Tag: Avinash Jadhav

  • 1 ಕೋಟಿ ರಸ್ತೆ ಕಾಮಗಾರಿ ಬಿಲ್ ಮಾಡಲು ಗುತ್ತಿಗೆದಾರನಿಂದ ಚಿಂಚೋಳಿ ಎಇ ಹಣ ವಸೂಲಿ

    1 ಕೋಟಿ ರಸ್ತೆ ಕಾಮಗಾರಿ ಬಿಲ್ ಮಾಡಲು ಗುತ್ತಿಗೆದಾರನಿಂದ ಚಿಂಚೋಳಿ ಎಇ ಹಣ ವಸೂಲಿ

    ಕಲಬುರಗಿ: ರಸ್ತೆ ಕಾಮಗಾರಿ ಬಿಲ್ ಸಂಬಂಧ ಗುತ್ತಿಗೆದಾರನಿಂದ ಚಿಂಚೋಳಿ ತಾಲೂಕಿನ ಪಿಡಬ್ಲುಡಿ ಎಇ ವೇಂಕಟೇಶ್ ಬಿರಾದಾರ 30 ಸಾವಿರ ಲಂಚ ಪಡೆದಿರುವ ಘಟನೆ ನಡೆದಿದೆ.

    ಕಲಬುರಗಿಯ ಜಿಲ್ಲಾಧಿಕಾರಿ ಆವರಣದಲ್ಲಿಯೇ ಗುತ್ತಿಗೆದಾರನಿಗೆ ಭೇಟಿಯಾದ ಚಿಂಚೋಳಿ ಪಿಡಬ್ಲುಡಿ ಎಇ ವೆಂಕಟೇಶ್ ಬಿರಾದಾರ್, ತಾಲೂಕಿನ ಪೋತಂಗಲ ಗ್ರಾಮದಲ್ಲಿ ನಡೆದ 1 ಕೋಟಿ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರನಿಂದ ಹಣ ಪಡೆದಿದ್ದಾನೆ. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

    ಹಣ ನೀಡುವಾಗ ನನ್ನ ಬಳಿ ಅಷ್ಟೊಂದು ಹಣ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಅಂತಾ ಅಳಲು ತೋಡಿಕೊಂಡರೂ ಅದಕ್ಕೆ ಎಇ ಬಿರಾದಾರ ಸೊಪ್ಪು ಹಾಕದೇ, ಎಇಇ, ಥರ್ಡ್ ಪಾರ್ಟಿ, ಹಣ ಕೊಡಬೇಕು ಅಂತಾ ಹೇಳಿ ಹಣ ವಸೂಲಿ ಮಾಡಿದ್ದಾನೆ. ಇದೀಗ ಆಪ್ ಪಕ್ಷದ ಕಾರ್ಯಕರ್ತರು ಅಧಿಕಾರಿಯ ಲಂಚಬಾಕತನದ ವೀಡಿಯೋ ಮಾಧ್ಯಮಗಳಿಗೆ ನೀಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

  • ಎಂಡಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ಅದೃಷ್ಟ ಪರೀಕ್ಷೆಯಲ್ಲಿ ಜಾಧವ್ ಪುತ್ರ ಪಾಸ್

    ಎಂಡಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ಅದೃಷ್ಟ ಪರೀಕ್ಷೆಯಲ್ಲಿ ಜಾಧವ್ ಪುತ್ರ ಪಾಸ್

    ಕಲಬುರಗಿ: ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಎಂಡಿ ಕೊನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಗೈರಾಗಿದ್ದ ಅವಿನಾಶ್ ಜಾಧವ್ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

    ಚಿಂಚೋಳಿ ಉಪಚುನಾವಣೆ ಹಿನ್ನೆಲೆ ತಂದೆ ಉಮೇಶ್ ಜಾಧವ್ ರಾಜೀನಾಮೆ ನೀಡಿದ ಬಳಿಕ ಖಾಲಿಯಿದ್ದ ಸ್ಥಾನವನ್ನು ಮಗ ಗೆದ್ದಿದ್ದಾರೆ. ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದರು. ಆ ಬಳಿಕ ಖಾಲಿ ಉಳಿದಿದ್ದ ಶಾಸಕ ಸ್ಥಾನವನ್ನು ತುಂಬಿಸಲು ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವಿನಾಶ್ ಜಾಧವ್ ತಮ್ಮ ಎಂಡಿ ಕೊನೆ ಸೆಮಿಸ್ಟರ್ ಪರೀಕ್ಷೆಗೆ ಗೈರಾಗಿದ್ದರು. ಪರಿಕ್ಷೆಗೆ ಗೈರಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು ಓದನ್ನು ತ್ಯಾಗ ಮಾಡಿ ರಾಜಕೀಯಕ್ಕೆ ಬಂದಿದಕ್ಕೆ ಇಂದು ಚಿಂಚೋಳಿ ಕ್ಷೇತ್ರಕ್ಕೆ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ಧ ಭಾರಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಅವಿನಾಶ್ ಅವರು ತಮ್ಮ 27ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅಲ್ಲದೆ ಈ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕನ ಪಟ್ಟವನ್ನು ಅವಿನಾಶ್ ಜಾಧವ್ ಅಲಂಕರಿಸಿದ್ದಾರೆ.

    ಚಿಂಚೋಳಿ ಜೊತೆಗೆ ಕುಂದಗೋಳ ವಿಧಾನಸಭೆ ಉಪಚುನಾವಣೆ ಕೂಡ ನಡೆದಿದೆ. ಕ್ಷೇತ್ರದ ಶಾಸಕರಾಗಿದ್ದ ಸಿ.ಎಸ್ ಶಿವಳ್ಳಿ ಅವರ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕಣವರ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಜಯ ಸಾಧಿಸಿದ್ದಾರೆ.

  • ಉಪ ಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಬಿಗ್ ಶಾಕ್

    ಉಪ ಚುನಾವಣೆಯಲ್ಲೂ ಕಾಂಗ್ರೆಸ್‍ಗೆ ಬಿಗ್ ಶಾಕ್

    ಬೆಂಗಳೂರು: ಲೋಕಸಭಾ ಚುನಾವಣೆಯ ಜೊತೆಗೆ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಉಂಟಾಗಿದೆ.

    ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ 8,002 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ರಾಠೋಡ್ 61,079 ಪಡೆದಿದ್ದರೆ, ಅವಿನಾಶ್ ಜಾಧವ್ 69,109 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್‍ಗೆ ಸೋಲಾಗಿದೆ.

    ಕುಂದಗೋಳ ವಿಧಾನಸಭಾ ಉಪಚುನಾವಣೆ ಶಿವಳ್ಳಿ ನಿಧನದಿಂದ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಬಿಜೆಪಿಯಿಂದ ಎಸ್.ಐ ಚಿಕ್ಕನಗೌಡರು ಸ್ಪರ್ಧೆಗಿಳಿದಿದ್ದರು. ಆದರೆ ಚುನಾವಣೆಯ ಫಲಿತಾಂಶದಲ್ಲಿ ಕುಸುಮಾವತಿ ಶಿವಳ್ಳಿ ಅವರು 77640 ಮತಗಳನ್ನು ಪಡೆದಿದ್ದರೆ, ಚಿಕ್ಕನಗೌಡರು 76039 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕುಸುಮಾವತಿ ಶಿವಳ್ಳಿ 1601 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಉಮೇಶ್ ಜಾಧವ್ ರಾಜೀನಾಮೆ ಕೊಟ್ಟಿದ್ದಕ್ಕೆ ಚಿಂಚೋಳಿಯಲ್ಲಿ ಉಪಚುನಾವಣೆ ನಡೆದಿದೆ. ಇತ್ತ ಕುಂದಗೋಳದಲ್ಲಿ ಶಿವಳ್ಳಿ ಅವರು ನಿಧನದಿಂದ ಉಪಚುನಾವಣೆ ನಡೆದಿದೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ. ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಚಿಂಚೋಳಿ ಕ್ಷೇತ್ರವನ್ನು ಕಳೆದುಕೊಂಡಿದೆ ಎಂದು ಹೇಳಾಗುತ್ತಿದೆ.

  • ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಕಲಬುರಗಿ: ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ ಎಂದು ಚಿಂಚೋಳಿ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ಅವರು ಹೇಳಿದ್ದಾರೆ.

    ಚಿಂಚೋಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರಿಗೆ ಗರ್ವ ಹೆಚ್ಚಾಗಿದೆ ಎಂದು ಕಿಡಿಕಾರಿದರು.

    ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಯಾವ ಪ್ರದೇಶದ ಬಗ್ಗೆಯೂ ಗೊತ್ತಿಲ್ಲ. ಕೇವಲ ಅವನಿಗಷ್ಟೇ ಅಲ್ಲ ಅವರಪ್ಪ ಉಮೇಶ್ ಜಾಧವ್‍ಗೂ ಕ್ಷೇತ್ರದ ಬಗ್ಗೆ ಅರಿವಿಲ್ಲ. ಕೊಂಚಾವರಂನಲ್ಲಿ ಇಸ್ಪಿಟ್ ಆಡಿಸಿದ್ದು ಬಿಟ್ಟರೇ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಉಮೇಶ್ ಜಾಧವ್‍ಗೆ ಗರ್ವ ಎಷ್ಟು ಹೆಚ್ಚಾಗಿದೆ ಅಂದರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಸ್ಪರ್ಧಿಸುವ ಭಸ್ಮಾಸುರನಾಗಿದ್ದಾನೆ. ಈ ಭಸ್ಮಾಸುರನಿಗೂ ಒಂದು ದಿನ ಅಂತ್ಯವಿದೆ  ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಈ ಚುನಾವಣೆಯಲ್ಲಿ ಸುಭಾಷ್ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮಧ್ಯೆ ನಡೆಯುತ್ತಿದೆ. ಆದರೆ ಬಿಜೆಪಿಯವರು ಜಾಧವ್ ವರ್ಸಸ್ ಖರ್ಗೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಚಿಂಚೋಳಿಯ ಹಲವು ಹೋರಾಟಗಳಲ್ಲಿ ಭಾಗವಹಿಸಿ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದೇನೆ. 2008ರಲ್ಲಿ ಮೀಸಲು ಕ್ಷೇತ್ರವಾದ ಬಳಿಕವೂ ಸ್ಪರ್ಧೆಗೆ ಇಚ್ಚಿಸದೇ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಬೆಂಗಳೂರು: ಕುಂದಗೋಳ ಉಪ ಚುನಾವಣೆ ಜೊತೆಗೆ ಚಿಂಚೋಳಿಯಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಉಮೇಶ್ ಜಾಧವ್ ಅವರನ್ನೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಿತ್ತು.

    ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಚುನಾವಣಾ ಅಖಾಡಕ್ಕೆ ಧುಮಿಕಿದ್ದಾರೆ. ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕೇವಲ ಹೆಸರಿಗೆ ಸ್ಪರ್ಧೆ ಮಾಡಿದಂತಾಗಿದ್ದು, ತಂದೆ ಉಮೇಶ್ ಜಾಧವ್ ಮಗನ ಪರವಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರದ ತುಂಬೆಲ್ಲಾ ತಿರುಗಾಡುತ್ತಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್, ಇದೀಗ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಸ್ಥಳೀಯ ಹಿರಿಯ ಮುಖಂಡ ಸುನಿಲ್ ವಲ್ಯಾಪುರೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್‍ನಿಂದ ಹೊರ ಬಂದು ಉಮೇಶ್ ಜಾಧವ್ ಅವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತನ್ನ ಎಲ್ಲ ರಣತಂತ್ರಗಳನ್ನು ಪ್ರಯೋಗಿಸಲು ಮುಂದಾಗುತ್ತಿದೆ. ಒಂದು ವೇಳೆ ಅವಿನಾಶ್ ಜಾಧವ್ ಸೋತ್ರೆ ಅದು ಉಮೇಶ್ ಜಾಧವ್ ಸೋಲು ಎಂಬಂತೆ ಆಗಲಿದೆ ಎಂಬ ಮಾತುಗಳು ರಾಜಕೀಯ ಕೇಳಿ ಬರುತ್ತಿವೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,90,976
    ಪುರುಷ ಮತದಾರರು: 97,243
    ಮಹಿಳಾ ಮತದಾರರು: 93,718
    ಚಲಾವಣೆಯಾದ ಮತಗಳು: 1,31,916 (69.6%)

    2018ರ ಫಲಿತಾಂಶ
    2018ರಲ್ಲಿ ನಡೆದ ಚುನಾವಣೆಯ ಚಿಂಚೋಳಿ ಅಖಾಡದಲ್ಲಿ ಒಟ್ಟು 10 ಜನರಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಶಾಸಕರಾಗಿದ್ದರು. ಬಿಜೆಪಿ ಸುನಿಲ್ ವಲ್ಯಾಪುರೆ 54,693 ಮತ ಪಡೆದು 19,212 ವೋಟ್ ಅಂತರದಿಂದ ಸೋಲು ಅನುಭವಿಸಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದ ಸುಶೀಲಾಬಾಯಿ ಕೋವಿ ಎಂಬವರು ಕೇವಲ 1,621 ಮತ ಪಡೆದಿದ್ದರು. ನೋಟಾ 1,082 ಮತಗಳನ್ನು ಪಡೆದಿತ್ತು. ಒಟ್ಟಾರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.6ರಷ್ಟು ಮತದಾನವಾಗಿತ್ತು.

    ಒಂದು ರೀತಿ ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹಾಗಾದ್ರೆ ಅವಿನಾಶ್ ಜಾಧವ್ ಮತ್ತು ಸುಭಾಷ್ ರಾಠೋಡ ಪ್ಲಸ್, ಮೈನಸ್ ಪಾಯಿಂಟ್ ಈ ಕೆಳಗಿನಂತಿವೆ.

    ಸುಭಾಷ್ ರಾಠೋಡ್ (ಕಾಂಗ್ರೆಸ್)
    ಪ್ಲಸ್ ಪಾಯಿಂಟ್
    * ಉಮೇಶ್ ಜಾಧವ್ ಪಕ್ಷಾಂತರ ಮಾಡಿದ್ದು
    * ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೆಂಬಲ
    * ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕ
    * ಬಿಜೆಪಿ ಬಂಡಾಯ
    * ಅವಿನಾಶ್ ಜಾಧವ್ ರಾಜಕಾರಣಕ್ಕೆ ಹೊಸ ಮುಖ

    ಮೈನಸ್ ಪಾಯಿಂಟ್
    * ಪ್ರಚಾರದಿಂದ ದೂರ ಉಳಿದುಕೊಂಡ ಕೈ ನಾಯಕರು
    * ಕೈ ನಾಯಕರ ಆಂತರಿಕ ಕಲಹ
    * ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು

    ಅವಿನಾಶ್ ಜಾಧವ್
    ಪ್ಲಸ್ ಪಾಯಿಂಟ್
    * ತಂದೆ ಉಮೇಶ್ ಜಾಧವ್ ಕ್ಷೇತ್ರದಲ್ಲಿನ ಹಿಡಿತ
    * ರಾಷ್ಟ್ರೀಯ ನಾಯಕರ ಬೆಂಬಲ
    * ಲೋಕಸಭಾ ಚುನಾವಣೆ ಸಮಯವಾಗಿದ್ದರಿಂದ ಮೋದಿ ಅಲೆ

    ಮೈನಸ್ ಪಾಯಿಂಟ್
    * ಟಿಕೆಟ್ ವಂಚಿತ ನಾಯಕರ ಅಸಮಾಧಾನ
    * ಕ್ಷೇತ್ರಕ್ಕೆ ಹೊಸ ಮುಖ
    * ಬಿಜೆಪಿ ಬಂಡಾಯ