Tag: Autograph

  • ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಸಿಡ್ನಿ: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಆಶಸ್ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಜ್ ಬೊಕ್ಕ ತಲೆಯ ಪ್ರೇಕ್ಷಕನೊಬ್ಬನಿಗೆ ಆಟೋಗ್ರಾಫ್ ಹಾಕಿದ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಈಗಾಗಲೇ ಆಶಸ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್‌ನಲ್ಲೂ ತನ್ನ ಹಿಡಿತವನ್ನು ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಚಿಯರ್ ಅಪ್ ಮಾಡಿಕೊಂಡಿದ್ದು ಅಭಿಮಾನಿಯೋರ್ವ ತನ್ನ ಬೊಕ್ಕ ತಲೆಗೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾನೆ. ಲೀಚ್ ಕೂಡ ಆತನ ಆಸೆಯಂತೆ ಆತನ ತಲೆಗೆ ಸೈನ್ ಮಾಡಿ ಮನಗೆದ್ದಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಟೆಸ್ಟ್‌ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್‌

    ಬೌಂಡರಿ ಲೈನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಜ್ಯಾಕ್ ಲೀಚ್ ಹೆಸರನ್ನು ಕೂಗಿ ಕರೆಯುತ್ತಿದ್ದರು. ಈ ವೇಳೆ 46.5 ನೇ ಓವರ್ ಆಗುತ್ತಿದ್ದಂತೆ ಅಭಿಮಾನಿ ತನ್ನ ಬೋಳು ತಲೆಗೆ ಆಟೋಗ್ರಾಫ್ ಹಾಕುವಂತೆ ಲೀಚ್ ಜೊತೆ ಮನವಿ ಮಾಡಿದ್ದಾನೆ. ಲೀಚ್ ಒಪ್ಪಿಗೆ ಸೂಚಿಸಿ ಸೈನ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಚಪ್ಪಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಂತ್ ನೂತನ ಮೈಲಿಗಲ್ಲು – ಧೋನಿ ಜೊತೆ Elite ಪಟ್ಟಿಗೆ ಸೇರ್ಪಡೆ

  • ಬಿಗ್‍ಬಾಸ್ ಮನೆಯಲ್ಲಿ ಕಲಿತಿದ್ದನ್ನು ‘ಆಟೋಗ್ರಾಫ್’ನಲ್ಲಿ ಬಿಚ್ಚಿಟ್ಟ ವೈಷ್ಣವಿ

    ಬಿಗ್‍ಬಾಸ್ ಮನೆಯಲ್ಲಿ ಕಲಿತಿದ್ದನ್ನು ‘ಆಟೋಗ್ರಾಫ್’ನಲ್ಲಿ ಬಿಚ್ಚಿಟ್ಟ ವೈಷ್ಣವಿ

    ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಮನೆಯ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಳೆದ ತಮ್ಮ ಸುಮಧುರ ಕ್ಷಣಗಳನ್ನು ಬಿಗ್‍ಬಾಸ್ ಆಟೋಗ್ರಾಫ್ ಮೂಲಕ ಮೆಲುಕು ಹಾಕಿದ್ದಾರೆ. ಸದ್ಯ ವೈಷ್ಣವಿ ಗೌಡ ಬಿಗ್‍ಬಾಸ್ ಆಟೋಗ್ರಾಫ್ ಕಾರ್ಯಕ್ರಮದಲ್ಲಿ ದೊಡ್ಮನೆ ತಮ್ಮ ಅನುಭವ, ಅನಿಸಿಕೆಗಳನ್ನು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ.

    ಬಿಗ್‍ಬಾಸ್ ಸೀಸನ್-8 ಸಸ್ಪೆಂಡ್ ಆಗಿರುವುದು ತುಂಬಾ ಬೇಜಾರಾಯಿತು. ಆದರೆ ವಿಷಯ ಬಹಳ ಸೀರಿಯಸ್ ಆಗಿದೆ. ಕಷ್ಟಕರವಾಗಿದೆ ಆದರೂ ಎಲ್ಲರೂ ಧೈರ್ಯದಿಂದ ಹೋರಾಡೋಣ. ನಾನು ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ವೈಷ್ಣವಿ ಗೌಡ ಮಾತು ಆರಂಭಿಸಿದರು.

    ಬಿಗ್‍ಬಾಸ್ ಮನೆಗೆ ನಾನು ಎಂಟ್ರಿ ಆದಾಗ ಒಂದು ರೀತಿ ಅರಮನೆಯಂತೆ ನನಗೆ ಅನಿಸಿತು. ಮಂಜು ಒಂದು ಬಾರಿ ಮಾತನಾಡದಂತೆ ಬಿಗ್‍ಬಾಸ್ ಸೂಚಿಸಿದಾಗ ನಾನು ಅವರ ಮಾತಾಗಿದ್ದೆ, ಅಲ್ಲಿಯವರೆಗೂ ನಾನು ಸೈಲೆಂಟ್ ಎಂದು ಹೇಳುತ್ತಿದ್ದವರು, ತುಂಬಾ ಮಾತನಾಡುತ್ತೀಯಾ ಎಂದು ಹೇಳಲು ಶುರುಮಾಡಿದರು. ಜೋಕ್ ಹೇಳಿ ನೀರು ಕುಡಿಯುವ ಟಾಸ್ಕ್ ಒಂದು ರೀತಿ ಮಜಾ ಇತ್ತು. ನನ್ನ ಕೈನಲ್ಲಿ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಪ್ರತಿಯೊಬ್ಬರು ನನಗೆ ನೀರು ಕುಡಿಸಲು ನಾನು ಹೇಳುವ ಡಬ್ಬಾ ಜೋಕ್ಸ್ ಕೇಳಿ ಬಿದ್ದು ಬಿದ್ದು ನಗುತ್ತಿದ್ದರು. ಒಟ್ಟಾರೆ ನಾನು ಕಂಪ್ಲೀಟ್ ಮಜಾ ಮಾಡಿದೆ. ಎಲ್ಲರೂ ನನ್ನನ್ನು ತುಂಬಾ ವೀಕ್ ಇದ್ದಾರೆ. ನನಗೆ ಕಾಂಪಿಟೇಶನ್ ಅಲ್ಲ ಎಂದು ಹೇಳುತ್ತಿದ್ದರು. ನಾನು ಹೇಗಾದರೂ ಪ್ರೂ ಮಾಡಲೇ ಬೇಕು ಎಂದು ಆ ಟಾಸ್ಕ್‌ನಲ್ಲಿ ಗೆದ್ದೆ. ಅದು ಒಂದು ರೀತಿ ಚಾಲೆಂಜಿಂಗ್ ಆಗಿ ಇತ್ತು. ರೋಪ್ ಟಾಸ್ಕ್ ನನ್ನ ಫೇವರೆಟ್ ಎಂದು ಹೇಳಿದರು.

    ಬಿಗ್‍ಬಾಸ್ ಮನೆಯಲ್ಲಿ ನಾನು ಏನು ಕಲಿತೆ ಎಂದರೆ ಬೇಗ ಮೂವ್ ಆನ್ ಆಗುವುದನ್ನು ಕಲಿತುಕೊಂಡಿದ್ದೇನೆ. ಇಲ್ಲಿ ಕೋಪ, ನಗು, ಅಳು ಇದ್ಯಾವುದು ಶಾಶ್ವತ ಅಲ್ಲ. ನಾವು ಪ್ರಯತ್ನಗಳನ್ನು ಪಡುತ್ತಾ ಜೀವನದಲ್ಲಿ ಮುಂದಕ್ಕೆ ಹೋಗುತ್ತಿರಬೇಕು. ಜೀವನ ನಿಮಗೆ ಪಾಠ ಕಲಿಸಿಕೊಡುತ್ತದೆ, ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ನಾನು ಕೇವಲ ಅದರ ಕೈ ಹಿಡಿದುಕೊಂಡು ಹೋಗಬೇಕು ಅಷ್ಟೇ ಎಂದರು.

    ಸದ್ಯ ನಾಳೆಯಿಂದ ಬಿಗ್‍ಬಾಸ್ ಮನೆ, ಬಿಗ್‍ಬಾಸ್ ವಾಯ್ಸ್, ಮೈಕ್, ಟಾಸ್ಕ್‌ಗಳು, ಸ್ಟೋರ್ ಬೆಲ್ ಆದಾಗ ಓಡಿ ಹೋಗುತ್ತಿದ್ದ ಏಕ್ಸ್‍ಸೈಟ್‍ಮೆಂಟ್ ಪ್ರತಿಯೊಂದನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದರು. ಬಿಗ್‍ಬಾಸ್ ಮನೆಯಲ್ಲಿ ಒಂದು ಮರೆಯಲಾಗದನ್ನು ಒಂದು ಕ್ಷಣ ಅಂತಲ್ಲ ನನಗೆ ಎಲ್ಲವೂ ಬೇಕು. ಕೆಟ್ಟದ್ದು, ಒಳ್ಳೆಯದ್ದು, ಪ್ರತಿಯೊಂದು ಕೂಡ ಬೇಕು. ಇವತ್ತು ಅದೆಲ್ಲವು ಆಗಿದ್ದಕ್ಕೆ ಈ ಜರ್ನಿಯನ್ನು ಇಷ್ಟು ಸ್ಪೆಷಲ್ ಎಂದು ಹೇಳಲು ಸಾಧ್ಯವಾಯಿತು ಇಲ್ಲ ಆಗುತ್ತಿರಲಿಲ್ಲ ಎಂದು ಹೇಳಿದರು.

  • ಲಿಫ್ಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ನೀಡಿದ್ದ ಸಲಹೆಯಿಂದ ಸಚಿನ್ ಕ್ರಿಕೆಟ್ ಲೈಫ್ ಬದಲಾಯ್ತು

    ಲಿಫ್ಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ನೀಡಿದ್ದ ಸಲಹೆಯಿಂದ ಸಚಿನ್ ಕ್ರಿಕೆಟ್ ಲೈಫ್ ಬದಲಾಯ್ತು

    ಚೆನ್ನೈ: ಸಚಿನ್ ಅಭಿಮಾನಿಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುವುದಕ್ಕೆ, ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದ ವಿಡಿಯೋ ಸಾಕ್ಷಿಯಾಗಿತ್ತು. ಬಹುವರ್ಷಗಳ ಹಿಂದೆ ಅಚನಾಕ್ ಆಗಿ ಭೇಟಿಯಾಗಿದ್ದ ಅಭಿಮಾನಿಯನ್ನು ಮತ್ತೆ ಭೇಟಿ ಮಾಡಲು ಸಹಾಯ ಮಾಡುವಂತೆ ಸಚಿನ್ ಟ್ವೀಟ್‍ನಲ್ಲಿ ಮನವಿ ಮಾಡಿದ್ದರು. ಅವರ ಆಸೆಯಂತೆ ಸದ್ಯ ಅಭಿಮಾನಿಯ ವಿವರ ಲಭಿಸಿದ್ದು, ತಮ್ಮ ಮನೆಗೆ ಬರುವಂತೆ ಸಚಿನ್ ಅವರಿಗೆ ಅಭಿಮಾನಿ ಅಹ್ವಾನ ನೀಡಿದ್ದಾರೆ.

    ‘ಬಹಳ ಸಮಯದ ಹಿಂದೆ ಚೆನ್ನೈ ತಾಜ್ ಹೋಟೆಲ್‍ನಲ್ಲಿ ಒಬ್ಬರನ್ನು ಭೇಟಿ ಮಾಡಿದ್ದೆ. ಅಂದು ನಾನು ಬಳಕೆ ಮಾಡುತ್ತಿದ್ದ ಎಲ್ಬೋ ಗಾರ್ಡ್ ಬಗ್ಗೆ ಆತ ಸಲಹೆ ನೀಡಿದ್ದ. ಆತನ ಸಲಹೆ ಮೇರೆಗೆ ನಾನು ಎಲ್ಬೋ ಗಾರ್ಡ್ ನಲ್ಲಿ ಬದಲಾವಣೆ ಮಾಡಿದ್ದೆ. ಇದರಿಂದಾಗಿ ನಾನು ಉತ್ತಮ ಪ್ರದರ್ಶನ ನೀಡಲು ಆರಂಭಿಸಿದೆ. ಆತ ಈಗ ಎಲ್ಲಿದ್ದಾನೆ ನನಗೆ ತಿಳಿದಿಲ್ಲ. ನಿಮಗೆ ಮಾಹಿತಿ ಇದ್ದರೆ ಹೇಳಿ’ ಎಂದು ಸಚಿನ್ ಟ್ವೀಟ್ ಮಾಡಿದ್ದರು.

    ಸಚಿನ್ ಈ ವಿಡಿಯೋ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ ಮಾಧ್ಯಮಗಳು ಸಚಿನ್ ಹೇಳಿದ ವ್ಯಕ್ತಿಯ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿತ್ತು. ಸದ್ಯ ಆತನ ಮಾಹಿತಿ ದೊರೆತಿದ್ದು, 46 ವರ್ಷದ ಅಸಿಸ್ಟೆಂಟ್ ಪ್ರೊಫೆಸರ್ ಈ ಹಿಂದೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆಯೇ ಅವರು ಸಚಿನ್ ರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಸದ್ಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಭಿಮಾನಿ ಸಚಿನ್ ಅವರಿಗೆ ಧನ್ಯವಾದ ಹೇಳಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಆಹ್ವಾನ ನೀಡಿದ್ದಾರೆ.

    ಸಚಿನ್ ಆ ವೇಳೆಗೆ ಅವರು ಧರಿಸುತ್ತಿದ್ದ ಎಲ್ಬೋ ಗಾರ್ಡ್ ಅವರ ಕೈನ ಅಳತೆಗಿಂತ ದೊಡ್ಡದಾಗಿತ್ತು. ಬ್ಯಾಟಿಂಗ್ ವೇಳೆ ವೇಗದ ಬೌಲರ್ ಗಳನ್ನು ಎದುರಿಸಲು ಮುಂದಾದ ವೇಳೆ ಎಲ್ಬೋ ಗಾರ್ಡ್ ನಿಂದ ಅವರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಅಭಿಮಾನಿ ಗ್ರಹಿಸಿ ಅಂದು ಸಲಹೆ ನೀಡಿದ್ದರು. ಸಚಿನ್ ಎಲ್ಬೋ ಬದಲಿಸಿಕೊಂಡ ಬಳಿಕ ಮತ್ತಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಹಕಾರಿಯಾಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಸಚಿನ್ ಇದನ್ನು ನೆನಪು ಮಾಡಿಕೊಂಡು ಅಭಿಮಾನಿಯ ಭೇಟಿಗೆ ಆಸೆ ಪಟ್ಟಿದ್ದರು.

    ಈ ಬಗ್ಗೆ ಗುರುಪ್ರಸಾದ್ ಮಾತನಾಡಿದ್ದು, ತಾಜ್ ಹೋಟೆಲಿನಲ್ಲಿ ನಾನು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ. ಲಿಫ್ಟಿನಲ್ಲಿ ಹತ್ತುವ ವೇಳೆ ಸಚಿನ್ ಅವರನ್ನು ಆಟೋಗ್ರಾಫ್ ಸಿಗಬಹುದಾ ಎಂದು ಕೇಳಿದೆ. ಆದರೆ ನನ್ನ ಬಳಿ ಪೇಪರ್ ಇರಲಿಲ್ಲ. ನಂತರ ಸೆಕ್ಯೂರಿಟಿ ಬೀಟ್ ಪುಸ್ತಕದ ಹಾಳೆಯನ್ನೇ ಆಟೋಗ್ರಾಫ್ ಹಾಕಿಸಿಕೊಂಡೆ. ಆ ನೋಟ್ ಬುಕ್ ಇದೀಗ ನನಗೆ ಅಮೂಲ್ಯವಾದ ಆಸ್ತಿಯಾಗಿದೆ ಎಂದು ವಿವರಿಸಿದರು.

    ತೆಂಡೂಲ್ಕರ್ ಅವರು ಆಟೋಗ್ರಾಫ್ ನೀಡಿದ ನಂತರ ಕ್ರಿಕೆಟ್ ಬಗ್ಗೆ ಮಾತನಾಡಲು ಕೆಲ ಸಮಯವನ್ನು ನೀಡುತ್ತಿರಾ ಎಂದು ಕೇಳಿಕೊಂಡೆ. ಅವರು ಸ್ನೇಹಪರವಾಗಿದ್ದರು ಹೀಗಾಗಿ ನಾನು ಕೇಳಲು ಹಿಂಜರಿಯಲಿಲ್ಲ. ಬ್ಯಾಟ್ ಸ್ವಿಂಗ್, ಟ್ವಿಸ್ಟ್ ಮಾಡುವಾಗ ಕೈ ಎಲ್ಬೋ ಗಾರ್ಡ್ ಗೆ ಹೊಡೆತ ಬೀಳುವುದಿಲ್ಲವೇ ಎಂದು ನಾನು ಕೇಳಿದ್ದೆ ಎಂಬುದನ್ನು ಹಂಚಿಕೊಂಡರು.

  • ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ಇಂದೋರ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ಇಂದೋರ್ ನಲ್ಲಿ ಅವರ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧ ಇಂದೋರ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಮತ್ತು 130 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೈದಾನದಲ್ಲಿ ಕೊಹ್ಲಿ ಅವರ ನಾಯಕತ್ವವನ್ನು ಶ್ಲಾಘಿಸಿರುವ ಕ್ರೀಡಾಭಿಮಾನಿಗಳು. ಮೈದಾನದಾಚೆಗೆ ಅವರ ಹೃದಯಂತಿಕೆ ನೋಡಿ ಬೆರಗಾಗಿದ್ದಾರೆ.

    ಇಂದೋರ್ ಪಂದ್ಯ ಮುಗಿಸಿ ಹೊರಡುತ್ತಿದ್ದ ಕೊಹ್ಲಿ ಅವರನ್ನು ಭೇಟಿಯಾಗಲು ಅವರ ವಿಶೇಷ ಅಂಗವಿಕಲ ಅಭಿಮಾನಿಯೊಬ್ಬರು ಬಾಗಿಲ ಬಳಿ ಕಾದು ಕುಳಿತಿದ್ದರು. ಆಗ ಅವರ ಬಳಿ ಬಂದ ಕೊಹ್ಲಿ ಅವರು ತಂದಿದ್ದ ಕ್ಯಾಪ್ ಮೇಲೆ ಆಟೋಗ್ರಾಫ್ ಹಾಕಿ ಅವರನ್ನು ಮಾತನಾಡಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿ ಅಭಿಮಾನಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    ಮೈದಾನದಲ್ಲಿ ಅಬ್ಬರಿಸುವ ಕೊಹ್ಲಿ ಅವರ ತಮ್ಮ ಅಭಿಮಾನಿಗಳ ಬಳಿ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ದಕ್ಷಿಣ ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೇಳೆ ಮೈದಾನಕ್ಕೆ ಬಂದಿದ್ದ ವೈಜಾಗ್ ಅಭಿಮಾನಿಯೊಬ್ಬನನ್ನು ಕೂಡ ಕೊಹ್ಲಿ ಅವರ ಭೇಟಿಯಾಗಿ ಮಾತನಾಡಿಸಿದ್ದರು. ಆ ಅಭಿಮಾನಿ ವಿರಾಟ್ ಕೊಹ್ಲಿ ಅವರ ಜರ್ಸಿ ಸಂಖ್ಯೆ ಸೇರಿದಂತೆ ಅವರ ಹೆಸರನ್ನು ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.

    ಇದರ ಜೊತೆಗೆ ಕೊಹ್ಲಿ ಅವರು ಬಾಂಗ್ಲಾ ವಿರುದ್ಧ ಪಂದ್ಯ ನಡೆಯುವ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಕ್ರೀಡಾಂಗಣದಲ್ಲಿ ಹಾಕಿದ್ದ ಬೇಲಿಯನ್ನು ಹಾರಿ ಮೈದಾನಕ್ಕೆ ಪ್ರವೇಶ ಮಾಡಿದ್ದ. ಅಲ್ಲದೇ ನೇರ ಟೀಂ ಇಂಡಿಯಾ ಆಟಗಾರರು ನಿಂತಿದ್ದ ಸ್ಥಳಕ್ಕೆ ತೆರಳಿ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದರು. ಕೂಡಲೇ ಕ್ರೀಡಾಂಗಣದ ಸಿಬ್ಬಂದಿ ಎಚ್ಚೆತ್ತು, ಅಭಿಮಾನಿಯನ್ನು ಹೊರ ಕರೆದುಕೊಂಡು ಮುಂದಾಗಿದ್ದರು, ಆದರೆ ಈ ವೇಳೆ ಸಿಬ್ಬಂದಿಯನ್ನು ತಡೆದ ಕೊಹ್ಲಿ ಅಭಿಮಾನಿಯೊಂದಿಗೆ ಮಾತನಾಡಿ ಅವರನ್ನು ಏನೂ ಮಾಡಬೇಡಿ ಎಂದು ಸೂಚಿಸಿ ಕಳುಹಿಸಿಕೊಟ್ಟಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಗೆ ಅಭಿಮಾನಿಯನ್ನು ಏನು ಮಾಡದಂತೆ ಸೂಚನೆ ನೀಡಿದ್ದ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಅಭಿಮಾನಿಯ ಈ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಮಾತ್ರ ಅವಾಕ್ ಆಗಿದ್ದರು. ಈ ಹಿಂದೆ ಇಂತಹದ್ದೇ ಘಟನೆ ನಡೆದ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ರಕ್ಷಣಾ ಸಿಬ್ಬಂದಿಯ ವಿರುದ್ಧ ಕೆಂಡಾಮಂಡಲರಾಗಿದ್ದರು. ಪಂದ್ಯವನ್ನು ಉಚಿತವಾಗಿ ನೋಡಲು ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿದಂತೆ ಕಾಣುತ್ತಿದೆ. ಭಾರತದಲ್ಲೇ ಇಂತಹ ಘಟನೆಗಳು ನಡೆಯುತ್ತದೆ ಎಂದು ಟೀಕೆ ಮಾಡಿದ್ದರು.

  • ಕೊಹ್ಲಿಗೆ ಆಟೋಗ್ರಾಫ್ ನೀಡಿದ ಪೋರ: ವಿಡಿಯೋ

    ಕೊಹ್ಲಿಗೆ ಆಟೋಗ್ರಾಫ್ ನೀಡಿದ ಪೋರ: ವಿಡಿಯೋ

    ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಅನೇಕ ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ ಪುಟ್ಟ ಪೋರನೊಬ್ಬ ಕೊಹ್ಲಿಗೆ ಆಟೋಗ್ರಾಫ್ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.

    ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲು ಸಾಧಿಸಿದೆ. ಟೀಂ ಇಂಡಿಯಾ ಮಂಗಳವಾರ ಜಮೈಕಾದಿಂದ ತವರಿಗೆ ವಾಪಸ್ ಆಗುತ್ತಿದ್ದಾಗ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಮಕ್ಕಳು ಸುತ್ತುವರಿದಿದ್ದರು. ಇದೇ ವೇಳೆ ಅಲ್ಲಿಗೆ ಪೆನ್ನು, ಪೇಪರ್ ಹಿಡಿದು ಬಂದ 7 ವರ್ಷದ ಬಾಲಕನೊಬ್ಬ ಸಹಿ ಮಾಡಿ ಆಟೋಗ್ರಾಪ್ ಅನ್ನು ಕೊಹ್ಲಿ ಕೈಗಿಟ್ಟಿದ್ದಾನೆ.

    ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಬಾಲಕ ಆಟೋಗ್ರಾಫ್ ನೀಡಿದ್ದನ್ನು ಕಂಡು ಮುಗುಳು ನಗೆ ಬೀರಿದರು. ಈ ದೃಶ್ಯವನ್ನು ಬಾಲಕನ ಮಾವ ಅಮಿತ್ ಲಖಾನಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 18 ಸೆಕೆಂಡ್ ಇರುವ ಬಾಲಕನ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದುಬೀಗಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದು ಇತಿಹಾಸ ರಚಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದು ಕೊಹ್ಲಿ ಅವರ ನಾಲ್ಕನೇ ಗೋಲ್ಡನ್ ಡಕೌಟ್ ಆಗಿದೆ. ಮೊದಲ ಟೆಸ್ಟ್ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಸೇರಿದಂತೆ 76 ರನ್ ಕಲೆ ಹಾಕಿದ್ದರು. ಹೀಗಾಗಿ ಕೊಹ್ಲಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ  ಅಗ್ರಸ್ಥಾನದಿಂದ ಕೆಳಗೆ ಇಳಿದಿದ್ದಾರೆ.

    ಆ್ಯಶನ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 904 ಅಂಕದೊಂದಿಗೆ ಟಾಪ್‍ನಲ್ಲಿದ್ದಾರೆ. ವಿರಾಟ್ ಕೊಹ್ಲಿ 903 ಅಂಕದಿಂದ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದು 878 ಅಂಕ ಹೊಂದಿದ್ದಾರೆ. ಅಜಿಂಕ್ಯ ರಹಾನೆ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ರಹಾನೆ 4 ಸ್ಥಾನ ಏರಿಕೆ ಕಂಡು ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ಬುಮ್ರಾ ನಂಬರ್ 3ನೇ ಸ್ಥಾನಕ್ಕೆ ಏರಿದ್ದಾರೆ. ಬುಮ್ರಾ 835 ಅಂಕ ಪಡೆದರೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 908 ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. 764 ಅಂಕ ಗಳಿಸಿರುವ ರವೀಂದ್ರ ಜಡೇಜಾ 11ನೇ ಸ್ಥಾನಕ್ಕೆ ಇಳಿದಿದ್ದು, ದಕ್ಷಿಣ ಆಫ್ರಿಕಾದ ಕಗಿಸೋ ರಬಡಾ 851 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

  • ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಕ್ಯಾಪ್ಟನ್ ಕೂಲ್ ಧೋನಿ ನಡೆಗೆ ಪಾಕಿಸ್ತಾನದ ನಟಿ ಫಿದಾ

    ಇಸ್ಲಾಮಾಬಾದ್: ಭಾರತ ಕ್ರಿಕೆಟ್ ತಂಡದ ಆಟಗಾರ ಎಂ.ಎಸ್ ಧೋನಿ ಅವರು ನಡೆಗೆ ಪಾಕಿಸ್ತಾನದ ನಟಿ ಫಿದಾ ಆಗಿದ್ದಾರೆ. ಅಲ್ಲದೆ 1998ರಲ್ಲಿ ನಡೆದ ಒಂದು ಘಟನೆಯೊಂದು ಹಂಚಿಕೊಂಡಿದ್ದಾರೆ.

    ಪಾಕಿಸ್ತಾನದ ನಟಿ ಮತಿರಾ ಖಾನ್ ಅವರು ಏಷ್ಯಾ ಕಪ್ ಸಂದರ್ಭದಲ್ಲಿ ಧೋನಿ ತಮ್ಮ ಜೊತೆ ಹೇಗೆ ನಡೆದುಕೊಂಡರು ಎಂಬುದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡ ತಂಗಿದ್ದ ಹೋಟಿಲಿನಲ್ಲಿ ಮತಿರಾ ಖಾನ್ ತಂಗಿದ್ದರು. ಈ ವೇಳೆ ಮತಿರಾ ತಮ್ಮ ನೆಚ್ಚಿನ ಪಾಕಿಸ್ತಾನದ ಆಟಗಾರನ ಆಟೋಗ್ರಾಫ್ ಪಡೆಯಲು ಹೋಗಿದ್ದರು.

    ನಾನು ಪಾಕಿಸ್ತಾನ ಕ್ರಿಕೆಟಿಗರ ಬಳಿ ಆಟೋಗ್ರಾಫ್ ಕೇಳಲು ಹೋಗಿದೆ. ಈ ವೇಳೆ ಕೆಲವು ಆಟಗಾರರು ನನಗೆ ಆಟೋಗ್ರಾಫ್ ನೀಡಿದ್ದರು. ಆದರೆ ಕೆಲವರು ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದು ನನ್ನ ಮೇಲೆ ರೇಗಿದ್ದರು. ಅವರು ನನ್ನ ಮೇಲೆ ರೇಗಾಡಿದ್ದರಿಂದ ನನ್ಮ ಮನಸ್ಸಿಗೆ ನೋವಾಗಿ ಅತ್ತುಬಿಟ್ಟಿದ್ದೆ. ಬಳಿಕ ನಾನು ನನ್ನ ಟೇಬಲ್ ಬಳಿ ಹೋಗುತ್ತಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ನಾವು ಕೂಡ ಕ್ರಿಕೆಟ್ ಆಟಗಾರರು. ನಮ್ಮ ಆಟೋಗ್ರಾಫ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.

    ನಾನು ಅವರ ಧ್ವನಿ ಕೇಳಿ ಹಿಂದೆ ತಿರುಗಿ ನೋಡಿದ್ದಾಗ ಅಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದರು. ಧೋನಿ ನನಗೆ ಆಟೋಗ್ರಾಫ್ ಮಾತ್ರವಲ್ಲದೆ ಅವರ ಪಕ್ಕದಲ್ಲಿ ಇದ್ದ ಸೀಟ್‍ನಲ್ಲಿ ಕುಳಿತುಕೊಳ್ಳಲು ಹೇಳಿ ನನ್ನ ಜೊತೆ ಮಾತುಕತೆ ನಡೆಸಿದ್ದರು ಎಂದು ಮತಿರಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

  • ಇಂದಿನಿಂದ 3 ದಿನ ದರ್ಶನ್ ಸೆರೆ ಹಿಡಿದ ಫೋಟೋ ಪ್ರದರ್ಶನ

    ಇಂದಿನಿಂದ 3 ದಿನ ದರ್ಶನ್ ಸೆರೆ ಹಿಡಿದ ಫೋಟೋ ಪ್ರದರ್ಶನ

    -ಪ್ರದರ್ಶನದ ಜಾಗದಲ್ಲಿದ್ದು ಆಟೋಗ್ರಾಫ್ ನೀಡಲಿರುವ ನಟ

    ಮೈಸೂರು: ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದ ಛಾಯಾಚಿತ್ರ ಪ್ರದರ್ಶನವಾಗುತ್ತಿದೆ.

    ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮೂರು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ಇಂದು ನಟ ದರ್ಶನ್ ಹಾಗೂ ಸಂದೇಶ್ ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಪ್ರದರ್ಶನದಲ್ಲಿ ದರ್ಶನ್ ಅವರು ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಪ್ರದರ್ಶನಕ್ಕೆ ಇಡಲಾಗಿದೆ.

    ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆಯುತ್ತಿದೆ. ಪ್ರತಿ ಚಿತ್ರಕ್ಕೆ 2000 ಬೆಲೆ ನಿಗದಿ ಆಗಿದ್ದು, ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಮೂರು ದಿನಗಳು ಪ್ರದರ್ಶನದ ಜಾಗದಲ್ಲಿ ಇದ್ದು ದರ್ಶನ್ ಆಟೋಗ್ರಾಫ್ ನೀಡಲಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಸ್ಥಳಕ್ಕೆ ನಟ ದರ್ಶನ್ ಆಗಮಿಸಿ ಫೋಟೋಗಳನ್ನು ವೀಕ್ಷಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಟೋಗ್ರಾಫ್ ಜೊತೆ ಅಭಿಮಾನಿಗೆ ವಿಶೇಷ ಸಂದೇಶ: ದರ್ಶನ್ ವಿಡಿಯೋ ನೋಡಿ

    ಆಟೋಗ್ರಾಫ್ ಜೊತೆ ಅಭಿಮಾನಿಗೆ ವಿಶೇಷ ಸಂದೇಶ: ದರ್ಶನ್ ವಿಡಿಯೋ ನೋಡಿ

    ಬೆಂಗಳೂರು: ಚಾಲೇಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಯ ಬೈಕಿಗೆ ಆಟೋಗ್ರಾಫ್ ನೀಡಿ ಸಂದೇಶವೊಂದನ್ನು ನೀಡಿದ್ದಾರೆ. ಅವರು ಆಟೋಗ್ರಾಫ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದರ್ಶನ್ ಅವರು ಅಭಿಮಾನಿಯೊಬ್ಬರ ಬೈಕಿಗೆ ಆಟೋಗ್ರಾಫ್ ಹಾಕುತ್ತಿರುವ ವಿಡಿಯೋವನ್ನು ಅವರ ಅಭಿಮಾನಿ ಸಂಘದವರು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನ್ ಅವರು ಆಟೋಗ್ರಾಫ್ ಹಾಕಿ ಅಭಿಮಾನಿಗೆ ಸಂದೇಶವೊಂದನ್ನು ನೀಡಿದ್ದಾರೆ. ಇದನ್ನೂ ಓದಿ: ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಒಂದು ವಿಶೇಷ ಸಂದೇಶ ನೀಡಿದ ದರ್ಶನ್!

    ದರ್ಶನ್ ಆಟೋಗ್ರಾಫ್ ಹಾಕಿದ ಬಳಿಕ ಅಭಿಮಾನಿಗೆ, “ನಿನಗೆ ಒಳ್ಳೆಯದಾಗಲಿ. ನೀನು ಎಲ್ಲೇ ಬೈಕ್ ಓಡಿಸಿದರೂ, ಹುಷಾರಾಗಿ ಓಡಿಸು. ಆದರೆ 60 ಕಿ.ಮೀಗಿಂತ ಜಾಸ್ತಿ ವೇಗವಾಗಿ ಹೋಗಬೇಡ” ಎಂದು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

    ದರ್ಶನ್ ಈ ಹಿಂದೆ ತಮ್ಮ ಅಭಿಮಾನಿಯ ಆಟೋ, ಜೀಪ್, ಬೈಕ್ ಹಾಗೂ ಆಡಿ ಮೇಲೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ. ಜೀಪ್ ಮೇಲೆ ಆಟೋಗ್ರಾಫ್ ನೀಡಿ “ಡ್ರೈವ್ ಸೇಫ್” ಎಂದು ಬರೆದು ತಮ್ಮ ಹಸ್ತಕ್ಷರವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಹಿದ್ ಕಪೂರ್ ಆಟೋಗ್ರಾಫ್‍ಗಾಗಿ ಜಾಕೆಟ್ ಬಿಚ್ಚಿದ ಯುವತಿ..!

    ಶಾಹಿದ್ ಕಪೂರ್ ಆಟೋಗ್ರಾಫ್‍ಗಾಗಿ ಜಾಕೆಟ್ ಬಿಚ್ಚಿದ ಯುವತಿ..!

    ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಅಭಿಮಾನಿಯೊಬ್ಬಳು ಎಲ್ಲರ ಮುಂದೆಯೇ ತನ್ನ ಜಾಕೆಟ್ ಬಿಚ್ಚಿ ಆಟೋಗ್ರಾಫ್ ಪಡೆದಿದ್ದನ್ನ ನೋಡಿ ಶೂಟಿಂಗ್‍ ಸ್ಥಳದಲ್ಲಿದ್ದವರು ದಂಗಾಗಿದ್ದಾರೆ.

    ಉತ್ತರಖಂಡ್‍ನ ಮಸ್ಸೂರಿಯಲ್ಲಿ ಶುಕ್ರವಾರದಂದು ಶಾಹಿದ್ ಕಪೂರ್ ತಮ್ಮ ಚಿತ್ರವೊಂದರ ಶೂಟಿಂಗ್‍ನಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯೊಬ್ಬಳು ಶಾಹಿದ್ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾಳೆ. ಬಳಿಕ ಎಲ್ಲರ ಮುಂದೆಯೇ ತನ್ನ ಜಾಕೆಟ್ ಬಿಚ್ಚಿ, ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂದಿದ್ದಾಳೆ. ಇದನ್ನು ನೋಡಿದ ಜನರು ಎಂಥಾ ವಿಚಿತ್ರ ಅಭಿಮಾನಿಯಪ್ಪ ಅಂತ ಅಚ್ಚರಿ ಪಟ್ಟಿದ್ದಾರೆ.

    ಸೂಪರ್ ಕೂಲ್ ಲೊಕೇಶನ್ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ, ಬ್ರೇಕ್ ಸಮಯದಲ್ಲಿ ಶಾಹಿದ್ ಕಪೂರ್ ಹಾಗೂ ನಟಿ ಕಿಯಾರ ಅವರು ಸುಂದರ ಪರ್ವತಗಳ ಸೌಂದರ್ಯವನ್ನು ಸವಿಯುತ್ತ ಫೋಟೋಗಳಿಗೆ ಫೋಸ್ ನೀಡಿ ಖುಷಿ ಪಟ್ಟಿದ್ದಾರೆ.

    ನಿರ್ದೇಶಕ ಕಬೀರ್ ಸಿಂಹ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿತ್ತಿದ್ದು, ಶೂಟಿಂಗ್ ಸ್ಥಳದಲ್ಲಿ ಹೆಚ್ಚು ಹಿಮಪಾತವಾದ ಕಾರಣಕ್ಕೆ ಆ ದಿನದ ಸಿನಿಮಾ ಚಿತ್ರೀಕರಣವನ್ನು ನಿಲ್ಲಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಆಟೋಗ್ರಾಫ್ ನಿಂದ ಹುಡುಗಿಯ ಹಿಂದೆ ಕ್ಯೂ ನಿಂತ ಯುವಕರು!

    ಮೋದಿ ಆಟೋಗ್ರಾಫ್ ನಿಂದ ಹುಡುಗಿಯ ಹಿಂದೆ ಕ್ಯೂ ನಿಂತ ಯುವಕರು!

    ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿಯೊಬ್ಬಳು ಇದೀಗ ಪಶ್ಚಿಮ ಬಂಗಾಳದ ಹಳ್ಳಿಯಲ್ಲೇ ಪ್ರಸಿದ್ಧಿ ಪಡೆದಿದ್ದಾಳೆ. ಅಲ್ಲದೇ ಆಕೆಗೆ ಮದುವೆ ಸಂಬಂಧಗಳು ಕೂಡ ಒಂದರ ಮೇಲೊಂದರಂತೆ ಬರುತ್ತಿವೆ.

    ರೀಟಾ ಮುಡಿ, ಪ್ರಧಾನಿ ಬಳಿಯಿಂದ ಆಟೋಗ್ರಾಫ್ ಪಡೆದ ವಿದ್ಯಾರ್ಥಿನಿ. ಈಕೆ ಬಂಕುರಾದ ಕ್ರಿಶ್ಚಿಯನ್ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಕೋಲ್ಕತ್ತಾದಿಂದ 230 ಕಿ.ಮೀ ದೂರದಲ್ಲಿರೋ ಹಳ್ಳಿ ನಿವಾಸಿಯಾಗಿರೋ ರೀಟಾ ಯಾವತ್ತು ತಾನು ಪ್ರಧಾನಿ ಕೈಯಿಂದ ಆಟೋಗ್ರಾಫ್ ಪಡೆದುಕೊಂಡು ಇಷ್ಟು ದೊಡ್ಡ ವ್ಯಕ್ತಿಯಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದ್ರೆ ಇದೀಗ ಈಕೆ ಹಳ್ಳಿಯಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದು, ಪ್ರತೀ ನಿತ್ಯ ಅನೇಕರು ಬಂದು ಭೇಟಿಯಾಗುತ್ತಿದ್ದಾರೆ. ಅಲ್ಲದೇ ಘಟನೆಯ ಬಳಿಕ ಎರಡು ಮದುವೆ ಪ್ರಪೋಸಲ್ಸ್ ಗಳು ಕೂಡ ಬಂದಿದೆ.

    ರಿಟಾ ಸೆಲೆಬ್ರಿಟಿಯಾಗಿದ್ದು ಹೇಗೆ?:
    ಜುಲೈ 16ರಂದು ಮಿಡ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವಿತ್ತು. ಮೋದಿಯವರ ಭಾಷಣ ಕೇಳಲು ತಮ್ಮ ತಾಯಿಯೊಂದಿಗೆ ರಿಟಾ ತೆರಳಿದ್ದಳು. ದುರಾದೃಷ್ಟವೆಂಬಂತೆ ಕಾರ್ಯಕ್ರಮದ ವೇಳೆ ಟೆಂಟ್ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಗಾಯಗೊಂಡವರಲ್ಲಿ ರಿಟಾ ಕೂಡ ಒಬ್ಬಳಾಗಿದ್ದು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೀಗಾಗಿ ತಮ್ಮ ಭಾಷಣದ ಬಳಿಕ ಮೋದಿಯವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

    ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಿಟಾ ಆಟೋಗ್ರಾಫ್ ಕೇಳೋದಿಕ್ಕೆ ಹಿಂಜರಿದಿದ್ದಾಳೆ. ಆದ್ರೂ ಗಟ್ಟಿ ಮನಸ್ಸು ಮಾಡಿ ರಿಟಾ ಮೋದಿ ಬಳಿ ಆಟೋಗ್ರಾಫ್ ನೀಡುವಂತೆ ಕೇಳಿದ್ದಾಳೆ. ಹೀಗಾಗಿ ಪ್ರಧಾನಿಯವರು `ರಿಟಾ ಮುಡಿ ತುಮ್ ಸುಖಿ ರಹೋ'(ರಿಟಾ ಮುಡಿಯವರೇ ಸುಖವಾಗಿರು) ಅಂತ ಒಂದು ಚೀಟಿಯಲ್ಲಿ ಬರೆದು ಮಲಗಿದ್ದ ರಿಟಾ ಬಳಿ ಇಟ್ಟಿದ್ದರು. ಈ ಘಟನೆಯ ಮರುದಿನದಿಂದಲೇ ನಮ್ಮ ಮನೆಗೆ ಅತಿಥಿಗಳು ಬರಲು ಆರಂಭಿಸಿದ್ದಾರೆ. ಅಲ್ಲದೇ ಬಂದವರೆಲ್ಲರೂ ಆಟೋಗ್ರಾಫ್ ತೋರಿಸುವಂತೆ ಹೇಳುತ್ತಿದ್ದಾರೆ ಅಂತ ರಿಟಾ ತಿಳಿಸಿದ್ದಾಳೆ.

    ಅತಿಥಿಗಳು ಮಾತ್ರವಲ್ಲದೇ ಮಗಳಿಗೆ ಎರಡು ಮದುವೆ ಸಂಬಂಧಗಳು ಕೂಡ ಬಂದಿವೆ. ಅದರಲ್ಲಿ ಒಂದು ಜಾರ್ಖಂಡ್ ಮೂಲದಾಗಿದ್ದು, ಆತ ಉದ್ಯಮಿಯಾಗಿದ್ದನು. ಈತ ವರದಕ್ಷಿಣೆಯಂತಹ ಯಾವುದೇ ಬೇಡಿಕೆಯನ್ನು ಇಟ್ಟಿರಲಿಲ್ಲ. ಇನ್ನೊಂದು ಬಂಕುರಾದವರೇ ಆಗಿದ್ದು, ಆ ಯುವಕ ಸ್ವಂತ ಜಮೀನು ಹೊಂದಿದ್ದನು. ಆದ್ರೆ ನಮ್ಮ ಮಗಳು ಓದಬೇಕೆಂಬ ಆಸೆಯಿಂದ ಅಷ್ಟೊಂದು ಅದರತ್ತ ಗಮನ ಹರಿಸಿಲ್ಲ ಅಂತ ರಿಟಾ ತಾಯಿ ಸಂಧ್ಯಾ ಹೇಳಿದ್ದಾರೆ.

    ಘಟನೆಗೂ ಮೊದಲು ರಿಟಾರಿಗೆ ಮದುವೆ ಸಂಬಂಧ ಬಂದಿತ್ತು. ಆದ್ರೆ ಅಂದು ಆ ಯುವಕ 1 ಲಕ್ಷ ವರದಕ್ಷಿಣೆ ಕೇಳಿದ್ದನು. ಆದ್ರೆ ರಿಟಾ ತಂದೆ ಆ ಸಂಬಂಧವನ್ನು ನಿರಾಕರಿಸಿದ್ದಳು. ಒಟ್ಟಿನಲ್ಲಿ ಸದ್ಯ ರಿಟಾರಿಗೆ ಯಾವುದೇ ಬೇಡಿಕೆಯಿಲ್ಲದೇ ಒಳ್ಳೊಳ್ಳೆಯ ಮದುವೆ ಸಂಬಂಧಗಳು ಬರುತ್ತಿದ್ದು, ನನ್ನ ಮದುವೆ ವಿಚಾರ ತಂದೆ-ತಾಯಿಗೆ ಬಿಟ್ಟಿದ್ದೇನೆ. ನಾನಿನ್ನೂ ಓದಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.