Tag: aviva bidapa

  • ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    ಸ್ಯಾಂಡಲ್‌ವುಡ್ (Sandalwood) ನಟ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಪುತ್ರ ಅಭಿಷೇಕ್ ಮದುವೆಗೆ ದಿನಗಣನೆ ಶುರುವಾಗಿದೆ. ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದೆ. ಅಂಬಿ ಪುತ್ರನ ಮದುವೆ ಯಾವಾಗ? ಎಲ್ಲಿ ಮದುವೆ ನಡೆಯಲಿದೆ. ಆಮಂತ್ರಣ ಪತ್ರಿಕೆ ಹೇಗಿದೆ.? ಈ ಎಲ್ಲಾ ಡಿಟೈಲ್ಸ್ ಇಲ್ಲಿದೆ.

    ಅಭಿಷೇಕ್ ಅಂಬರೀಶ್, ಮಾಡೆಲ್ ಅವಿವ ಬಿಡಪ ಮದುವೆಗೆ ಮುಹೂರ್ತ ನಿಗದಿ ಆಗಿದೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಇವರ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಖಾಸಗಿ ಫೋಟೋ ಶೇರ್ ಮಾಡಿದ ಮಲೈಕಾ- ಅರ್ಜುನ್ ಕಪೂರ್ ಟ್ರೋಲ್

    ಸಿನಿಮಾ- ರಾಜಕೀಯ ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್- ಅವಿವಾ ಬಿದ್ದಪ್ಪ (Aviva Bidapa) ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ (Sumalatha Ambareesh) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿ- ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

    ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಇದೀಗ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ. ಇದನ್ನೂ ಓದಿ:ಕೆಂಪು ಗುಲಾಬಿ ಅವತಾರ ತಾಳಿದ ನಟಿ ಕಿಯಾರಾ

    ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ಸಾಕ್ಷಿಯಾಗಲಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಜೂನ್ 12ರಂದು ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ.

    ಏಪ್ರಿಲ್ 5ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೊ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.

    ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್‌ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.

  • ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಇತ್ತೀಚಿಗಷ್ಟೇ ಬಹುಕಾಲದ ಗೆಳತಿ ಅವಿವಾ (Aviva Bidapa) ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಎಲ್ಲೂ ಕೂಡ ತಮ್ಮ ಲವ್ ಸ್ಟೋರಿ ಬಗ್ಗೆ ಅಂಬಿ ಪುತ್ರ ಅಭಿಷೇಕ್ ಹೇಳಿರಲಿಲ್ಲ. ಇದೀಗ `ಬ್ಯಾಡ್ ಮ್ಯಾನರ್ಸ್’ (Bad Manners) ಚಿತ್ರ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ನಟ ಅಭಿಷೇಕ್ ತಮ್ಮ ಲವ್ ಲೈಫ್ (Love Life) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ನಿಧನ

    ನಟ ಅಂಬರೀಶ್ (Actor Ambareesh) ಮತ್ತು ಅವಿವಾ ತಂದೆ ಪ್ರಕಾಶ್ ಬಿದ್ದಪ್ಪ (Prakash Bidapa) ಹಲವು ವರ್ಷಗಳಿಂದ ಸ್ನೇಹಿತರು. ಎರಡು ಫ್ಯಾಮಿಲಿ ಸಾಕಷ್ಟು ವರ್ಷಗಳಿಂದ ಪರಿಚಿತರು. ಫ್ಯಾಷನ್ ಇವೆಂಟ್‌ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಅವರ ಮೊದಲು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಲು ಸಾಕಷ್ಟು ಸಮಯ ಹಿಡಿಯಲಿಲ್ಲ. ಕಳೆದ 4-5 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಜೋಡಿ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಇತ್ತೀಚಿಗೆ ಎಂಗೇಜ್‌ಮೆಂಟ್ ಆಗಿದ್ದಾರೆ.

    ಅವಿವಾ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ. ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ಇಬ್ಬರ ನಡುವೆ ಮ್ಯೂಚುಯಲ್ ಸಪೋರ್ಟ್ ಇದೆ. ಕಪಲ್ ಅಂದ್ಮೇಲೆ ಜಗಳ ಸಹಜ. ಜಗಳ ಮಾಡಿದ್ದರೂ ಬಿಟ್ಟು ಹೋಗದೇ ಇರುತ್ತೀನಿ ಎನ್ನುವವರನ್ನು ಮದುವೆ ಮಾಡಿಕೊಳ್ಳಬೇಕು ಅಂತಾ ನನ್ನ ತಾಯಿ ಹಾಗೂ ಅವಿವಾ ತಂದೆ-ತಾಯಿ ಹೇಳುತ್ತಾರೆ. ನಮ್ಮ ನಡುವೆ ಜಗಳ ನಡೆದರೆ ತಪ್ಪು ಮಾಡಿರುವವರು ಮೊದಲು ಕ್ಷಮೆ ಕೇಳಬೇಕು. ನಾನು ತಪ್ಪು ಮಾಡಿದರೆ ಅವಿವಾ ಕಾಂಪ್ರಮೈಸ್ ಆಗುತ್ತಾರೆ. ಅವರು ತಪ್ಪು ಮಾಡಿದ್ದರೂ ಅವರೇ ಕಾಂಪ್ರಮೈಸ್ ಆಗುತ್ತಾರೆ. ಮನೆಯಲ್ಲಿ ಸಪೋರ್ಟ್ ಚೆನ್ನಾಗಿದ್ದರೆ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಬಹುದು. ಅದಕ್ಕೆ ನನ್ನ ತಂದೆ ತಾಯಿನೇ ಸಾಕ್ಷಿ ಎಂದು ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.

    ಅಭಿಷೇಕ್ ನಟನೆಯ 2ನೇ ಸಿನಿಮಾ `ಬ್ಯಾಡ್ ಮ್ಯಾನರ್ಸ್’ ಮೇ ಅಂತ್ಯಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಬಳಿಕ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್‌ನಲ್ಲಿ ಹಸೆಮಣೆ (Wedding) ಏರಲಿದ್ದಾರೆ ಎನ್ನಲಾಗುತ್ತಿದೆ.

  • ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasad Biddappa) ಅವರ ಪುತ್ರಿ ಅವಿವಾ (Aviva Biddappa) ಜೊತೆ ಅಭಿಷೇಕ್ ಇಂದು ಎಂಗೇಜ್ ಆಗಿದ್ದಾರೆ.

    ರೆಬೆಲ್‌ ಸ್ಟಾರ್‌ ಅಂಬರೀಶ್‌ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಜೊತೆ ಎಂಗೇಜ್‌ಮೆಂಟ್‌ ನೆರವೇರಿದೆ. ಈ ವೇಳೆ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದು, ಜೋಡಿಗಳಿಗೆ ಶುಭಹಾರೈಸಿದರು.

    ಚಿತ್ರರಂಗದ ಗಣ್ಯರು ಹೊಸ ಜೋಡಿಗೆ ಶುಭಹಾರೈಸಿದ್ದಾರೆ. ಇನ್ನೂ ಅಭಿಷೇಕ್‌ ಮುಂದಿನ ಚಿತ್ರಕ್ಕೆ ಡೈರೆಕ್ಷನ್‌ ಮಾಡುತ್ತಿರುವ ಎಸ್‌. ಮಹೇಶ್‌ ಕುಮಾರ್‌ ಕೂಡ ನಿಶ್ಚಿತಾರ್ಥಕ್ಕೆ ಭಾಗಿಯಾಗಿದ್ದಾರೆ. ಈಗ ಅವರ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಅವಿವಾ ಮತ್ತು ಅಭಿಷೇಕ್ ಹಲವು ವರ್ಷಗಳಿಂದ ಸ್ನೇಹಿತರು. ಈ ಸ್ನೇಹ ಪ್ರೇಮಕ್ಕೆ ತಿರುಗಿ, ಇದೀಗ ನವ ಜೀವನಕ್ಕೆ ಕಾಲಿಡುತ್ತಿದೆ ಜೋಡಿ. ಅವಿವಾ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದು, ಫ್ಯಾಷನ್ ಲೋಕದಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಯ ಮದುವೆ ಮುಂದಿನ ವರ್ಷ ನಡೆಯಲಿದೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    Live Tv
    [brid partner=56869869 player=32851 video=960834 autoplay=true]