Tag: avatar 2

  • ಒಟಿಟಿಗೆ ಬರಲಿದೆ `ಅವತಾರ್ 2′ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಒಟಿಟಿಗೆ ಬರಲಿದೆ `ಅವತಾರ್ 2′ ಸಿನಿಮಾ: ರಿಲೀಸ್ ಡೇಟ್ ಫಿಕ್ಸ್

    ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ `ಅವತಾರ್ 2′ (Avatar 2)ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ರಿಲೀಸ್ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಿರುವಾಗ ಸಿನಿಪ್ರೇಮಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರಮಂದಿರಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಮನೆಯಲ್ಲಿಯೇ ಕುಳಿತು ನೋಡುವ ಚಾನ್ಸ್ ಸಿಕ್ಕಿದೆ. ಒಟಿಟಿಗೆ `ಅವತಾರ್ 2′ ಅಬ್ಬರಿಸಲು ರೆಡಿಯಾಗಿದೆ.

    ಕಳೆದ ವರ್ಷ ಡಿ.22ರಂದು `ಅವತಾರ್ 2′ ಸಿನಿಮಾ ವಿಶ್ವದೆಲ್ಲೆಡೆ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಒಟಿಟಿ ಮೂಲಕ ʻಅವತಾರ್ 2ʼ ಚಿತ್ರ ಲಗ್ಗೆ ಇಡುತ್ತಿದೆ. ಮಾ.28ರಂದು ವಿವಿಧ ಒಟಿಟಿಯಲ್ಲಿ (Ott) ತೆರೆ ಕಾಣುತ್ತಿದೆ. ಇದನ್ನೂ ಓದಿ: ಅವಳಿ ಮಕ್ಕಳೊಂದಿಗೆ ರಸ್ತೆಗಿಳಿದ ನಯನತಾರಾ ದಂಪತಿ

    ಅದ್ಭುತ ದೃಶ್ಯ ವೈಭವ ಇರುವಂತಹ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಿದರೆ ಅದರ ಅನುಭವವೇ ಬೇರೆ. ಅಂಥ ಪ್ರಕಾರಕ್ಕೆ ಸೇರುವ ಸಿನಿಮಾ `ಅವತಾರ್ 2′ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಮೂಲಕ ನೋಡಬಹುದು. ಅಮೇಜಾನ್ ಪ್ರೈಂ (Amazon Prime) ಸೇರಿದಂತೆ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ.

    ಜೇಮ್ಸ್ ಕ್ಯಾಮೆರಾನ್ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ. ಹಾಗಾಗಿ ʻಅವತಾರ್ 2ʼ ಚಿತ್ರ ಒಟಿಟಿ ಎಂಟ್ರಿಗೆ ಫ್ಯಾನ್ಸ್ ಕಾಯ್ತಿದ್ದಾರೆ.

  • ಗಲ್ಲಾಪೆಟ್ಟಿಗೆಯಲ್ಲಿ 16 ಸಾವಿರ ಕೋಟಿ ಬಾಚಿದ `ಅವತಾರ್ 2′ ಸಿನಿಮಾ

    ಗಲ್ಲಾಪೆಟ್ಟಿಗೆಯಲ್ಲಿ 16 ಸಾವಿರ ಕೋಟಿ ಬಾಚಿದ `ಅವತಾರ್ 2′ ಸಿನಿಮಾ

    ಹಾಲಿವುಡ್‌ನ (Hollywood) `ಅವತಾರ್’ (Avatar)ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಲೂಟಿ ಮಾಡಿತ್ತು. ಇದೀಗ ಕಳೆದ ವರ್ಷದ ಅಂತ್ಯದಲ್ಲಿ `ಅವತಾರ್ 2′ ತೆರೆಗೆ ಅಪ್ಪಳಿಸಿತ್ತು. ಅವತಾರ್ ಚಿತ್ರಕ್ಕೆ `ಅವತಾರ್ 2′ ಸಿನಿಮಾ ಸೆಡ್ಡು ಹೊಡೆಯಲಿದೆ ಎನ್ನಲಾಗಿತ್ತು. ಪಾರ್ಟ್ ಒನ್ ಸಿನಿಮಾ ಹಿಂದಿಕ್ಕಲು ಅವತಾರ್ 2 ವಿಫಲವಾಗಿದ್ರು. ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್ ಸೇರಿದೆ.

     

    View this post on Instagram

     

    A post shared by Avatar (@avatar)

    ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ‘ಅವತಾರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ಸಿನಿಮಾ ತೆರೆಕಂಡು ಸಾಕಷ್ಟು ವರ್ಷಗಳ ಬಳಿಕ ‘ಅವತಾರ್: ದಿ ವೇ ಆಫ್ ವಾಟರ್’ (Avatar: The Way Of Water) ಸಿನಿಮಾ ಬಿಡುಗಡೆ ಆಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬಂದ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಇದನ್ನೂ ಓದಿ: ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

     

    View this post on Instagram

     

    A post shared by Avatar (@avatar)

    `ಅವತಾರ್ 2′ (Avatar 2) ಚಿತ್ರದ ಇಲ್ಲಿವರೆಗಿನ ಗಲ್ಲಾಪೆಟ್ಟಿಗೆ ಕಲೆಕ್ಷನ್ ಲೆಕ್ಕಾಚಾರ ಸಿಕ್ಕಿದೆ. ಇದುವರೆಗೂ ಅವತಾರ್ 2 ಎರಡು ಬಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ಇಂಡಿಯನ್ ರೂಪಾಯಿ ಪ್ರಕಾರ ಈ ಚಿತ್ರದ ಒಟ್ಟು ಕಲೆಕ್ಷನ್ 16,247 ಕೋಟಿ ರೂಪಾಯಿ ಆಗಿದೆ.

    ಕಳೆದ ವರ್ಷ 2022ರಲ್ಲಿ `ಅವತಾರ್: ದಿ ವೇ ಆಫ್ ವಾಟರ್’ ತೆರೆಗೆ ಬಂತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ. 16 ಸಾವಿರ ಕೋಟಿ ಕಲೆಕ್ಷನ್ ಮಾಡಿ ಹಿಸ್ಟರಿ ಕ್ರಿಯೆಟ್ ಮಾಡಿದೆ. `ಅವತಾರ್’ ಪಾರ್ಟ್ 3 ಬರೋಕೆ ರೆಡಿ ಆಗಿದೆ. 2024ರ ವರ್ಷದ ಅಂತ್ಯದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ  ‘ಅವತಾರ್ 2’ ಸಿನಿಮಾ

    ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅವತಾರ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾಗಾಗಿ ಟಿಕೆಟ್‌ ದರವನ್ನೂ ಏರಿಸಿದ್ದರಿಂದ, ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿದೆ. ಭಾರತದಲ್ಲೇ ಮೂರು ದಿನಕ್ಕೆ 150 ಕೋಟಿಯಿಂದ 165 ಕೋಟಿವರೆಗೂ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ಮೂರು ದಿನಗಳ ಬಹುತೇಕ ಟಿಕೆಟ್‌ ಮಾರಾಟವಾಗಿತ್ತು ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್.

    ವೀಕೆಂಡ್ ಹೊರತಾಗಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಕೂಡ ಅನೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ನಡೆಸಿವೆಯಂತೆ. ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದರಿಂದ ಮತ್ತು 3ಡಿಯಲ್ಲೂ ಸಿನಿಮಾ ರಿಲೀಸ್ ಆಗಿದ್ದರಿಂದ, ಹೆಚ್ಚಿನ ಪ್ರಮಾಣದಲ್ಲೇ ಬಾಕ್ಸ್ ಆಫೀಸಿಗೆ ಹಣ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. 2009ರಲ್ಲಿ ಅವತಾರ ಸಿನಿಮಾ ತೆರೆಕಂಡಾಗಲೂ ಇಷ್ಟೇ ಸಂಭ್ರಮದಿಂದಲೇ ಅಭಿಮಾನಿಗಳು ಚಿತ್ರವನ್ನು ಬರಮಾಡಿಕೊಂಡಿದ್ದರು. ಇದನ್ನೂ ಓದಿ: ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

    ಈ ನಡುವೆ ಅಹಿತಕರ ಘಟನೆಯೊಂದು ನಡೆದಿದೆ. ಸಿನಿಮಾ ನೋಡುತ್ತಲೇ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ಸಹೋದರ ರಾಜು ಜೊತೆ ಲಕ್ಷ್ಮಿರೆಡ್ಡಿ ಶ್ರೀನು ಎಂಬಾತ ಬಂದಿದ್ದ. ಸಿನಿಮಾ ನೋಡುತ್ತಾ, ಮೈಮರೆತಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಕೂಡ ಆಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ತೀವ್ರ ರಕ್ತದೊತ್ತಡದ ನಂತರ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಅವತಾರ್ ಸಿನಿಮಾ ನೋಡುವ ವೇಳೆಯಲ್ಲಿ ಈ ರೀತಿಯ ಘಟನೆಗಳು ಹಿಂದೆಯೇ ನಡೆದಿವೆ. ಅವತಾರ್ ಮೊದಲ ಭಾಗ ಬಂದಾಗ ತೈವಾನ್ ನಲ್ಲಿಯೂ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದ. ಇದು ಕೇವಲ ಕಾಕತಾಳೀಯವಾದರೂ, ಪ್ರೇಕ್ಷಕರಲ್ಲಿ ಒಂದು ರೀತಿಯಲ್ಲಿ ಭಯ ಹುಟ್ಟಿಸಿದ್ದು ಸುಳ್ಳು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅವತಾರ್ ಸಿನಿಮಾ ರಿಲೀಸ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಅವತಾರ್ 2’ ಚಿತ್ರ ನೋಡುವಾಗ ಹೃದಯಾಘಾತ, ವ್ಯಕ್ತಿ ಸಾವು

    ‘ಅವತಾರ್ 2’ ಚಿತ್ರ ನೋಡುವಾಗ ಹೃದಯಾಘಾತ, ವ್ಯಕ್ತಿ ಸಾವು

    ಗತ್ತಿನಾದ್ಯಂತ ಜೇಮ್ಸ್ ಕ್ಯಾಮರಾನ್ ನಿರ್ದೇಶನದ ‘ಅವತಾರ್ : ದಿ ವೇ ಆಫ್ ವಾಟರ್’ ಸಿನಿಮಾ ರಿಲೀಸ್ ಆಗಿದೆ. ಬಿಡುಗಡೆಗೊಂಡು ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಪ್ರೇಕ್ಷಕರು ಭರ್ಜರಿಯಾಗಿಯೇ ಈ ಸಿನಿಮಾವನ್ನು ಸ್ವೀಕರಿಸುತ್ತಿದ್ದಾರೆ. ಈ ನಡುವೆ ಅಹಿತಕರ ಘಟನೆಯೊಂದು ನಡೆದಿದೆ. ಸಿನಿಮಾ ನೋಡುತ್ತಲೇ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

    ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ಸಹೋದರ ರಾಜು ಜೊತೆ ಲಕ್ಷ್ಮಿರೆಡ್ಡಿ ಶ್ರೀನು ಎಂಬಾತ ಬಂದಿದ್ದ. ಸಿನಿಮಾ ನೋಡುತ್ತಾ, ಮೈಮರೆತಿದ್ದ ಈ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಕೂಡ ಆಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ತೀವ್ರ ರಕ್ತದೊತ್ತಡದ ನಂತರ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್

    ಅವತಾರ್ ಸಿನಿಮಾ ನೋಡುವ ವೇಳೆಯಲ್ಲಿ ಈ ರೀತಿಯ ಘಟನೆಗಳು ಹಿಂದೆಯೇ ನಡೆದಿವೆ. ಅವತಾರ್ ಮೊದಲ ಭಾಗ ಬಂದಾಗ ತೈವಾನ್ ನಲ್ಲಿಯೂ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದ. ಇದು ಕೇವಲ ಕಾಕತಾಳೀಯವಾದರೂ, ಪ್ರೇಕ್ಷಕರಲ್ಲಿ ಒಂದು ರೀತಿಯಲ್ಲಿ ಭಯ ಹುಟ್ಟಿಸಿದ್ದು ಸುಳ್ಳು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅವತಾರ್ ಸಿನಿಮಾ ರಿಲೀಸ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಹಾಲಿವುಡ್‌ನ (Hollywood) ಬಹುನಿರೀಕ್ಷಿತ `ಅವತಾರ್ 2′ (Avatar 2) ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಅವತಾರ್ ಪಾರ್ಟ್ ಒನ್‌, 2009ರಲ್ಲಿ ಕಮಾಲ್ ಮಾಡಿತ್ತು. ಈಗ ಮತ್ತೆ `ಅವತಾರ್ 2′ ಮೂಲಕ ಮೋಡಿ ಮಾಡಲು ಸಜ್ಜಾಗಿದೆ. ಟಿಕೆಟ್‌ನ ದರ ದುಬಾರಿಯಾಗಿದ್ದರೂ ಕೂಡ 2 ಕೋಟಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

    ಜೇಮ್ಸ್ ಕ್ಯಾಮರಾನ್ ನಿರ್ದೇಶನದ `ಅವತಾರ್ 2′ (Avatar 2 Film) ರಿಲೀಸ್‌ಗೂ ಮುನ್ನವೇ ಚಿತ್ರದ ಮೇಲೆ ಸಿನಿರಸಿಕರಿಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 16ರಂದು ವಿಶ್ವಾದ್ಯಂತ ಏಕಕಾಲದಲ್ಲಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡ ಭಾಷೆಯಲ್ಲೂ ಸಿನಿಮಾ ತೆರೆಗೆ ಬರಲಿದೆ. ಇನ್ನೂ ಟಿಕೆಟ್ ದರ 1500 ರೂ. ಅಧಿಕ ಬೆಲೆ ಇದ್ದರೂ ಕೂಡ 2 ಕೋಟಿ ಟಿಕೆಟ್ಸ್ ಅಡ್ವಾನ್ಸ್ ಆಗಿ ಬುಕ್ ಆಗಿರೋದು ವಿಶೇಷ. ಇದನ್ನೂ ಓದಿ: ರೂಪೇಶ್ ಶೆಟ್ಟಿ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ಸಾನ್ಯ ಉತ್ತರವೇನು?

    ಸದ್ಯ ಈ ಚಿತ್ರದ ಟ್ರೈಲರ್, ಪೋಸ್ಟರ್ ಮೂಲಕ ಮೋಡಿ ಮಾಡಿದೆ. ಹಾಗಾಗಿ ʻಅವತಾರ್ 2ʼ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‌ʻಅವತಾರ್ʼ ಭಾಗ 1ಕ್ಕಿಂತ ಪಾರ್ಟ್ 2 ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]