Tag: Avika Gor

  • ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ `ಬಾಲಿಕಾ ವಧು’ ನಟಿ

    ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ `ಬಾಲಿಕಾ ವಧು’ ನಟಿ

    ಹಿಂದಿ ಮತ್ತು ತೆಲುಗು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಅವಿಕಾ ಗೌರ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಶೂಟ್ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿಯ ಹಾಟ್ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Avika Gor (@avikagor)

    ಅವಿಕಾ ಗೌರ್, ಹಿಂದಿ ಕಿರುತೆರೆಯಲ್ಲಿ ಬಾಲಿಕಾ ವಧು ಸೀರಿಯಲ್‌ನಲ್ಲಿ ಪುಟ್ಟ ವಧು ಆಗಿ ಛಾಪೂ ಮೂಡಿಸಿದ್ದರು. ಬಳಿಕ ಟಾಲಿವುಡ್‌ನ ಕೆಲ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಈಗ ಬಿಕಿನಿ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವಿಕಾ ಗೌರ್ ಹಲ್‌ಚಲ್ ಎಬ್ಬಿಸಿದ್ದಾರೆ. ಬಿಕಿನಿ ಲುಕ್ ಮೂಲಕ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗೆ ಫ್ಯಾಷನ್ ಡಿಸೈನರ್ ಮಸಾಬ ಗುಪ್ತಾ ಹೇಳಿದ್ದು ಹೀಗೆ.?

     

    View this post on Instagram

     

    A post shared by Avika Gor (@avikagor)

    ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಅವಿಕಾ ಗೌರ್ ಮಾಲ್ಡೀವ್‌ಗೆ ಹಾರಿದ್ದಾರೆ. ಬೀಚ್‌ನ ಬಳಿ ಚೆಂದದ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಈಜುಕೊಳದಲ್ಲಿ ಕಿರುತೆರೆ ನಟಿಯ ಹಾಟ್ ಫೋಟೋಶೂಟ್

    ಈಜುಕೊಳದಲ್ಲಿ ಕಿರುತೆರೆ ನಟಿಯ ಹಾಟ್ ಫೋಟೋಶೂಟ್

    – ಪಡ್ಡೆಹುಡುಗರ ಮೈ ಬೆಚ್ಚಗಾಗಿಸಿದ ಬಿಕಿನಿ ಫೋಟೋ

    ಮುಂಬೈ: ಬಾಲಿಕಾ ವಧು ಸಿರೀಯಲ್ ಮೂಲಕ ಎಲ್ಲರ ಮನೆಮಾತಾಗಿದ್ದ ಅವಿಕಾ ಗೋರ್ ಬಿಕಿನಿ ತೊಟ್ಟು ಸೂರ್ಯನಿಗೆ ಮೈಯೊಡ್ಡುತ್ತಿರುವ ಫೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ.

    ತನ್ನ ಹಾಟ್- ಹಾಟ್ ಫೋಟೋಗಳ ಮೂಲಕ ಕಳೆದ ವರ್ಷ ಸುದ್ದಿಯಾಗಿದ್ದ ಅವಿಕಾ ಮತ್ತೆ ಇದೀಗ ಹೊಸ ಸೆಕ್ಸಿ ಫೋಟೋ ಒಂದನ್ನು ಅಪ್‍ಲೋಡ್ ಮಾಡಿದ್ದಾರೆ. ಬಿಕಿನಿತೊಟ್ಟು ಈಜುಕೊಳದ ದಡದಲ್ಲಿ ಮಲಗಿರುವ ಚಿತ್ರಗಳು ಇದೀಗ ವೈರಲ್ ಆಗುತ್ತಿದೆ.

    ಅವಿಕಾ ಗೋರ್ ಕಳೆದ ಅಕ್ಟೋಬರ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಮಯ ಕಳೆದಿದ್ದರು. ಇದರ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇವರು ಕಳೆದ ವರ್ಷ ನನಗೆ ಸರಿಯಾಗಿ ನೆನಪಿದೆ ನಾನು ಕನ್ನಡಿ ಮುಂದೆ ನಿಂತು ನನನ್ನು ನೋಡಿದಾಗ ಕುಸಿದು ಬಿದ್ದೆ. ನನ್ನನ್ನು ನಾನೆ ನೋಡಿಕೊಂಡಾಗ ನನಗೆ ಇಷ್ಟವಾಗಿರಲಿಲ್ಲ. ತೋಳು ಮತ್ತು ಕಾಲುಗಳ ಜೊತೆ ಹೊಟ್ಟೆಯು ತುಂಬಾ ಬೆಳೆದಿತ್ತು. ಇದಕ್ಕೆ ಕಾರಣ ನಾನು ಥೈರಾಯ್ಡ್ ಮತ್ತು ಪಿಸಿಒಡಿ ಕಾಯಿಲೆಯಿಂದ ಬಳಲುತ್ತಿದ್ದೆ. ನಂತರ ಇದೀಗ ಚಿಕಿತ್ಸೆ ಪಡೆದು ಸರಿಯಾದ ಆಹಾರ ಕ್ರಮವನ್ನು ಪಾಲಿಸುತ್ತಿದ್ದೇನೆ. ಇದರಿಂದ ನನ್ನ ಆರೋಗ್ಯ ಸಮಸ್ಯೆ ಸರಿಹೊಂದಿದೆ. ನನ್ನಲ್ಲಿದ್ದ ಭಾವನೆಯನ್ನು ಸರಿಯಾಗಿ ಮೈಗೂಡಿಸಿಕೊಂಡು ಸರಿಯಾದ ಆಹಾರ ಕ್ರಮ ಮತ್ತು ಡ್ಯಾನ್ಸ್‍ನಲ್ಲಿ ತುಂಬಾ ಗಮನಹರಿಸಿ ಉತ್ತಮವಾದ ಮೈ ಕಟ್ಟನ್ನು ಪಡೆದುಕೊಂಡಿದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದರು.

    ಈ ಚಿತ್ರದ ಕುರಿತು ಅವರ ಅಭಿಮಾನಿಗಳು ಹೆಚ್ಚು ಪ್ರತಿಕ್ರಿಯಿಸಿದ್ದು, ಡ್ಯಾಶಿಂಗ್ ಲುಕ್ ಮತ್ತು ಪವರ್ ಟು ಯು ಗರ್ಲ್ ಎಂಬ ಕಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಹಾರ್ಟ್ ಎಮೋಜಿ ಹಾಕಿ ಅಭಿಮಾನ ಮೆರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫಿಟ್ ಮೈಕಟ್ಟಿನ ಫೋಟೋ ಕಾಣುತ್ತಿದ್ದಂತೆ ಪಡ್ಡೆಹುಡುಗರ ಮೈ ಬೆಚ್ಚಗಾಗಿದೆ.

    ಪ್ರಸ್ತುತ ಅವಿಕಾ ಗೋರ್ ಕ್ಯಾಂಪ್ ಡೈರೀಸ್ ಎನ್‍ಜಿಒದ ಸ್ಥಾಪಕ, ರೋಡೀಸ್ ರಿಯಲ್ ಹಿರೋಸ್‍ನ ಮಾಜಿ ಸ್ಪರ್ಧಿ ಮಿಲಿಂದ್ ಚಾಂದ್ವನಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.

    ಖಾಸಗಿ ಚಾನಲ್‍ನಲ್ಲಿ ಪ್ರಸಾರವಾಗುವ ಬಾಲಿಕಾ ವಧು ಸಿರೀಯಲ್‍ನಲ್ಲಿ ಬಾಲಪ್ರತಿಭೆಯಾಗಿ ಅವಿಕಾ ಗೋರ್ ಮಿಂಚಿದ್ದರು. ನಂತರ ‘ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ‘ಉಯಲಾ ಜಂಪಾಲಾ’, ‘ಪಾಠಾಶಾಲಾ’, ‘ಮಾರ್ನಿಂಗ್ ವಾಕ್’ ಮತ್ತು ‘ರಾಜು ಗರಿ ಗಡಿ 3’ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.