Tag: av arun prasad

  • ಮೊದಲ ಸಿನಿಮಾ ರಿಲೀಸ್‍ಗೂ ಮುನ್ನವೇ ಅಪಘಾತದಲ್ಲಿ ಯುವ ನಿರ್ದೇಶಕ ಸಾವು

    ಮೊದಲ ಸಿನಿಮಾ ರಿಲೀಸ್‍ಗೂ ಮುನ್ನವೇ ಅಪಘಾತದಲ್ಲಿ ಯುವ ನಿರ್ದೇಶಕ ಸಾವು

    – ಸಂತಾಪ ಸೂಚಿಸಿದ ಚಿತ್ರರಂಗ

    ಚೆನ್ನೈ: ರಸ್ತೆ ಅಪಘಾತದಲ್ಲಿ ತಮಿಳಿನ ಯುವ ನಿರ್ದೇಶಕರೊಬ್ಬರು ಕೊಯಮತ್ತೂರಿನ ಮೆಟ್ಟುಪಾಳ್ಯಂ ಸಮೀಪ ಮೃತಪಟ್ಟಿದ್ದಾರೆ.

    ಎ.ವಿ.ಅರುಣ್ ಪ್ರಸಾದ್ ಅಲಿಯಾಸ್ ವೆಂಕಟ್ ಪಕ್ಕರ್ ಮೃತ ಯುವ ನಿರ್ದೇಶಕ. ಪ್ರಸಾದ್ ಅವರು ಬೈಕಿನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಸಾದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ಪ್ರಸಾದ್ ಖ್ಯಾತ ನಿರ್ದೇಶಕ ಶಂಕರ್ ಅವರ ಬಳಿ ವೆಂಕಟ್ ಪಕ್ಕರ್ ಎಂಬ ಹೆಸರಿನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವಿಕ್ರಮ್ ಅಭಿನಯದ ‘ಐ’ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಹೀಗಾಗಿ ನಿರ್ದೇಶಕ ಶಂಕರ್ ಪ್ರಸಾದ್ ಸಾವಿಗೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    https://twitter.com/manobalam/status/1261212312549163009

    “ಯುವ ನಿರ್ದೇಶಕ ಮತ್ತು ನನ್ನ ಮಾಜಿ ಸಹಾಯಕ ಅರುಣ್ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ನೋವಾಯಿತು. ನೀವು ಯಾವಾಗಲು ಸಿಹಿಯಾದ, ಸಕಾರಾತ್ಮಕ ಮತ್ತು ಕಠಿಣ ಪರಿಶ್ರಮಿಯಾಗಿದ್ದಿರಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.

    ‘4ಜಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪ್ರಸಾದ್ ಪರಿಚಿತರಾಗುತ್ತಿದ್ದರು. ಈ ಚಿತ್ರದಲ್ಲಿ ಜಿ.ವಿ. ಪ್ರಕಾಶ್ ಮತ್ತು ಗಾಯತ್ರಿ ಸುರೇಶ್ ಪ್ರಮುಖ ತಾರಾಗಣ ಅಭಿನಯಿಸಿದ್ದಾರೆ. ಆದರೆ ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಸಿನಿಮಾ ತೆರೆಕಾಣುವ ಮೊದಲೇ ಅರುಣ್ ಮೃತಪಟ್ಟಿದ್ದಾರೆ.

    ಯುವ ನಿರ್ದೇಶಕನ ಸಾವಿನ ಸುದ್ದಿ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ. ನಟ ಜಿ.ವಿ. ಪ್ರಕಾಶ್, ಖ್ಯಾತ ಹಾಸ್ಯ ನಟ ಮನೋಬಲ ಸಹ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.