Tag: auto rikshaw

  • ಆಟೋ ತಪ್ಪಿಸಲು ಹೋಗಿ ಮರಕ್ಕೆ ಬಸ್ ಡಿಕ್ಕಿ- ಪ್ರವಾಸ ಬಂದಿದ್ದ 15 ಮಕ್ಕಳಿಗೆ ಗಾಯ

    ಆಟೋ ತಪ್ಪಿಸಲು ಹೋಗಿ ಮರಕ್ಕೆ ಬಸ್ ಡಿಕ್ಕಿ- ಪ್ರವಾಸ ಬಂದಿದ್ದ 15 ಮಕ್ಕಳಿಗೆ ಗಾಯ

    – ಆಟೋ ಚಾಲಕ, ಪ್ರಯಾಣಿಕರಿಗೂ ಗಾಯ

    ಉಡುಪಿ: ಶಾಲಾ ವಾರ್ಷಿಕ ಪ್ರವಾಸದ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಉಡುಪಿಯಲ್ಲಿ ನಡೆದಿದೆ.

    ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕೂಂದೂರಿನಲ್ಲಿ ಶಾಲಾ ಮಕ್ಕಳನ್ನು ಹೊತ್ತು ಸಾಗಿದ್ದ ಬಸ್, ಆಟೋ ರಿಕ್ಷಾವನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿಯಾಗಿದೆ. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಪ್ರವಾಸಕ್ಕೆ ತುಮಕೂರಿನ ಮಾರಮ್ಮ ದೇವರು ಗ್ರಾಮಾಂತರ ಶಾಲಾ ಮಕ್ಕಳನ್ನು ಕರೆತರಲಾಗಿತ್ತು.

    ಬಸ್‍ನಲ್ಲಿ 60 ಕ್ಕೂ ಅಧಿಕ ಮಕ್ಕಳಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಪೈಕಿ ಇಬ್ಬರು ಗಾಯಾಳು ವಿದ್ಯಾರ್ಥಿಗಳನ್ನು ಮಣಿಪಾಲ ಕೆಎಂಸಿಗೆ ದಾಖಲು ಮಾಡಲಾಗಿದೆ. ಉಳಿದ ಗಾಯಾಳುಗಳಿಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಸ್ತೆ ಎಡಬದಿಯಿಂದ ಬಂದ ಆಟೋಗೆ ಶಾಲಾ ಪ್ರವಾಸದ ಬಸ್ ಗುದ್ದಿದೆ. ಅಟೋಗೆ ಡಿಕ್ಕಿಯಾಗಿ ನಂತರ ಮರಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಮುಂಬದಿಯಿಂದ ಬಂದಿದ್ದ ಅಟೋ ಚಾಲಕ, ಪ್ರಯಾಣಿಕರಿಗೂ ಗಾಯಗಳಾಗಿದೆ. ಮಕ್ಕಳ ಬಸ್ ಉಡುಪಿಗೆ ಬಂದು ಶ್ರೀಕೃಷ್ಣಮಠನ ದರ್ಶನ ಮಾಡಿ ಬಳಿಕ ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಅಪಘಾತವಾದಾಗ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದ್ದಾರೆ.

    ಕಾರ್ಕಳ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ: ರಿಕ್ಷಾದಿಂದ ಕೆಳಗೆ ಬಿದ್ದು, ಟ್ರಕ್ ಹರಿದರೂ ಬದುಕುಳಿದ ಬಾಲಕ

    ವಿಡಿಯೋ: ರಿಕ್ಷಾದಿಂದ ಕೆಳಗೆ ಬಿದ್ದು, ಟ್ರಕ್ ಹರಿದರೂ ಬದುಕುಳಿದ ಬಾಲಕ

    ಬೀಜಿಂಗ್: ಆಟೋ ರಿಕ್ಷಾದಿಂದ ಕೆಳಗೆ ಬಿದ್ದ ಬಾಲಕನ ಮೇಲೆ ಟ್ರಕ್ ಹರಿದರೂ ಆತ ಬದುಕುಳಿದಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಇಲ್ಲಿನ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ನಗರದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾನೆ. ಘಟನೆಯ ದೈಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಟೋ ರಿಕ್ಷಾ ಟ್ರಾಫಿಕ್ ಸಿಗ್ನಲ್‍ನಲ್ಲಿ ನಿಂತಿದ್ದು, ಹಿಂದೆಯೇ ಟ್ರಕ್‍ವೊಂದು ಬಂದು ನಿಂತಿತ್ತು. ನಂತರ ಹಸಿರು ಲೈಟ್ ಬಿದ್ದ ತಕ್ಷಣ ಆಟೋ ರಿಕ್ಷಾ ಚಲಿಸಲು ಶುರುವಾಗಿದ್ದು, ಒಳಗೆ ಕುಳಿತಿದ್ದ 5 ವರ್ಷದ ಬಾಲಕ ಕೆಳಗೆ ಬಿದ್ದಿದ್ದಾನೆ. ರಿಕ್ಷಾ ಮುಂದೆ ಹೋಗ್ತಿದ್ದಂತೆ ಟ್ರಕ್ ಕೂಡ ಚಲಿಸಲು ಆರಂಭಿಸಿದ್ದು ಬಾಲಕನ ಮೇಲೆಯೇ ಹಾದು ಹೋಗಿದೆ.

    ಬಾಲಕ ಕೆಳಗೆ ಬಿದ್ದಿದ್ದನ್ನು ಅರಿತು, ಆಟೋದಲ್ಲಿದ್ದ ಇತರರು ಗಾಬರಿಯಿಂದ ಹೋಗಿ ನೋಡಿದ್ದಾರೆ. ಆದ್ರೆ ಎಲ್ಲರಿಗೂ ಆಶ್ಚರ್ಯವಾಗೋ ರೀತಿಯಲ್ಲಿ ಬಾಲಕ ರಸ್ತೆಯಿಂದ ಎದ್ದು ನಿಂತಿದ್ದ. ಬಾಲಕನ ಕೈಗಳ ಮೇಲೆ ಗಾಯವಾಗಿದ್ದು ಬಿಟ್ಟರೆ ಹೆಚ್ಚಿನ ಅಪಾಯವಾಗಿಲ್ಲ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

  • ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ – ಆಟೋ ಚಾಲಕ ಸ್ಥಳದಲ್ಲೇ ಸಾವು

    ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ – ಆಟೋ ಚಾಲಕ ಸ್ಥಳದಲ್ಲೇ ಸಾವು

    ರಾಯಚೂರು: ಆಟೋಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನ ಹಿರೇಹಳ್ಳದ ಬಳಿ ನಡೆದಿದೆ.

    ಲಕ್ಷ್ಮೀ ಕ್ಯಾಂಪ್ ನ 46 ವರ್ಷದ ಹಸನಸಾಬ್ ಮೃತ ಚಾಲಕ. ಪಿಡಬ್ಲ್ಯೂಡಿ ಕ್ಯಾಂಪ್ ನಿಂದ ಸಿಂಧನೂರಿಗೆ ಒಬ್ಬರೇ ಮರಳುತ್ತಿದ್ದಾಗ ಹಳ್ಳದ ಬಳಿ ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ.

    ಸದ್ಯ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನೆಲೆ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟೋ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

    ಆಟೋ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

    ರಾಮನಗರ: ಆಟೋ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಶ್ಯಾನಭೋಗನಹಳ್ಳಿ ಬಳಿ ನಡೆದಿದೆ.

    ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಆಟೋ ಪಲ್ಟಿ ಹೊಡೆದಿದೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳು ರಾಮನಗರದ ವಡ್ಡರದೊಡ್ಡಿ ಗ್ರಾಮದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಿನಲ್ಲಿ ಬಸ್ ಚಾಲನೆ: ಆಟೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು

    ಕುಡಿದ ಮತ್ತಿನಲ್ಲಿ ಬಸ್ ಚಾಲನೆ: ಆಟೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು

    ಬೆಂಗಳೂರು: ಕುಡಿದ ಮತ್ತಿನಲ್ಲಿ ಬಸ್ ಚಾಲನೆ ಮಾಡಿದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಮಹಿಳೆ ಸಾವನ್ನಪ್ಪಿರೋ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ.

    ಬಿಲ್ಲಿನಕೋಟೆ ಮೂಲದ 29 ವರ್ಷದ ದೇವಿಕಾ ಮೃತ ಮಹಿಳೆ. ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಈ ಅವಘಡ ಸಂಭವಿಸಿದೆ. ಕೆಎಸ್‍ಆರ್‍ಟಿಸಿ ಬಸ್ ಚಾಲಕ ಕಂಠಪೂರ್ತಿ ಕುಡಿದು ಬಸ್ ಚಲಾಯಿಸುತ್ತಿದ್ದ ವೇಳೆ ಆಟೋಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ.

    ಕೆಎಸ್‍ಆರ್‍ಟಿಸಿ ಬಸ್ ಬೆಂಗಳೂರಿನಿಂದ ಹೊಸದುರ್ಗಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್ ಚಾಲಕ ಪರಪ್ಪ ಎಂಬವನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಾಬಸ್‍ಪೇಟೆ ಪೊಲೀಸರು ಮತ್ತು ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • 9 ತಿಂಗಳ ಮಗುವನ್ನು ಆಟೋದಿಂದ ಎಸೆದು ಮಹಿಳೆಯ ಮೇಲೆ ಗ್ಯಾಂಗ್‍ರೇಪ್!

    9 ತಿಂಗಳ ಮಗುವನ್ನು ಆಟೋದಿಂದ ಎಸೆದು ಮಹಿಳೆಯ ಮೇಲೆ ಗ್ಯಾಂಗ್‍ರೇಪ್!

    ಗುರ್‍ಗಾಂವ್: 9 ತಿಂಗಳ ಕಂದಮ್ಮನನ್ನು ಆಟೋ ರಿಕ್ಷಾದಿಂದ ಹೊರಗೆಸೆದು ತನ್ನ ಮೇಲೆ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಗುರಗಾಂವ್‍ನಲ್ಲಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಮೇ 29ರಂದು ಈ ಘಟನೆ ನಡೆದಿದೆ. 23 ವರ್ಷದ ಮಹಿಳೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡು ಮಧ್ಯರಾತ್ರಿ ವೇಳೆ ತನ್ನ ತವರು ಮನೆಗೆ ಹೋರಟಿದ್ದಾರೆ. ಈ ವೇಳೆ ಆಟೋ ರಿಕ್ಷಾ ಹತ್ತಿದ್ದು, ಅದಾಗಲೇ ಒಳಗಿದ್ದ ಮೂವರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಸೋಮವಾರದಂದು ಪೊಲೀಸರು ತಿಳಿಸಿದ್ದಾರೆ.

    ನಾನು ಆಟೋ ರಿಕ್ಷಾದಲ್ಲಿ ಕುಳಿತ ಬಳಿಕ ಅವರು ನನಗೆ ಕಿರುಕುಳ ನೀಡಲು ಶುರು ಮಾಡಿದ್ರು. ಈ ವೇಳೆ ಮಗು ಅಳತೊಡಗಿದ ಕಾರಣ ಅವರು ಮಗುವನ್ನು ಹೊರಗೆ ಎಸೆದರು ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ. ಗಾಯಗೊಂಡ ಮಗು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ದೆಹಲಿ- ಗುರ್‍ಗಾಂವ್ ರಸ್ತೆ ಬಳಿ ನಿರ್ಜನ ಪ್ರದೇಶದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಮೊದಲಿಗೆ ಮಹಿಳೆ ತನ್ನ ಮಗುವನ್ನು ಆಟೋ ರಿಕ್ಷಾದಿಂದ ಹೊರಗೆಸೆದರು ಎಂದಷ್ಟೇ ಪೊಲೀಸರಿಗೆ ಹೇಳಿದ್ದರು. ಆದರೆ ಬಳಿಕ ಅತ್ಯಾಚಾರ ಕೂಡ ನಡೆದಿದೆ ಎಂದು ಹೇಳಿದ್ದಾರೆ.

    ಸದ್ಯ ಪೊಲೀಸರು ಕೊಲೆ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

  • ಮೋದಿ ಸರ್ಕಾರಕ್ಕೆ 3ರ ಸಂಭ್ರಮ- ಮಂಗ್ಳೂರು ಅಭಿಮಾನಿಯಿಂದ 1 ರೂ.ಗೆ ಆಟೋ ಸೇವೆ

    ಮೋದಿ ಸರ್ಕಾರಕ್ಕೆ 3ರ ಸಂಭ್ರಮ- ಮಂಗ್ಳೂರು ಅಭಿಮಾನಿಯಿಂದ 1 ರೂ.ಗೆ ಆಟೋ ಸೇವೆ

    ಮಂಗಳೂರು: ಮೋದಿ ನೇತೃತ್ವದ ಬಿಜೆಪಿ ಸರ್ಕಾರ 3 ವರ್ಷ ಪೂರೈಸಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅಭಿಮಾನಿಯಾಗಿರೋ ಆಟೋ ಚಾಲಕರೊಬ್ಬರು 1 ರೂ.ಗೆ ಗ್ರಾಹಕರಿಗೆ ಪ್ರಯಾಣಿಸಲು ಆಫರ್ ನೀಡಿದ್ದಾರೆ.

    ಮಂಗಳೂರು ನಿವಾಸಿ ಸತೀಶ್ ಪ್ರಭು (44) ಅವರೇ ಗ್ರಾಹಕರಿಗೆ ಈ ಬಂಪರ್ ಆಫರ್ ನೀಡಿದವರು. ದೇಶದಲ್ಲಿ ಮೋದಿ ಆಡಳಿತ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಂದ್ರೆ ಇಂದಿನಿಂದ ನಾಲ್ಕು ದಿನಗಳ ಕಾಲ ಆಟೋರಿಕ್ಷಾ ಪ್ರಯಾಣ ದರವನ್ನ 5 ಕಿ.ಮೀಗೆ 1 ರೂ. ನಂತೆ ನಿಗಡಿಪಡಿಸಿದ್ದಾರೆ.

    ಸತೀಶ್ ಪ್ರಭು ತಮ್ಮ ಆಟೋ ರಿಕ್ಷಾದ ಹಿಂಭಾಗದಲ್ಲಿ ಈ ಬಗ್ಗೆ ಬ್ಯಾನರ್‍ವೊಂದನ್ನ ಹಾಕಿಕೊಂಡಿದ್ದಾರೆ. “ಮೋದಿ ಅವರು ದೇಶದಾದ್ಯಂತ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳಬೇಕೆಂದು ಬಯಸಿದೆ. ಅದಕ್ಕಾಗಿ ಪ್ರಯಾಣಿಕರಿಗೆ ದರವನ್ನ ಕಡಿಮೆ ಮಾಡಿದ್ದೇನೆ. 1 ರೂ. ಪ್ರಯಾಣದರದಿಂದ ಪ್ರಯಾಣಿಕರಿಗೆ ಸಹಾಯವಾಗಲಿದೆ. ಅದರಲ್ಲೂ ಮಧ್ಯಮ ವರ್ಗದವರು ಹಣ ಉಳಿತಾಯ ಮಾಡಬಹುದು ಎಂದು ಸತೀಶ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ನಮೋಬ್ರಿಗೆಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಈ ಫೋಟೋ ಹಂಚಿಕೊಂಡ ನಂತರ ಬಿಜೆಪಿ ವಲಯದಲ್ಲಿ ಈ ವಿಷಯ ಚರ್ಚೆಯಾಗ್ತಿದೆ.

    ಸತೀಶ್ ಅವರು ಮೋದಿ ಮೇಲೆ ಅಭಿಮಾನ ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೋದಿ ಅಧಿಕಾರಕ್ಕೆ ಬಂದಾಗ ಸುಮಾರು 150ಕ್ಕೂ ಹೆಚ್ಚು ಜನರಿಗೆ ಇದೇ ರೀತಿಯ ಆಫರ್ ನೀಡಿದ್ದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸತೀಶ್ ಅವರ ಈ ಕಾರ್ಯವನ್ನ ಶ್ಲಾಘಿಸಿದ್ದು, ಮೋದಿ ಅವರ ಜನಪ್ರಿಯತೆ ಎಲ್ಲಾ ವರ್ಗಗಳನ್ನು ಮೀರಿ ನಿಂತಿದೆ ಎಂಬುದನ್ನ ಇದು ತಿಳಿಸುತ್ತಿದೆ ಎಂದು ಹೇಳಿದ್ದಾರೆ.

  • ಬೈಕ್‍ಗೆ ಕ್ವಾಲಿಸ್ ಜೀಪ್ ಡಿಕ್ಕಿ- ಯುವಕ ಸಾವು

    ಬೈಕ್‍ಗೆ ಕ್ವಾಲಿಸ್ ಜೀಪ್ ಡಿಕ್ಕಿ- ಯುವಕ ಸಾವು

    – ಕಾರು, ಆಟೋ, ಟಾಟಾ ಏಸ್ ನಡುವೆ ಸರಣಿ ಅಪಘಾತದಲ್ಲಿ ಆಟೋ ಚಾಲಕ ಸಾವು

    ಬೆಂಗಳೂರು: ಬೈಕ್‍ಗೆ ಕ್ವಾಲಿಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಸರಘಟ್ಟ ಮುಖ್ಯ ರಸ್ತೆಯ ಸೋಲದೇವನಹಳ್ಳಿ ಸಮೀಪ ಶನಿವಾರ ರಾತ್ರಿ ನಡೆದಿದೆ.

    ಇಂಟಾಸ್ ಕಂಪನಿಯಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಅಗಿದ್ದ 24 ವರ್ಷದ ಅಂಬ್ರೀತ್ ಭಟ್ ಮೃತ ಬೈಕ್ ಸವಾರ. ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸೋಲದೇವನಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಂಬ್ರೀತ್ ಭಟ್‍ಗೆ ಇತ್ತೀಚೆಗೆ ಎಂಗೇಜ್‍ಮೆಂಟ್ ಕೂಡಾ ಅಗಿತ್ತು ಎನ್ನಲಾಗಿದೆ. ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾರು, ಆಟೋ ಮತ್ತು ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಐಎಎಸ್‍ಸಿ ಅಂಡರ್ ಪಾಸ್ ಬಳಿ ನಡೆದಿದೆ. 40 ವರ್ಷದ ರಫೀಕ್ ಮೃತ ಆಟೋ ಚಾಲಕ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.