ಟೈಟಾನಿಕ್ (Titanic) , ಅವತಾರ್ (Avatar) ಚಿತ್ರದ ನಿರ್ಮಾಪಕ ಜಾನ್ ಲ್ಯಾಂಡೌ (Jon Landau) 63ನೇ ವಯಸ್ಸಿಗೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ನಿರ್ಮಾಪಕ ವಿಧಿವಶರಾಗಿದ್ದಾರೆ. ಅವರ ನಿಧನದ ಕುರಿತು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಜೀವನದ ಆಧಾರಸ್ತಂಭ- ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪತ್ನಿ ಲವ್ಲಿ ವಿಶ್
ಹಾಲಿವುಡ್‌ನಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ಜಾನ್ ಲ್ಯಾಂಡೌ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್ ವಿರುದ್ಧ ಅವರು ಹೋರಾಡುತ್ತಿದ್ದರು. ಈಗ ಅವರ ನಿಧನದ ಸುದ್ದಿ ಕುಟುಂಬಕ್ಕೆ, ಆಪ್ತರಿಗೆ ಶಾಕ್ ಕೊಟ್ಟಿದೆ.
ಈಗ ಜಾನ್ ಲ್ಯಾಂಡೌ ನಿಧನದ ಸುದ್ದಿ ಕೇಳಿ ಹಾಲಿವುಡ್ (Hollywood) ಮಂದಿಗೆ ಆಘಾತವಾಗಿದೆ. ಅವರ ನಿಧನಕ್ಕೆ ಚಿತ್ರರಂಗದ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ `ಅವತಾರ್ 2′ (Avatar 2)ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ರಿಲೀಸ್ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಿರುವಾಗ ಸಿನಿಪ್ರೇಮಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರಮಂದಿರಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಮನೆಯಲ್ಲಿಯೇ ಕುಳಿತು ನೋಡುವ ಚಾನ್ಸ್ ಸಿಕ್ಕಿದೆ. ಒಟಿಟಿಗೆ `ಅವತಾರ್ 2′ ಅಬ್ಬರಿಸಲು ರೆಡಿಯಾಗಿದೆ.
ಕಳೆದ ವರ್ಷ ಡಿ.22ರಂದು `ಅವತಾರ್ 2′ ಸಿನಿಮಾ ವಿಶ್ವದೆಲ್ಲೆಡೆ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಒಟಿಟಿ ಮೂಲಕ ʻಅವತಾರ್ 2ʼ ಚಿತ್ರ ಲಗ್ಗೆ ಇಡುತ್ತಿದೆ. ಮಾ.28ರಂದು ವಿವಿಧ ಒಟಿಟಿಯಲ್ಲಿ (Ott) ತೆರೆ ಕಾಣುತ್ತಿದೆ. ಇದನ್ನೂ ಓದಿ: ಅವಳಿ ಮಕ್ಕಳೊಂದಿಗೆ ರಸ್ತೆಗಿಳಿದ ನಯನತಾರಾ ದಂಪತಿ
ಅದ್ಭುತ ದೃಶ್ಯ ವೈಭವ ಇರುವಂತಹ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಿದರೆ ಅದರ ಅನುಭವವೇ ಬೇರೆ. ಅಂಥ ಪ್ರಕಾರಕ್ಕೆ ಸೇರುವ ಸಿನಿಮಾ `ಅವತಾರ್ 2′ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಮೂಲಕ ನೋಡಬಹುದು. ಅಮೇಜಾನ್ ಪ್ರೈಂ (Amazon Prime) ಸೇರಿದಂತೆ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ.
ಜೇಮ್ಸ್ ಕ್ಯಾಮೆರಾನ್ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ. ಹಾಗಾಗಿ ʻಅವತಾರ್ 2ʼ ಚಿತ್ರ ಒಟಿಟಿ ಎಂಟ್ರಿಗೆ ಫ್ಯಾನ್ಸ್ ಕಾಯ್ತಿದ್ದಾರೆ.
ಜಗತ್ತಿನ ಅತ್ಯುತ್ತಮ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ‘ಅವತಾರ್’ (Avatar) ಖ್ಯಾತಿಯ ಜೇಮ್ಸ್ ಕ್ಯಾಮರೂನ್ (James Cameron). ಇವರನ್ನು ಜಗತ್ತಿನ ಸಿನಿಮಾ ರಂಗ ವಿಶ್ವವಿದ್ಯಾಲಯ ಎಂದೇ ಕರೆಯುತ್ತದೆ. ಇವರು ಮಾಡಿದ ಸಿನಿಮಾಗಳಿಗೆ ಜನರು ಯಾವತ್ತಿಗೂ ಮನ್ನಣೆ ಕೊಡುತ್ತಲೇ ಬಂದಿದ್ದಾರೆ. ಅತೀ ಹೆಚ್ಚು ಬಜೆಟ್ ನಲ್ಲಿ ಇವರ ಚಿತ್ರಗಳು ನಿರ್ಮಾಣವಾಗುತ್ತದೆ. ಲಾಭವನ್ನೂ ಹಾಗೆಯೇ ತಂದುಕೊಡುತ್ತವೆ. ಇಂತಹ ಮಹಾನ್ ನಿರ್ದೇಶಕರು, ರಾಜಮೌಳಿ (Rajamouli) ನಿರ್ದೇಶನದ ಆರ್.ಆರ್.ಆರ್ (RRR) ಸಿನಿಮಾವನ್ನು ಎರಡು ಬಾರಿ ನೋಡಿದ್ದಾರಂತೆ.
ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಕೂಡ ಶೇರ್ ಮಾಡಿದ್ದಾರೆ. ‘ಆರ್.ಆರ್.ಆರ್ ಸಿನಿಮಾವನ್ನು ತಾವು ಎರಡು ಬಾರಿ ನೋಡಿದ್ದಲ್ಲೇ, ತಮ್ಮ ಪತ್ನಿಗೂ ನೋಡುವಂತೆ ಸಲಹೆ ನೀಡಿದ್ದು, ನನಗೆ ಸಿಕ್ಕ ಮಹಾನ್ ಗೌರವ. ಹತ್ತು ನಿಮಷಗಳ ಕಾಲ ಸಿನಿಮಾ ಬಗ್ಗೆ ವಿಶ್ಲೇಷಿಸಿದ್ದನ್ನು ನಾನು ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ರಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?
ಜಗತ್ತಿನ ಅತ್ಯುತ್ತಮ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು ಎಂದು ಜೇಮ್ಸ್ ಕ್ಯಾಮರೂನ್ ಗುಣಗಾನ ಮಾಡಿದ್ದಾರಂತೆ. ಈ ಮಾತು ರಾಜಮೌಳಿ ಅವರಲ್ಲಿ ಮತ್ತಷ್ಟ ಸಂಭ್ರಮ ತಂದಿದೆ. ‘ನಿಮ್ಮೊಂದಿಗೆ ನಾನೂ ಇದ್ದೇನೆ ಎನ್ನುವುದೇ ಖುಷಿ. ಇಬ್ಬರಿಗೂ ಧನ್ಯವಾದಗಳು ಎಂದು ರಾಜಮೌಳಿ ಅವರು ಫೋಟೋ ಜೊತೆ ಬರೆದುಕೊಂಡಿದ್ದಾರೆ. ಆ ಕ್ಷಣವನ್ನು ಇನ್ನೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಭಾವನೆಯನ್ನು ಇವರು ಹಂಚಿಕೊಂಡಿದ್ದಾರೆ. ಇಂಥದ್ದೊಂದು ಅವಕಾಶ ಸಿಕ್ಕಿದ್ದು ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಎನ್ನುವ ಮಾಹಿತಿಯನ್ನೂ ರಾಜಮೌಳಿ ಹಂಚಿಕೊಂಡಿದ್ದಾರೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಮೌಳಿ ಅವರು ಮತ್ತೋರ್ವ ಹೆಸರಾಂತ ನಿರ್ದೇಶಕ ಸ್ಟೀಲ್ ಬರ್ಗ್ (Steelberg) ಅವರನ್ನು ಭೇಟಿ ಮಾಡಿದ್ದರು. ದೇವರನ್ನೇ ನಾನು ನೋಡಿದೆ ಎಂದು ಅವರು ಬರೆದುಕೊಂಡಿದ್ದರು. ಒಂದೇ ವಾರದಲ್ಲಿ ಇಬ್ಬರು ಖ್ಯಾತ ನಿರ್ದೇಶಕರನ್ನು ಭೇಟಿ ಮಾಡುವ ಮೂಲಕ ರಾಜಮೌಳಿ ಡಬಲ್ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿರುವ ಹಾಲಿವುಡ್ ‘ಅವತಾರ್’ ಸಿನಿಮಾದ ಸೀಕ್ವೆಲ್ ಇದೇ ಡಿಸೆಂಬರ್ ನಲ್ಲಿ ತೆರೆ ಕಾಣುತ್ತಿದೆ. ಮೊನ್ನೆಯಷ್ಟೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅತೀ ನಿರೀಕ್ಷೆಯಿಂದ ಕಾಯುತ್ತಿದ್ದ ನೋಡುಗರ ಕಣ್ಣುಗಳನ್ನು ಅವತಾರ್ ದೃಶ್ಯ ವೈಭವ ಮತ್ತಷ್ಟು ರಂಗಾಗಿಸಿದೆ.
2009ರಲ್ಲಿ ಅವತಾರ್ ಮೊದಲ ಭಾಗ ರಿಲೀಸ್ ಆಗಿತ್ತು. ದೊಡ್ಡಮಟ್ಟದಲ್ಲಿ ಆ ಸಿನಿಮಾ ಸಕ್ಸಸ್ ಆಗಿತ್ತು. ಈವರೆಗೂ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾದಷ್ಟು ಯಾವ ಚಿತ್ರವೂ ಕಲೆಕ್ಷನ್ ಆಗಿಲ್ಲ ಎನ್ನುವ ದಾಖಲೆ ಮಾಡುವಷ್ಟು ಹಣ ತಂದುಕೊಟ್ಟಿತ್ತು. ಅವತಾರ್ ಸೀಕ್ವೆಲ್ ಕೂಡ ಅದೇ ಹಾದಿಯನ್ನೇ ಹಿಡಿಯಲಿದೆ ಎನ್ನುತ್ತಿದೆ ಟ್ರೈಲರ್. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
ಈಗ ಬರುತ್ತಿರುವ ಅವತಾರ್ ಸಿನಿಮಾಗೆ ‘ದಿ ವೇ ಆಫ್ ವಾಟರ್’ ಟ್ಯಾಗ್ ಲೈನ್ ಕೊಟ್ಟಿದ್ದು, ಬಹುತೇಕ ಸಿನಿಮಾ ನೀರಿನ ಬ್ಯಾಕ್ ಡ್ರಾಪ್ ನಲ್ಲೇ ಮೂಡಿ ಬಂದಿದೆ ಎನ್ನುವಂತಿದೆ ಬಿಡುಗಡೆಗೊಂಡ ಟ್ರೈಲರ್. 3ಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಮತ್ತೊಂದು ಖುಷಿಯ ಸಂಗತಿ ಎಂದರೆ, ಈ ಬಾರಿ ಅವತಾರ್ ಚಿತ್ರವನ್ನು ಕನ್ನಡದಲ್ಲೂ ನೋಡಬಹುದು ಎಂದಿದೆ ಚಿತ್ರತಂಡ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ಬರೋಬ್ಬರಿ 13 ವರ್ಷಗಳ ಬಳಿಕ ಅವತಾರ್ ಸರಣಿ ಮೂಡಿ ಬಂದಿದ್ದು, ಪ್ರೇಕ್ಷಕರು ಈಗಿನಿಂದಲೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಒಟ್ಟು ಐದು ಸರಣಿಯಲ್ಲಿ ಈ ಸಿನಿಮಾ ತಯಾರಾಗಲಿದ್ದು, ಎರಡನೇ ಭಾಗ 2022 ಡಿಸೆಂಬರ್ ನಲ್ಲಿ ಬಂದರೆ, 3ನೇ ಸರಣಿ 2024 ಡಿಸೆಂಬರ್ ನಲ್ಲಿ, 4ನೇ ಸರಣಿ 2026 ಡಿಸೆಂಬರ್ ಹಾಗೂ 5ನೇ ಸರಣಿಯು 2028 ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
ಸಾರ್ವಕಾಲಿಕ ಅತೀ ಹೆಚ್ಚು ಹಣ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾದಲ್ಲಿ ಸ್ಯಾಂಮ್ ವರ್ಥಿಂಗ್ಟನ್, ಜೋಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.