Tag: Aviva Biddappa

  • ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

    ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

    ಇಂದು ಡಾ. ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ (Abhishek Ambarish) ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ (Video) ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ (Aviva Biddappa) ಸಹ ಕಾಣಿಸಿಕೊಂಡಿರುವುದು ವಿಶೇಷ.

    ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವಿವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.  ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ (Viral) ಆಗಿದೆ. ಇದನ್ನೂ ಓದಿ:‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ಅಂಬರೀಶ್ ಅವರ ಸಿನಿಮಾದ ಜನಪ್ರಿಯ ಗೀತೆಗಳಾದ ‘ಒಲವಿನ ಉಡುಗೊರೆ’, ‘ಚಳಿ ಚಳಿ ತಾಳೆನು ಈ ಚಳಿಯ’, ‘ಮಂಡ್ಯದ ಗಂಡು’ ಹಾಗೂ ‘ಹೇ ಜಲೀಲಾ, ಕನ್ವರ್ ಲಾಲಾ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಾಲ್ಕು ಗೀತೆಗಳಿಗೆ ಅಭಿ ಮತ್ತು ಅವಿವಾ ಜೋಡಿ ಹೆಜ್ಜೆ ಹಾಕಿದೆ. ಒಲವಿನ ಉಡುಗೊರೆಯಿಂದ ಶುರುವಾಗುವ ವಿಡಿಯೋ ಅಂಬಿ ಅವರ ಕೊನೆಯ ಸಿನಿಮಾದ ಹೇ ಜಲೀಲ ಹಾಡಿನ ಮೂಲಕ ಕೊನೆಗೊಳ್ಳುತ್ತದೆ.

    ಒಲವಿನ ಉಡುಗೊರೆ ಹಾಡಿನಲ್ಲಂತೂ ಯಂಗ್ ರೆಬಲ್ ಸ್ಟಾರ್ ಸಖತ್ ಆಗಿ ಕಾಣುತ್ತಾರೆ. ಚಳಿ ಚಳಿ ತಾಳೆನು ಹಾಡಿಗೆ ಅವಿವಾ ಸಖತ್ ಎಕ್ಸ್ ಪ್ರೆಷನ್ ನೀಡಿದ್ದಾರೆ. ಮಂಡ್ಯದ ಗಂಡು ಹಾಡಿಗೆ ಬುಲೆಟ್ ಏರಿ ಬರುವ ಅಭಿಷೇಕ್, ಜಲೀಲ ಹಾಡಿಗೆ ಥೇಟ್ ಅಪ್ಪನಂತೆಯೇ ಸ್ಟೆಪ್ ಹಾಕಿದ್ದಾರೆ. ಎರಡು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವಿವಾ, ಎರಡರಲ್ಲೂ ಸೂಪರ್ ಆಗಿ ಕಾಣುತ್ತಾರೆ.

    ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವೀವಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

  • ಅಂಬಿ ಹಾಡಿಗೆ ಅಭಿ-ಅವಿವಾ ಡಾನ್ಸ್ : ಭಾವಿ ಪತ್ನಿಗೆ ಚಳಿ ಚಳಿ ತಾಳೆನು ಎಂದ ಯಂಗ್ ರೆಬೆಲ್ ಸ್ಟಾರ್

    ಅಂಬಿ ಹಾಡಿಗೆ ಅಭಿ-ಅವಿವಾ ಡಾನ್ಸ್ : ಭಾವಿ ಪತ್ನಿಗೆ ಚಳಿ ಚಳಿ ತಾಳೆನು ಎಂದ ಯಂಗ್ ರೆಬೆಲ್ ಸ್ಟಾರ್

    ಮಂಡ್ಯದ ಗಂಡು ಅಂಬರೀಶ್ (Ambarish) ಅವರ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಹಾಗೂ ಅಂಬಿ ಕುಟುಂಬದ ಭಾವಿ ಸೊಸೆ ಅವಿದಾ ಬಿಡಪ (Aviva Biddappa). ಅಂಬಿ ಹುಟ್ಟು ಹಬ್ಬದ ದಿನದಂದು ಆ ಸ್ಪೆಷಲ್ ವಿಡಿಯೋವನ್ನು (Video) ಬಿಡುಗಡೆ ಮಾಡಿದ್ದು, ಒಟ್ಟು ನಾಲ್ಕು ಹಾಡುಗಳ ತುಣುಕಿಗೆ ಈ ಜೋಡಿ ಡಾನ್ಸ್ (Dance) ಮಾಡಿದೆ.

    ಅಂಬರೀಶ್ ಅವರ ಸಿನಿಮಾದ ಜನಪ್ರಿಯ ಗೀತೆಗಳಾದ ‘ಒಲವಿನ ಉಡುಗೊರೆ’, ‘ಚಳಿ ಚಳಿ ತಾಳೆನು ಈ ಚಳಿಯ’, ‘ಮಂಡ್ಯದ ಗಂಡು’ ಹಾಗೂ ‘ಹೇ ಜಲೀಲಾ, ಕನ್ವರ್ ಲಾಲಾ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಾಲ್ಕು ಗೀತೆಗಳಿಗೆ ಅಭಿ ಮತ್ತು ಅವಿವಾ ಜೋಡಿ ಹೆಜ್ಜೆ ಹಾಕಿದೆ. ಒಲವಿನ ಉಡುಗೊರೆಯಿಂದ ಶುರುವಾಗುವ ವಿಡಿಯೋ ಅಂಬಿ ಅವರ ಕೊನೆಯ ಸಿನಿಮಾದ ಹೇ ಜಲೀಲ ಹಾಡಿನ ಮೂಲಕ ಕೊನೆಗೊಳ್ಳುತ್ತದೆ.

    ಒಲವಿನ ಉಡುಗೊರೆ ಹಾಡಿನಲ್ಲಂತೂ ಯಂಗ್ ರೆಬಲ್ ಸ್ಟಾರ್ ಸಖತ್ ಆಗಿ ಕಾಣುತ್ತಾರೆ. ಚಳಿ ಚಳಿ ತಾಳೆನು ಹಾಡಿಗೆ ಅವಿವಾ ಸಖತ್ ಎಕ್ಸ್ ಪ್ರೆಷನ್ ನೀಡಿದ್ದಾರೆ. ಮಂಡ್ಯದ ಗಂಡು ಹಾಡಿಗೆ ಬುಲೆಟ್ ಏರಿ ಬರುವ ಅಭಿಷೇಕ್, ಜಲೀಲ ಹಾಡಿಗೆ ಥೇಟ್ ಅಪ್ಪನಂತೆಯೇ ಸ್ಟೆಪ್ ಹಾಕಿದ್ದಾರೆ. ಎರಡು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವಿವಾ, ಎರಡರಲ್ಲೂ ಸೂಪರ್ ಆಗಿ ಕಾಣುತ್ತಾರೆ.

    ಕೆ.ಆರ್.ಜಿ ಕನೆಕ್ಟ್ಸ್ ವಿಶೇಷವಾಗಿ ಈ ವಿಡಿಯೋವನ್ನು ತಯಾರಿಸಿದ್ದು, ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ ಅದನ್ನು ಉಡುಗೊರೆಯಾಗಿ ನೀಡಿದೆ. ಜೊತೆಗೆ ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರರ್ಸ್’ ಸಿನಿಮಾದ ಪ್ರಮೋಷನ್ ಕೂಡ ಈ ವಿಡಿಯೋ ಮೂಲಕ ಮಾಡಿದೆ. ಅಂದಹಾಗೆ ಬ್ಯಾಡ್ ಮ್ಯಾನರ್ಸ್ ಅಭಿ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ. ಈ ಸಿನಿಮಾಗೆ ದುನಿಯಾ ಸೂರಿ ನಿರ್ದೇಶಕ.

  • ಅಭಿ-ಅವಿ ಮ್ಯಾರೇಜ್ : ಬೆಂಗಳೂರಿನಲ್ಲಿ ಮದುವೆ, ಮಂಡ್ಯದಲ್ಲಿ ಬೀಗರ ಊಟ

    ಅಭಿ-ಅವಿ ಮ್ಯಾರೇಜ್ : ಬೆಂಗಳೂರಿನಲ್ಲಿ ಮದುವೆ, ಮಂಡ್ಯದಲ್ಲಿ ಬೀಗರ ಊಟ

    ಅಂಬರೀಶ್ ಮತ್ತು ಸುಮಲತಾ ಅವರ ಏಕೈಕ ಪುತ್ರ ಅಭಿಷೇಕ್ (Abhishek Ambarish) ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಜೂನ್ 5ನೇ ತಾರೀಖು ನಡೆಯಲಿದೆ. ಜೂನ್ 5ರಂದು ಅಭಿಷೇಕ್ ಮತ್ತು ಅವಿವಾ (Aviva Biddappa)  ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೂನ್ 7 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಜೂನ್ 17ಕ್ಕೆ ಮಂಡ್ಯದಲ್ಲಿ ಬೀಗರ ಊಟವನ್ನು (Beegara Uta) ಏರ್ಪಡಿಸಿದ್ದಾರೆ.

    ಮದುವೆ, ಆರತಕ್ಷತೆ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 5ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ (Wedding) ಆಮಂತ್ರಣ ಪತ್ರ ನೀಡಿದ್ದಾರೆ. ಅಲ್ಲದೇ ಅನೇಕ ಗಣ್ಯರಿಗೂ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್‌ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದೆ.

    ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ. ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಇದೀಗ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ.

  • ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಇಂದು ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ವಿರೋಧಿ ಪಕ್ಷಗಳಿಂದ ತಮಗಾದ ನೋವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು, ತಮ್ಮ ಮಗ ಅಭಿಷೇಕ್ ಅಂಬರೀಶ್ (Abhishek) ಯಾವುದೇ ಕಾರಣಕ್ಕೂ ತಾವು ರಾಜಕಾರಣದಲ್ಲಿ ಇರುವತನಕ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿಕೆ ಕೊಟ್ಟರು. ಅಲ್ಲದೇ ಅಭಿಷೇಕ್ ಮದುವೆ ವಿಚಾರವನ್ನೂ ಬಹಿರಂಗ ಪಡಿಸಿದರು.

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ‘ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್‍ ಗೆ ಆಹ್ವಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ (Marriage) ಆಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು ಎದುರಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದರು. ಈ ಮಾತಿನ ಮೂಲಕ ಅಭಿಷೇಕ್ ಸದ್ಯದಲ್ಲೇ ಹೊಸ ಜೀವನಕ್ಕೆ ಕಾಲಿಡುವ ಕುರಿತು ಸುಳಿವು ನೀಡಿದರು. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ಕಳೆದ ತಿಂಗಳಷ್ಟೇ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯಲ್ಲಿ ಮದುವೆ ತಯಾರಿ ಕೂಡ ನಡೆಯುತ್ತಿದೆ. ಏಪ್ರಿಲ್ ನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ (Aviva Biddappa) ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡೂ ಮನೆಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲೇ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಅಧಿಕೃತವಾಗಿ ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಭಿಷೇಕ್ ಅಂಬರೀಶ್

    ಅಧಿಕೃತವಾಗಿ ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಭಿಷೇಕ್ ಅಂಬರೀಶ್

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವ ವಿಚಾರ ಎಂದರೆ ಅಭಿಷೇಕ್ ಅಂಬರೀಶ್ (Abhishek Ambreesh) ಮತ್ತು ಅವಿವಾ (Aviva) ಜೋಡಿಯ ಸುದ್ದಿ. ಇತ್ತೀಚೆಗೆ ಸುಳಿವು ಕೊಡದೇ ಸೈಲೆಂಟ್ ಆಗಿ ಅಭಿಷೇಕ್ ಮತ್ತು ಅವಿವಾ ಎಂಗೇಜ್ ಆಗಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇದೀಗ ಭಾವಿ ಪತ್ನಿಯ ಫೋಟೋವನ್ನ ನಟ ಅಭಿಷೇಕ್ ಶೇರ್‌ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಅಭಿಷೇಕ್ ಮತ್ತು ಅವಿವಾ ಅದ್ದೂರಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಈ ಸಂಭ್ರಮಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗ ಸಾಕ್ಷಿಯಾಗಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ಅಭಿಷೇಕ್ ಹಂಚಿಕೊಂಡಿದ್ದಾರೆ. ಚೆಂದದ ಜೋಡಿಯ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

     

    View this post on Instagram

     

    A post shared by Abishek Ambareesh (@abishekambareesh)

    ಅಂಬಿ ಪುತ್ರ ಅಭಿಷೇಕ್ 2019ಕ್ಕೆ ಅಮರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಿ ಎಂಟ್ರಿ ಕೊಟ್ರು. ಈ ಚಿತ್ರದ ಮುಂಚೆಯೇ ಅವಿವಾ ಮತ್ತು ಅಭಿಷೇಕ್ ಗೆಳೆತನವಿತ್ತು. ಆ ಗೆಳೆತನ ಪ್ರೀತಿಗೆ ತಿರುಗಿ, ಇಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

    5 ವರ್ಷಗಳ ಪ್ರೀತಿಗೆ ಇಂದು ಉಂಗುರ ತೊಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ, ಒಪ್ಪಿಗೆ ಮೇರೆಗೆ ಇಂದು ಈ ಜೋಡಿ ಎಂಗೇಜ್ ಆಗಿದ್ದಾರೆ. ಸದ್ಯ ಈ ಜೋಡಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ತಾಂಬೂಲ ಬದಲಿಸಿಕೊಂಡ ಕುಟುಂಬ

    ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ: ತಾಂಬೂಲ ಬದಲಿಸಿಕೊಂಡ ಕುಟುಂಬ

    ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬಗ್ಗೆ ಹಲವು ದಿನಗಳಿಂದ ಗಾಸಿಪ್ ಕಾಲಂನಲ್ಲಿ ಸುದ್ದಿ ಹರಿದಾಡುತ್ತಿತ್ತು. ಮೊನ್ನೆಯಷ್ಟೇ ಅಂಥದ್ದೇನೂ ಇಲ್ಲ ಎಂದೇ ಸುಮಲತಾ ಅಂಬರೀಶ್ ಹೇಳಿದ್ದರು. ಹುಡುಗಿಯನ್ನು ನೀವೇ ಹುಡುಕಿಕೊಡಿ ಎಂದೂ ತಮಾಷೆಯಾಗಿ ಅಭಿಷೇಕ್ ಹೇಳಿದ್ದರು. ಆದರೆ, ಅಭಿಷೇಕ್ ಅವರ ಎಂಗೇಜ್ ಮೆಂಟ್ ಕುರಿತು ಅವರ ಆಪ್ತರು ಖಚಿತ ಪಡಿಸಿದ್ದಾರೆ. ನಿನ್ನೆ ಅಂಬರೀಶ್ ಅವರ ಮನೆಯಲ್ಲೇ ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ. ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

    ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿವಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.

    ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.

    Live Tv
    [brid partner=56869869 player=32851 video=960834 autoplay=true]