Tag: Automobiles

  • 3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ

    3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ

    – ಮೆಕ್ಸಿಕೊಗೆ ಸಾಗುತ್ತಿದ್ದ ಶಿಪ್‌ – 3 ಸಾವಿರದಲ್ಲಿ 800 ಎಲೆಕ್ಟ್ರಿಕ್‌ ವಾಹನಗಳು

    ಮೆಕ್ಸಿಕೋ: 3,000 ಕಾರುಗಳನ್ನು ಮೆಕ್ಸಿಕೋಗೆ ಸಾಗಿಸುತ್ತಿದ್ದ ಕಾರ್ಗೋ ಶಿಪ್‌ (ಸರಕು ಸಾಗಣೆ ಹಡಗು – Cargo Ship) ಉತ್ತರ ಪೆಸಿಫಿಕ್ ಸಾಗರದಲ್ಲಿ (Pacific Ocean) ಮುಳುಗಡೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಂಡ ಕೆಲವು ವಾರಗಳ ನಂತರ ಈ ಘಟನೆ ನಡೆದಿದೆ.

    ʻಮಾರ್ನಿಂಗ್ ಮಿಡಾಸ್ʼ (Morning Midas) ಹೆಸರಿನ ಸುಮಾರು 600 ಅಡಿ ಉದ್ದದ ಕಾರ್ಗೋ ಶಿಪ್‌ ಹಡಗು ನಿರ್ವಹಣಾ ಕಂಪನಿ ಲಂಡನ್​​ನ ಜೋಡಿಯಾಕ್ ಮ್ಯಾರಿಟೈಮ್ ನಿರ್ವಹಣೆ ಮಾಡುತ್ತಿತ್ತು. ಹೊಸ ಕಾರುಗಳನ್ನು ಅಲಾಸ್ಕಾದ ಅಡಕ್ ದ್ವೀಪದಿಂದ ಹೊತ್ತು ಮೆಕ್ಸಿಕೋದ ಬಂದರಿಗೆ ಸಾಗುತ್ತಿತ್ತು. ಭೂಪ್ರದೇಶದಿಂದ 300 ಮೈಲುಗಳು (490 ಕಿ.ಮೀ) ದೂರದಲ್ಲಿ ಸಾಗುತ್ತಿದ್ದಾಗ, ಜೂನ್ 3 ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್

    ತಕ್ಷಣವೇ ಈ ಬಗ್ಗೆ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್​ ಗಾರ್ಡ್​ಗೆ ಮಾಹಿತಿ ರವಾನಿಸಿದ್ದರು. ಪ್ರತಿಕೂಲ ಹವಾಮಾನ ಮತ್ತು ನೀರು ಸೋರಿಕೆಯಾದ ಕಾರಣ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಳೆದೊಂದು ವಾರದಿಂದ ಬೆಂಕಿಯಲ್ಲಿ ಉರಿಯುತ್ತಲೇ ಹಡಗು ದಡದತ್ತ ಸಾಗಿ ಬಂದಿದೆ. ಹೀಗಾಗಿ ಹಡಗು ಸಮೇತ 800 ಎಲೆಕ್ಟ್ರಿಕ್‌ ವಾಹನಗಳೊಂದಿಗೆ ತುಂಬಿದ್ದ 3,000 ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದನ್ನೂ ಓದಿ: ಅಭಿನಂದನ್‌ ವರ್ಧಮಾನ್‌ ಸೆರೆಹಿಡಿದಿದ್ದವ ಎನ್‌ಕೌಂಟರ್‌ನಲ್ಲಿ ಹತ್ಯೆ

    ರಕ್ಷಣೆಗೆ ಎರಡು ಹಡಗು ರವಾನೆ:
    ಲಂಡನ್​​ನ ಜೋಡಿಯಾಕ್ ಮ್ಯಾರಿಟೈಮ್ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಹಾನಿಗೀಡಾದ ಹಡಗಿನ ರಕ್ಷಣೆಗೆ ಎರಡು ಹಡಗನ್ನು ರವಾನಿಸಲಾಗಿತ್ತು. ಆದ್ರೆ, ಕೆಟ್ಟ ಹವಾಮಾನದಿಂದಾಗಿ ರಕ್ಷಣೆ ಸಾಧ್ಯವಾಗಿಲ್ಲ. ಸುಮಾರು 16,404 ಅಡಿ (5,000 ಮೀ) ಆಳ ಪ್ರದೇಶದಲ್ಲಿ ಭೂಮಿಯಿಂದ 415 ಮೈಲುಗಳು (770 ಕಿಲೋಮೀಟರ್) ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

  • ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    ಬೆಂಗಳೂರಿನ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

    – ಅಲ್ಟ್ರಾವೈಲೆಟ್ ಕಂಪನಿಯಿಂದ ಸ್ಫೋರ್ಟ್ಸ್ ಬೈಕ್
    – ಒಂದು ಬಾರಿ ಚಾರ್ಜ್ ಮಾಡಿದ್ರೆ 140 ಕಿ.ಮೀ ಸಂಚರಿಸುತ್ತೆ

    ಬೆಂಗಳೂರು: ಎಲೆಕ್ಟ್ರಿಕ್ ಬೈಕ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಈಗ ಬೆಂಗಳೂರು ಮೂಲದ ಕಂಪನಿಯೊಂದು ಸ್ಫೋರ್ಟ್ಸ್ ಬೈಕನ್ನು ಬಿಡುಗಡೆ ಮಾಡಿದೆ.

    ಅಲ್ಟ್ರಾವೈಲೆಟ್ ಕಂಪನಿ ಎಫ್777 ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಏರ್ ಕೂಲ್ಡ್ ಬ್ರಷ್‍ಲೆಸ್ ಡಿಸಿ(ಬಿಎಲ್‍ಡಿಸಿ) ಮೋಟಾರ್ ಹೊಂದಿರುವ ಬೈಕ್ 25 ಕಿಲೋ ವ್ಯಾಟ್ (33.5 ಬಿಎಚ್‍ಪಿ) ಸಾಮರ್ಥ್ಯ 450 ಎನ್‍ಎಂ ಟಾರ್ಕ್ ಹೊಂದಿದ್ದು ಆನ್ ರೋಡ್ 3 ಲಕ್ಷ ರೂ. ದರವನ್ನು ನಿಗದಿ ಪಡಿಸಿದೆ.

    ಗಂಟೆಗೆ 147 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಬೈಕ್ ಹೊಂದಿರುವುದು ವಿಶೇಷ. 0-60 ಕಿ.ಮೀ ವೇಗವನ್ನು 2.9 ಸೆಕೆಂಡಿನಲ್ಲಿ, 0-100 ಕಿ.ಮೀ ವೇಗವನ್ನು 7.5 ಸೆಕೆಂಡಿನಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ತಿಳಿಸಿದೆ. ಬುಧವಾರದಿಂದಲೇ ಬುಕ್ಕಿಂಗ್ ಅವಕಾಶ ಆರಂಭಿಸಿದ್ದು 2020ರ ಮೂರನೇ ತ್ರೈಮಾಸಿಕದಲ್ಲಿ ಬೈಕ್ ಗ್ರಾಹಕರಿಗೆ ಸಿಗಲಿದೆ.

     

    ಮೂರು ಸ್ಲಿಮ್ ಮತ್ತು ಮಾಡ್ಯುಲರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ 130-140 ಕಿ.ಮೀ ಸಂಚರಿಸಬಹುದು ಎಂದು ಹೇಳಿಕೊಂಡಿದೆ. ಸ್ಟಾಂಡರ್ಡ್ ಚಾರ್ಜರ್ ಬಳಸಿದರೆ ಪೂರ್ಣವಾಗಿ ಚಾರ್ಜ್ ಆಗಲು 5 ಗಂಟೆ ಬೇಕು. ಪೋರ್ಟೆಬಲ್ ಫಾಸ್ಟ್ ಚಾರ್ಜರ್ ಬಳಸಿದರೆ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆದರೆ 90 ನಿಮಿಷದಲ್ಲಿ ಪೂರ್ಣವಾಗಿ 8.5 ಕೆಜಿ ತೂಕದ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.

    ಡ್ಯುಯಲ್ ಎಬಿಎಸ್, ಫುಲ್ ಕಲರ್ ಟಿಎಫ್‍ಟಿ ಸ್ಕ್ರೀನ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಏರ್ ಅಪ್‍ಡೇಟ್ ಮಾಡಲು ಅಪ್ಲಿಕೇಶನ್, ಬೈಕ್ ಲೊಕೇಟರ್, ರೈಡ್ ಅನಾಲಿಸಿಸ್, ಸ್ಪೀಡ್ ಲಿಮಿಟ್ ಗಳೊಂದಿಗೆ ಈ ಬೈಕ್ ಬಿಡುಗಡೆಯಾಗಿದೆ.

    ಬೆಂಗಳೂರಿನ ಬಿಎಂಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿರಾಜ್ ರಾಜ್‍ಮೋಹನ್ ಮತ್ತು ನಾರಾಯಣ್ ಸುಬ್ರಮಣಿಯನ್ ಅವರು 2015ರಲ್ಲಿ ಅಲ್ಟ್ರಾವೈಲೆಟ್ ಕಂಪನಿಯನ್ನು ಆರಂಭಿಸಿದ್ದಾರೆ. ದೇಶದ ಪ್ರಸಿದ್ಧ ದ್ವಿಚಕ್ರ ವಾಹನ ಕಂಪನಿ ಟಿವಿಎಸ್ 11 ಕೋಟಿ ರೂ. ಹೂಡಿಕೆ ಮಾಡಿ ಕಂಪನಿಯಲ್ಲಿ ಶೇ.25.76 ಪಾಲನ್ನು ಪಡೆದುಕೊಂಡಿದ್ದಾರೆ.