Tag: avinash shetty

  • ವರ್ತೂರಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ರೀ-ಯೂನಿಯನ್‌

    ವರ್ತೂರಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ರೀ-ಯೂನಿಯನ್‌

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10)  ಮೂಲಕ ಗಮನ ಸೆಳೆದ ವರ್ತೂರು ಸಂತೋಷ್ (Varthur Santhosh) , ಸಿರಿ, ಅವಿನಾಶ್ ಶೆಟ್ಟಿ, ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಮಾಡಿದ್ದಾರೆ. ಸದ್ಯ ಮೀಟ್ ಆಗಿರುವ ‘ಬಿಗ್ ಬಾಸ್’ ತಾರೆಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವರ್ಷದ ಬಿಗ್ ಬಾಸ್ ಶೋ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಕಾರ್ಯಕ್ರಮ. ಗಲಾಟೆ, ಗದ್ದಲದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಶೋ ಮುಗಿದ ‘ಬಿಗ್ ಬಾಸ್’ ಸ್ಪರ್ಧಿಗಳು ಒಬ್ಬರನ್ನೊಬ್ಬರು ಮರೆತ್ತಿಲ್ಲ. ಶೋ ನಂತರ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್

    ಎಲ್ಲ ಸ್ಪರ್ಧಿಗಳ ಒಂದಲ್ಲ ಒಂದು ಕಾರಣಕ್ಕೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇನ್ನೊಬ್ಬರ ಪ್ರಾಜೆಕ್ಟ್‌ಗಳು, ಹೊಸ ಕಾರ್ಯಗಳಿಗೆ ಬೆಂಬಲಿಸುತ್ತಿದ್ದಾರೆ. ಇದೀಗ ಸಿರಿ, ತನಿಷಾ ಕುಪ್ಪಂಡ(Tanisha Kuppanda), ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ ಅವರು ವರ್ತೂರಿನಲ್ಲಿ ಒಟ್ಟಾಗಿ ಊಟ ಮಾಡಿದ್ದಾರೆ. ಅಲ್ಲಿಯೇ ಇದ್ದ ತೋಟಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಸತೋಷ್‌ ಅವರ ಊರಿನಲ್ಲಿ ಎಲ್ಲರೂ ಮಸ್ತ್‌ ಆಗಿ ಎಂಜಾಯ್‌ ಮಾಡಿದ್ದಾರೆ.

  • ವಿನಯ್ ಫೇಕ್, ಆದರೆ ವರ್ತೂರ್ ಸಂತೋಷ್ ಗೆಲ್ಲಬೇಕು- ಅವಿನಾಶ್ ಶೆಟ್ಟಿ

    ವಿನಯ್ ಫೇಕ್, ಆದರೆ ವರ್ತೂರ್ ಸಂತೋಷ್ ಗೆಲ್ಲಬೇಕು- ಅವಿನಾಶ್ ಶೆಟ್ಟಿ

    ನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ ಆ್ಯಡ್ ನೋಡಿದೆ. ಹಾಗಾಗಿ ಬಂದೆ. ಇದು ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) ವೈಲ್ಡ್ ಕಾರ್ಡ್ (Wild Card) ಮೂಲಕ ಈ ಸಲದ ಬಿಗ್‌ ಬಾಸ್ ಮನೆಯೊಳಗೆ (Bigg Boss Kannada 10) ಹೋದಾಗ ಆಡಿದ ಮಾತು. ಅವರ ಸ್ಟೈಲ್‌, ಕಾನ್ಫಿಡೆನ್ಸ್, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೇ ಇತ್ತು. ಆದರೆ ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲು ಸಾಧ್ಯಾಗಿಲ್ಲ. ಹಾಗಾಗಿಯೇ ಈ ವಾರ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಿಂದ ಹೊರಗೆ ಬರುವುದರ ಮೂಲಕ, ಅರ್ಧದಲ್ಲಿ ಎಂಟ್ರಿ ಕೊಟ್ಟು ಮನೆಯೊಳಗೆ ಜಾಗ ಗಿಟ್ಟಿಸುವುದು ಸುಲಭದ ಮಾತಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ

    ಮೈಕಲ್- ಅವಿನಾಶ್ ಭಾನುವಾರದ ಸಂಚಿಕೆಯ ಕೊನೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಗಿ ಬಿಗ್‌ಬಾಸ್ ಸೋಮವಾರದ ಸಂಚಿಕೆಯಲ್ಲಿ ಹೊಸದೊಂದು ಟ್ವಿಸ್ಟ್ ನೀಡಿದ್ದಾರೆ. ಮೈಕಲ್ ಮತ್ತೆ ಮನೆಯೊಳಗೆ ಬಂದಿದ್ದಾರೆ. ಅವಿನಾಶ್ ಒಬ್ಬರೇ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಗೆ ಬಂದಿರುವ ಅವಿನಾಶ್ ಶೆಟ್ಟಿ, ಜಿಯೋ ಸಿನಿಮಾಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಮನೆಯೊಳಗಿನ ಜರ್ನಿಯ ಬಗ್ಗೆ ಮುಕ್ತವಾಗಿ ಅವಿನಾಶ್ ಮಾತಾಡಿದ್ದಾರೆ.

    ಎಲ್ಲರಿಗೂ ನಮಸ್ಕಾರ, ನಾನು ಅಸ್ತಿಕ್ ಅವಿನಾಶ್ ಶೆಟ್ಟಿ. ಈಗ ತಾನೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. ತುಂಬಾನೇ ಫೀಲಿಂಗ್ಸ್ ಇವೆ. ವೈಲ್ಡ್‌ ಕಾರ್ಡ್‌ ಕಂಟೆಸ್ಟೆಂಟ್ ಆಗಿ ನಾಲ್ಕು ವಾರ ಇದ್ದೆ. ನನ್ನ ಬೆಸ್ಟ್ ಕೊಡಲು ಟ್ರೈ ಮಾಡಿದೆ. ಫಿನಾಲೆಯ ಸಮೀಪಕ್ಕೆ ಹೋಗಿ ಹೊರಗೆ ಬಂದಿದ್ದೀನಿ. ಹಾಗಾಗಿ ಸ್ವಲ್ಪ ದುಃಖ ಆಗ್ತಿದೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಸೇವ್ ಆಗ್ತೀನಿ ಅಂತಾನೇ ಅಂದ್ಕೊಂಡಿದ್ದೆ. ಆದರೆ ಹಣೆಬರಹ ಏನೂ ಮಾಡಕ್ಕಾಗಲ್ಲ.

    ನನ್ನ ಮೇಲೆ ನಿರೀಕ್ಷೆಯ ಹೆಚ್ಚಿತ್ತು:

    ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಅಂದ ಕೂಡಲೇ ನಿರೀಕ್ಷೆ ಹೆಚ್ಚಿಗೆಯೇ ಇರುತ್ತದೆ. ಆ ನಿರೀಕ್ಷೆಯನ್ನು ಪೂರೈಸುವ ಹಾದಿಯಲ್ಲಿಯೇ ನಾನಿದ್ದೆ ಕೂಡ. ಒಂದು ವಾರ ಗ್ರೇಸ್ ಟೈಮ್ ಕೂಡ ಇತ್ತು. ನಾನು ಹೋದ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದನ್ನು ನಾನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ ಅನಿಸುತ್ತದೆ. ಆದರೆ ಗೇಮ್‌ನಲ್ಲಿ ನನ್ನತನವನ್ನು ಬಿಟ್ಟುಕೊಡಲಿಲ್ಲ. ನಾನು ಒಳಗೆ ಹೋದಾಗ ವಿನಯ್, ತನಿಷಾ, ಕಾರ್ತಿಕ್ ಎಲ್ಲರ ಬಗ್ಗೆಯೂ ಕೆಲವು ಪೂರ್ವನಿರ್ಧರಿತ ಅಭಿಪ್ರಾಯಗಳಿದ್ದವು. ಎಲ್ಲರಿಗಿಂತ ಕಡಿಮೆ ಪರಿಚಯ ಇದ್ದಿದ್ದು ವರ್ತೂರ್ ಸಂತೋಷ್ (Varthur Santhosh) ಮತ್ತು ತುಕಾಲಿ ಸಂತೂ ಅವರ ವ್ಯಕ್ತಿತ್ವ.

    ಐವತ್ತು ದಿನಗಳ ನಂತರ ಮನೆಗೆ ಹೋದಾಗ ಬೇರೆ ರೀತಿಯೇ ರೆಸ್ಪಾನ್ಸ್ ಸಿಕ್ತಾ ಬಂತು. ಯಾರಿವನು? ಯಾಕೆ ಬಂದಿದಾನೆ? ಅನ್ನುವ ರೀತಿಯಲ್ಲಿಯೇ ನೋಡಿದರು. ನಾನಾಗೇ ಹೋಗಿ ಮಾತಾಡಲು ಯತ್ನಿಸಿದರೂ ರೆಸ್ಪಾನ್ಸ್ ಚೆನ್ನಾಗಿರಲಿಲ್ಲ. ಆದರೆ ವರ್ತೂರು ಸಂತೋಷ್ ಮತ್ತು ತುಕಾಲಿ ಅವರು ತುಂಬಾನೇ ಸ್ನೇಹದಿಂದ ನೋಡಿಕೊಂಡರು. ನಮ್ಮ ಅಭಿಪ್ರಾಯಗಳು ಮ್ಯಾಚ್ ಆಗುತ್ತಿದ್ದವು. ಕೆಲವೊಂದು ಟಾಸ್ಕ್‌ನಲ್ಲಿ ಮನರಂಜನೆ ಇರಬೇಕು ಎಂಬ ಕಾರಣಕ್ಕೆ ಕೆಲವು ಚಟುವಟಿಕೆ ಮಾಡಿದ್ದೆ. ಉದಾಹರಣೆ, ಕುದುರೆಯ ಹಾಗೆ ಮಾಡುವುದು. ಇನ್ನೊಂದು ಕಡೆ ಟಾಸ್ಕ್‌ನಲ್ಲಿ ಜಿಂಕೆ ಥರ ಆಡಿದೆ. ಕುದುರೆ, ಜಿಂಕೆ, ಮಾವುತ ಅಂತೆಲ್ಲ ಟ್ಯಾಗ್ ಮಾಡಲು ನೋಡಿದರು. ಕೆಲವೊಂದಿಷ್ಟು ಜನ ಗ್ರಾಂಟೆಡ್ ತಗೊಳ್ಳಲು ಟ್ರೈ ಮಾಡಿದ್ರು ಅನಿಸ್ತು.

    ನಾನು ಹೋದ ಮೊದಲ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಆಡಿದೀನಿ. ಗೆದ್ದಿಲ್ಲ. ಸೆಕೆಂಡ್ ವೀಕ್ ಕೂಡ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಟಾಪ್ 4 ಸ್ಪರ್ಧಿಗಳಲ್ಲಿ ನಾನಿದ್ದೆ. ನನ್ನ ಶಕ್ತಿಮೀರಿ ಪ್ರದರ್ಶನ ಕೊಟ್ಟಿದೀನಿ. ಈ ವಾರ ಎಲ್ಲ ವಿಚಾರದಲ್ಲಿಯೂ ಮುಂದಿದ್ದೆ. ಆದರೆ ಸಂಗೀತಾ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ನಾನು ಸಂಗೀತಾಗೆ (Sangeetha Sringeri) ಎಲ್ಲಿಯೂ ತಪ್ಪು ಆಪಾದನೆ ಮಾಡಿಲ್ಲ. ಹಾಗಾಗಿ ಸಂಗೀತಾ ಅವರಿಗೆ ತಪ್ಪು ಅರ್ಥ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ. ಆದರೆ ಅವರು ಮತ್ತೆ ತಂಡವನ್ನು ಹೊಂದಿಸುವಾಗ ನನ್ನನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ತನಿಷಾ ತಂಡ ಸೇರಿಕೊಂಡೆ. ಅಲ್ಲಿಯೂ ನನ್ನ ಪ್ರಯತ್ನ ಮುಂದುವರಿಸಿದೆ. ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಕೊನೆ ಕ್ಷಣದವರೆಗೂ ಟ್ರೈ ಮಾಡಿದ್ದೀನಿ.

    ಫೇಕ್-ಜೆನ್ಯೂನ್-ಫೈನಲಿಸ್ಟ್ ಲಿಸ್ಟ್:

    ನನಗೆ ವರ್ತೂರ್ ಸಂತೋಷ್ ತುಂಬ ಜೆನ್ಯೂನ್ ಮನುಷ್ಯ ಅನಿಸುತ್ತದೆ. ವಿನಯ್ (Vinay Gowda) ಸ್ವಲ್ಪ ಫೇಕ್ ಮಾಡ್ತಿದ್ದಾರೆ ಅನಿಸುತ್ತಿದೆ. ತನಿಷಾ ಕೂಡ ಸ್ವಲ್ಪ ಫೇಕ್ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್ ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜೊತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್ (Drone Prathap) ಅವರು ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ತುಂಬ ಚೆನ್ನಾಗಿ ಗೊತ್ತಿದೆ. ಸಂಗೀತಾ ಕೂಡ ಟಾಪ್ 5ನಲ್ಲಿ ಇರುತ್ತಾರೆ. ಅವರು ಜಾಸ್ತಿ ಮಾಡುತ್ತಾರೆ, ಆದರೂ ಅವರಿಗೆ ಟಾಸ್ಕ್‌ನಲ್ಲಿ ಕಮ್‌ಬ್ಯಾಕ್ ಮಾಡುವ ರೀತಿಯಿಂದಲೇ ಅವರು ಫೈನಲ್‌ಗೆ ಹೋಗುತ್ತಾರೆ ಅನಿಸುತ್ತದೆ. ಕಾರ್ತಿಕ್ ಕೂಡ ತುಂಬಾ ಪ್ರಬಲ ಸ್ಪರ್ಧಿ. ತುಕಾಲಿ ಬಹಳ ಬುದ್ಧಿವಂತ. ಅಷ್ಟೇ ಸ್ವಯಂಕೇಂದ್ರಿತ ಮನುಷ್ಯ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆ ಇದೆ. ಮುಂದಿನ ವಾರ ನನ್ನ ಜಾಗದಲ್ಲಿ ಸಿರಿ ಇರುತ್ತಾರೆ ಅನಿಸುತ್ತದೆ.

    ಜಿಯೊ ಸಿನಿಮಾ ಫನ್ ಫ್ರೈಡೆ: 

    ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ನಲ್ಲಿ ನನಗೆ ಇಷ್ಟವಾಗಿದ್ದು, ಕಣ್ಣಿಗೆ ಪಟ್ಟಿ ಹಾಕಿಕೊಂಡು ಬಾಲ್ ಕಲೆಕ್ಟ್ ಮಾಡುವ ಟಾಸ್ಕ್. ಅದನ್ನು ನಾನು ತುಂಬ ಎಂಜಾಯ್ ಮಾಡಿದೆ. ಬಿಗ್‌ಬಾಸ್ ಮನೆ ಎಂಬುದೇ ಒಂದು ಮ್ಯಾಜಿಕ್. ಅಲ್ಲಿ ಇರುವ ಸ್ಪರ್ಧಿಗಳಿಗಷ್ಟೇ ಅದರ ಮ್ಯಾಜಿಕ್ ಗೊತ್ತಾಗಲು ಸಾಧ್ಯ. ಅಲ್ಲಿನ ಶಿಸ್ತನ್ನು ಮಿಸ್ ಮಾಡ್ಕೋತೀನಿ. ಯಾಕೆಂದರೆ ಲೈಫ್‌ನಲ್ಲಿ ಡಿಸಿಪ್ಲೀನ್ ಯಾಕೆ ಮುಖ್ಯ ಎಂಬುದನ್ನು ಕಲಿಸಿಕೊಟ್ಟ ಮನೆ ಅದು. ಬಿಗ್ ಬಾಸ್ ನನ್ನ ಜೀವನದಲ್ಲಿಯೇ ಒಂದು ಗಾಡ್‌ಫಾದರ್. ಯಾಕೆಂದರೆ ನಾಲ್ಕೇ ವಾರ ಇದ್ದರೂ ಬದುಕಿನಲ್ಲಿ 40 ವರ್ಷ ಇದ್ದಂಥ ಪಾಠ ಕಲಿಸಿದೆ. ಎಷ್ಟೇ ಚಿಕ್ಕ ವಿಚಾರವಾಗಲಿ, ಕೊರತೆಯಾಗಲಿ, ಸಮಸ್ಯೆಯಾಗಲಿ ತಕ್ಷಣವೇ ಗಮನಿಸಿ ಕೊಡುವ ಪರಿಹಾರ, ಪ್ರೀತಿಗೆ ನಾನು ಆಭಾರಿಯಾಗಿದ್ದೀನಿ. ಹಾಗಾಗಿಯೇ ಬಿಗ್ ಬಾಸ್‌ಗೆ ನಾನು ಋಣಿಯಾಗಿರುತ್ತೇನೆ.

  • ಡಬಲ್ ಎಲಿಮಿನೇಷನ್- ಬಿಗ್ ಬಾಸ್‌ನಿಂದ ಅವಿನಾಶ್ ಶೆಟ್ಟಿ ಔಟ್

    ಡಬಲ್ ಎಲಿಮಿನೇಷನ್- ಬಿಗ್ ಬಾಸ್‌ನಿಂದ ಅವಿನಾಶ್ ಶೆಟ್ಟಿ ಔಟ್

    ಬಿಗ್ ಬಾಸ್ ಮನೆ ಇದೀಗ 77 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅಸ್ಥಿಕ್ ಅವಿನಾಶ್ ಶೆಟ್ಟಿ (Avinash Shetty) ಎಲಿಮಿನೇಟ್ ಆಗಿದ್ದಾರೆ.

    ದೊಡ್ಮನೆ ಆಟ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದರು. ಮನೆಗೆ ಎಂಟ್ರಿ ಕೊಟ್ಟಾಗಲೇ ಆನೆ ವಿನಯ್‌ಗೆ ಮಾವುತನಾಗಿ ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಇದೀಗ ಆನೆ ವಿನಯ್‌ನ ಪಳಗಿಸೋದ್ರಲ್ಲಿ ಮತ್ತು ಬಿಗ್ ಬಾಸ್ ಮನೆ ಆಟ ಆಡೋದ್ರಲ್ಲಿ ಅವಿನಾಶ್ ಸೋತಿದ್ದಾರೆ.

    ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದರು. ಇದೀಗ ಈ ವಾರ ಅವಿನಾಶ್‌ಗೆ ದೊಡ್ಮನೆ ಆಟ ಅಂತ್ಯವಾಗಿದೆ. ಡಬಲ್ ಎಲಿಮಿನೇಷನ್‌ನ (Elimination) ಮೊದಲ ಸ್ಪರ್ಧಿ ಅವಿನಾಶ್ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ಸ್ಪರ್ಧಿ ಯಾರು ರಿವೀಲ್ ಆಗಿಲ್ಲ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪೂಜಾ ಗಾಂಧಿ ದಂಪತಿ

    ಬಿಗ್ ಬಾಸ್ ಮನೆ ಆಟ 23 ದಿನಗಳು ಬಾಕಿಯಿರುವಾಗಲೇ ಅವಿನಾಶ್ ಎಲಿಮಿನೇಟ್ ಆಗಿರೋದು ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಕಳೆದ ವಾರ ಅವಿನಾಶ್ ಶೆಟ್ಟಿ ಆಟ ಚೆನ್ನಾಗಿತ್ತು. ಹಾಗಾಗಿ ಅಭಿಮಾನಿಗಳಿಗೆ ಅವರ ಎಲಿಮಿನೇಷನ್ ಬಗ್ಗೆ ಅನುಮಾನವಿತ್ತು. ಇದೀಗ ಉತ್ತರ ಸಿಕ್ಕಿದೆ. ಹಾಗಾದ್ರೆ ಎಲಿಮಿನೇಟ್ ಆಗುವ ಮತ್ತೊಬ್ಬ ಸ್ಪರ್ಧಿ ಯಾರು? ಕಾಯಬೇಕಿದೆ.

  • ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ (Bigg Boss Kannada) ಮನೆಯ ಬಣ್ಣದ ಟಾಸ್ಕ್ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿನಯ್ ಮತ್ತು ಅವಿನಾಶ್ ಶೆಟ್ಟಿ (Avinash Shetty) ಜಗಳ ತಾರಕಕ್ಕೇರಿದ್ದು, ಇದರ ಮುಂದುವರಿಕೆಯಾಗಿ ವಿನಯ್ (Vinay) ಬೆರಳು ಮುರಿದುಕೊಂಡಿದ್ದಾರೆ. ಕಾರ್ತಿಕ್ ಮತ್ತು ಅವಿನಾಶ್ ನಡುವೆ ನಡೆದ ಕಾಳಗದಲ್ಲಿ ಕಾರ್ತಿಕ್ (Karthik) ಏಟು ಮಾಡಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಬಣ್ಣದ ಟಾಸ್ಕ್‌ನಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿಯೇ ನಡೆದಿದೆ ಎನ್ನುವುದು ಹರಿದಾಡುತ್ತಿರುವ ಸುದ್ದಿ.

    ತನಿಷಾ ಮತ್ತು ಸಂಗೀತಾ ಇಬ್ಬರ ತಂಡಗಳ ಸದಸ್ಯರನ್ನು ನೋಡಿದಾಗ ಗ್ಯಾರಂಟಿ ಜಗಳ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ತನಿಷಾ ಕಡೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ. ಸಂಗೀತಾ ಅವರ ಟೀಮ್‌ನಲ್ಲಿ ಇರೋದು ಅಷ್ಟೇನೂ ಬಲಿಷ್ಠರಲ್ಲದ ಪಡೆ. ಹೀಗಾಗಿ ಕಾರ್ತಿಕ್ ಮತ್ತು ವಿನಯ್ ಗೆಲ್ಲುವುದಕ್ಕಾಗಿ ಏನು ಬೇಕಾದರೋ ಮಾಡೋಕೆ ರೆಡಿ ಎನ್ನೋದು ಗೊತ್ತಿರೋ ವಿಚಾರ. ಇವತ್ತು ಟಾಸ್ಕ್‌ನಲ್ಲಿ ಅದೇ ಆಗಿದೆ. ಹಾಗಾಗಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಏಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಣ್ಣ ಮತ್ತು ಬಟ್ಟೆ ಟಾಸ್ಕ್‌ನಲ್ಲಿ ಬೆಳ್ಳಂಬೆಳಗ್ಗೆ ಗುದ್ದಾಟ ನಡೆದಿತ್ತು. ಅದರ ಪ್ರೊಮೋ ಕೂಡ ರಿಲೀಸ್ ಆಗಿತ್ತು. ಕಾರ್ತಿಕ್, ವಿನಯ್ ಮತ್ತು ಅವಿನಾಶ್ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಆಟ ಆಡುತ್ತಿದ್ದರು. ವಿನಯ್ ತುಂಬಾನೇ ಅಗ್ರೆಸಿವ್‌ ಆಗಿ ಆಟ ಆಡುತ್ತಿದ್ದರು. ಅವಿನಾಶ್ ಮೇಲೆ ಮುಗಿಬಿದ್ದಿದ್ದರು. ವಿನಯ್ ನಡೆ ಸ್ವತಃ ಅವರ ಟೀಮ್‌ಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಆಟ ಮತ್ತು ಅದಕ್ಕೆ ಕಾರ್ತಿಕ್ ನೀಡಿದ್ದ ಸಾಥ್ ಅನಾಹುತಕ್ಕೆ ಕಾರಣವಾಗಿದೆಯಂತೆ.

    ಬಲ್ಲ ಮೂಲಗಳ ಪ್ರಕಾರ ಕಾರ್ತಿಕ್ ಆಸ್ಪತ್ರೆ ಸೇರಿದ್ದಾರೆ. ವಿನಯ್ ಅವರ ಬೆರಳು ಮೂಳೆ ಮುರಿತವಾಗಿದೆ. ಅವಿನಾಶ್ ಕೂಡ ಏಟು ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಇದೆಲ್ಲವೂ ಕಾಮನ್ ಆದರೂ, ಇವತ್ತು ಮತ್ತು ಈ ಹಿಂದೆ ಗಂಧರ್ವರು ಹಾಗೂ ರಾಕ್ಷಸರ ನಡುವಿನ ಟಾಸ್ಕ್ ಇಂಥದ್ದೇ ಜಗಳಕ್ಕೆ ಕಾರಣವಾಗಿತ್ತು. ಅವತ್ತು ಕೂಡ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಆಸ್ಪತ್ರೆ ಪಾಲಾಗಿದ್ದರು. ಈಗ ಕಾರ್ತಿಕ್ ಸರದಿಯಾಗಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.

  • Bigg Boss: ವೈಲ್ಡ್ ಕಾರ್ಡ್‌ನಿಂದ ಬಂದರೆ ಗೆಲ್ಲಲ್ಲ ಅನ್ನೋದು ಸುಳ್ಳು- ಪವಿ

    Bigg Boss: ವೈಲ್ಡ್ ಕಾರ್ಡ್‌ನಿಂದ ಬಂದರೆ ಗೆಲ್ಲಲ್ಲ ಅನ್ನೋದು ಸುಳ್ಳು- ಪವಿ

    ಬಿಗ್ ಬಾಸ್ ಮನೆಗೆ (Bigg Boss Kannada 10) ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿರೋ ಕೊಡಗಿನ ಕುವರಿ ಪವಿ ಪೂವಪ್ಪ (Pavi Poovappa) ಅವರು ಬಿಗ್ ಬಾಸ್‌ನಿಂದ ಬಂದಿರುವ ಅವಕಾಶದ ಬಗ್ಗೆ ಜಿಯೋ ಸಿನಿಮಾ ಸಂದರ್ಶನದಲ್ಲಿ ದೊಡ್ಮನೆಗೆ ಕಾಲಿಡುವ ಮುನ್ನ ಮಾತನಾಡಿದ್ದಾರೆ.

    ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪವಿ ಪೂವಪ್ಪ, ಬಿಗ್‌ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು, ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೂ ಕ್ಷಣಕಾಲ ಮೊದಲು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ನಾನು ಮಾಡೆಲ್ ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದೀನಿ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ತುಂಬ ಖುಷಿಯ ವಿಷಯ. ಎಕ್ಸೈಟ್‌ಮೆಂಟ್ ತುಂಬಾನೇ ಇದೆ. ಆದರೆ ಭಯ ಇಲ್ಲ. ಬಿಗ್‌ಬಾಸ್ ಮನೆಯೊಳಗೆ ಹೋದಮೇಲೇ ಗೊತ್ತಾಗತ್ತೆ ಏನು ಎತ್ತ ಅಂತ. ಮನೆಯಲ್ಲಿ ಅಮ್ಮ ಅಣ್ಣನಿಗೆ ಎಲ್ಲಾ ತುಂಬ ಖುಷಿಯಾಯ್ತು.

    ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಿಹೇವಿಯರ್ ಎಲ್ಲವನ್ನು ಇಡೀ ಕರ್ನಾಟಕದ ಜನರು ನೋಡಬಹುದು ಇಲ್ಲಿ. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ. ನಾನು ಶಾರ್ಟ್ ಟೆಂಪರ್ಡ್. ಆದ್ರೆ ಸಂದರ್ಭದ ಮೇಲೆ ಹೋಗತ್ತದೆ.‌ ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

    ವೈಲ್ಡ್ ಕಾರ್ಡ್ ಎಂಟ್ರಿ ಅಂತ ಹೋದಾಗ ಎಲ್ಲ ಸ್ಪರ್ಧಿಗಳು ಡಾಮಿನೆಂಟ್ ಮಾಡ್ತಾರೆ ಅಂತೆಲ್ಲ ಕೇಳಿದೀನಿ. ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೆ. ಅಲ್ಲಿ ಹೋದ ಮೇಲೆ ಯಾರು ಯಾವ ಥರ ಬಿಹೇವ್ ಮಾಡ್ತಾರೆ ಅನ್ನೋದ್ರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ. ನಾನು ಫಿಜಿಕಲಿ ಸ್ಟ್ರಾಂಗ್ ಇದ್ದೀನಿ. ಅದು ನನ್ನ ಸ್ಟ್ರೈಂಥ್ ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್ ಟೆಂಪರ್ ಆಗ್ತೀನಿ. ಅದು ನನ್ನ ವೀಕ್‌ನೆಸ್ ಆಗಿದೆ.

    ಸದ್ಯಕ್ಕೆ ನನ್ನ ಫೇವರೇಟ್ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದರೆ ನನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುವುದು ತನಿಷಾ ಕುಪ್ಪಂಡ ಜೊತೆಗೆ. ಯಾಕಂದ್ರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್‌ಬಾಸ್ ಮನೆಗೆ ಹೋಗ್ತಿದೀನಿ. ಆದಷ್ಟೂ ಗೆಲ್ಲಲು ಪ್ರಯತ್ನಪಡ್ತೀನಿ. ವೈಲ್ಡ್‌ ಕಾರ್ಡ್‌ನಲ್ಲಿ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದ್ದೀನಿ ಎಂದು ಪವಿ ಮಾತನಾಡಿದ್ದಾರೆ.

  • ‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

    ‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

    ರಾವಳಿ ಹುಡುಗ ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) , ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡವರು. ಕ್ರಿಕೆಟ್‌ ನನ್ನ ಫಸ್ಟ್ ಲವ್ ಎನ್ನುತ್ತಲೇ ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ವೈಲ್ಡ್‌ಕಾರ್ಡ್‌  (Wild Card) ಎಂಟ್ರಿ ಕೊಟ್ಟಿರುವ ಅವಿನಾಶ್‌, JioCinemaಗೆ ನೀಡಿರುವ  ಸಂದರ್ಶನದ ಪೂರ್ಣಪಾಠ ಇಲ್ಲಿದೆ.

    ‘ಕರಾವಳಿ ಹುಡುಗ ಬೆಂಗಳೂರಿಗೆ ಬಂದು ಫಿಲ್ಮ್‌ ಮಾಡುವುದು ತುಂಬ ಕಷ್ಟ. ಆದ್ರೆ ಅಪ್ಪು ಸರ್, ಬೆಂಬಲ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಒಂದಲ್ಲ, ಮೂರು ಕನ್ನಡ ಸಿನಿಮಾ ಮಾಡಿದ್ದೀನಿ ನಾನು. ಈ ಪ್ರೀತಿಯಿಂದ ನಾನು ಕರಾವಳಿ ಕಡೆಗೂ ಒಂದೆರಡು ಸಿನಿಮಾ ಮಾಡಿದ್ದೀನಿ. ಮಾಡೆಲಿಂಗ್ ಮಾಡಿದೀನಿ. ಮೊಥಾಯ್ ಫೈಟರ್ ಕೂಡ ಹೌದು. ಆದ್ರೆ ನನ್ನ ಮುಖ್ಯ ಪ್ಯಾಷನ್‌ ಅಂದ್ರೆ ಅದು ಕ್ರಿಕೆಟ್. ಕ್ರಿಕೆಟ್ ಆಡ್ತಾ ಆಡ್ತಾನೇ ಇಲ್ಲಿವರೆಗೂ ಬಂದಿದೀನಿ. ಅಂದ್ರೆ ಬಿಗ್‌ಬಾಸ್‌ ಕನ್ನಡದಕ್ಕೆ ವೈಲ್ಡ್‌ ಕಾರ್ಡ್‌ ಕಂಟೆಸ್ಟೆಂಟ್‌ ಆಗಿ ಈಗಷ್ಟೇ ಒಳಗೆ ಹೋಗ್ತಿದೀನಿ. ಅಂದ್ರೆ, ಇದು ನನ್ನ ಬದುಕಿನ ಎಕ್ಸೈಟಿಂಗ್ ನ್ಯೂಸ್. ಮನಸ್ಸಿನ ಮೂಲೆಯಲ್ಲಿ ಹೇಗಿರಬಹುದು? ಏನಾಗಬಹುದು ಎಂಬ ಕುತುಹಲವಂತೂ ಇದ್ದೇ ಇದೆ. ಒಳಗೆ ಹೇಗಿರುತ್ತದೆ ಎಂಬ ಐಡಿಯಾನೇ ಇಲ್ಲ ನಂಗೆ.

    ಮನೆಯವರ ರಿಯಾಕ್ಷನ್

    ಆರಂಭದಲ್ಲಿ ನಾನು ನನ್ನ ತಾಯಿಗೆ ಹೇಳಿರಲೇ ಇಲ್ಲ. ಇಲ್ಲಿಗೆ ಬರುವ ದಿನ ಬೆಳಿಗ್ಗೆ ಹೋಗಿ ಅವರ ಕಾಲುಮುಟ್ಟಿ ನಮಸ್ಕರಿಸಿ, ‘ಬಿಗ್‌ಬಾಸ್‌ ರಿಯಾಲಿಟಿ ಷೋಗೆ ಹೋಗ್ತಿದೀನಿ’ ಅಂತ ಹೇಳಿದೆ. ಅವರು ನಂಬ್ತಾನೇ ಇಲ್ಲ. ‘ನೀನು ಹೇಗೆ ಮ್ಯಾನೇಜ್ ಮಾಡ್ತೀಯಾ’ ಅಂತ ಅನುಮಾನದಿಂದಲೂ ಕೇಳಿದರು. ಆದ್ರೆ ನಾನು ಬೆಂಗಳೂರಿಗೆ ಹೊರಡುವ ಹೊತ್ತಿನಲ್ಲಿ ಅಮ್ಮ ತುಂಬ ಖುಷಿಯಾಗಿದ್ದರು. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಗಳಿಗೆ.

    ಕ್ರಿಕೆಟ್ ಫಸ್ಟ್ ಲವ್

    ಕ್ರಿಕೆಟ್ ನನ್ನ ಫಸ್ಟ್ ಲವ್. ನಿಮಗೆ ಫಸ್ಟ್ ಲವ್ ಆಗಿದ್ಯಾ ಅಂತ ಕೇಳಿದ್ರೆ ಹೌದು, ಕ್ರಿಕೆಟ್ ಜೊತೆಗೆ ಆಗಿದೆ ಎಂದು ಹೇಳುವಷ್ಟುಪ್ರೀತಿಸ್ತೀನಿ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಖಂಡಿತ ನಾನು ಕ್ರಿಕೆಟ್‌ ಅನ್ನು ಮಿಸ್ ಮಾಡ್ಕೋತೀನಿ.

    ಸಿದ್ಧತೆ ಹೇಗಿತ್ತು

    ಸಿದ್ಧತೆ ಅಂದ್ರೆ, ರಿಸರ್ಚ ಮಾಡ್ಕೊಂಡೇನೂ ಬಂದಿಲ್ಲ. ರಿಸರ್ಚ್‌ ಮಾಡ್ಕೊಂಡ್ ಬಂದ್ರೆ ಇಲ್ಲಿ ವರ್ಕೌಟ್ ಆಗೋದೂ ಇಲ್ಲ. ಒಳಗೆ ನೀವಾಗಿ ಹೇಗಿರ್ತೀರಾ ಅನ್ನೋದೇ ವರ್ಕೌಟ್ ಆಗೋದು. ಖಂಡಿತ ನಾನು ಎಪಿಸೋಡ್‌ಗಳನ್ನು ನೋಡ್ಕೊಂಡು ಬಂದಿದೀನಿ. ಯಾರು ಹೇಗೆ ಆಡ್ತಿದ್ದಾರೆ ಎಂಬುದನ್ನೂ ತಿಳ್ಕೊಂಡಿದೀನಿ. ಯಾರ ಸ್ಟ್ರೆಂಥ್ ಏನು, ಯಾರ ವೀಕ್‌ನೆಸ್ ಏನು ಎಲ್ಲವನ್ನೂ ನೊಡ್ಕೊಂಡು ಬಂದಿದೀನಿ. ಆದ್ರೆ ಒಬ್ಬ ಸ್ಪೋರ್ಟ್ಸ್‌ಮನ್ ಆಗಿ ನನಗೆ ನನ್ನದೇ ಆದ ಪ್ಲ್ಯಾನ್‌ಗಳಿವೆ.

    ಹತ್ತೂ ಸೀಸನ್‌ಗಳಲ್ಲಿ ವಿಜಯರಾಘವೇಂದ್ರ, ಪ್ರಥಮ್‌ ಅವರನ್ನು ನಾನು ತುಂಬ ಇಷ್ಟಪಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿನ ರೂಪೇಶ್‌ ಶೆಟ್ಟಿ ಕೂಡ ನನ್ನ ಸ್ನೇಹಿತ. ಜೊತೆಗೆ ಶ್ರುತಿ. ಇವರನ್ನು ನಾನು ಇಷ್ಟಪಟ್ಟಿದ್ದೇನೆ.

    ಸ್ಟ್ರೆಂಥ್ ಮತ್ತು ವೀಕ್‌ನೆಸ್‌

    ನಾನು ಯಾವುದೇ ಸಂದರ್ಭದಲ್ಲಿಯೂ ಗಿವ್‌ ಅಪ್ ಮಾಡುವುದಿಲ್ಲ. ಇದೇ ನನ್ನ ಶಕ್ತಿ. ನಾನು ಎಲ್ಲೂ ಬಿಟ್ಕೊಡಲ್ಲ. ಏನಾದ್ರೂ ಕಮ್‌ಬ್ಯಾಕ್ ಮಾಡ್ತೀನಿ. ವೀಕ್‌ನೆಸ್ ಏನೂ ಇಲ್ಲ. ಆದ್ರೆ ನಾನು ಮನೆಯಡುಗೆ ಇಷ್ಟಪಡ್ತೀನಿ. ಅದನ್ನು ವೀಕ್‌ನೆಸ್ ಅಂತ ಹೇಳ್ಬೋದೇನೋ. ಆದ್ರೆ ಅದನ್ನುಟ್ಯಾಕಲ್ ಮಾಡ್ಬೋದು ಅನ್ಸತ್ತೆ.

    ನಾನು ತುಂಬ ಭಾವಜೀವಿ. ಆದ್ರೆ ಅಷ್ಟೇ ಅಗ್ರೆಸಿವ್ ಕೂಡ ಹೌದು. ನಾನು ಮನೆಯೊಳಗೆ ಹೋಗ್ತಿರೋದೇ ಎಲ್ಲ ವಿಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶನ ಕೊಡ್ಬೇಕು ಅಂತ. ಮನೆಯೊಳಗೆ ಯಾವ್ದೇ ರೋಲ್ ಕೊಟ್ರೂ ನನ್ನ ಬೆಸ್ಟ್ ಅನ್ನು ಕೊಡ್ತೀನಿ.

    ನಾನು ಸಿಂಗಲ್. ನಾನು ಮನೆಯೊಳಗೆ ಹೋಗುತ್ತಿರುವುದು ಸಂಬಂಧ ಬೆಳೆಸಲಲ್ಲ. ನನ್ನ ಆಟ ಆಡಬೇಕು ಎಂದೇ ಹೋಗುತ್ತಿರುವುದು. ಆದರೆ ಅಲ್ಲಿ ಏನಾಗುತ್ತದೆಯೋ ನನಗೂ ಗೊತ್ತಿಲ್ಲ. ಬದುಕಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದಲ್ವಾ? ಒಳ್ಳೆಯ ವಿಷಯಗಳು ಸಂಭವಿಸುವುದಕ್ಕೆ ನಾನಂತೂ ಓಪನ್ ಆಗಿದ್ದೇನೆ. ನಾನೊಂದು ಖಾಲಿ ಹಾಳೆಯಾಗಿ ಒಳಗೆ ಹೋಗುತ್ತಿದ್ದೇನೆ.

    ಈ ಸೀಸನ್‌ನಲ್ಲಿ ತನಿಷಾ ನನ್ನ ಫೆವರೆಟ್ ಸ್ಪರ್ಧಿ. ಎಲ್ಲರೂ ಅವರ ಸಾಮರ್ಥ್ಯ ನೀಡಿದ್ದಾರೆ. ಅವರಲ್ಲಿ ವಿನಯ್ ನನಗೆ ಸ್ಪರ್ಧೆ ನೀಡುತ್ತಾರೆ ಅನಿಸುತ್ತದೆ. ಹಾಗೆಯೇ ಕಾರ್ತೀಕ್ ಕೂಡ ಹೌದು. ಇವರಿಬ್ಬರೂ ನನಗೆ ಹೇಗೆ ಸ್ಪರ್ಧೆ ಒಡ್ಡುತ್ತಾರೆ ಅಂತ ನೋಡ್ಬೇಕು. ಹಾಗೆಯೇ ಹೆಣ್ಣುಮಕ್ಕಳೂ ಯಾವ್ದಕ್ಕೂ ಕಮ್ಮಿ ಇಲ್ಲದಂತೆ ಆಡ್ತಿದ್ದಾರೆ. ಏನೇ ಸಂದರ್ಭ ಬಂದ್ರೂ ನಾನು ಬಿಟ್ಟುಕೊಡಲ್ಲ. ವೀಕ್‌ ಆಗಲ್ಲ. ಜನರ ಪ್ರೀತಿ ನನ್ನ ಮೇಲಿದೆ. ಅದನ್ನು ನಾನು ಭದ್ರವಾಗಿಟ್ಟುಕೊಳ್ಳುತ್ತೇನೆ.

  • ಬಿಗ್‌ ಬಾಸ್‌ಗೆ ಬಂದಿರೋ ನಯಾ ಸ್ಪರ್ಧಿಗಳು ಯಾರು?

    ಬಿಗ್‌ ಬಾಸ್‌ಗೆ ಬಂದಿರೋ ನಯಾ ಸ್ಪರ್ಧಿಗಳು ಯಾರು?

    ನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 (Bigg Boss Kannada 10) ಇದೀಗ 8ನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆ ಆಟದಲ್ಲಿ ರೋಚಕ ತಿರುವು ಪಡೆದುಕೊಳ್ತಿರೋ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೊಸ ಎಂಟ್ರಿಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಾರೆ. ಅದರಂತೆ ಈ ಬಾರಿ ಕೂಡ ಮಾಡೆಲ್ ಪವಿ ಪೂವಪ್ಪ, ನಟ- ಕ್ರಿಕೆಟರ್ ಅವಿನಾಶ್ ಶೆಟ್ಟಿ (Avinash Shetty) ಅವರು ಈಗ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ.

    ಈಗ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಕೊಡಗಿನ ಕುವರಿ ಪವಿ ಪೂವಪ್ಪ ಮಾಡೆಲ್ ಆಗಿ ಸಾಕಷ್ಟು ಜಾಹಿರಾತುಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಶೆಟ್ಟಿ ಅವರು ಸೋನು ಸೂದ್ ನಟನೆಯ ಶ್ರೀಮಂತ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಬಳಿಕ ಆಲಿಯಾ ಡೀಪ್‌ಫೇಕ್ ವಿಡಿಯೋ ವೈರಲ್

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್, ಇಶಾನಿ, ಭಾಗ್ಯಶ್ರೀ ಬಳಿಕ ಇದೀಗ ನೀತು ವನಜಾಕ್ಷಿ ಎಲಿಮಿನೇಟ್ ಆಗಿದ್ದಾರೆ. 11 ಮಂದಿ ಸ್ಪರ್ಧಿಗಳು ಇರುವ ಮನೆಗೆ ಪವಿ ಮತ್ತು ಅವಿನಾಶ್ ಎಂಟ್ರಿ ಕೊಟ್ಟಿರೋದು ಮನೆಮಂದಿಗೆ ಶಾಕ್ ಕೊಟ್ಟಿದೆ. ಇದರಲ್ಲಿ ನಾಮಿನೇಟ್ ಫೈಟ್ ಕೂಡ ಇದೆ. ಹಾಗಾದ್ರೆ ಮುಂದೆ ಮನೆಯಲ್ಲಿ ಏನೆಲ್ಲಾ ಟ್ವಿಸ್ಟ್ ಸಿಗಲಿದೆ ಕಾದುನೋಡಬೇಕಿದೆ.