Tag: Auto Stand

  • ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗ್ತಾನೆ ಅಂತ ಸ್ನೇಹಿತನನ್ನೇ ಕೊಲೆಗೈದ

    ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗ್ತಾನೆ ಅಂತ ಸ್ನೇಹಿತನನ್ನೇ ಕೊಲೆಗೈದ

    ಹಾಸನ: ತನಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸರು ಬಂಧಿಸಿದ್ದಾರೆ.

    HASSAN MURDER

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಸನ್ನ (31) ಬಂಧಿತ ಆರೋಪಿ. ಎರಡು ದಿನದ ಹಿಂದೆ ಅರಕಲಗೂಡು ತಾಲೂಕಿನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದ ಸ್ನೇಹಿತ ಜಗದೀಶ್ (42)ನನ್ನು ಹತ್ಯೆಗೈದಿದ್ದಾನೆ. ಜಗದೀಶ್ ಮತ್ತು ಪ್ರಸನ್ನ ಇಬ್ಬರೂ ಗೆಳೆಯರಾಗಿದ್ದು, ಆಪೆ ಆಟೋ ಇಟ್ಟುಕೊಂಡು ಬಾಡಿಗೆಗೆ ಹೋಗುತ್ತ ಜೀವನ ನಡೆಸುತ್ತಿದ್ದರು.  ಇದನ್ನೂ ಓದಿ:ಕುಖ್ಯಾತ ಮನೆಗಳ್ಳನ ಬಂಧನ- 150 ಗ್ರಾಂ ಚಿನ್ನಾಭರಣ ವಶ

    HASSAN MURDER

     

    ಇಬ್ಬರೂ ಪಿರಿಯಾಪಟ್ಟಣ-ರಾಮನಾಥಪುರ ಆಟೋ ಸ್ಟಾಂಡ್ ನಿಂದ ಬಾಡಿಗೆಗೆ ಹೋಗುತ್ತಿದ್ದರು. ಆದರೆ ಜಗದೀಶ್ ತನ್ನ ಗೆಳೆಯ ಪ್ರಸನ್ನನಿಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಿದ್ದ. ಇದರಿಂದ ಪ್ರಸನ್ನನಿಗೆ ಸರಿಯಾಗಿ ಆಟೋ ಬಾಡಿಗೆ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಜಗದೀಶ್ ಮೇಲೆ ಕೋಪಗೊಂಡಿದ್ದ ಪ್ರಸನ್ನ, ಗುರುವಾರ ರಾತ್ರಿ ರಾಮನಾಥಪುರಕ್ಕೆ ಆಟೋ ಬಾಡಿಗೆ ಇದೆ ಎಂದು ಜಗದೀಶ್‍ನನ್ನು ಕರೆದೊಯ್ದಿದ್ದ. ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಮೊದಲು ಜಗದೀಶ್ ಮೇಲೆ ಹಲ್ಲೆ ಮಾಡಿ ನಂತರ ತಲೆಯ ಹತ್ಯೆಗೈದು ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ:ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ