Tag: Awards

  • Special-ಬೆಂಗಳೂರು ಚಿತ್ರೋತ್ಸವ : ಯಾವೆಲ್ಲ ಚಿತ್ರಗಳಿಗೆ ಪ್ರಶಸ್ತಿ?

    Special-ಬೆಂಗಳೂರು ಚಿತ್ರೋತ್ಸವ : ಯಾವೆಲ್ಲ ಚಿತ್ರಗಳಿಗೆ ಪ್ರಶಸ್ತಿ?

    ಬೆಂಗಳೂರಿನ (Bangalore) 14ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Film Festival) ನಿನ್ನೆ ತೆರೆ ಬಿದ್ದಿದೆ. ಚಿತ್ರೋತ್ಸವದ ಕೊನೆಯ ದಿನ ಸ್ಪರ್ಧೆಯಲ್ಲಿದ್ದ ಮೂರು ವಿಭಾಗಗಳಿಗೆ ಪ್ರಶಸ್ತಿಯನ್ನು (Awards) ಘೋಷಿಸಲಾಗಿದೆ. ಸಮಾರೋಪ ಸಮಾರಂಭಕ್ಕೂ ಒಂದು ದಿನ ಮುಂಚೆಯೇ ಫೇಸ್ ಬುಕ್ ನಲ್ಲಿ ಹಲವು ಸಿನಿಮಾಗಳಿಗೆ ಪ್ರಶಸ್ತಿ ಬಂದಿದೆ ಎಂದೂ, ಅವುಗಳನ್ನು ದುಡ್ಡು ಪಡೆದು ಪಡೆಯಲಾಗಿದೆ ಎಂದು ಭಾರೀ ಚರ್ಚೆ ನಡೆದಿತ್ತು. ಆ ಚರ್ಚೆಯಲ್ಲಿ ಕಂಡಂತಹ ಸಿನಿಮಾಗಳಿಗೂ ಪ್ರಶಸ್ತಿ ನೀಡಲಾಗಿದೆ. ಹಾಗಾಗಿ ಪ್ರಶಸ್ತಿಯ ಪಾರದರ್ಶಕತೆಯ ಬಗ್ಗೆಯೂ ಮಾತನಾಡಲಾಗುತ್ತಿದೆ.

    ಚರ್ಚೆಗಳಾಚೆ ಏನೇ ಇದ್ದರೂ ಮೂರು ವಿಭಾಗಗಳಲ್ಲಿ ನಿನ್ನೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ನಿನ್ನೆಯೇ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವನ್ನೂ ಮಾಡಲಾಗಿದೆ. ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರೆ, ಇಂಡೋನೇಷ್ಯಾದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಇರಾನ್ ನ ‘ಮದರ್ ಲೆಸ್’ ಚಿತ್ರಗಳು ಏಷ್ಯನ್ ವಿಭಾಗದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿವೆ.

    ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಕೃಷ್ಣೆಗೌಡ ನಿರ್ದೇಶನದ ‘ನಾನು ಕುಸುಮಾ’ ಪ್ರಶಸ್ತಿ ಬಾಚಿಕೊಂಡರೆ, ಅತ್ಯುತ್ತಮ ದ್ವಿತೀಯ ಚಿತ್ರವಾಗಿ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ಅತ್ಯುತ್ತಮ ತೃತೀಯ ಚಿತ್ರವಾಗಿ ಉತ್ಸವ್ ಗೋನಾವರ್ ಅವರ ‘ಫೋಟೋ ‘ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಚಿತ್ರ ಭಾರತಿ –ಭಾರತೀಯ  ಚಿತ್ರ ವಿಭಾಗದಲ್ಲಿ ಚಂಪಾ ಶೆಟ್ಟಿ ನಿರ್ದೇಶನದ ಕನ್ನಡದ ‘ಕೋಳಿ ಎಸ್ರು’ ಅತ್ಯುತ್ತಮ ಚಿತ್ರವಾಗಿ, ತರುಣ್ ಮೂರ್ತಿ ಅವರ ಮಲಯಾಳಂ ಸಿನಿಮಾ ‘ಸೌದಿ ವೆಲ್ಲಕ ಸಿಸಿ’ ಸಿನಿಮಾ ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಗೌತಮ್ ರಾಮಚಂದ್ರನ್ ನಿರ್ದೇಶನದ ತಮಿಳು ಸಿನಿಮಾ ‘ಗಾರ್ಗಿ’ ಅತ್ಯುತ್ತಮ ತೃತೀಯ ಚಿತ್ರ ಪ್ರಶಸ್ತಿಯನ್ನು ಪಡೆದವು.

    ಏಷ್ಯನ್ ವಿಭಾಗದಲ್ಲಿ ಇಂಡೋನೇಷ್ಯಾದ ಕಮಿಲಾ ಅಂದಿನಿ ನಿರ್ದೇಶನದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಸಯ್ಯದ್ ಮೊರ್ತೆಜಾ ಫೆತಮಿ ನಿರ್ದೇಶನದ ಇರಾನ್ ಸಿನಿಮಾ ‘ಮದರ್ ಲೆಸ್’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿವೆ. ವಿಶಕೆಸ್ ಚಂದ್ರಶೇಖರಮ್ ನಿರ್ದೇಶನದ ಶ್ರೀಲಂಕಾ ಚಿತ್ರ ‘ಸ್ಯಾಂಡ್’ ಅತ್ಯುತ್ತಮ ದ್ವಿತೀಯ ಚಿತ್ರವಾಗಿ, ಅಕ್ರಂ ಖಾನ್ ನಿರ್ದೇಶನದ ಬಾಂಗ್ಲಾದೇಶದ ‘ಎ ಟೇಲ್ ಆಫ್ ಟು ಸಿಸ್ಟರ್’ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶನದ ಕನ್ನಡದ ‘ವಿರಾಟಪುರ ವಿರಾಗಿ’ ಸಿನಿಮಾ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.

    ವಿಧಾನಸೌಧದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ವಾರ್ತಾ ಇಲಾಖೆಯ ನಿರ್ದೇಶಕ ಡಿ.ಪಿ. ಮುರಳಿಧರ್, ಆಯುಕ್ತ ಪಿ.ಎಸ್. ಹರ್ಷ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನವನ್ನು ಮಾಡಿದರು.

  • ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಆರ್.ಆರ್.ಆರ್ ತಂಡಕ್ಕೆ ಮೋದಿ ಅಭಿನಂದನೆ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಆರ್.ಆರ್.ಆರ್ ತಂಡಕ್ಕೆ ಮೋದಿ ಅಭಿನಂದನೆ

    ಹಾಲಿವುಡ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ‍ಪ್ರಶಸ್ತಿ ಪಡೆದಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ‘ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಟ್ವಿಟ್ ಮಾಡಿದ್ದಾರೆ.

    ಸದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅನಿರೀಕ್ಷಿತ ಪ್ರಶಸ್ತಿಯೊಂದು ಸಂದಿದ್ದು, ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಬಂದಿದೆ. ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಸಿನಿಮಾ, ಈ ಸಲ ಬಂಗಾರದ ಪದಕವನ್ನೇ ಬೇಟೆಯಾಡಿದೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ‘ನಾಟು ನಾಟು’ ಹಾಡಿಗೆ ಈ ಪ್ರಶಸ್ತಿ ಬಂದಿದ್ದು, ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಈ ಗೌರವವನ್ನು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಪ್ರಶಸ್ತಿಯನ್ನು ಪಡೆದರು. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು.

    RRR Lyrical Video Natu Natu 3

    ಈ ಪ್ರಶಸ್ತಿಗಾಗಿ ಘಟಾನುಘಟಿ ಹಾಡುಗಳೇ ಸ್ಪರ್ಧಾ ಕಣದಲ್ಲಿದ್ದವು. ಕೆರೊಲಿನ್, ಸಿಯೋ ಪಾ, ಹೋಲ್ಡ್ ಮೈ ಹ್ಯಾಂಡ್, ಲಿಫ್ಟ್ ಮಿ ಅಪ್ ರೀತಿಯ ಹಾಡುಗಳು ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಈ ಎಲ್ಲ ಹಾಡುಗಳ ಜನಪ್ರಿಯತೆಯನ್ನು ಹಿಂದಿಕ್ಕೆ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪಡೆದ ದಕ್ಷಿಣದ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಗಾಸ್ಟಾರ್ ಚಿರಂಜೀವಿಗೆ IFFI ವ್ಯಕ್ತಿತ್ವ ಪ್ರಶಸ್ತಿ ಗೌರವ

    ಮೆಗಾಸ್ಟಾರ್ ಚಿರಂಜೀವಿಗೆ IFFI ವ್ಯಕ್ತಿತ್ವ ಪ್ರಶಸ್ತಿ ಗೌರವ

    ಬಾರಿಯ  IFFI  ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯು  ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸಂದಿದೆ. 2022 ರ ಐಎಫ್‌ಎಫ್‌ಐ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿಯು ಮೆಗಾಸ್ಟಾರ್ ಮತ್ತು ನಟ-ನಿರ್ಮಾಪಕ ಚಿರಂಜೀವಿ ಕೊನಿಡೇಲ ಅವರಿಗೆ ಸಂದಿದೆ.  ಗೋವಾದಲ್ಲಿ ಇಂದು ನಡೆದ  ಐಎಫ್‌ಎಫ್‌ಐನ 53ನೇ ಆವೃತ್ತಿಯ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

    ನಾಲ್ಕು ದಶಕಗಳಿಗೂ ಹೆಚ್ಚು ಕಾಲ  ಚಲನಚಿತ್ರರಂಗದಲ್ಲಿರುವ   ಚಿರಂಜೀವಿ ಇದೂವರೆಗೂ  ತೆಲುಗಿನಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಕೆಲವು ಚಲನಚಿತ್ರಗಳಲ್ಲಿ ಕೂಡ ಚಿರಂಜೀವಿ‌ ಅಭಿನಯಿಸಿದ್ದಾರೆ.  ಚಿರಂಜೀವಿ ಅವರು ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ:‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

     ಅವರು 1982 ರಲ್ಲಿ “ಇನಿತ್ಲೋ ರಾಮಯ್ಯ ವೀಡಿಲೋ ಕೃಷ್ಣಯ್ಯ” ಚಿತ್ರದಲ್ಲಿ  ಮೊದಲ ಬಾರಿಗೆ ನಟಿಸಿ  ತಮ್ಮ ಅಭಿನಯದ ಮೂಲಕ ಜನಮಾನಸವನ್ನು ತಮ್ಮತ್ತ ಸೆಳೆದುಕೊಂಡರು. ಅವರ ಉತ್ಸಾಹಭರಿತ ನೃತ್ಯ ಪ್ರದರ್ಶನಗಳು ಮತ್ತು ಶಕ್ತಿಯುತ  ಹೋರಾಟದ  ದೃಶ್ಯಗಳಿಂದಾಗಿ ಜನರ ಇನ್ನಷ್ಟು  ಮೆಚ್ಚುಗೆ ಪಡೆದಿದ್ದಾರೆ. ಇವರ  ಈ ಆಕರ್ಷಕ ನಟನೆ ಹಾವಭಾವ ಶೈಲಿಯ ಪ್ರಭಾವವೇ ಅವರಿಗೆ “ಮೆಗಾಸ್ಟಾರ್” ಎಂಬ ಬಿರುದನ್ನು ತಂದುಕೊಟ್ಟಿದೆ.  2006 ರಲ್ಲಿ, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

    ಐಎಫ್‌ಎಫ್‌ಐ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಕಾರ್ಯಕ್ರಮದ ವೇದಿಕೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ  ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ.  ಈ ಪ್ರಶಸ್ತಿಯು ಸಿನಿಮಾ, ಜನಪ್ರಿಯ ಸಂಸ್ಕೃತಿ ಮತ್ತು ಸಾಮಾಜಿಕವಾಗಿ ಮಹತ್ವದ ಕಲಾತ್ಮಕ ಕೆಲಸಕ್ಕಾಗಿ ಅವರು ನೀಡಿರುವ  ಕೊಡುಗೆಗಳಿಂದಾಗಿ ಜನರಿಂದ (ಪ್ರೇಕ್ಷಕರಿಂದ) ಹೆಚ್ಚು ಆರಾಧಿಸಲ್ಪಟ್ಟ ಮೆಗಾಸ್ಟಾರ್‌ಗೆ  ಈ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಯು ಚಿರಂಜೀವಿ ಅವರಿಗೆ ರಾಷ್ಟ್ರವು ನೀಡುವ ಮನ್ನಣೆಯಾಗಿದೆ.

    ಈ ಸಂದರ್ಭದಲ್ಲಿ ಈ ಹಿರಿಯ ನಟನನ್ನು ಅಭಿನಂದಿಸಿ ಮಾತನಾಡಿದ  ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್‌, ಚಿರಂಜೀವಿ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುದೀರ್ಘವಾಗಿ ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಳ್ಳುವ  ವೃತ್ತಿಜೀವನವನ್ನು ಹೊಂದಿದ್ದಾರೆ, ನಟ, ನರ್ತಕ ಹಾಗೂ  ನಿರ್ಮಾಪಕರಾಗಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಎಂದರು.

    ಚಿರಂಜೀವಿ ಅವರು  ತೆಲುಗು ಚಿತ್ರರಂಗದಲ್ಲಿ ಅಗಾಧವಾದ ಜನಪ್ರಿಯತೆಯನ್ನು ಹೊಂದುವ  ಮೂಲಕ ತಮ್ಮ ಅಭಿನಯದಿಂದಾಗಿ ಪ್ರೇಕ್ಷಕರ (ಜನರ) ಮನೆ,ಮನ, ಹೃದಯಗಳನ್ನು ಸ್ಪರ್ಶಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಇನ್ನು  ಚಿತ್ರರಂಗದ ದಿಗ್ಗಜರಾದ ಹಿರಿಯ ನಟರಾದ ವಹೀದಾ ರೆಹಮಾನ್, ರಜನಿಕಾಂತ್, ಇಳಯರಾಜ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಅಮಿತಾಬ್ ಬಚ್ಚನ್, ಸಲೀಂ ಖಾನ್, ಬಿಸ್ವಜಿತ್ ಚಟರ್ಜಿ, ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಷಿ ಅವರು ಈ ಹಿಂದೆ  IFFI (ಐಎಫ್‌ಎಫ್‌ಐ) ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ಬೆಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯಕ ಮಾತ್ರವಲ್ಲದೆ ನಟ, ಡಬ್ಬಿಂಗ್ ಆರ್ಟಿಸ್ಟ್ ಹೀಗೆ ಬೆಳ್ಳಿ ತೆರೆಯಲ್ಲಿ ಮಿಂಚಿ ನಂತರ ಕಿರುತೆರೆಗೂ ಕಾಲಿಟ್ಟು ಪ್ರಸಿದ್ಧಿ ಪಡೆದಿದ್ದರು. ಎದೆ ತುಂಬಿ ಹಾಡಿದೆನು ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.

    90ರ ದಶಕದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಿರುತೆರೆಗೂ ಎಂಟ್ರಿ ಕೊಟ್ಟರು. ತೆಲುಗಿನ ಪಾಡುತಾ ತಿಯಗಾ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಮನೆಮಾತಾದರು. ಕನ್ನಡದಲ್ಲಿ ಸಹ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಆಗಿ ನಿರೂಪಕನಾಗಿ ಗಮನ ಸೆಳೆದರು. ಈ ಕಾರ್ಯಕ್ರಮಗಳಿಂದ ಅದೆಷ್ಟೋ ಸಂಗೀತ ಪ್ರತಿಭೆಗಳು ಬೆಳಕಿಗೆ ಬಂದವು. ಅಲ್ಲದೆ ಈ ಕಾರ್ಯಕ್ರಮದಿಂದ ಎಸ್‍ಪಿಬಿ ಕನ್ನಡಿಗರ ಮನೆ ಮಾತಾದರು.

    ಬಾಲು ಗಾನಕ್ಕೆ ಪ್ರಶಸ್ತಿಗಳ ಸುರಿಮಳೆ
    ಎಸ್‍ಪಿಬಿ ಗಾನಕ್ಕೆ ಮಂತ್ರಮುಗ್ಧರಾಗದೆ ಇರುವವರೇ ಇಲ್ಲ ಎನ್ನಬಹುದು. ಬಾಲು ಗಾಯನಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ಶಂಕರಾಭರಣಂ ಸಿನಿಮಾಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತು.್ತ ಹಿಂದಿಯ ಏಕ್ ದುಜೆ ಕೇಲಿಯೇ ಸಿನಿಮಾ, ಕನ್ನಡದ ಪಂಚಾಕ್ಷರಿ ಗವಾಯಿ, ತೆಲುಗಿನ ರುದ್ರವೀಣ, ತಮಿಳಿನ ಮಿನ್ನರ ಕನ್ನವು ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿತ್ತು. ಮೈನೇ ಪ್ಯಾರ್ ಕಿಯಾ ಚಿತ್ರಕ್ಕೆ ಮೊದಲ ಬಾರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಎನ್‍ಟಿಆರ್ ಪ್ರಶಸ್ತಿ, 8 ನಂದಿ ಪ್ರಶಸ್ತಿಗಳು ದಕ್ಕಿದ್ದವು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಅದೇಕೋ ಬಾಲು ಹೆಸರನ್ನು ಪ್ರಶಸ್ತಿಗಳಿಗೆ ಪರಿಗಣಿಸಲೇ ಇಲ್ಲ ಎನ್ನುವುದು ಬೇಸರದ ಸಂಗತಿ.

  • ಸುಳ್ಯದ ಕನಕಮಜಲು ಗ್ರಾಮ ಪಂಚಾಯತಿಗೆ ರಾಷ್ಟ್ರೀಯ ಪುರಸ್ಕಾರ

    ಸುಳ್ಯದ ಕನಕಮಜಲು ಗ್ರಾಮ ಪಂಚಾಯತಿಗೆ ರಾಷ್ಟ್ರೀಯ ಪುರಸ್ಕಾರ

    – ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮಸಭಾ ಪುರಸ್ಕಾರ್ ಗೌರವ
    – ಈ ಪುರಸ್ಕಾರಕ್ಕೆ ಭಾಜನವಾದ ರಾಜ್ಯದ ಏಕೈಕ ಪಂಚಾಯತ್

    ಮಂಗಳೂರು: ಪಂಚಾಯತ್ ಪುರಸ್ಕಾರ್ 2020ರ ಸಾಲಿನ ಪ್ರಗತಿ ಆಧರಿಸಿ ಕೇಂದ್ರ ಪುರಸ್ಕೃತ ದೀನದಯಾಳ್ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿಯಾದ “ನಾನಾಜಿ ದೇಶ್‍ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ 2020” ಕ್ಕೆ ಕರ್ನಾಟಕದಲ್ಲೇ ಏಕೈಕ ಗ್ರಾಮ ಪಂಚಾಯತ್ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

    ರಾಷ್ಟ್ರಮಟ್ಟದ ಕ್ಷೇತ್ರಗಳ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಎಸ್.ಎಂ. ಜುಲ್ಫಿಕರ್ ಉಲ್ಲಾ, ಬೋಧಕರಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಆರ್. ಶಂಕರ್ ಅವರುಗಳನ್ನು ಒಳಗೊಂಡ ನಿರ್ದೇಶಕರುಗಳ ತಂಡವು ವಿವಿಧ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ನಡುವೆ ಕಳೆದ ಫೆಬ್ರವರಿ 13ರಂದು ಕನಕಮಜಲು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಇದೀಗ ಅಂತಿಮವಾಗಿ ಗುರುತಿಸಲ್ಪಟ್ಟ ಕರ್ನಾಟಕ ರಾಜ್ಯದ ಮೂರು ಗ್ರಾಮ ಪಂಚಾಯತ್ ಗಳ ಪೈಕಿ ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳಲ್ಲಿ, ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕನಕಮಜಲು ಗ್ರಾ.ಪಂ.ಗೆ ಈಗಾಗಲೇ ಗಾಂಧಿ ಗ್ರಾಮ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ, ಸ್ವಚ್ಛತಾ ಪುರಸ್ಕಾರಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

    ದೇಶದಾದ್ಯಂತ ಗ್ರಾಮ ಸಭೆಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ಒಟ್ಟು 20 ಗ್ರಾ.ಪಂ.ಗಳಿಗೆ ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಸದರಿ ಈ ಪ್ರಶಸ್ತಿಯು 10 ಲಕ್ಷ ರೂ. ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

  • ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಅಷ್ಟೇ ಅಲ್ಲದೇ ಅವರು ಹಲವು ಹುದ್ದೆಗಳುನ್ನು ಅವರು ನಿಭಾಯಿಸಿದ್ದಾರೆ. ಹೀಗಾಗಿ ಇಲ್ಲಿ ವಾಜಪೇಯಿ ಅವರಿಗೆ ಸಿಕ್ಕಿದ ಹುದ್ದೆಗಳು ಮತ್ತು ಪ್ರಶಸ್ತಿಗಳ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಶಸ್ತಿಗಳು:
    * 1992: ಪದ್ಮವಿಭೂಷಣ
    * 1993: ಕಾನ್ಪುರ ವಿವಿಯಿಂದ ಗೌರವ ಡಾಕ್ಟರೇಟ್
    * 1994: ಲೋಕಮಾನ್ಯ ತಿಲಕ್ ಪ್ರಶಸ್ತಿ
    * 1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ
    * 1994: ಭಾರತ ರತ್ನ ಪಂಡಿತ್ ಗೋವಿಂದ ವಲ್ಲಭ ಪಂತ್ ಪ್ರಶಸ್ತಿ
    * 2015: ಭಾರತ ರತ್ನ ಗೌರವ
    * 2015: ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್ ಪ್ರಶಸ್ತಿ ( ಬಾಂಗ್ಲಾದೇಶ ಸರ್ಕಾರ ನೀಡುವ ಅತ್ಯುತ್ತನ ನಾಗರಿಕ ಗೌರವ)

    ನಿಭಾಯಿಸಿದ ಹುದ್ದೆಗಳು

    * 1951: ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ
    * 1957: ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆ(ಮೂರು ಕಡೆ ಸ್ಪರ್ಧೆ, ಮಥುರಾ, ಲಕ್ನೋದಲ್ಲಿ ಸೋಲು. ಉತ್ತರ ಪ್ರದೇಶದ ಬಲ್‍ರಂಪುರ ಕ್ಷೇತ್ರದಿಂದ ಆಯ್ಕೆ ಆಯ್ಕೆ, ಜನಸಂಘ ಪಕ್ಷ)
    * 1957-77: ಭಾರತೀಯ ಜನಸಂಘದ ಸಂಸದೀಯ ಸಮಿತಿಯ ನಾಯಕ
    * 1962: ಲೋಕಸಭಾ ಚುನಾವಣೆಯಲ್ಲಿ ಸೋಲು
    * 1962: ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ
    * 1966: ಸರ್ಕಾರದ ಭರವಸೆಗಳ ಕುರಿತಾದ ಸಮಿತಿಯ ಅಧ್ಯಕ್ಷ

    * 1967-71 ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆ (ಬಲ್‍ರಂಪುರ ಕ್ಷೇತ,ಜನಸಂಘ ಪಕ್ಷ್ರ)
    * 1967-70: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ
    * 1968-73: ಭಾರತೀಯ ಜನಸಂಘದ ಅಧ್ಯಕ್ಷ
    * 1971-77 ಲೋಕಸಭೆಗೆ ಮೂರನೇ ಬಾರಿ ಆಯ್ಕೆ(ಗ್ವಾಲಿಯರ್ ಮಧ್ಯಪ್ರದೇಶ ಜನಸಂಘ ಪಕ್ಷ)
    * 1977-80: ಲೋಕಸಭೆಗೆ ನಾಲ್ಕನೇಯ ಬಾರಿ ಆಯ್ಕೆ(ದೆಹಲಿ, ಜನತಾ ಪಕ್ಷದಿಂದ ಆಯ್ಕೆ)

    * 1977-79: ಮೋರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ
    * 1977-80: ಜನತಾ ಪಕ್ಷದ ಸಂಸ್ಥಾಪಕ ಸದಸ್ಯ
    * 1980-84: ಲೋಕಸಭೆಗೆ ಐದನೇ ಬಾರಿ ಆಯ್ಕೆ(ದೆಹಲಿ, ಬಿಜೆಪಿಯಿಂದ ಆಯ್ಕೆ)
    * 1980-86: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ
    * 1986 : ರಾಜ್ಯಸಭೆ ಸದಸ್ಯರಾಗಿ ನೇಮಕ

    * 1991: ಆರನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1991-93: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ
    * 1993-96: ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಲೋಕಸಭೆಯ ವಿರೋಧ ಪಕ್ಷದ ನಾಯಕ
    * 1996: ಏಳನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1996 ಮೇ.16: ಪ್ರ್ರಧಾನಿಯಾಗಿ ನೇಮಕ. 13 ದಿನಗಳಲ್ಲಿ ಸರ್ಕಾರ ಪತನ

    * 1996-97: ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ನಿರ್ವಹಣೆ* 1998: ಎಂಟನೇ ಬಾರಿಗೆ ಲೋಕಸಭೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1998-99: ಎರಡನೇ ಬಾರಿ ಪ್ರಧಾನಿಯಾಗಿ ನೇಮಕ
    * 1999: ಒಂಭತ್ತನೆ ಬಾರಿ ಲೋಕಭೆಗೆ ಆಯ್ಕೆ (ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1999 ಅಕ್ಟೋಬರ್ 13 ರಿಂದ 2004 ಮೇ 13ರವರೆಗೆ ಅಧಿಕಾರ
    * 2004: ಹತ್ತನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 2005: ರಾಜಕೀಯದಿಂದ ನಿವೃತ್ತಿ

    https://youtu.be/RuoTJWHKNDY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

    IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

    ನವದೆಹಲಿ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ (ಐಫಾ) ಭಾನುವಾರ ರಾತ್ರಿ ಬ್ಯಾಂಕಾಕ್‍ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ರೇಖಾ, ರಣ್‍ಬೀರ್ ಕಪೂರ್, ವರುಣ್ ಧವನ್, ಅನಿಲ್ ಕಪೂರ್, ಅರ್ಜುನ್ ಕಪೂರ್, ಶ್ರದ್ಧಾ ಕಪೂರ್, ಕೃತಿ ಸನೋನ್, ಕಾರ್ತಿಕ್ ಆರ್ಯನ್, ಕರಣ್ ಜೋಹರ್ ಮುಂತಾದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಬ್ಯಾಂಕಾಕ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಂಗತ ಶ್ರೀದೇವಿ ಅವರಿಗೆ ‘ಮಾಮ್’ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ‘ಹಿಂದಿ ಮೀಡಿಯಂ’ ಚಿತ್ರಕ್ಕಾಗಿ ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ವಿದ್ಯಾ ಬಾಲನ್ ನಟನೆಯ ‘ತುಮಾರಿ ಸುಲು’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: 63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ

    ಐಫಾ ಕಾರ್ಯಕ್ರಮವನ್ನೂ ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ನಟ ರಿತೇಶ್ ದೇಶ್‍ಮುಕ್ ನಿರೂಪಣೆ ಮಾಡಿದ್ದಾರೆ. ಇನ್ನೂ 20 ವರ್ಷಗಳ ನಂತರ ಹಿರಿಯ ನಟಿ ರೇಖಾ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ.

    ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ:
    ಅತ್ಯುತ್ತಮ ಚಿತ್ರ: ತುಮಾರಿ ಸುಲು
    ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್)
    ಅತ್ಯುತ್ತಮ ನಟ: ಇರ್ಫಾನ್ ಖಾನ್ (ಹಿಂದಿ ಮೀಡಿಯಂ)
    ಅತ್ಯುತ್ತಮ ಪೋಷಕ ನಟಿ: ಮೆಹೆರ್ ವಿಜ್ (ಸಿಕ್ರೇಟ್ ಸೂಪರ್ ಸ್ಟಾರ್)

    ಅತ್ಯುತ್ತಮ ಪೋಷಕ ನಟ: ನವಾಜುದ್ದೀನ್ ಸಿದ್ದಿಕಿ (ಮಾಮ್)
    ಅತ್ಯುತ್ತಮ ನಿರ್ದೇಶಕ: ಸಕೇತ್ ಚೌಧರಿ (ಹಿಂದಿ ಮೀಡಿಯಂ)
    ಅತ್ಯುತ್ತಮ ಡೆಬ್ಯೂ ನಿರ್ದೇಶಕ: ಕೋನಕೋನ ಸೇನ್‍ಶರ್ಮಾ (ಎ ಡೆತ್ ಇನ್ ದ ಗುಂಜ್)
    ಅತ್ಯುತ್ತಮ ಕಥೆ: ಅಮಿತ್ ವಿ ಮುಸರ್‍ಕರ್ (ನ್ಯೂಟನ್)

    ಅತ್ಯುತ್ತಮ ಸಂಗೀತ ನಿರ್ದೇಶಕ: ಅಮಾಲ್ ಮಲ್ಲಿಕ್, ತನೀಶ್ಕ್ ಬಗಾಚಿ, ಅಕೀಲ್ ಸಚ್‍ದೇವ (ಬದ್ರಿನಾಥ್ ಕೀ ದುಲ್ಹನೀಯಾ)
    ಅತ್ಯುತ್ತಮ ಸ್ಕ್ರೀನ್‍ಪ್ಲೇ: ನಿತೇಶ್ ತಿವಾರಿ, ಶ್ರೇಯಸ್ ಜೈನ್ (ಬರೇಲಿ ಕೀ ಬರ್ಫಿ)
    ಅತ್ಯುತ್ತಮ ಗಾಯಕಿ: ಮೇಘನಾ ಮಿಶ್ರಾ (ಮೇ ಕೋನ್ ಹೂ- ಸಿಕ್ರೇಟ್ ಸೂಪರ್ ಸ್ಟಾರ್)
    ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ಹವಾಯೈ- ಜಬ್ ಹ್ಯಾರಿ ಮೆಟ್ ಸೇಜಲ್)

    ಅತ್ಯುತ್ತಮ ನೃತ್ಯ ನಿರ್ದೇಶಕ: ವಿಜಯ್ ಗಂಗೂಲಿ ಹಾಗೂ ರುಯಿಲ್ ದೌಸಾನ್ ವರಿನ್‍ದಾನಿ (ಗಲ್ತಿ ಸೇ ಮಿಸ್ಟೇಕ್)
    ಬೆಸ್ಟ್ ಸ್ಟೈಲ್ ಐಕಾನ್: ಕೃತಿ ಸನೋನ್
    ಭಾರತೀಯ ಸಿನಿಮಾದ ಜೀವಮಾನ ಶ್ರೇಷ್ಠ ಪ್ರಶಸ್ತಿ: ಅನುಪಮ್ ಖೇರ್

  • ಸಸಿ ನೆಟ್ಟು ಗುಡ್ಡಗಳಿಗೆ ಹಸಿರ ಹೊದಿಕೆ ಹಾಕಿದ್ದಾರೆ ಅಂಕೋಲಾದ ಸಸ್ಯವಿಜ್ಞಾನಿ ತುಳಸಿಗೌಡ

    ಸಸಿ ನೆಟ್ಟು ಗುಡ್ಡಗಳಿಗೆ ಹಸಿರ ಹೊದಿಕೆ ಹಾಕಿದ್ದಾರೆ ಅಂಕೋಲಾದ ಸಸ್ಯವಿಜ್ಞಾನಿ ತುಳಸಿಗೌಡ

    ಕಾರವಾರ: ಪರಿಸರ ಪ್ರೇಮಕ್ಕೆ ಸಾಲುಮರದ ತಿಮ್ಮಕ್ಕರ ಹೆಸರಿಗೆ ಪರ್ಯಾಯ ಹೆಸರಿಲ್ಲ. ಆದ್ರೆ, ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ 82 ವರ್ಷದ ವೃದ್ಧೆ ತುಳಸಿಗೌಡ ಅವರು ಸದ್ದಿಲ್ಲದೇ ಪ್ರಕೃತಿ ರಕ್ಷಣೆ ನಿಂತಿದ್ದಾರೆ.

    82 ವರ್ಷದ ತುಳಸಿ ಗೌಡ ಅವರು ಕಳೆದ 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಗಿಡಗಳನ್ನು ನೆಟ್ಟು ಬೋಳು ಬಿದ್ದ ಗುಡ್ಡಗಳಿಗೆ ಹಸಿರ ಹೊದಿಕೆ ಹೊದಿಸಿದ್ದಾರೆ. ಬಾಲ್ಯದಲ್ಲೇ ಅಪ್ಪ, ಮದುವೆಯಾದ ಬಳಿಕ ಗಂಡನ ಕಳೆದುಕೊಂಡ್ರೂ ಕಾಡಿನ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡ್ರು. ಈ ವೇಳೆ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಸೇರಿಕೊಂಡ್ರು.

    ಕಾಡಿನಿಂದ ತಂದ ಬೀಜಗಳನ್ನು ಸಸಿ ಮಾಡಿ ಶಾಲೆ ಆವರಣ, ರಸ್ತೆ, ಗುಡ್ಡ ಬೆಟ್ಟದಲ್ಲಿ ನೆಟ್ಟು ಪೋಷಿಸ ತೊಡಗಿದ್ರು. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯಿಂದ ಹಣ ನೀಡದಿದ್ದರೂ, ಅವುಗಳ ರಕ್ಷಣೆಯನ್ನು ಮಾಡಿದ್ರು. 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು `ಸಸ್ಯ ವಿಜ್ಞಾನಿ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

    ಇವರ ಶ್ರಮ ಹಾಗೂ ಉತ್ಸಾಹವನ್ನು ಪರಿಗಣಿಸಿ ಅಂದಿನ ಅರಣ್ಯಾಧಿಕಾರಿ ಅ.ನಾ.ಯಲ್ಲಪ್ಪ ರೆಡ್ಡಿಯವರು ಮಾಸ್ತಿಕಟ್ಟೆ ಅರಣ್ಯವಲಯವನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ಹೀಗೆ ಈಕೆಯ ಜೀವಮಾನದಲ್ಲಿ ಲಕ್ಷಗಟ್ಟಲೇ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಇವರ ಸಾಧನೆ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

    https://www.youtube.com/watch?reload=9&v=uD76cqidkWw

  • 2018ನೇ ಫಿಲಂ ಫೇರ್ ಪ್ರಶಸ್ತಿ ಪ್ರಕಟ- ಯಾರು ಅತ್ಯುತ್ತಮ ನಟ, ನಟಿ: ಇಲ್ಲಿದೆ ಸಂಪೂರ್ಣ ಮಾಹಿತಿ

    2018ನೇ ಫಿಲಂ ಫೇರ್ ಪ್ರಶಸ್ತಿ ಪ್ರಕಟ- ಯಾರು ಅತ್ಯುತ್ತಮ ನಟ, ನಟಿ: ಇಲ್ಲಿದೆ ಸಂಪೂರ್ಣ ಮಾಹಿತಿ

    ಹೈದರಾಬಾದ್: 2018ರ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶನಿವಾರ ಹೈದರಾಬಾದ್‍ನಲ್ಲಿ ನಡೆದಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

    2018 ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, ‘ರಾಜಕುಮಾರ’ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್‍ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ‘ಬ್ಯೂಟಿಫುಲ್ ಮನಸ್ಸುಗಳು’ ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸುವಾಗ ಪುನೀತ್ ಬಾಲ್ಯದಿನಗಳಲ್ಲಿ ಅಪ್ಪಾಜಿ ಜೊತೆ ಸ್ವೀಕರಿಸಿದ್ದ ಪ್ರಶಸ್ತಿಯನ್ನು ನೆನಪಿಸಿಕೊಂಡರು. ಇನ್ನೂ ಅತ್ಯುತ್ತಮ ಪ್ರಶಸ್ತಿ ಪಡೆದ ಶೃತಿ ಹರಿಹರನ್ ಬ್ಯೂಟಿಫುಲ್ ಮನಸ್ಸುಗಳು ಸಿನಿಮಾಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

    https://twitter.com/PuneethOfficial/status/1008223181256224769

    2018 ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟ:

    ಅತ್ಯುತ್ತಮ ನಟ                                            – ಪುನೀತ್ ರಾಜ್‍ಕುಮಾರ್(ರಾಜಕುಮಾರ್)
    ಅತ್ಯುತ್ತಮ ನಟಿ                                             – ಶೃತಿ ಹರಿಹರನ್ (ಬ್ಯೂಟಿಫುಲ್ ಮನಸ್ಸುಗಳು)
    ಅತ್ಯುತ್ತಮ ನಿದೇಶಕ                                      – ತರುಣ್ ಸುಧೀರ್ (ಚೌಕ)
    ಅತ್ಯುತ್ತಮ ಗೀತರಚನೆಕಾರ                             – ವಿ.ನಾಗೇಂದ್ರ ಪ್ರಸಾದ್(ಚೌಕ)
    ಅತ್ಯುತ್ತಮ ಚಿತ್ರ                                            – ಒಂದು ಮೊಟ್ಟೆಯ ಕಥೆ
    ಅತ್ಯುತ್ತಮ ಹಿನ್ನೆಲೆ ಗಾಯಕ                             – ಆರ್ಮನ್ ಮಲ್ಲಿಕ್(ಚಕ್ರವರ್ತಿ)
    ಅತ್ಯುತ್ತಮ ಹಿನ್ನೆಲೆ ಗಾಯಕಿ                             –ಅನುರಾಧ ಭಟ್(ಚೌಕ)
    ಅತ್ಯುತ್ತಮ ಸಂಗೀತ ನಿರ್ದೇಶಕ                       –ಭರತ್ ಬಿಜೆ(ಬ್ಯೂಟಿಫುಲ್ ಮನಸ್ಸುಗಳು)
    ಕ್ರಿಟಿಕ್ಸ್ ಅವಾರ್ಡ್                                         – ಧನಂಜಯ್(ಅಲ್ಲಮ್ಮ)
    ಕ್ರಿಟಿಕ್ಸ್ ಅವಾರ್ಡ್                                         – ಶ್ರದ್ಧ ಶ್ರೀನಾಥ್(ಆಪರೇಷನ್ ಅಲುಮೇಲಮ್ಮ)

     

    ತಮಿಳಿನಲ್ಲಿ ‘ಆರಂ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ವಿಕ್ರಮ್ ವೇದ’ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಆರಂ’ ಚಿತ್ರಕ್ಕೆ ನಟಿ ನಯನತಾರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

    ತೆಲುಗುವಿನಲ್ಲಿ ‘ಬಾಹುಬಲಿ-2’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಅರ್ಜುನ್ ರೆಡ್ಡಿ’ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಫೀದಾ’ ಚಿತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.