Tag: Avesh Khan

  • ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಜೋಹಾನ್ಸ್‌ಬರ್ಗ್‌: ಅರ್ಷ್‌ದೀಪ್‌ ಸಿಂಗ್‌ (Arshdeep Singh) ಮತ್ತು ಅವೇಶ್​ ಖಾನ್​ ಅವರ ಘಾತಕ ಬೌಲಿಂಗ್​ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ (Shreyas Iyer) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ (Team India) 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್‌ ಸಂಡೇ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಜಯ ಸಾಧಿಸಿತು.

    ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್‌ (Sai Sudharsan) ಹಾಗೂ ಶ್ರೇಯಸ್‌ ಅಯ್ಯರ್‌ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 52 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರೆ, ಸಾಯಿ ಸುದರ್ಶನ್‌ 43 ಎಸೆತಗಳಲ್ಲಿ 55 ರನ್‌ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 117 ರನ್​ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್​ 19 ಮಂಗಳವಾರ ನಡೆಯಲಿದೆ.

    ದಾಖಲೆ ಬರೆದ ಅರ್ಷ್‌ದೀಪ್‌:
    ವೇಗಿ ಅರ್ಷ್‌ದೀಪ್‌ ಸಿಂಗ್ ಹರಿಣರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆಯುವ ಮೂಲಕ ಭಾರತ ಪರ ಹೊಸ ದಾಖಲೆಯೊಂದನ್ನು ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಅವರಿಗೆ 4ನೇ ಸ್ಥಾನವನ್ನೂ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಸುನೀಲ್​ ಜೋಶಿ ಮೊದಲಿಗರಾಗಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್​ಗೆ 5 ವಿಕೆಟ್​ ಕಿತ್ತು ಮಿಂಚಿದ್ದರು. ಯಜುವೇಂದ್ರ ಚಾಹಲ್​ (22 ರನ್​ಗೆ 5) ಮತ್ತು ರವೀಂದ್ರ ಜಡೇಜಾ (33 ರನ್​ಗೆ 5) ನಂತರದ ಸ್ಥಾನಗಳಲ್ಲಿದ್ದಾರೆ.

    ಅರ್ಷ-ಆವೇಶ ನಡುವೆ ಹಣಾ-ಹಣಿ:
    ಅರ್ಷ್‌ದೀಪ್‌ ಸಿಂಗ್‌ಗೆ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನೀಡಿದ ಅವೇಶ್​ ಖಾನ್​ ತಮ್ಮ ಆವೇಶಭರಿತ ಬೌಲಿಂಗ್​ ದಾಳಿ ನಡೆಸುವ ಮೂಲಕ 27 ರನ್​ ನೀಡಿ 4 ವಿಕೆಟ್​ ಕಿತ್ತರು. ಕುಲ್ದೀಪ್‌ ಯಾದವ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಉಭಯ ಬೌಲರ್​ಗಳ ಘಾತುಕ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್​ ಮಿಲ್ಲರ್​ 2 ರನ್‌, ಹೆನ್ರಿಕ್ ಕ್ಲಾಸೆನ್ 6 ರನ್‌, ನಾಯಕ ಐಡೆನ್​ ಮಾರ್ಕ್ರಮ್ 12 ರನ್‌ ಗಳಿಸಿದ್ರೆ ವಿಯಾನ್ ಮುಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆಂಡ್ರಿಕ್ಸ್ ಶೂನ್ಯ ಸುತ್ತಿದರು.

    ಫೆಹ್ಲುಕ್ವಾಯೊ ಹೋರಾಟ ವ್ಯರ್ಥ:
    58ರನ್​ಗೆ 7 ವಿಕೆಟ್​ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 100 ರನ್‌ ಗಳಿಸುವುದೂ ಕಷ್ಟವಾಗಿತ್ತು. ಆದ್ರೆ ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್​ ಮತ್ತು 3 ಬೌಂಡರಿ ಬಾರಿಸಿ 33 ರನ್​ ಗಳಿಸಿದರು. ಇಂದು ಇದೇ ತಂಡದ ಪರ‌ ಗಳಿಸಿದ ಅಧಿಕ ರನ್‌ ಆಗಿತ್ತು. ಆದ್ರೆ ಭಾರತದ ಎದುರು ಈ ಆಟ ವ್ಯರ್ಥವಾಯಿತು.

  • IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    ಬೆಂಗಳೂರು: ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಅವೇಶ್‌ ಖಾನ್‌ (Avesh Khan) ಮೈದಾನದಲ್ಲೇ ಹೆಲ್ಮೆಟ್‌ ಕಿತ್ತೆಸೆದು ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.

    ಇದರೊಂದಿಗೆ ಆರ್‌ಸಿಬಿ ತಂಡ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡಿದ್ದಕ್ಕಾಗಿ ಐಪಿಎಲ್‌ ಆಡಳಿತ ಮಂಡಳಿ ನಾಯಕ ಫಾಫ್‌ ಡುಪ್ಲೆಸಿಸ್‌ಗೆ (Faf du Plessis) ಭಾರೀ ದಂಡ ವಿಧಿಸಿದೆ. ಆರ್‌ಸಿಬಿ ತಂಡವು ನಿಗದಿತ ಸಮಯದಲ್ಲಿ ತಮ್ಮ ಕೋಟಾವನ್ನ ಪೂರ್ಣಗೊಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಡುಪ್ಲೆಸಿಸ್‌ಗೆ 12 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

    ಇನ್ನೂ ಲಕ್ನೋ ತಂಡದ ವೇಗಿ ಅವೇಶ್‌ ಖಾನ್‌ ಕೊನೆಯ ಎಸೆತವನ್ನು ಎದುರಿಸಲಾಗದೇ ಒಂದು ರನ್‌ ಬೈಸ್‌ ಕದ್ದು ಗೆಲುವು ಸಾಧಿಸಿದ ಬಳಿಕ ಅತ್ಯುತ್ಸಾಹದಲ್ಲಿ ತಮ್ಮ ಹೆಲ್ಮೆಟ್‌ ಅನ್ನು ಕಿತ್ತು ಮೈದಾನಕ್ಕೆ ಎಸೆತದರು. ಇದು ಆಕ್ರಮಣಕಾರಿ ವರ್ತನೆಯಾಗಿದ್ದು, ಐಪಿಎಲ್‌ ನೀತಿ ಸಂಹಿತೆ 2.2ರ ಪ್ರಕಾರ ಅಪರಾಧವಾಗಿದ್ದು, ರೆಫೆರಿಯಿಂದ ವಾಗ್ದಂಡನೆ ವಿಧಿಸಲಾಯಿತು. ಬಳಿಕ ಅವೇಶ್‌ ಖಾನ್‌ ಕ್ಷಮೆಕೋರಿದರು. ಇದನ್ನೂ ಓದಿ: IPL 2023: ಸೈಲೆಂಟಾಗಿರ್ಬೇಕ್‌ ಅಷ್ಟೇ – RCB ಫ್ಯಾನ್ಸ್‌ಗೆ ಗಂಭೀರ್‌ ವಾರ್ನಿಂಗ್‌

    IPL ಹೊಸ ರೂಲ್ಸ್‌ ಹೇಳೋದೇನು?
    ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳನ್ನ (IPL NewRules) ತರಲಾಗಿದೆ. ಆ ನಿಯಮದ ಪ್ರಕಾರ ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ 3 ಗಂಟೆ ಸಮಯ ನಿಗದಿಯಾಗಿರುತ್ತೆ. ಹಾಗಾಗಿ ಪ್ರತಿ ತಂಡ 90 ನಿಮಿಷಗಳ ಒಳಗೆ 20 ಓವರ್​ಗಳ ಕೋಟಾ ಮುಗಿಸಬೇಕಿರುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ, ಪ್ರತಿ ಓವರ್‌ನಲ್ಲಿ ಹೆಚ್ಚುವರಿ ಆಟಗಾರರನ್ನ 30 ಯಾರ್ಡ್‌ ವೃತ್ತದೊಳಗೆ ಇರಿಸಬೇಕಾಗುತ್ತದೆ. ಜೊತೆಗೆ ದಂಡಕ್ಕೂ ಒಳಗಾಗಬೇಕಾಗುತ್ತದೆ ಎಂದು ಹೇಳಿದೆ.

  • ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    – ಗಿಲ್ ಬಳಿಕ ಮತ್ತಿಬ್ಬರಿಗೆ ಗಾಯ

    ಲಂಡನ್: ಇಂಗ್ಲೆಂಡ್ ಸರಣಿ ಆರಂಭಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ಇದೀಗ ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

    ಕೆಲ ದಿನಗಳ ಹಿಂದೆ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಆಲ್‍ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಕೂಡ ಸರಣಿಯಿಂದ ಹೊರಗುಳಿಯುವಂತೆ ಆಗಿದೆ.

    ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಅಭ್ಯಾಸ ಪಂದ್ಯದಲ್ಲಿ ಅಡುವ ವೇಳೆ ಇಬ್ಬರಿಗೂ ಕೂಡ ಕೈ ಬೆರಳಿನ ಗಾಯವಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಆವೇಶ್ ಖಾನ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ. ಅಭ್ಯಾಸ ಪಂದ್ಯದಲ್ಲಿ ಸುಂದರ್ ಹಾಗೂ ಆವೇಶ್ ಖಾನ್ ಜೊತೆಯಾಗಿ ಕಂಟ್ರಿ ಇಲೆವೆನ್ ತಂಡದ ಪರ ಆಡಿದ್ದರು. ಈ ವೇಳೆ ಗಾಯವಾಗಿದೆ. ಈ ಮೂಲಕ ಭಾರತದ 3 ಮಂದಿ ಆಟಗಾರರು ಸರಣಿಯ ಆರಂಭಕ್ಕೂ ಮೊದಲೇ ತಂಡದಿಂದ ಹೊರ ಬಿದ್ದಂತಾಗಿದೆ. ಇದನ್ನೂ ಓದಿ: ಹಿಟ್‍ಮ್ಯಾನ್ ಹಸ್ತಾಕ್ಷರ ಹಾಕಿಸಿಕೊಂಡ ಫ್ಯಾನ್‍ಬಾಯ್ ಅವೇಶ್ ಖಾನ್

    ಬಿಸಿಸಿಐ ಶುಭಮನ್ ಗಿಲ್ ಅವರ ಜಾಗಕ್ಕೆ ಬದಲಿ ಆಟಗಾರನನ್ನು ಇಂಗ್ಲೆಂಡ್ ಕಳುಹಿಸಿಲ್ಲ. ಇದೀಗ ಈ ಇಬ್ಬರು ಆಟಗಾರರು ಕೂಡ ಗಾಯಲು ಆಗಿರುವುದರಿಂದ ಬದಲಿ ಆಟಗಾರರನ್ನು ಕಳುಹಿಸಲಿದೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4ರಂದು ನಾಟಿಂಗ್ ಹ್ಯಾಮ್‍ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭಗೊಳ್ಳಲಿದೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

  • ಹಿಟ್‍ಮ್ಯಾನ್ ಹಸ್ತಾಕ್ಷರ ಹಾಕಿಸಿಕೊಂಡ ಫ್ಯಾನ್‍ಬಾಯ್ ಅವೇಶ್ ಖಾನ್

    ಹಿಟ್‍ಮ್ಯಾನ್ ಹಸ್ತಾಕ್ಷರ ಹಾಕಿಸಿಕೊಂಡ ಫ್ಯಾನ್‍ಬಾಯ್ ಅವೇಶ್ ಖಾನ್

    ಚೆನ್ನೈ: ಕ್ರಿಕೆಟ್ ಆಟಗಾರರನ್ನು ನೋಡಿಕೊಂಡು ಆ ಆಟಗಾರರನ್ನು ಇಷ್ಟ ಪಡುತ್ತ ಬೆಳೆದ ಹುಡುಗನೊಬ್ಬ ಒಂದು ದಿನ ಅದೇ ಆಟಗಾರರನ ವಿರುದ್ಧ ಅಡಿದ್ದಾರೆ. ಅವರೊಂದಿಗೆ ಸಮಯ ಕಳೆದಾಗ ಪಟ್ಟ ಖುಷಿಯನ್ನು ನೆನೆಪಿನಲ್ಲಿ ಇಡುವುದಕ್ಕಾಗಿ ಆಟಗಾರನೊಬ್ಬ ಆತನ ಫೇವ್‍ರೇಟ್ ಆಟಗಾರನಿಂದ ತನ್ನ ಜೆರ್ಸಿಗೆ ಹಸ್ತಾಕ್ಷರ ಪಡೆದುಕೊಂಡು ಸಂತೋಷ ಪಟ್ಟ ಅಪರೂಪದ ವಿದ್ಯಮಾನ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕಂಡು ಬಂದಿದೆ.

    14ನೇ ಆವೃತ್ತಿಯ ಐಪಿಎಲ್‍ನ 13ನೇ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳು ಸೆಣಸಾಡಿದ್ದವು. ಈ ಪಂದ್ಯ ಮುಗಿದ ಬಳಿಕ ಡೆಲ್ಲಿ ತಂಡದ ಯುವ ಬೌಲರ್ ಅವೇಶ್ ಖಾನ್ ತನ್ನ ಫೆವ್‍ರೇಟ್ ಆಟಗಾರರಾದ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ತನ್ನ ಡೆಲ್ಲಿ ತಂಡದ ಜೆರ್ಸಿಯನ್ನು ರೋಹಿತ್ ಕೈಗೆ ನೀಡಿ ಅವರ ಹಸ್ತಾಕ್ಷರ ಹಾಕಿಸಿಕೊಂಡು ಸಂಭ್ರಮ ಪಟ್ಟಿದ್ದಾರೆ.

    ಅವೇಶ್ ಖಾನ್ ಜೊತೆ ಸ್ವಲ್ಪಹೊತ್ತು ಮಾತನಾಡಿದ ರೋಹಿತ್ ಕೂಡ ನಗುನಗುತ್ತಲೆ ಅವೇಶ್ ಖಾನ್ ಅವರ ಜೆರ್ಸಿಗೆ ಹಸ್ತಾಕ್ಷರ ಹಾಕಿ ಹಿಂದಿರುಗಿಸಿದ್ದಾರೆ. ಅವೇಶ್ ಖಾನ್ ತನ್ನ ನೆಚ್ಚಿನ ಆಟಗಾರನಿಂದ ಹಸ್ತಾಕ್ಷರ ಪಡೆಯುತ್ತಿರುವ ಫೋಟೋವನ್ನು ಡೆಲ್ಲಿ ತಂಡ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡು ‘ಪಂದ್ಯದ ಬಳಿಕ ಫ್ಯಾನ್‍ಬಾಯ್ ಅವೇಶ್ ಖಾನ್’ ಎಂದು ಬರೆದುಕೊಂಡಿದೆ.

    ಮುಂಬೈ ವಿರುದ್ಧ ಪಂದ್ಯವನ್ನು ಡೆಲ್ಲಿ ತಂಡ 6 ವಿಕೆಟ್‍ಗಳಿಂದ ಗೆದ್ದಿತ್ತು. ಇದೇ ಪಂದ್ಯದಲ್ಲಿ ಅವೇಶ್ ಖಾನ್ 2 ಓವರ್ ಎಸೆದು 15 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಅವೇಶ್ ಖಾನ್ 14ನೇ ಆವೃತ್ತಿಯ ಐಪಿಎಲ್‍ನ ಇದುವರೆಗಿನ ಪಂದ್ಯಗಳಿಂದ 8 ವಿಕೆಟ್ ಪಡೆಯುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ದ್ವೀತಿಯ ಸ್ಥಾನಿಯಾಗಿ ಗುರುತಿಸಿಕೊಂಡಿದ್ದಾರೆ. 14ನೇ ಆವೃತ್ತಿ ಐಪಿಎಲ್‍ನಲ್ಲಿ ಈವರೆಗೆ ಆವೇಶ್ ಖಾನ್ ಡೆಲ್ಲಿ ಪರ 4 ಪಂದ್ಯಗಳಲ್ಲಿ 14 ಓವರ್ ಎಸೆದು, 103 ರನ್ ಬಿಟ್ಟುಕೊಟ್ಟು 8 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಈ ಬಾರಿ ಪರ್ಪಲ್ ಕ್ಯಾಪ್ ಹೋಲ್ಡರ್ ಅವಕಾಶವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.