Tag: Autograph

  • ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬಿಗ್ ಬಾಸ್ ಬೆಡಗಿ

    ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬಿಗ್ ಬಾಸ್ ಬೆಡಗಿ

    ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಂದ ಆಟೋಗ್ರಾಫ್ ಪಡೆದುಕೊಳ್ಳುವುದು ಸಾಮನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಆಟೋಗ್ರಾಫ್ ಮರೀಚಿಕೆಯಾಗಿದ್ದು, ಸ್ಟಾರ್ ಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಟ್ರೆಂಡ್ ಆಗಿದೆ. ಕೆಲ ಅಭಿಮಾನಿಗಳು ಬುಕ್, ಕೈ ಅಥವಾ ತಮ್ಮ ನೆಚ್ಚಿನ ವಸ್ತುಗಳ ಮೇಲೆ ಸಹಿ ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಆಲೂಗಡ್ಡೆ ಮೇಲೆ ನೆಚ್ಚಿನ ನಟಿಯ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.

    ರಿಯಾಲಿಟಿ ಶೋ `ಬಿಗ್ ಬಾಸ್’ ಐದನೇ ಆವೃತ್ತಿಯ ಸ್ಪರ್ಧಿ ಶೃತಿ ಪ್ರಕಾಶ್ ಅವರು ಅಭಿಮಾನಿಯೊಬ್ಬರಿಗೆ ಆಲೂಗಡ್ಡೆ ಮೇಲೆ ತಮ್ಮ ಆಟೋಗ್ರಾಫ್ ಕೊಟ್ಟಿದ್ದಾರೆ.

    ಇತ್ತೀಚೆಗೆ ಶೃತಿ ಪ್ರಕಾಶ್ ಸಿನಿಮಾ ಶೂಟಿಂಗ್ ಅಂತ ಲಂಡನ್ ಹೋಗಿದ್ದರು. ಅಲ್ಲಿ ಸುಂದರವಾದ ಬುರ್ಟನ್ ಸ್ಥಳದಲ್ಲಿ ‘ಲಂಡನ್ ನಲ್ಲಿ ಲಂಬೋದರ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಿಂಗ್ಸ್ ಬ್ರೈಡ್ ಇನ್ ಹೋಟೆಲ್ ಮಾಲೀಕ ಶೃತಿ ಪ್ರಕಾಶ್ ಕೈಗೆ ಆಲೂಗಡ್ಡೆ ನೀಡಿ ಆಟೋಗ್ರಾಫ್ ಕೇಳಿದ್ದಾರೆ. ಬಳಿಕ ಶೃತಿ ಅಭಿಮಾನಿಯ ಇಚ್ಛೆಯಂತೆಯೇ ಆಲೂಗಡ್ಡೆ ಮೇಲೆಯೇ ತಮ್ಮ ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ.

    ಆಲೂಗಡ್ಡೆ ಯಾಕೆ?:
    ಹೋಟೆಲ್ ಮಾಲೀಕರು ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು, ಗಣ್ಯ ವ್ಯಕ್ತಿಗಳ ಬಳಿ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಈಗ ನಟಿ ಶೃತಿ ಅವರ ಬಳಿಯೂ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.

    ಈ ಎಲ್ಲ ಸುಂದರ ಕ್ಷಣಗಳನ್ನು ಮೊಬೈಲ್ ಸೆರೆಹಿಡಿದಿರುವ ಶೃತಿ ಪ್ರಕಾಶ್ ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ವಿಡಿಯೋ ಹಾಕಿ, ಬಹಳ ಚೆನ್ನಾಗಿ ಅನ್ನಿಸಿತು ಎಂದು ಸಂತಸದಿಂದ ಬರೆದುಕೊಂಡಿದ್ದಾರೆ.

    `ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ನವ ನಾಯಕ ಸಂತೋಷ್ ಜೊತೆ ಶೃತಿ ಹೀರೋಯಿನ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ಚಿತ್ರ ರಾಜ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಮೊದಲು ರಾಜ್ ಸೂರ್ಯ ಚಮಕ್ ಹಾಗೂ ಇನ್ನು ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈ ಮಾಸ್ಟರ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

    https://www.instagram.com/p/BlF1R_3AKC9/?hl=en&taken-by=shrutiprakash

  • ಆಡಿ ಕ್ಯೂ 7 ನಲ್ಲಿ ಮೂಡಿತು ದರ್ಶನ್ ಆಟೋಗ್ರಾಫ್!

    ಆಡಿ ಕ್ಯೂ 7 ನಲ್ಲಿ ಮೂಡಿತು ದರ್ಶನ್ ಆಟೋಗ್ರಾಫ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಅಭಿಮಾನಿಗಳ ಆಟೋ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದರು. ಆದರೆ ಈಗ ದರ್ಶನ್ ಅಭಿಮಾನಿಯೊಬ್ಬರ ಆಡಿ ಕ್ಯೂ 7 ಕಾರಿನ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ.

    ಅಭಿಮಾನಿಗಳು ತಾವು ಖರೀದಿಸಿದ ಕಾರಿನ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಅಂತೆಯೇ ದರ್ಶನ್ ಅವರ ಅಭಿಮಾನಿಯೊಬ್ಬರು ಆಡಿ ಕ್ಯೂ 7 ಕಾರನ್ನು ಖರೀದಿ ಮಾಡಿ ಅದಕ್ಕೆ ದರ್ಶನ್ ಅವರ ಆಟೋಗ್ರಾಫ್ ಪಡೆಯಬೇಕೆಂದುಕೊಂಡಿದ್ದರು. ದರ್ಶನ್ ಕೂಡ ಇದೀಗ ಆ ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯ ಆಡಿ ಕಾರ್ ಮೇಲೆ ದರ್ಶನ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ.

    ಈ ಹಿಂದೆ ಅಭಿಮಾನಿಯೊಬ್ಬರು ವಾಹನದಲ್ಲಿ ದರ್ಶನ್ ಇರೋದು ನೋಡಿ ತಮ್ಮ ಗಾಡಿ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಆಗ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

    ಸದ್ಯ ದರ್ಶನ್ ಅವರಿಗೆ ಈಗ ‘ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್’ ಬಿರುದು ಸಿಕ್ಕಿದೆ. ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್ ಎಂದರೆ `ಸ್ಯಾಂಡಲ್‍ವುಡ್ ರಾಜಪ್ರಭುತ್ವದ ಸಾರ್ವಭೌಮ’ ಎಂಬ ಅರ್ಥ ಎಂದು ಹೇಳಲಾಗಿದೆ. ದರ್ಶನ್ ಅವರ `ಡಿ ಲಿಗಸ್ಸಿ’ ಅಭಿಮಾನಿಗಳ ತಂಡ ಈ ಬಿರುದನ್ನು ನೀಡಿದೆ.

  • ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

    ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ 2 ದಿನಗಳಿಂದ ಆಟೋಗಳು ಸಾಲುಸಾಲಾಗಿ ನಿಂತಿವೆ. ದರ್ಶನ್ ಅವರನ್ನು ಭೇಟಿ ಮಾಡಲು ಚಾಲಕರು ತಮ್ಮ ಆಟೋ ಸಮೇತ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

    ದರ್ಶನ್ ಅವರ ಅಭಿಮಾನಿಗಳು ಈಗ ಹೊಸ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ಹೊಸ ಆಲೋಚನೆಯೊಂದಿಗೆ ಅಭಿಮಾನಿಗಳು ತಮ್ಮ ಆಟೋ ಸಮೇತ ದರ್ಶನ್ ಅವರ ಮನೆಮುಂದೆ ಹೋಗಿದ್ದಾರೆ.

    ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆಟೋಗ್ರಾಫ್ ಅನ್ನು ಕೈ ಮೇಲೆ ಅಥವಾ ಪುಸ್ತಕದಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಆಟೋ ಚಾಲಕರು ತಮ್ಮ ನೆಚ್ಚಿನ ನಟನ ನೆನಪು ಶಾಶ್ವತವಾಗಿ ಉಳಿಯಲಿ ಎಂದು ತಮ್ಮ ಆಟೋ ಮೇಲೆ ದರ್ಶನ್ ಅವರ ಆಟೋಗ್ರಾಫ್ ಅನ್ನು ಪಡೆದಿದ್ದಾರೆ.

    ದರ್ಶನ್ ಅವರ ಆಟೋಗ್ರಾಫ್ ಸದಾ ನೆನಪಿನಲ್ಲಿ ಇರಬೇಕೆಂದು ಅವರ ಅಭಿಮಾನಿಗಳು ತಮ್ಮ ಪ್ರತಿನಿತ್ಯ ದುಡಿಮೆಗೆ ಆಧಾರವಾಗಿರುವ ಆಟೋಗಳ ಮೇಲೆಯೇ ಹಾಕಿಸಿಕೊಳ್ಳುತ್ತಿದ್ದಾರೆ. ಸದ್ಯ ಆಟೋಗಳ ಮೇಲೆ ದರ್ಶನ್ ಹಾಕಿರುವ ಆಟೋಗ್ರಾಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಈ ಹಿಂದೆ ಒಬ್ಬ ಅಭಿಮಾನಿ ವಾಹನದಲ್ಲಿ ಬಂದು ದರ್ಶನ್ ಇರೋದು ನೋಡಿ ವಾಹನ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ತಾಳ್ಮೆಯಿಂದ ಹಸ್ತಾಕ್ಷರ ಬರೆದುಕೊಟ್ಟರು. ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ಆಟೋಗ್ರಾಫ್‍ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಪ್ರೀತಿಪೂರ್ವಕ ಮಾತು, ಜೀವನಕ್ಕೆ ಶುಭ ಕೋರುತ್ತಾರೆ. ಆದರೆ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

     

  • ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಒಂದು ವಿಶೇಷ ಸಂದೇಶ ನೀಡಿದ ದರ್ಶನ್!

    ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಒಂದು ವಿಶೇಷ ಸಂದೇಶ ನೀಡಿದ ದರ್ಶನ್!

    ಬೆಂಗಳೂರು: ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ನೀಡಿ ಡ್ರೈವ್ ಸೇಫ್ ಎಂಬ ಸಂದೇಶವನ್ನು ನೀಡಿದ್ದಾರೆ.

    ಯಜಮಾನ ಚಿತ್ರದ ಶೂಟಿಂಗ್‍ನಲ್ಲಿರುವ ದರ್ಶನ್ ಚಿತ್ರೀಕರಣದ ಜಾಗದಲ್ಲಿರುವ ಅಭಿಮಾನಿಗಳನ್ನು ಸದಾ ಸಂಧಿಸುತ್ತಾರೆ. ಹೀಗೊಂದು ದಿನ ಒಬ್ಬ ಅಭಿಮಾನಿ ವಾಹನದಲ್ಲಿ ಬಂದು ದರ್ಶನ್ ಇರೋದು ನೋಡಿ ವಾಹನ ನಿಲ್ಲಿಸಿ ಮಾತನಾಡಿಸಿದ್ದರು.

    ಆಗ ಅಭಿಮಾನಿ ತಮ್ಮ ಬಳಿ ದುಬಾರಿ ಫೋನ್ ಇದ್ದರೂ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ದರ್ಶನ್ ಕೂಡ ಬಹಳ ತಾಳ್ಮೆಯಿಂದ ಹಸ್ತಾಕ್ಷರ ಬರೆದುಕೊಟ್ಟರು. ಅದನ್ನು ಓದಿದ ಬಳಿಕ ಆಟೋಗ್ರಾಫ್ ಪಡೆದ ಆ ಅಭಿಮಾನಿಯಂತೂ ಕೆಲಹೊತ್ತು ಬಿಟ್ಟ ಕಣ್ಣು ಬಿಟ್ಟಂತೆ ನಿಂತುಬಿಟ್ಟರು.

    ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ಆಟೋಗ್ರಾಫ್‍ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಪ್ರೀತಿಪೂರ್ವಕ ಮಾತು, ಜೀವನಕ್ಕೆ ಶುಭ ಕೋರುತ್ತಾರೆ. ಆದರೆ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

    ರಸ್ತೆ ಅಪಘಾತಗಳು ಹೆಚ್ಚಾಗಿ ವರದಿಯಾಗುತ್ತಿರುವ ಕಾಲವಿದು. ಸಾಮಾನ್ಯವಾಗಿ ಪ್ರತಿಯೊಬ್ಬರ ಬಳಿಯೂ ವಾಹನ ಇರುತ್ತೆ. ಅಂಥಹವರಿಗೆ ದರ್ಶನ್ ಇನ್‍ಡೈರೆಕ್ಟಾಗಿ ಜಾಗೃತಿ ಮೂಡಿಸಿದ್ದಾರೆ. ಜೀವ ಇದ್ದರೇ ಜೀವನ ಅಲ್ವೇ? ಹೀಗಾಗಿ ದರ್ಶನ್ ವಾಹನ ಚಲಾಯಿಸುವ ತಮ್ಮ ಅಭಿಮಾನಿಗಳಿಗೆ ಸೇಫಾಗಿ ಡ್ರೈವ್ ಮಾಡಿ ಎಂದು ಸೂಚಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಾಮಾಜಿಕ ಕಳಕಳಿ ಮೂಡಿಸುತ್ತಿದ್ದಾರೆ.