Tag: avatara 2

  • `ಅವತಾರ್ 2′ ಚಿತ್ರಕ್ಕೆ ಸಂಕಷ್ಟ: ಸಿನಿಮಾ ಲೀಕ್

    `ಅವತಾರ್ 2′ ಚಿತ್ರಕ್ಕೆ ಸಂಕಷ್ಟ: ಸಿನಿಮಾ ಲೀಕ್

    ವಿಶ್ವದ ಎಲ್ಲಾ ಕಡೆ `ಅವತಾರ್ 2′ (Avatara 2) ಸಿನಿಮಾ ಅಬ್ಬರ ಜೋರಾಗಿದೆ. ಹೀಗಿರುವಾಗ ರಿಲೀಸ್ ಆಗುವ ಮೊದಲೇ `ಅವತಾರ್ 2′ ಚಿತ್ರ ಪೈರಸಿ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ.

     

    View this post on Instagram

     

    A post shared by Avatar (@avatar)

    ಕನ್ನಡ ಚಿತ್ರರಂಗದಿಂದ (Kannada Film Industry) ಹಿಡಿದು ಹಾಲಿವುಡ್‌ವರೆಗೂ (Hollywood) ಸಿನಿಮಾಗಳಿಗೆ ಪೈರೆಸಿ ಕಾಟವಿದೆ. ಇದೀಗ `ಅವತಾರ್ 2′ ಚಿತ್ರವನ್ನು ಟೆಲಿಗ್ರಾಂ ಸೇರಿದಂತೆ ಹಲವು ಕಡೆ ಕಿಡಿಗೇಡಿಗಳು ಸಿನಿಮಾ ಅಪ್‌ಲೋಡ್ ಮಾಡಿದ್ದಾರೆ. ಇನ್ನೂ ಡಿ.6ರಂದು ಲಂಡನ್‌ನಲ್ಲಿ (London) ಈ ಮೊದಲೇ ರಿಲೀಸ್ ಆಗಿತ್ತು. ಕಳೆದ ಒಂದು ವಾರದಿಂದ ವಿದೇಶದಲ್ಲಿ ವಿಶೇಷ ಪ್ರದರ್ಶನ ಕೂಡ ಇತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಸಿನಿಮಾ ಶೂಟ್ ಮಾಡಿ, ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾರಾ ಲೋಕೇಶ್ ಭೇಟಿಯಾದ ನಟ ಯಶ್

     

    View this post on Instagram

     

    A post shared by Avatar (@avatar)

    ಇನ್ನೂ ಭಾರತದಲ್ಲಿ ಇಂದು ಸಿನಿಮಾ ತೆರೆಕಂಡಿದ್ದು, ಹಾಲಿವುಡ್‌ನ `ಅವತಾರ್ 2′ ನೋಡಲು ಕಾತರದಿಂದ ಕಾಯುತ್ತಿದ್ದರು. ಈ ಬೆನ್ನಲ್ಲೇ ಸಿನಿಮಾ ಪೈರಸಿ ಆಗಿರೋದು ಚಿತ್ರತಂಡಕ್ಕೆ ಮತ್ತು ವಿತರಕರಿಗೆ ದೊಡ್ಡ ತಲೆನೋವಾಗಿದೆ. ಭಾರತದಲ್ಲಿ ಇಂಗ್ಲೀಷ್ ಸೇರಿದಂತೆ ಆರು ಭಾಷೆಗಳಲ್ಲಿ `ಅವತಾರ್ 2′ ಚಿತ್ರ ತೆರೆಗೆ ಅಪ್ಪಳಿಸಿದೆ.

     

    View this post on Instagram

     

    A post shared by Avatar (@avatar)

    ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಪೈರಸಿ ಕಾಟದ ಮಧ್ಯೆ ಅವತಾರ್ 2 ಅದೆಷ್ಟರ ಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಬೆಲೆಗೆ `ಅವತಾರ್ 2′ ಟಿಕೆಟ್ ಸೋಲ್ಡ್ ಔಟ್

    ದುಬಾರಿ ಬೆಲೆಗೆ `ಅವತಾರ್ 2′ ಟಿಕೆಟ್ ಸೋಲ್ಡ್ ಔಟ್

    ಹಾಲಿವುಡ್‌ನ ʻಅವತಾರ್ʼ ಪಾರ್ಟ್ ಒನ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಹದಿಮೂರು ವರ್ಷಗಳ ಹಿಂದೆ ಕಮಾಲ್ ಮಾಡಿದ್ದ ಈ ಚಿತ್ರದ ಮುಂದಿನ ವರ್ಷನ್ ತೆರೆಗೆ ತರಲು ನಿರ್ದೇಶಕ ಜೇಮ್ಸ್ ಕ್ಯಾಮರಾನ್ ರೆಡಿಯಾಗಿದ್ದಾರೆ. ಸದ್ಯ ಭಾರತದಲ್ಲಿ ಎಲ್ಲೆಡೆ `ಅವತಾರ್ 2′ ಟಿಕೆಟ್ಸ್ ದುಬಾರಿ ಬೆಲೆಗೆ ಸೆಲ್ ಆಗುತ್ತಿದೆ.

    `ಅವತಾರ್ 2′ ಸಿನಿಮಾ ಇದೇ ಡಿಸೆಂಬರ್ 16ಕ್ಕೆ ವಿಶ್ವದ ಎಲ್ಲೆಡೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅವತಾರ್ ಸಿನಿಮಾ ಮೋಡಿ ಮಾಡಿದ ಹಾಗೇ `ಅವತಾರ್ 2′ ಚಿತ್ರ ಕೂಡ ಕಮಾಲ್ ಮಾಡುತ್ತೆ ಅಂತಾ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟ್ರೈಲರ್ ನೋಡಿಯೇ ಫಿದಾ ಆಗಿರುವ ಫ್ಯಾನ್ಸ್‌ಗೆ, ಚಿತ್ರದ ರಿಲೀಸ್‌ಗೂ ಮುಂಚೆನೇ ಟಿಕೆಟ್ ಬುಕ್ ಮಾಡ್ತಿದ್ದಾರೆ.

    ವಿಶ್ವದ ಹಲವು ದೇಶಗಳಲ್ಲಿ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಭಾರತದಲ್ಲೂ ಟಿಕೆಟ್‌ಗೆ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಂಗಳೂರು, ಚೆನ್ನೈ, ಇಂದೋರ್, ಮುಂಬೈ, ಕೋಲ್ಕತ್ತಾ, ಮುಂತಾದ ನಗರದಲ್ಲಿ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಸಿನಿಮಾ ಟಿಕೆಟ್ಸ್‌ಗೆ ದುಬಾರಿ ಮೊತ್ತವನ್ನೇ ನಿಗದಿಪಡಿಸಿದ್ದಾರೆ. ಇದನ್ನೂ ಓದಿ: ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬೆಂಗಳೂರು 1450 ರೂ.- ಐಮ್ಯಾಕ್ಸ್ 3ಡಿ, ದೆಹಲಿ 1000- ಐಮ್ಯಾಕ್ಸ್ 3ಡಿ, ಮುಂಬೈ 970- 4ಡಿಎಕ್ಸ್ 3ಡಿ, ಕೋಲ್ಕತ್ತಾ 770 -ಐಮ್ಯಾಕ್ಸ್ 3ಡಿ, ಅಹ್ಮದ್‌ಬಾದ್ 750- 4ಡಿಎಕ್ಸ್ 3ಡಿ, ಇಂದೋರ್ 700- 4ಡಿಎಕ್ಸ್ 3ಡಿ, ಹೈದರಾಬಾದ್ 350- 4ಡಿಎಕ್ಸ್ 3ಡಿ

    ಈ ರೀತಿಯಾಗಿ ಟಿಕೆಟ್ ದರವನ್ನ ಫಿಕ್ಸ್ ಮಾಡಲಾಗಿದ್ದು, ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

    `ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

    ಹಾಲಿವುಡ್‌ನ(Hollywood) `ಅವತಾರ್ 2′ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಪ್ರೇಕ್ಷಕರ ಗಮನ ಸೆಲೆಯುತ್ತಿದೆ. ಇದರ ನಡುವೆ `ಅವತಾರ್ 2′ (Avatara 2) ಸಿನಿಮಾ ತಂಡ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

     

    View this post on Instagram

     

    A post shared by Avatar (@avatar)

    20th Century Fox ನಿರ್ಮಾಣದ, ಜೇಮ್ಸ್ ಕ್ಯಾಮರೂನ್ ನಿರ್ದೇಶನದ `ಅವತಾರ್ 2′ ಟ್ರೈಲರ್  ಹಾಲಿವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 24 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೈಲರ್ ರಿಲೀಸ್ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. ಭಾರತದಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕನ್ನಡ ಮಾತ್ರ ಡಬ್ ಆಗುತ್ತಿಲ್ಲ. ಈ ವಿಚಾರ ಇದೀಗ ಕನ್ನಡಿಗರನ್ನ ಕೆರಳಿಸಿದೆ. ಇದನ್ನೂ ಓದಿ:‘ಜುಗಲ್ ಬಂದಿ’ಗಾಗಿ ಕನ್ನಡಕ್ಕೆ ಬಂದ ಅಪರೂಪದ ತಮಿಳು ಗಾಯಕಿ ವೈಕಂ ವಿಜಯಲಕ್ಷ್ಮಿ

     

    View this post on Instagram

     

    A post shared by Avatar (@avatar)

    ಕನ್ನಡ ಸಿನಿಮಾಗಳು ಇದೀಗ ವಿಶ್ವಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗುತ್ತಿರುವ ‘ಅವತಾರ್ 2’ ಚಿತ್ರ ಕನ್ನಡವನ್ನ ಕಡೆಗಣಿಸಿದೆ ಎಂದು ಚಿತ್ರತಂಡದ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್‌ನಲ್ಲಿ ಕನ್ನಡದ ಹೆಸರನ್ನೂ ಸೇರಿಸಲಾಗಿತ್ತು. ಅಲ್ಲದೇ, ಕೆಲವೇ ತಿಂಗಳ ಹಿಂದೆ ಕನ್ನಡ ವರ್ಷನ್‌ನಲ್ಲಿ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅದು ಕನ್ನಡಕ್ಕೆ ಡಬ್ ಆಗಿಲ್ಲ. ಅಲ್ಲದೇ, ಪೋಸ್ಟರ್‌ನಲ್ಲಿ ಇದ್ದ ಕನ್ನಡ ಕೂಡ ತೆಗೆಯಲಾಗಿದೆ. ಅಫಿಷಿಯಲ್ ಯೂಟ್ಯೂಬ್ ಖಾತೆಯಲ್ಲಿ ಈ ಮೊದಲು ಇದ್ದ ಕನ್ನಡ ಟೀಸರ್ ಸಹ ಈಗ ಕಾಣಿಸುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

    ಕನ್ನಡಿಗರು ಮೂಲ ಭಾಷೆಯಲ್ಲಿಯೇ ಎಲ್ಲ ಸಿನಿಮಾವನ್ನು ನೋಡುತ್ತಾರೆ. ಎಲ್ಲಾ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಈ ಚಿತ್ರ, ಮಾರ್ಕೆಟ್ ದೃಷ್ಟಿಯಿಂದ `ಅವತಾರ್ 2′ ಚಿತ್ರದ ನಿರ್ಮಾಪಕರು ಕೂಡ ಹಾಗೆಯೇ ಮಾಡಿದ್ದರೆ ಅದು ಕನ್ನಡದ ಪ್ರೇಕ್ಷಕರಿಗೆ ತೋರಿದ ಅಗೌರವ ಆಗುತ್ತದೆ ಎಂದು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

    `ಅವತಾರ್ 2’ನಲ್ಲಿ ಯುದ್ಧದ ಜೊತೆಗೆ ಚೆಂದದ ಪ್ರೇಮಕಥೆಯಿದೆ. ಟ್ರೈಲರ್‌ನೋಡಿ, ಫಿದಾ ಆಗಿರುವ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. `ಅವತಾರ್ 2′ ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 16ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

    Live Tv
    [brid partner=56869869 player=32851 video=960834 autoplay=true]