Tag: Avani Lekhara

  • Paralympics 2024 | ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ

    Paralympics 2024 | ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ

    ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ (Paralympic) ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ‌ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.

    ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ (Avani Lekhara) ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

    ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.

    ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.

  • Paris 2024 Paralympics | ಭಾರತಕ್ಕೆ ಡಬಲ್‌ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್‌

    Paris 2024 Paralympics | ಭಾರತಕ್ಕೆ ಡಬಲ್‌ ಧಮಾಕ – ಚಿನ್ನ, ಕಂಚಿನ ಪದಕಕ್ಕೆ ಗುರಿಯಿಟ್ಟ ಶೂಟರ್ಸ್‌

    ಪ್ಯಾರಿಸ್‌: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ (Paris 2024 Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. ಕ್ರೀಡಾಕೂಟ ಆರಂಭವಾದ 2ನೇ ದಿನವೇ ಭಾರತ ಒಂದೇ ಸ್ಪರ್ಧೆಯಲ್ಲಿ 2 ಪದಕಗಳನ್ನು ಗೆದ್ದು ಬೀಗಿದೆ.

    ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಹೆಚ್‌1 (10m Air Rifle Standing SH1) ವಿಭಾಗದ ಫೈನಲ್‌ನಲ್ಲಿ ಶೂಟರ್‌ ಅವನಿ ಲೆಖರಾ (Avani Lekhara) ಚಿನ್ನದ ಪದಕ ಗೆದ್ದು ಬೀಗಿದರೆ, ಮೋನಾ ಅಗರ್ವಾಲ್‌ (Mona Agarwal) ಕಂಚಿನ ಪದಕಕ್ಕೆ ಗುರಿಯಿಟ್ಟರು. ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವನಿ ಇದೀಗ ಮತ್ತೊಂದು ಚಿನ್ನದ ಪದಕದೊಂದಿಗೆ ದಾಖಲೆ ಬರೆದಿದ್ದಾರೆ.

    ಅವನಿ 249.7 ಅಂಕ ಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಮೋನಾ ಅಗರ್ವಾಲ್‌ 228.7 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

    ಇನ್ನೂ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ವಿಭಾಗದ 3ನೇ ಗುಂಪಿನ ಎ ಪಂದ್ಯದಲ್ಲಿ ಷಟ್ಲರ್ ನಿತೇಶ್ ಕುಮಾರ್, ನೇರ ಸುತ್ತಿನಲ್ಲಿ ಚೀನಾದ ಯಾಂಗ್ ಜಿಯಾನ್ಯುವಾನ್ ಅವರನ್ನ ಸೋಲಿಸಿ ಸೆಮಿಸ್‌ಗೆ ಲಗ್ಗೆಯಿಟ್ಟರು.

  • ಶೂಟಿಂಗ್‍ನಲ್ಲಿ ವಿಶ್ವದಾಖಲೆ- ಚಿನ್ನ ಗೆದ್ದ ಅವನಿ ಲೇಖರ

    ಶೂಟಿಂಗ್‍ನಲ್ಲಿ ವಿಶ್ವದಾಖಲೆ- ಚಿನ್ನ ಗೆದ್ದ ಅವನಿ ಲೇಖರ

    ಪ್ಯಾರೀಸ್‌: ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಪ್ಯಾರಾ ಶೂಟಿಂಗ್ ವಿಶ್ವಕಪ್‍ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ತನ್ನ ದಾಖಲೆಯನ್ನೇ ಮುರಿದು ನೂತನ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

    ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪ್ಯಾರಾ ಶೂಟಿಂಗ್‍ನ ಮಹಿಳೆಯರ 10 ಮೀ. ಏರ್‌ರೈಫಲ್‍ನಲ್ಲಿ ಸ್ಪರ್ಧಿಸಿದ್ದ ಅವನಿ ಲೇಖರಾ 250.6 ಅಂಕಗಳಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂಲಕ ತಾನೇ ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಇದರ ಜೊತೆಗೆ 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡರು.

    ಟೂರ್ನಿಯಲ್ಲಿ 247.6 ಸ್ಕೋರ್ ಮಾಡಿದ ಪೋಲೆಂಡ್‍ನ ಎಮಿಲಿಯಾ ಬಬ್‍ಸ್ಕಾ ಬೆಳ್ಳಿ ತನ್ನದಾಗಿಸಿಕೊಂಡಿದ್ದು, ಸ್ವೀಡನ್‍ನ ಅನ್ನಾ ನಾರ್ಮನ್ (225.6) ಕಂಚು ಗೆದ್ದಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಪ್‍ನಲ್ಲಿ ಅವನಿಯ ಕೋಚ್‍ಗೆ ವೀಸಾ ನಿರಾಕರಿಸಲಾಗಿತ್ತು. ಇದರಿಂದಾಗಿ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ, ಗೊಂದಲ ಬಗೆಹರಿಸಿತ್ತು. ಇದನ್ನೂ ಓದಿ: ಧೋನಿಯಿಂದ ತಾನು ಕಲಿತದ್ದನ್ನು ರಿವೀಲ್ ಮಾಡಿದ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್

    ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಇವರಿಗೆ ಒಲಿದಿತ್ತು.

  • ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಟೋಕಿಯೋ: ಪ್ಯಾರಾಲಂಪಿಕ್ಸ್ ಮಹಿಳಾ ವಿಭಾಗದ 50 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಒಂದೇ ಪ್ಯಾರಾಲಂಪಿಕ್ಸ್ ಕ್ರೀಡಾಕೂಟದಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಈ ಮೊದಲು ಅವನಿ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ 50 ಮೀಟರ್ ಏರ್ ರೈಫಲ್ ಶೂಟಿಂಗ್ ಫೈನಲ್‍ನಲ್ಲಿ ಒಟ್ಟು 445.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡು, ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಇಂದು ಬೆಳಗ್ಗೆ ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್‌ಗೆ ಮೋದಿ ವಿಶ್

    ಪ್ರಧಾನಿ ಅಭಿನಂದನೆ
    ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೈಜಂಪ್ ಮತ್ತು ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಪ್ರವೀಣ್ ಕುಮಾರ್ ಮತ್ತು ಅವನಿ ಲೇಖರಾ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಪ್ಯಾರಾಲಿಂಪಿಕ್ಸ್ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಪ್ರವೀಣ್ ಕುಮಾರ್ ಮತ್ತು ಅವನಿ ಲೇಖರಾ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಪದಕವು ಅವರ ಕಠಿಣ ಪರಿಶ್ರಮ ಮತ್ತು ಸಾಟಿಯಿಲ್ಲದ ಸಮರ್ಪಣೆಯ ಫಲವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ. ಇದನ್ನೂ ಓದಿ: ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

  • ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

    ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

    ಟೋಕಿಯೋ: ಪ್ಯಾರಾಲಂಪಿಕ್ಸ್ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್‍ನಲ್ಲಿ ಭಾರತದ ಅವನಿ ಲೇಖರಾ ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ – ಇತಿಹಾಸ ನಿರ್ಮಿಸಿದ ಭವಿನಾಬೆನ್ ಪಟೇಲ್

    ಅವನಿ ಲೇಖರಾ 100ಮೀಟರ್ ಏರ್ ರೈಫಲ್ ಶೂಟಿಂಗ್ ಫೈನಲ್‍ನಲ್ಲಿ 249.6 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದಲ್ಲದೆ ವಿಶ್ವದಾಖಲೆ ಸರಿದೂಗಿಸಿದ್ದಾರೆ. ಇದನ್ನೂ ಓದಿ: ಡಿಸ್ಕಸ್ ಥ್ರೋ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

    ಅವನಿ ಲೇಖರಾ ಈ ಮೊದಲು 617.7 ಅಂಕಗಳೊಂದಿಗೆ 7ನೇ ಸ್ಪರ್ಧಿಯಾಗಿ ಫೈನಲ್‍ಗೆ ಲಗ್ಗೆ ಇಟ್ಟಿದ್ದರು. ಇವರ ಚಿನ್ನದ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಂತಾಗಿದೆ. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    ಭಾರತದ ಭಾವಿನಬೆನ್ ಪಟೇಲ್ ಅವರು ಭಾನುವಾರ ಟೇಬಲ್ ಟೆನಿಸ್ (ಟಿಟಿ) ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.