸುವ ಪಾಲಕರಿಗೆ ದಂಡ ಹಾಕಲಾಗುವುದು ಎಂದು ಬಳ್ಳಾರಿ ಜಿಲ್ಲೆಯ ಕುರುಗೋಡು ಕೋಳೂರು ಗ್ರಾಮದಲ್ಲಿ ಡಂಗೂರು ಹೊರಡಿಸಲಾಗಿದೆ.

    ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ರಿಂದ 10ತರಗತಿ ಒಟ್ಟು 184 ವಿದ್ಯಾರ್ಥಿಗಳು ಇದ್ದಾರೆ. ಆದರೆ ಶಾಲೆ ಪ್ರಾರಂಭವಾರದೂ ವಿದ್ಯಾರ್ಥಿಗಳ ಹಾಜರಾತಿ 50 ದಾಟಿಲ್ಲ. ಇದು ಶಿಕ್ಷಕರಿಗೆ ತೆಲೆನೋವು ಸೃಷ್ಟಿಸಿದೆ. ಮಕ್ಕಳನ್ನು ಶಾಲೆಗೆ ಬರುವ ನಿಟ್ಟಿನಲ್ಲಿ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು ಸೇರಿ ಸಭೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ನೀಚ ಕೃತ್ಯ ಮಾಡುವವರಿಗೆ ಪೊಲೀಸರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ: ಅರಗ ಜ್ಞಾನೇಂದ್ರ

    ಸಭೆಯಲ್ಲಿ ಚರ್ಚಿಸುವ ಸಂದರ್ಭದಲ್ಲಿ ಮಕ್ಕಳನ್ನು ಪಾಲಕರು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಕೂಲಿ ಕೆಲಸಕ್ಕೆ ಪಾಲಕರನ್ನು ಕರೆದುಕೊಂಡು ಹೋದರೆ ದಂಡ ಹಾಕುವ ಕುರಿತು ತೀರ್ಮಾನಿಸಲಾಗಿದೆ. ಹೀಗಾಗಿ ಪ್ರತಿ ಓಣಿಯಲ್ಲಿ ದಂಡ ಹಾಕುವ ಕುರಿತು ಡಂಗೂರ ಸಾರಲಾಗಿದೆ. ಈ ಡಂಗೂರ ಸಾರಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ.

  • ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

    ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

    ಮೈಸೂರು: ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ದೀರ್ಘಕಾಲದ ನಂತರ 9, 10ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜು ಭೌತಿಕ ತರಗತಿಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಬುಧವಾರ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಶುಭಕೋರಿದರು. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ

    ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಸಂಯುಕ್ತ ಕಾಲೇಜಿಗೆ ಭೇಟಿ ನೀಡಿದಾಗ, ಭೌತಿಕ ತರಗತಿಗಳು ಆರಂಭವಾಗಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿನಿಯರು ಸಚಿವರಿಗೆ ಹೇಳಿದರು.

    ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಆಶೋತ್ತರಗಳ ಬಗ್ಗೆ ಸಚಿವರು ವಿಚಾರಿಸಿದರು. ರಾಜಕಾರಣಿ ಆಗುವ ಬಯಕೆ ಯಾರಿಗಾದರೂ ಇದಿಯ ಎಂದು ಸಚಿವರು ಕೇಳಿದಾಗ ವಿದ್ಯಾರ್ಥಿಗಳು ನಕ್ಕು ಅಸಮ್ಮತಿ ತೋರಿದರು. ಇಂಜಿನಿಯರ್, ವೈದ್ಯ, ಐ.ಎ.ಎಸ್, ಐ.ಪಿ.ಎಸ್ ಆಗುವ ಬಗ್ಗೆ ಕೇಳಿದಾಗ ಹಲವರು ಕೈ ಮೇಲೆ ಎತ್ತಿ ತಮ್ಮ ಗುರಿ, ಬಯಕೆ ವ್ಯಕ್ತಪಡಿಸಿದರು. ತಮ್ಮ ಗುರಿ ಈಡೇರಿಸಿಕೊಳ್ಳುವ ಕಡೆಗೆ ತಮ್ಮ ಪ್ರಯತ್ನ ನಿರಂತರವಾಗಿರಲಿ ಎಂದು ಸಚಿವರು ಹಾರೈಸಿದರು.

    ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಮತ್ತಿತರರು ಉಪಸ್ಥಿತರಿದ್ದರು.

  • ದೇಶದಲ್ಲಿ ಪ್ರತಿ ಗಂಟೆಗೆ 2,403 ಮಕ್ಕಳ ಜನನ, ಜನಸಂಖ್ಯಾ ಸ್ಫೋಟದ ಬಗ್ಗೆ ಜಾಗೃತಿ ಅಗತ್ಯ: ಹಾವೇರಿ ಡಿಸಿ

    ದೇಶದಲ್ಲಿ ಪ್ರತಿ ಗಂಟೆಗೆ 2,403 ಮಕ್ಕಳ ಜನನ, ಜನಸಂಖ್ಯಾ ಸ್ಫೋಟದ ಬಗ್ಗೆ ಜಾಗೃತಿ ಅಗತ್ಯ: ಹಾವೇರಿ ಡಿಸಿ

    ಹಾವೇರಿ: ಜನಸಂಖ್ಯಾ ಸ್ಫೋಟದಿಂದ ಉಂಟಾಗುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಹೇಳಿದರು.

    ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ, ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದರು.

    ದೇಶದಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ 40, ಪ್ರತಿ ಗಂಟೆಗೆ 2,403, ಪ್ರತಿ ದಿನಕ್ಕೆ 57,685 ಹಾಗೂ ಪ್ರತಿ ತಿಂಗಳು 13,84,457 ಮಕ್ಕಳ ಜನನವಾಗುತ್ತದೆ. ಜನಸಂಖ್ಯಾ ಸ್ಫೋಟದಿಂದ ಆಹಾರ, ನೀರು, ಬಟ್ಟೆ, ವಸತಿ ಹಾಗೂ ಖಜನಿಗಳ ಕೊರತೆ ಉಂಟಾಗುವುದರ ಜೊತೆಗೆ ಶಿಕ್ಷಣ, ಆರೋಗ್ಯ ಸೇವೆಗಳು ಇತರೆ ಸಂಪನ್ಮೂಲಗಳ ಕೊರತೆಯು ಉಂಟಾಗುತ್ತದೆ. ವಾಯು, ಜಲ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುವುದರ ಜೊತೆಗೆ ಸಾಮಾಜಿಕ ಅಸಮಾನತೆ ತಲೆದೊರುತ್ತದೆ ಎಂದರು.

    ಜನಸಂಖ್ಯಾ ಹತೋಟಿಗೆ ಮುಂಜಾಗ್ರತಾ ಕ್ರಮವಾಗಿ ಯುವಕರಿಗೆ 21 ವರ್ಷ ಹಾಗೂ ಯುವತಿಯರಿಗೆ 18 ವರ್ಷದ ನಂತರ ಮದುವೆ ಮಾಡಬೇಕು. ವಿವಾಹದ ನಂತರ ದಂಪತಿ ಕುಟುಂಬ ಕಲ್ಯಾಣದ ವಿಧಾನಗಳನ್ನು ಅನುನಸರಿಸಿಕೊಂಡು ಚಿಕ್ಕ ಕುಟುಂಬಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಇತರರು ಉಪಸ್ಥಿತರಿದ್ದರು.

  • ಮಾಸ್ಕ್ ಮರೆತ ಕೋಟೆನಾಡಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ

    ಮಾಸ್ಕ್ ಮರೆತ ಕೋಟೆನಾಡಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ

    ಚಿತ್ರದುರ್ಗ: ಮದುವೆ, ಮುಂಜಿ, ನಾಮಕರಣ ಎಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮರೆತು ಓಡಾಡ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:  ಜುಲೈ 19, 22ಕ್ಕೆ SSLC ಎಕ್ಸಾಂ ಫಿಕ್ಸ್ – 2 ದಿನದಲ್ಲಿ ಸರಳ ಪರೀಕ್ಷೆ, ಯಾರೂ ಫೇಲ್ ಇಲ್ಲ

    ನಮಗೆ ಕೊರೊನಾ ಮತ್ತೆ ಮರುಕಳಿಸಿ ಅನಾಹುತವನ್ನ ಸೃಷ್ಟಿಮಾಡಬಹುದೆಂಬ ಮುಂಜಾಗ್ರತೆಯಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮದ ಮಕ್ಕಳ ಸಹಯೋಗದೊಂದಿಗೆ ಮಾಸ್ಕ್ ಕುರಿತ ಜನಜಾಗೃತಿ ಕಾರ್ಯಕ್ರಮ ಇಂದು ನಡೆಸಲಾಯಿತು.

    ಈ ವೇಳೆ ಮಾತನಾಡಿದ ಜಾಗೃತಿ ಹೋರಾಟಗಾರದ ಹೆಚ್ ಎಸ್‍ಕೆ ಸ್ವಾಮಿಯವರು,ವೈದ್ಯರಸಲಹೆಯಂತೆ ವರ್ಷ ಪೂರ್ತಿ ಮಾಸ್ಕ್ ಧರಿಸಿಕೊಂಡು ಇರಬೇಕು. 3ನೇ ಅಲೆ ಮತ್ತೆ ಬರಬಹುದು, ಅದಕ್ಕಾಗಿ ನಾವು ಸಿದ್ಧರಾಗಿರಬೇಕು. 3ನೇ ಅಲೆ ಮಕ್ಕಳಿಗೆ ಬರುತ್ತದೆ ಹೀಗಾಗಿ ಶಾಲಾ ಮಕ್ಕಳಿಗೆ ಲಸಿಕೆ ಹಾಕುವರೆಗೆ ನಾವು ಎಚ್ಚರವಾಗಿರಬೇಕು. ಅಲ್ಲದೇ ಸಾಮಾಜಿಕ ಅಂತರ ಮರೆಯಬಾರದು. ಸಾವಿನ ಪ್ರಮಾಣ ಹೆಚ್ಚಾಗುವ ಸಂಭವವುಂಟು. ಹೀಗಾಗಿ ಕೊರೊನಾ ನಿಗ್ರಹಿಸುವುದು ಮುಂದೆ ಕಷ್ಟಕರವಾಗಬಹುದು. ಆದರೆ ಜನರು ಬೇಗ ವೈದ್ಯಕೀಯ ಮಾಹಿತಿಯನ್ನ ಮರೆತು ಓಡಾಡುವುದನ್ನ ಕಲಿಯುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಈ ವರ್ಷ ಶಾಲೆಗಳು ಪ್ರಾರಂಭಮಾಡುವುದು ದುಸ್ತರವಾಗಿದೆ, ಅದಕ್ಕಾಗಿ ನಾವು ಇನ್ನೂ ಸಿದ್ಧರಾಗಿಲ್ಲ. ಈ ವರ್ಷ ಪೂರ್ತಿ ಮಕ್ಕಳು ಮನೆಯಲ್ಲೇ ಕಲಿಯಬೇಕಾಗುವುದು, ಅವರ ದೈಹಿಕ ಆರೋಗ್ಯ ಕೂಡ ಏರು ಪೇರಾಗುವುದು. ಪೌಷ್ಟಿಕಾಂಶಗಳ ಕೊರೆತೆ ಎದ್ದು ಕಾಣುವುದು. ಬಿಸಿ ಊಟ ಇಲ್ಲದೇ, ಬಡತನದಲ್ಲಿ ಬದುಕು ಸಾಗಿಸುತ್ತಿರುವ ಸಾವಿರಾರು ಮಕ್ಕಳ ಆರೋಗ್ಯ ರಕ್ಷಣೆ ಆಗಬೇಕು, ಅವರ ಬದುಕು ಕೂಡ ಹಸನಾಗಬೇಕು. ಅದಕ್ಕಾಗಿ ನಾವು ಸಾಕಷ್ಟು ಪ್ರಯತ್ನಪಟ್ಟು ಕೊರೊನಾವನ್ನು ನಮ್ಮಿಂದ ದೂರ ಮಾಡಬೇಕಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಮಕ್ಕಳ ಮಾಸ್ಕ್ ಧರಿಸಿ ಎಂಬ ಕಾಗದದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂಬ ಬಿತ್ತಿ ಪತ್ರಗಳನ್ನ ಪ್ರದರ್ಶಿಸಿ, ಕೊರೊನಾ ಹಾಡಿನ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕಾವ್ಯ, ಜಾನವಿ, ಶ್ರೀನಿವಾಸ, ಸುರಕ್ಷಾ, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ವೇನಿಲಾ, ಹಾಜರಿದ್ದರು.